ಗೂಗಲ್ ಮಾಡಲಿದೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನಲ್ಲಿ ವೀಡಿಯೋ ಕರೆ ಮತ್ತಷ್ಟು ಸರಳ!!

ಕ್ಯಾರಿಯರ್ಗಳ ViLTE ಸೇವೆ ಬಳಸಿ ಅಥವಾ ಗೂಗಲ್ ಡ್ಯುಯೋ ಬಳಸಿ ಸರಳವಾಗಿ ವೀಡಿಯೋ ಕಾಲ್ ಮಾಡುವ ಹೊಸ ಸೌಲಭ್ಯವನ್ನು ಗೂಗಲ್ ಆಂಡ್ರಾಯ್ಡ್ ಸಾಧನಗಳಲ್ಲಿ ನೀಡಲಿದೆ.

By Tejaswini P G
|

ಈಗೀಗ ವಿವಿಧ ಟೆಲಿಕಾಮ್ ಆಪರೇಟರ್ ಗಳ ಮಧ್ಯೆ ಏರ್ಪಟ್ಟಿರುವ ದರ ಸಮರಗಳಿಂದಾಗಿ ಜನರಿಗೆ ಇಂಟರ್ನೆಟ್ ಈಗ ಎಂದಿಗಿಂತಲೂ ಅಗ್ಗವಾಗಿ ಲಭಿಸುತ್ತಿದೆ. ಟೆಲಿಕಾಮ್ ಕಂಪೆನಿಗಳು ತಮ್ಮ ಗ್ರಾಹಕರಿಗೆ ದಿನ ದಿನವೂ ನೂತನ ಮತ್ತು ಆಕರ್ಷಕ ಆಫರ್ಗಳನ್ನು ನೀಡುತ್ತಿದ್ದಾರೆ.

ಗೂಗಲ್ ಮಾಡಲಿದೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನಲ್ಲಿ ವೀಡಿಯೋ ಕರೆ ಮತ್ತಷ್ಟು ಸರಳ!!

ಈ ಸಂದರ್ಭದ ಲಾಭವನ್ನು ಪಡೆಯುತ್ತಿರುವ ಗ್ರಾಹಕರು ವೀಡಿಯೋ ಕಾಲಿಂಗ್ ಸೌಲಭ್ಯವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.ಸಾವಿರಾರು ಮೈಲಿ ದೂರವಿರುವ ತಮ್ಮ ಕುಟುಂಬ ಮತ್ತು ಗೆಳೆಯರೊಂದಿಗೆ ಕೂಡ ಮುಖತಃ ಮಾತನಾಡುವ ಅವಕಾಶವನ್ನೊದಗಿಸುವ ಈ ವೀಡಿಯೋ ಕಾಲಿಂಗ್ ಸೌಲಭ್ಯ ಜನರಿಗೆ ಪ್ರಿಯವೆನಿಸಿದೆ.

ದೂರದಲ್ಲಿರುವ ಬಾಂಧವರು ಪರಸ್ಪರ ಸಂಭಾಷಿಸುವಾಗ ವೀಡಿಯೋ ಕರೆಯ ಸೌಲಭ್ಯ ಅದಕ್ಕೆ ಜೀವಂತಿಕೆಯನ್ನು ತುಂಬುತ್ತದೆ.ಹಾಗಾಗಿ ಗೂಗಲ್ ಆಂಡ್ರಾಯ್ಡ್ ಸಾಧನಗಳಲ್ಲಿವೀಡಿಯೋ ಕಾಲಿಂಗ್ ಸೌಲಭ್ಯವನ್ನು ಮತ್ತಷ್ಟು ಸರಳವಾಗಿಸಲು ಪ್ರಯತ್ನಿಸುತ್ತಿದೆ.ವೀಡಿಯೋ ಕಾಲಿಂಗ್ ಅನ್ನು ಗ್ರಾಹಕರ ಮೊಬೈಲ್ ನ ಅವಿಭಾಜ್ಯ ಅಂಗವಾಗಿಸ ಹೊರಟಿದೆ ಗೂಗಲ್.

ನಿಮ್ಮ ಮೊಬೈಲ್ ಫೋನಿನ ಆಂಡ್ರಾಯ್ಡ್ ಮೇಸೇಜಿಂಗ್ ಆಪ್, ಕಾಲ್, ಟೆಕ್ಸ್ಟ್ ಮೆಸೇಜ್ ಅಥವಾ ಕಾಂಟಾಕ್ಟ್ ಮೆನುವಿನಿಂದ ನೇರವಾಗಿ ವೀಡಿಯೋ ಕಾಲ್ ಪ್ರಾರಂಭಿಸುವ ಸೌಲಭ್ಯವನ್ನು ನೀಡುವುದಾಗಿ ಗೂಗಲ್ ಘೋಷಿಸಿದೆ.

via GIPHY

"ನೀವು ಮತ್ತು ನೀವು ವೀಡಿಯೋ ಕಾಲ್ ಮಾಡಲಿಚ್ಛಿಸುವ ವ್ಯಕ್ತಿ ಇಬ್ಬರೂ ViLTE(ವೀಡಿಯೋ ಓವರ್ LTE) ವೀಡಿಯೋ ಕಾಲಿಂಗ್ ಸಾಮರ್ಥ್ಯ ಹೊಂದಿರುವ ಕ್ಯಾರಿಯರ್ ಹೊಂದಿದ್ದರೆ, ನಿಮ್ಮ ಕರೆಗಳನ್ನು ಕ್ಯಾರಿಯರ್ ನ ViLTE ಸೇವೆ ಮೂಲಕ ನಡೆಸಲಾಗುತ್ತದೆ. ಇಲ್ಲದಿದ್ದರೆ, ಗೂಗಲ್ ಡ್ಯುಯೋ ಮೂಲಕ ಇತರ ಗೂಗಲ್ ಡ್ಯುಯೋ ಬಳಕೆದಾರರೊಂದಿಗೆ ವೀಡಿಯೋ ಕಾಲ್ ನಡೆಸುವ ಅವಕಾಶವಿರುತ್ತದೆ. ಡ್ಯುಯೋ ಬಳಸಲು ನೀವು ಮತ್ತು ನೀವು ವೀಡಿಯೋ ಕಾಲ್ ಮಾಡಬಯಸುವ ವ್ಯಕ್ತಿ ಇಬ್ಬರೂ ತಮ್ಮ ಸಾಧನದಲ್ಲಿ ಡ್ಯುಯೋ ಇನ್ಸ್ಟಾಲ್ ಮಾಡಿ ಅದನ್ನು ಸಕ್ರಿಯವಾಗಿರಿಸಬೇಕು"ಎಂದು ಗೂಗಲ್ ಸಂಸ್ಥೆಯು ತನ್ನ ಬ್ಲಾಗ್ ಪೋಸ್ಟ್ ಒಂದರಲ್ಲಿ ತಿಳಿಸಿದೆ. "ಮುಂದಿನ ದಿನಗಳಲ್ಲಿ ವಾಯ್ಸ್ ಕಾಲ್ ಅನ್ನು ಕೇವಲ ಒಂದು ಕ್ಲಿಕ್ ಮೂಲಕ ವೀಡಿಯೋ ಕಾಲ್ ಆಗಿ ಪರಿವರ್ತಿಸುವ ಸಾಮರ್ಥ್ಯವನ್ನೂ ನೀಡಲಿದ್ದೇವೆ" ಎಂದು ತಿಳಿಸಿದೆ.

ಶೀಘ್ರದಲ್ಲಿಯೇ ಫರ್ಸ್ಟ್-ಜನರೇಶನ್ ಪಿಕ್ಸೆಲ್, ಆಂಡ್ರಾಯ್ಡ್ ಒನ್ ಮತ್ತು ನೆಕ್ಸಸ್ ಸಾಧನಗಳಲ್ಲಿ ಇಂಟಗ್ರೇಟೆಡ್ ವೀಡಿಯೋ ಕಾಲಿಂಗ್ ಸೌಲಭ್ಯವನ್ನು ನೀಡವುದಾಗಿ ಹೇಳಿರುವ ಗೂಗಲ್ ಪಿಕ್ಸೆಲ್ 2 ಸಾಧನಗಳಲ್ಲಿಯೂ ಈ ಸೌಲಭ್ಯವಿರಲಿದೆ ಎಂದು ತಿಳಿಸಿದೆ. ಅಲ್ಲದೆ ಈ ಸಾಮರ್ಥ್ಯವನ್ನು ಮತ್ತಷ್ಟು ಆಂಡ್ರಾಯ್ಡ್ ಸಾಧನಗಳ್ಲಿ ನೀಡಲು ತಮ್ಮ ಕ್ಯಾರಿಯರ್ ಮತ್ತು ಡಿವೈಸ್ ಪಾರ್ಟ್ನರ್ಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ ಗೂಗಲ್ ಹೇಳಿದೆ.

ನಮ್ಮ ಮೆಟ್ರೋದಲ್ಲಿ ಓಡಾಡ್ತಿರಾ..? ಹಾಗಿದ್ರೆ ಜಿಯೋ ಬೇಕೆ ಬೇಕು..! ಯಾಕೆ ಗೊತ್ತಾ..?ನಮ್ಮ ಮೆಟ್ರೋದಲ್ಲಿ ಓಡಾಡ್ತಿರಾ..? ಹಾಗಿದ್ರೆ ಜಿಯೋ ಬೇಕೆ ಬೇಕು..! ಯಾಕೆ ಗೊತ್ತಾ..?

ಈ ಹೊಸ ಸೌಲಭ್ಯವನ್ನು ಬಳಸಲು ಬಳಕೆದಾರರು ತಮ್ಮ ಫೋನ್,ಕಾಂಟ್ಯಾಕ್ಟ್ಸ್,ಆಂಡ್ರಾಯ್ಡ್ ಮೆಸೇಜಸ್ ಮತ್ತು ಗೂಗಲ್ ಡ್ಯುಯೋ ಆಪ್ಗಳನ್ನು ಇತ್ತೀಚಿನ ಆವೃತ್ತಿಗಳಿಗೆ ಅಪ್ಡೇಟ್ ಮಾಡುವುದು ಆವಶ್ಯಕವಾಗಿದೆ.

Best Mobiles in India

English summary
Google has enabled carrier based Video over LTE calls, which can be placed directly without leaving the Phone, Contacts or Messaging app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X