ಗೂಗಲ್ ಕ್ರೋಮ್ ನ ಇನ್ಕಾಗ್ನಿಟೋ ಮೋಡ್ ಬದಲಾಗುತ್ತಿದೆ- ನೀವು ತಿಳಿಯಬೇಕಾದ ಅಂಶಗಳು

By Gizbot Bureau
|

ಸಾಮಾನ್ಯ ಬ್ರೌಸರ್ ಗಳಿಗಿಂತ ಗೂಗಲ್ ಕ್ರೋಮ್ ನ ಇನ್ಕಾಗ್ನಿಟೋ ಮೋಡ್ ಬಳಕೆದಾರರಿಗೆ ವೆಬ್ ಸೈಟ್ ಗಳನ್ನು ಹೆಚ್ಚು ವಯಕ್ತಿಕವಾಗಿ ಆಕ್ಸಿಸ್ ಮಾಡುವುದಕ್ಕೆ ಅವಕಾಶ ನೀಡುತ್ತದೆ.ಮೆಟ್ರೋ ವರದಿಯ ಪ್ರಕಾರ, ಕ್ರೋಮ್ ಇನ್ಕಾಗ್ನಿಟೋ ಮೋಡ್ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಉದಾಹರಣೆಗೆ ಬ್ರೌಸಿಂಗ್ ಹಿಸ್ಟರಿ ಮತ್ತು ಕುಕ್ಕೀಸ್ ಗಳು ಮತ್ತು ಸೈಟ್ ಡಾಟಾ ಗಳು ಇತ್ಯಾದಿ.

ವಯಕ್ತಿಕ ಆಕ್ಸಿಸ್:

ವಯಕ್ತಿಕ ಆಕ್ಸಿಸ್:

ಹಾಗಾಗಿ ಹೆಚ್ಚು ವಯಕ್ತಿಕವಾಗಿ ಬಳಕೆದಾರರು ತಮ್ಮ ವೆಬ್ ಸೈಟ್ ಗಳನ್ನು ಆಕ್ಸಿಸ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಈ ಆಕ್ಟಿವಿಟಿಯನ್ನು ನಿರ್ವಹಿಸುವುದಕ್ಕಾಗಿ ಗೂಗಲ್ ಕೆಲವು ಬ್ಯಾಕ್ ಗ್ರೌಂಡ್ ಫೀಚರ್ ಗಳನ್ನು ಗೂಗಲ್ ಡಿಸೇಬಲ್ ಮಾಡುತ್ತದೆ.ಉದಾಹರಣೆಗೆ ಫೈಲ್ ಸಿಸ್ಟಮ್ ಎಪಿಐ, ಇದು ಡಿವೈಸ್ ಗಳಲ್ಲಿನ ಆಕ್ಟಿವಿಟಿಯನ್ನು ಟ್ರೇಸ್ ಮಾಡುವುದನ್ನು ಕೈಬಿಡುತ್ತದೆ.

ನ್ಯೂಸ್ ವೆಬ್ ಸೈಟ್ ಗಳಿಗೆ ತೊಂದರೆ

ನ್ಯೂಸ್ ವೆಬ್ ಸೈಟ್ ಗಳಿಗೆ ತೊಂದರೆ

ಇನ್ಕಾಗ್ನಿಟೋ ಮೋಡ್ ಫೀಚರ್ ಪಬ್ಲಿಷರ್ ಗಳು ಬಳಕೆ ಮಾಡಬಹುದಾಗಿದ್ದು ಜನರು ಅವರು ಪೇವಾಲ್ಸ್ ಗಳನ್ನು ಡಾಡ್ಜ್ ಮಾಡಲು ಪ್ರಯತ್ನಿಸುವ ಸಂದರ್ಬದಲ್ಲಿ ಇದು ಅವರಿಗೆ ನೆರವಾಗುತ್ತದೆ. ಕೆಲವು ನ್ಯೂಸ್ ವೆಬ್ ಸೈಟ್ ಗಳು ಬಳಕೆದಾರರು ಚಂದಾದಾರರಾಗಬೇಕು ಎಂದು ಹೇಳುವ ಮೊದಲು ಕೆಲವೇ ಸಂಖ್ಯೆಯಷ್ಟು ಉಚಿತ ಆರ್ಟಿಕಲ್ ಗಳನ್ನು ಓದುವುದಕ್ಕೆ ಅವಕಾಶ ನೀಡುತ್ತವೆ.ಆದರೆ ಇನ್ಕಾಗ್ನಿಟೋ ಮೂಲಕ ಜನರು ತಮ್ಮ ಕೌಂಟ್ ನ್ನು ರಿಸೆಟ್ ಮಾಡಬಹುದಾಗಿದ್ದು ಹೆಚ್ಚು ಆರ್ಟಿಕಲ್ ಗಳನ್ನು ಉಚಿತವಾಗಿ ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಲೋಪದೋಷಗಳಿಗೆ ಕೂಡಲೇ ಪರಿಹಾರ

ಲೋಪದೋಷಗಳಿಗೆ ಕೂಡಲೇ ಪರಿಹಾರ

ವರದಿಯು ಹೇಳುವ ಪ್ರಕಾರ ಕೆಲವು ಲೋಪದೋಷಗಳು ಈ ಫೀಚರ್ ನಲ್ಲಿರುವುದರಿಂದಾಗಿ ಜುಲೈ ಅಂತ್ಯದ ವೇಳೆಗೆ ಈ ಎಲ್ಲಾ ಲೋಪದೋಷಗಳಿಗೆ ಪರಿಹಾರ ನೀಡಲಾಗುತ್ತದೆ ಎನ್ನಲಾಗಿದೆ. ಆ ಮೂಲಕ ಪ್ರಕಾಶಕರಿಗೆ ಧೈರ್ಯ ಹೇಳುವ ಪ್ರಯತ್ನ ಮಾಡಲಾಗಿದೆ. ಆನ್ ಲೈನ್ ನಲ್ಲಿರುವ ಕೆಲವು ಸುದ್ದಿ ಪತ್ರಿಕೆಗಳು ಹಣಗಳಿಸಲು ಹೆಣಗಾಡುತ್ತಿರುವ ಪರಿಸ್ಥತಿಯಲ್ಲಿ ಇದು ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಮರ್ಥನೆ

ಸಮರ್ಥನೆ

ಆದರೆ ಗೂಗಲ್ ತನ್ನ ಕೆಲಸಕ್ಕೆ ಸಮರ್ಥನೆ ನೀಡಿದೆ. ರಾಜಕೀಯವಾಗಿ ಜನರನ್ನು ದಾರಿತಪ್ಪಿಸುವಿಕೆ ಮತ್ತು ದೇಶೀಯ ನಿಂದನೆ ಸೇರಿದಂತೆ ಹಲವು ಕಾರಣಗಳಿಂದಾಗಿ ವೆಬ್ ಆಕ್ಟಿವಿಟಿಯನ್ನು ಸುರಕ್ಷಿತವಾಗಿಡಬೇಕಾಗಿರುವುದು ಅನಿವಾರ್ಯ ಎಂಬುದಾಗಿ ಅದು ಹೇಳಿಕೊಂಡಿದೆ.

ಎಲ್ಲಾ ಬಳಕೆದಾರರ ಮೇಲೆ ಪರಿಣಾಮ:

ಎಲ್ಲಾ ಬಳಕೆದಾರರ ಮೇಲೆ ಪರಿಣಾಮ:

ಕಂಪೆನಿ ಹೇಳಿರುವ ಪ್ರಕಾರ ಪಬ್ಲಿಷರ್ ಗಳು ಫೈಲ್ ಸಿಸ್ಟಮ್ ಎಪಿಐ ನ ಬದಲಾವಣೆಯನ್ನು ಪರಿಣಾಮವನ್ನು ಗಮನಿಸುತ್ತಿರಬೇಕು ಯಾಕೆಂದರೆ ಬಳಕೆದಾರರ ಮೇಲಿನ ಯಾವುದೇ ರೀತಿಯ ವರ್ತನೆಯು ಕೂಡ ನಿರೀಕ್ಷೆಗಿಂತ ಭಿನ್ನವಾಗಿರುವ ಸಾಧ್ಯತೆ ಇರುತ್ತದೆ ಮತ್ತು ಮೀಟರ್ ಸ್ಟ್ರ್ಯಾಟಜಿಯಲ್ಲಿನ ಬದಲಾವಣೆಯು ಎಲ್ಲಾ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ಕೇವಲ ಇನ್ಕಾಗ್ನಿಟೋ ಮೋಡ್ ಬಳಸುವವರಿಂದ ಮಾತ್ರವೇ ಆಗಿರುವುದಿಲ್ಲ ಎಂದು ಗೂಗಲ್ ತಿಳಿಸಿದೆ.

ಖಾಸಗಿ ಬ್ರೌಸಿಂಗ್:

ಖಾಸಗಿ ಬ್ರೌಸಿಂಗ್:

ನ್ಯೂಸ್ ತಂಡದ ಬೆಂಬಲವು ಸೈಟ್ಸ್ ಜೊತೆಗೆ ಮೀಟರ್ ತಂತ್ರಗಳೊಂದಿಗೆ ಮತ್ತು ಮೀಟರ್ ತಂತ್ರದ ಗುರಿಯನ್ನು ಗುರುತಿಸುತ್ತದೆ ಆದರೆ ಖಾಸಗಿ ಬ್ರೌಸಿಂಗ್ ಪತ್ತೆಹಚ್ಚುವಿಕೆಯ ಆಧಾರದ ಮೇಲೆ ಯಾವುದೇ ವಿಧಾನವು ಕೂಡ ಇನ್ಕಾಗ್ನಿಟೋ ಮೋಡ್ ನ ತತ್ವಗಳನ್ನು ಹಾಳು ಮಾಡುತ್ತದೆ ಎಂದು ಅದು ಹೇಳಿದೆ. ಒಟ್ಟಿನಲ್ಲಿ ಇನ್ಕಾಗ್ನಿಟೋ ಮೋಡ್ ಬದಲಾಗುತ್ತಿದೆ.

Best Mobiles in India

Read more about:
English summary
Google Is Changing The Incognito Mode On Chrome

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X