ಇ-ಸಿಮ್‌ ಬಳಸೋರಿಗೆ ಗೂಗಲ್‌ನಿಂದ ಗುಡ್‌ ನ್ಯೂಸ್‌! ಇದು ಈ ಜಮಾನದ ಅಚ್ಚರಿ!

|

ಗೂಗಲ್‌ ಕಂಪೆನಿ ತನ್ನ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಲು ಮುಂದಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ ಪರಿಚಯಿಸಿರುವ ಗೂಗಲ್‌ ಇದೀಗ ಇ-ಸಿಮ್‌ ಆಯ್ಕೆಯಲ್ಲಿ ಹೊಸ ಫೀಚರ್ಸ್‌ ಸೇರ್ಪಡೆಗೆ ಮುಂದಾಗಿದೆ. ಅದರಂತೆ ಆಂಡ್ರಾಯ್ಡ್ ಬಳಕೆದಾರರು ತಮ್ಮ eSIM ಪ್ರೊಫೈಲ್‌ಗಳನ್ನು ಒಂದು ಫೋನ್‌ನಿಂದ ಇನ್ನೊಂದು ಫೋನ್‌ಗೆ ಸುಲಭವಾಗಿ ವರ್ಗಾಯಿಸುವ ಆಯ್ಕೆ ಪರಿಚಯಿಸಲು ಮುಂದಾಗಿದೆ.

ಇ-ಸಿಮ್‌ ಬಳಸೋರಿಗೆ ಗೂಗಲ್‌ನಿಂದ ಗುಡ್‌ ನ್ಯೂಸ್‌! ಇದು ಈ ಜಮಾನದ ಅಚ್ಚರಿ!

ಹೌದು, ಗೂಗಲ್‌ ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ತಮ್ಮ eSIM ಪ್ರೊಫೈಲ್‌ಗಳನ್ನು ಸುಲಭವಾಗಿ ವರ್ಗಾಯಿಸುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಈ ಫೀಚರ್ಸ್‌ ಇದೇ ಮಾರ್ಚ್ 2023ರಲ್ಲಿ ದೊರೆಯಲಿದೆ ಎಂದು ಹೇಳಲಾಗಿದೆ. ಅಂದ್ರೆ ಭವಿಷ್ಯದಲ್ಲಿ ಈ ಹೊಸ ಆಯ್ಕೆಯು ಲಭ್ಯವಾಗಲಿದ್ದು, ಆಂಡ್ರಾಯ್ಡ್‌ 14 ಸಿಸ್ಟಂನಲ್ಲಿ ಇದು ಸೇರ್ಪಡೆಯಾಗುವ ಸಾಧ್ಯತೆಯಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

eSIM ಪ್ರೊಫೈಲ್ ಟ್ರಾನ್ಸಫರ್‌ ಫೀಚರ್ಸ್‌ ವಿಶೇಷತೆ ಏನು?
ಪ್ರಸ್ತುತ ಆಂಡ್ರಾಯ್ಡ್‌ ಬಳಕೆದಾರರು ತಮ್ಮ eSIM ಪ್ರೊಫೈಲ್ ಅನ್ನು ಒಂದು ಫೋನ್‌ನಿಂದ ಇನ್ನೊಂದು ಫೋನ್‌ಗೆ ಟ್ರಾನ್ಸಫರ್‌ ಮಾಡೋದಕ್ಕೆ ಯಾವುದೇ ಅವಕಾಶವಿಲ್ಲ. ಇದಕ್ಕಾಗಿ ಬಳಕೆದಾರರು ತಮ್ಮ ಹಳೆಯ ಫೋನ್‌ನಲ್ಲಿ eSIM ಪ್ರೊಫೈಲ್ ಅನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ಅಲ್ಲದೆ ಅದನ್ನು ಹೊಸ ಫೋನ್‌ನಲ್ಲಿ ರಿ ಆಕ್ಟಿವ್‌ ಮಾಡಬೇಕಾಗುತ್ತದೆ. ಆದರೆ ಗೂಗಲ್‌ ಹೊಸ ಆಯ್ಕೆಯನ್ನು ಪರಿಚಯಿಸಿದರೆ ಹೊಸ ಫೋನ್‌ನಲ್ಲಿ eSIM ಅನ್ನು ಆ್ಯಕ್ಟಿವ್‌ ಗೊಳಿಸುವುದು ಸುಲಭವಾಗಲಿದೆ.

ಇನ್ನು ಈ ಹೊಸ ಫೀಚರ್ಸ್‌ ಆಂಡ್ರಾಯ್ಡ್‌ ಬಳಕೆದಾರರು ತಮ್ಮ ಹಳೆ ಫೋನ್‌ನಲ್ಲಿರುವ ಇ-ಸಿಮ್‌ ಪ್ರೊಫೈಲ್‌ ಅನ್ನು ಹೊಸ ಫೋನ್‌ಗೆ ವರ್ಗಾಯಿಸಲು ಅನುಮತಿಸಲಿದೆ. ಇದರಿಂದ ಹಳೆ ಮೊಬೈಲ್‌ನಲ್ಲಿ ನೀವು ಇ-ಸಿಮ್‌ ಪ್ರೊಫೈಲ್‌ ಅನ್ನು ಡಿ ಆಕ್ಟಿವ್‌ ಮಾಡುವ ಅವಶ್ಯಕತೆ ಬರೋದಿಲ್ಲ. ಇದಲ್ಲದೆ ಹಳೆಯ ಫೋನ್‌ನಲ್ಲಿ ನೀವು ಫಿಸಿಕಲ್‌ ಸಿಮ್‌ ಬಳಸುತ್ತಿದ್ದರೆ ಅದನ್ನು ಹೊಸ ಫೋನ್‌ನಲ್ಲಿ ಇ-ಸಿಮ್‌ ಪ್ರೊಫೈಲ್‌ಗೆ ಕನ್ವರ್ಟ್‌ ಮಾಡೋದಕ್ಕೆ ಕೂಡ ಅವಕಾಶ ನೀಡಲಿದೆ.

ಇ-ಸಿಮ್‌ ಬಳಸೋರಿಗೆ ಗೂಗಲ್‌ನಿಂದ ಗುಡ್‌ ನ್ಯೂಸ್‌! ಇದು ಈ ಜಮಾನದ ಅಚ್ಚರಿ!

ಇದಲ್ಲದೆ ಗೂಗಲ್‌ ತನ್ನ ಮುಂಬರುವ ಪಿಕ್ಸೆಲ್‌ ಫೋನ್‌ಗಳಲ್ಲಿ ಈ ಹೊಸ ಫೀಚರ್ಸ್‌ ಅನ್ನು ಸೇರಿಸುವ ನಿರೀಕ್ಷೆಯಿದೆ. ಆದರೆ ಗೂಗಲ್‌ ಪಿಕ್ಸೆಲ್‌ನ ಯಾವ ಶ್ರೇಣಿಯಲ್ಲಿ ಈ ಫೀಚರ್ಸ್‌ ಲಭ್ಯವಾಗಲಿದೆ ಅನ್ನೊದು ಬಹಿರಂಗವಾಗಿಲ್ಲ. ಇದರೊಂದಿಗೆ ಇತರ ಬ್ರಾಂಡ್‌ಗಳ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಕೂಡ eSIM ಪ್ರೊಫೈಲ್ ಟ್ರಾನ್ಸಫರ್‌ ಫೀಚರ್ಸ್‌ ಅನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ. ಆದರೂ ಫಿಸಿಕಲ್‌ SIM ಅನ್ನು eSIM ಪ್ರೊಫೈಲ್‌ಗೆ ಕನ್ವರ್ಟ್‌ ಮಾಡುವ ಆಯ್ಕೆಯು ಕೆಲವು ಸ್ಮಾರ್ಟ್‌ಫೋನ್‌ ಮಾಡೆಲ್‌ಗಳಿಗೆ ಮಾತ್ರ ಸೀಮಿತವಾಗಿರಲಿದೆ ಎಂದು ಅಂದಾಜಿಸಲಾಗಿದೆ.

ಇ-ಸಿಮ್‌ ಬಳಸೋರಿಗೆ ಗೂಗಲ್‌ನಿಂದ ಗುಡ್‌ ನ್ಯೂಸ್‌! ಇದು ಈ ಜಮಾನದ ಅಚ್ಚರಿ!

ಇನ್ನುಳಿದಂತೆ ಇದೇ ಜನವರಿ 15, 2023 ರೊಳಗೆ ಗೂಗಲ್‌ ಕ್ರೋಮ್‌ ನ ಹಳೆಯ ಆವೃತ್ತಿಗಳಿಗೆ ಸಪೋರ್ಟ್‌ ಅನ್ನು ನಿಲ್ಲಿಸಲಿದೆ. ಹೀಗಾಗಿ, ಕ್ರೋಮ್‌ ನ ಹೊಸ ಆವೃತ್ತಿ ಕ್ರೋಮ್‌ 110 ಆವೃತ್ತಿಯು ವಿಂಡೋಸ್‌ 10 ಅಥವಾ ನಂತರದ ಆವೃತ್ತಿಗಳಿಗೆ ಅಗತ್ಯವಿರುವ ಕ್ರೋಮ್‌ ನ ಮೊದಲ ಆವೃತ್ತಿಯಾಗಿದೆ. ಗಮನಾರ್ಹವಾಗಿ, ಬಳಕೆದಾರರು ವಿಂಡೋಸ್‌ 7 ಮತ್ತು ವಿಂಡೋಸ್‌ 8.1 ನಲ್ಲಿ ಕ್ರೋಮ್‌ ನ ಹಳೆಯ ಆವೃತ್ತಿಯನ್ನು ಬಳಸಲು ಸಾಧ್ಯವಾಗುತ್ತದೆ ಆದರೆ ಭದ್ರತಾ ಪರಿಹಾರಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಯಾವುದೇ ಹೊಸ ನವೀಕರಣಗಳನ್ನು ಪಡೆಯುವುದಿಲ್ಲ.

ಕ್ರೋಮ್‌ 109 ವಿಂಡೋಸ್‌ 7 ಮತ್ತು ವಿಂಡೋಸ್‌ 8/8.1 ಅನ್ನು ಬೆಂಬಲಿಸುವ ಕ್ರೋಮ್‌ ನ ಕೊನೆಯ ಆವೃತ್ತಿಯಾಗಿದೆ. ಕ್ರೋಮ್‌ 110 (ತಾತ್ಕಾಲಿಕವಾಗಿ ಫೆಬ್ರವರಿ 7, 2023 ರಂದು ಬಿಡುಗಡೆ ಮಾಡಲು ನಿಗದಿಪಡಿಸಲಾಗಿದೆ) ವಿಂಡೋಸ್‌ 10 ಅಥವಾ ನಂತರದ ಅಗತ್ಯವಿರುವ ಕ್ರೋಮ್‌ ನ ಮೊದಲ ಆವೃತ್ತಿಯಾಗಿದೆ' ಎಂದು ಕ್ರೋಮ್‌ ಘೋಷಿಸಿದೆ.

Best Mobiles in India

English summary
Google is planning to add a new eSIM transfer feature: Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X