ಗೂಗಲ್‌ ಸರ್ಚ್‌ನಲ್ಲಿ ಮಹತ್ವದ ಬದಲಾವಣೆ..! ಫೋಟೋ ಸರ್ಚ್‌ಗೆ ಹೊಸ ಫೀಚರ್‌..!

By Gizbot Bureau
|

ಮೌಂಟೇನ್‌ ವ್ಯೂ ಮೂಲದ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ನ ಗೂಗಲ್‌ ಸರ್ಚ್‌ ಜಗತ್ತಿನಲ್ಲಿ ವ್ಯಾಪಕವಾಗಿ ಬಳಸುವ ಸೇವೆಯಾಗಿದೆ. ಚಿತ್ರಗಳೇ ಇರಲಿ ಅಥವಾ ವೆಬ್‌ಪುಟಗಳೇ ಆಗಿರಲಿ ಎಲ್ಲದಕ್ಕೂ ಹೆಚ್ಚಿನ ಅಂತರ್ಜಾಲ ಬಳಕೆದಾರರಿಗೆ ಗೂಗಲ್‌ ಸರ್ಚ್‌ ಆಯ್ಕೆಯಾಗಿದೆ. ಚಿತ್ರಗಳನ್ನು ಸರ್ಚ್‌ ಮಾಡುವಲ್ಲಿ ಗೂಗಲ್‌ ಸಣ್ಣ ಬದಲಾವಣೆಯನ್ನು ತಂದಿದೆ. ಸಣ್ಣ ಬದಲಾವಣೆಯೇ ಮಹತ್ವದ್ದಾಗಿದೆ. ಇದರಿಂದದ ಭಾರೀ ಅನುಕೂಲ ಆಗಲಿದೆ ಎಂಬುದು ಸರ್ಚ್‌ ಇಂಜಿನ್‌ ದೈತ್ಯನ ಮಾತು. ಆ ಬದಲಾವಣೆ ಏನು ಅಂತೀರಾ..? ಮುಂದೆ ನೋಡಿ.

ಸುಲಭ ಹೋಲಿಕೆಗೆ ಹೊಸ ಫೀಚರ್‌

ಸುಲಭ ಹೋಲಿಕೆಗೆ ಹೊಸ ಫೀಚರ್‌

ಗೂಗಲ್‌ನ ಬ್ಲಾಗ್ ಪೋಸ್ಟ್‌ನ ಪ್ರಕಾರ, ನೀವು ಚಿತ್ರವನ್ನು ಆಯ್ಕೆಮಾಡಿಕೊಂಡಾಗ, ಅದು ಸರ್ಚ್‌ ರಿಸಲ್ಟ್‌ ನಂತರದಲ್ಲಿರುವ ಪುಟದ ಸೈಡ್‌ ಪ್ಯಾನೆಲ್‌ನಲ್ಲಿ ಗೋಚರಿಸುತ್ತದೆ. ಪ್ರಮುಖವಾಗಿ ಸ್ಕ್ರಾಲ್ ಮಾಡುವಾಗ ಅದು ಅಲ್ಲಿಯೇ ಇರುತ್ತದೆ. ಇದರಿಂದ ಪೇಜ್‌ನಲ್ಲಿನ ಇತರ ಚಿತ್ರಗಳೊಂದಿಗೆ ಸುಲಭವಾಗಿ ಹೋಲಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಬಳಕೆದಾರರು ಸ್ಕ್ರೋಲಿಂಗ್‌ನ್ನು ಬಯಸಿದಷ್ಟು ಸಲ ಮಾಡಬಹುದು. ಅವರು ಚಿತ್ರವನ್ನು ಕಳೆದುಕೊಳ್ಳುವುದಿಲ್ಲ. ಬ್ಯಾಕ್‌ ಬಟನ್‌ ಹೊತ್ತಿದರೆ ಸಾಕು ಕ್ಲಿಕ್‌ ಮಾಡಿದ ಕೊನೆಯ ಚಿತ್ರಕ್ಕೆ ಬಂದು ನಿಲ್ಲುತ್ತಾರೆ.

ಶಾಪಿಂಗ್‌ಗೂ ಕನೆಕ್ಟ್‌

ಶಾಪಿಂಗ್‌ಗೂ ಕನೆಕ್ಟ್‌

ಚಿತ್ರದ ಪಕ್ಕದಲ್ಲಿಯೇ ಹೆಚ್ಚಿನ ಮಾಹಿತಿಯೊಂದಿಗೆ ಶಾಪಿಂಗ್‌ನ್ನು ಸುಲಭಗೊಳಿಸಲು ಗೂಗಲ್ ಸಣ್ಣ ಬದಲಾವಣೆಯನ್ನು ಸಹ ಮಾಡಿದೆ. ನೀವು ಉತ್ಪನ್ನದ ಚಿತ್ರವನ್ನು ಆರಿಸಿದಾಗ, ನೀವು ಈಗ ಬ್ರ್ಯಾಂಡ್, ಬೆಲೆ, ಲಭ್ಯತೆ ಮತ್ತು ವಿಮರ್ಶೆಗಳಂತಹ ವಿವರಗಳನ್ನು ನೋಡುತ್ತೀರಿ. ನೀವು ಆಯ್ಕೆ ಮಾಡಿದ ಚಿತ್ರದಡಿಯಲ್ಲಿ ತೋರಿಸಿರುವ ಸಂಬಂಧಿತ ಚಿತ್ರಗಳಿಗೆ ಶೀರ್ಷಿಕೆಗಳನ್ನು ಸೇರಿಸಲಾಗಿದೆ. ಆದ್ದರಿಂದ, ನೀವು ಕ್ಲಿಕ್ ಮಾಡುವ ಮೊದಲು ಎಲ್ಲಿಗೆ ಹೋಗುತ್ತೀರಿ ಎಂಬುದು ನಿಮಗೆ ತಿಳಿಯುತ್ತದೆ ಎಂದು ಗೂಗಲ್‌ ಬ್ಲಾಗ್‌ ಹೇಳಿದೆ. ಈ ಹೊಸ ಫೀಚರ್‌ ಚಿತ್ರಗಳಿಂದ ಶಾಪಿಂಗ್ ಮಾಡುವವರಿಗೆ ಸುಲಭವಾಗಿಸುತ್ತದೆ. ಏಕೆಂದರೆ, ಈಗ ಚಿತ್ರದ ಕೆಳಗೆ ಎಲ್ಲಾ ಸಂಬಂಧಿತ ಮಾಹಿತಿಯನ್ನು ಬಳಕೆದಾರರು ನೋಡುತ್ತಾರೆ.

ವ್ಯಾಪಾರಿಗಳಿಗೆ ಸಹಾಯ

ವ್ಯಾಪಾರಿಗಳಿಗೆ ಸಹಾಯ

ಹೊಸ ಫೀಚರ್‌ನಿಂದ ಚಿಲ್ಲರೆ ವ್ಯಾಪಾರಿಗಳಿಗೂ ಸಹಾಯವಾಗುತ್ತದೆ. ನವೀಕರಿಸಿದ ಇಂಟರ್‌ಫೇಸ್‌ನಿಂದ ಚಿಲ್ಲರೆ ವ್ಯಾಪಾರಿಗಳು ಮತ್ತು ಪ್ರಕಾಶಕರ ಉತ್ಪನ್ನಗಳನ್ನು ಗ್ರಾಹಕರು ಖರೀದಿಸಲು ವೆಬ್ ಪುಟಕ್ಕೆ ಭೇಟಿ ನೀಡುವ ಸಾಧ್ಯತೆ ಹೆಚ್ಚು ಎಂದು ಗೂಗಲ್‌ ಹೇಳಿದೆ. ಚಿತ್ರದಡಿಯಲ್ಲಿಯೇ ಮಾಹಿತಿ ದೊರೆಯುವುದರಿಂದ ಮಾಹಿತಿ ನೋಡಿದ ತಕ್ಷಣ ವೆಬ್‌ಸೈಟ್‌ಗೆ ಗ್ರಾಹಕರು ಭೇಟಿ ನೀಡುವ ಅವಕಾಶ ಹೆಚ್ಚಿರುತ್ತದೆ.

ಡೆಸ್ಕ್‌ಟಾಪ್‌ನಲ್ಲಿ ಮಾತ್ರ

ಡೆಸ್ಕ್‌ಟಾಪ್‌ನಲ್ಲಿ ಮಾತ್ರ

ಗೂಗಲ್ ಸರ್ಚ್‌ನ ಹೊಸ ಹೊಸ ವೈಶಿಷ್ಟ್ಯ ಸದ್ಯ ಡೆಸ್ಕ್‌ಟಾಪ್ ಮೋಡ್‌ನಲ್ಲಿ ಮಾತ್ರ ದೊರೆಯಲಿದೆ. ಮೊಬೈಲ್‌ಗೆ ಶೀಘ್ರದಲ್ಲಿಯೇ ಈ ಫೀಚರ್ ಬರಲಿದ್ದು, ಯಾವಾಗ ಎಂಬುದನ್ನು ಗೂಗಲ್ ಸ್ಪಷ್ಟಪಡಿಸಿಲ್ಲ.

Best Mobiles in India

Read more about:
English summary
Google Image Search Receives a Major Update

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X