ಗೂಗಲ್‌ನಿಂದ ಭಾರತೀಯರಿಗೆ ಹೊಸ ಫೀಚರ್ಸ್‌ ಘೋಷಣೆ; ಸಖತ್‌ ಆಗಿದೆ ಈ 'ಮಲ್ಟಿಸರ್ಚ್‌' ಆಯ್ಕೆ!

|

ಗೂಗಲ್‌ ಎಂಬುದು ಇಂದು ಎಲ್ಲಾ ವಿಷಯಗಳಿಗೂ ಅವಶ್ಯಕವಾದ ಒಂದು ದೊಡ್ಡ ಸೇವೆಯಾಗಿದ್ದು, ಸ್ಮಾರ್ಟ್‌ ಗ್ಯಾಜೆಟ್ ಬಳಕೆ ಮಾಡುವವರಿಗೆ ತನ್ನದೇ ಆದ ರೀತಿಯಲ್ಲಿ ಸೇವೆ ನೀಡುತ್ತಾ ಬರುತ್ತಿದೆ. ಗೂಗಲ್‌ನ ಸೇವೆಗಳು ಹೆಚ್ಚು ಭದ್ರತೆ ಹಾಗೂ ಉತ್ತಮ ಕಾರ್ಯಕ್ಷಮತೆ ಹೊಂದಿರುವುದರಿಂದ ಬಳಕೆದಾರರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಇದ್ದಾರೆ. ಅದರಲ್ಲೂ ಗೂಗಲ್‌ ಒಡೆತನದ ಯೂಟ್ಯೂಬ್‌ ಆಗಿರಬಹುದು ಜಿಮೇಲ್‌ ಆಗಿರಬಹುದು ಬಳಕೆದಾರರನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸುತ್ತವೆ. ಇದೆಲ್ಲಾ ಬೆಳವಣಿಗೆ ನಡುವೆ ಈಗ ಗೂಗಲ್‌ ಹೊಸ ಫೀಚರ್ಸ್‌ ಅನ್ನು ಭಾರತೀಯರಿಗಾಗಿ ಘೋಷಣೆ ಮಾಡಿದೆ.

ಗೂಗಲ್‌

ಹೌದು, ಗೂಗಲ್‌ ಭಾರತೀಯರಿಗಾಗಿಯೇ ವಿಶೇಷ ಸೌಲಭ್ಯವೊಂದನ್ನು ನೀಡಲು ಮುಂದಾಗಿದೆ. ಈ ಫೀಚರ್ಸ್‌ ಬಗ್ಗೆ ಈವೆಂಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಈ 'ಮಲ್ಟಿಸರ್ಚ್‌' ಫೀಚರ್ಸ್‌ ಸರ್ಚಿಂಗ್‌ ವಿಭಾಗಕ್ಕೆ ಒಂದು ದೊಡ್ಡ ಕೊಡುಗೆಯಾಗಿದ್ದು, ನೀವು ಏನನ್ನಾದರೂ ಹುಡುಕಲು ಮುಂದಾದಾಗ ಈ ಫೀಚರ್ಸ್‌ ನಿಮಗೆ ಉತ್ತಮ ಅನುಭವ ನೀಡಲಿದೆ. ಹಾಗಿದ್ರೆ ಗೂಗಲ್‌ ಹೊಸದಾಗಿ ಪರಿಚಯಿಸಿದ ಈ ಹೊಸ ಮಲ್ಟಿಸರ್ಚ್‌ ಫೀಚರ್ಸ್‌ ಎಂದರೆ ಏನು? ಇದು ಹೇಗೆ ಕೆಲಸ ಮಾಡುತ್ತದೆ? ಇದರಿಂದ ಪ್ರಯೋಜನೆ ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿದ್ದೇವೆ ಓದಿರಿ.

ಮಲ್ಟಿಸರ್ಚ್(Multisearch) ಎಂದರೇನು?

ಮಲ್ಟಿಸರ್ಚ್(Multisearch) ಎಂದರೇನು?

ಮಲ್ಟಿಸರ್ಚ್ ಬಳಕೆದಾರರಿಗೆ ಚಿತ್ರಗಳು ಮತ್ತು ಪಠ್ಯವನ್ನು ಏಕಕಾಲದಲ್ಲಿ ಬಳಸಿಕೊಂಡು ಮಾಹಿತಿಯನ್ನು ಪತ್ತೆ ಮಾಡಲು ಸಹಕಾರಿಯಾಗಿದೆ. ಇದು ಕೃತಕ ಬುದ್ಧಿಮತ್ತೆ ಮೂಲಕ ಕೆಲಸ ಮಾಡಲಿದೆ. ಹಾಗೆಯೇ ನಿಮ್ಮ ಸುತ್ತಲಿನ ಪ್ರಪಂಚವನ್ನು ಹೆಚ್ಚು ನೈಸರ್ಗಿಕ ಮತ್ತು ಅರ್ಥಗರ್ಭಿತ ರೀತಿಯಲ್ಲಿ ತಿಳಿದುಕೊಳ್ಳಲು ಇದು ಸಹಾಯ ಮಾಡಲಿದೆ ಎಂದು ಗೂಗಲ್ ತಿಳಿಸಿದೆ.

ಮಲ್ಟಿಸರ್ಚ್ ಬಳಕೆ ಹೇಗೆ?

ಮಲ್ಟಿಸರ್ಚ್ ಬಳಕೆ ಹೇಗೆ?

ಈ ಫೀಚರ್ಸ್‌ ಅನ್ನು ಬಳಕೆ ಮಾಡಲು ನೀವು ಹೆಚ್ಚಿನ ಶ್ರಮ ಪಡಬೇಕಿಲ್ಲ. ಯಾವುದೇ ಚಿತ್ರವನ್ನು ತೆಗೆದುಕೊಳ್ಳಲು ಅಥವಾ ಸ್ಕ್ರೀನ್‌ಶಾಟ್ ಅನ್ನು ತೆಗೆಯಲು ಗೂಗಲ್‌ ಆಪ್‌ ಮೂಲಕ ಕ್ಯಾಮೆರಾ ಓಪನ್‌ ಮಾಡಿ. ನಂತರ ಪ್ರಶ್ನೆ ವಿಭಾಗದಲ್ಲಿ ನಿಮಗೆ ಅಗತ್ಯವಾದದನ್ನು ಬರೆಯಿರಿ. ಆಗ ಅದರ ಸಂಬಂಧ ರಿಸಲ್ಟ್‌ ಲಭ್ಯವಾಗುತ್ತದೆ. ಅದರಲ್ಲೂ ಆನ್‌ಲೈನ್‌ ಶಾಪಿಂಗ್ ಮಾಡುವವರಿಗೆ, ಪಾಕವಿಧಾನಗಳ ಮಾಹಿತಿ ಬೇಕೆಂದರೆ ಈ ಫೀಚರ್ಸ್‌ ತುಂಬಾನೆ ಸಹಕಾರಿಯಾಗಲಿದೆ.

ಯಾವ ಭಾಷೆಯಲ್ಲಿ ಲಭ್ಯವಾಗುತ್ತದೆ?

ಯಾವ ಭಾಷೆಯಲ್ಲಿ ಲಭ್ಯವಾಗುತ್ತದೆ?

ಈ ಫೀಚರ್ಸ್‌ ಸದ್ಯಕ್ಕೆ ನಿಮಗೆ ಇಂಗ್ಲಿಷ್‌ ಭಾಷೆಯಲ್ಲಿ ಲಬ್ಯವಾಗಲಿದ್ದು, ಶೀಘ್ರದಲ್ಲಿಯೇ ಭಾರತೀಯ ಪ್ರಮುಖ ಭಾಷೆಗಳಲ್ಲಿ ಒಂದಾದ ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಂತಹಂತವಾಗಿ ಈ ಸೇವೆ ನೀಡಲಾಗುವುದು ಎಂದು ಗೂಗಲ್‌ ಮಾಹಿತಿ ನೀಡಿದೆ.

ಉದಾಹರಣೆ ಸಹಿತ ವಿವರಿಸಿದ ಗೂಗಲ್‌

ಉದಾಹರಣೆ ಸಹಿತ ವಿವರಿಸಿದ ಗೂಗಲ್‌

ಈ ಫೀಚರ್ಸ್‌ಅನ್ನು ಈಗಾಗಲೇ ಯುಎಸ್‌ನಲ್ಲಿ ಈ ವರ್ಷದ ಆರಂಭದಲ್ಲಿ ಘೋಷಣೆ ಮಾಡಿತ್ತು. ಇನ್ನು ಈ ಬಗ್ಗೆ ಉದಾಹರಣೆ ಸಹಿತ ವಿವರಿಸಿರುವ ಗೂಗಲ್‌, ನೀವು ನಿರ್ದಿಷ್ಟ ಉಡುಪನ್ನು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ, ಅದು ಕೆಂಪು ಬಣ್ಣದಲ್ಲಿ ಇದ್ದು, ನಿಮಗೆ ಆ ಡ್ರೆಸ್‌ ಹಸಿರು ಬಣ್ಣದಲ್ಲಿ ಬೇಕು ಎಂದಾದರೆ ನೀಡಲಾದ ಸರ್ಚ್‌ ಬಾಕ್ಸ್‌ನಲ್ಲಿ 'ಹಸಿರು' ಎಂದು ಟೈಪ್‌ ಮಾಡಿ. ಇದಾದ ನಂತರ ಅದೇ ಶೈಲಿಯ ಬಟ್ಟೆಗಳು ಹಸಿರು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದ ಶಾಪಿಂಗ್‌ ಮಾಡಲು ತುಂಬಾ ಅನುಕೂಲ ಆಗುತ್ತದೆ.

ಮನೆ

ಹಾಗೆಯೇ, ನಿಮ್ಮ ಮನೆಯಲ್ಲಿ ಒಂದು ಗಿಡ ಇದ್ದರೆ ಅದನ್ನು ಹೇಗೆ ಕಾಳಜಿ ವಹಿಸಬೇಕು ಎಂದು ತಿಳಿಯಲು ನೀವು ಬಯಸಲು ಮುಂದಾದರೆ ಸಸ್ಯದ ಚಿತ್ರವನ್ನು ತೆಗೆದುಕೊಳ್ಳಿ ಬಳಿಕ ಆರೈಕೆ ಮಾಡುವುದು ಹೇಗೆ ಎಂಬುದನ್ನು ಅಲ್ಲಿ ಟೈಪ್‌ ಮಾಡಿ. ಇದಾದ ಬಳಿಕ ಆ ಸಸ್ಯವನ್ನು ಹೇಗೆ ಹಾರೈಕೆ ಮಾಡಬೇಕು ಎಂಬ ಮಾಹಿತಿ ನಿಮ್ಮ ಡಿಸ್‌ಪ್ಲೇ ನಲ್ಲಿ ಕಾಣಿಸಿಕೊಳ್ಳುತ್ತದೆ. ಈ ಮೂಲಕ ಎಲ್ಲಾ ರೀತಿಯ ಮಾಹಿತಿಯನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ.

Best Mobiles in India

English summary
Google introduce Multisearch feature for India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X