Subscribe to Gizbot

ಗೂಗಲ್‌ನಲ್ಲಿ ಉದ್ಯೋಗ ಎಂದರೇ ಜಾಕ್‌ಪಾಟ್‌ ಹೊಡೆದಂತೆ

Written By:

2015 ರ ವರ್ಲ್ಡ್ಸ್‌ ಬೆಸ್ಟ್‌ ವರ್ಕ್‌ಪ್ಲೇಸ್‌ಕಂಪನಿಗಳು ಯಾವುವು ಎಂದು ಕೈಗೊಳ್ಳಲಾಗಿದ್ದ ಅಧ್ಯಯನದಲ್ಲಿ ಗೂಗಲ್‌ ಮೊದಲ ಟಾಪ್‌ ಎಂಎನ್‌ಸಿ ಕಂಪನಿಯಾಗಿ ಹೊರಹೊಮ್ಮಿದೆ. ಕೆಲಸಮಾಡಲು ಉತ್ತಮ ಎಂಎನ್‌ಸಿ ಕಂಪನಿಗಳು ಎಂಬ ಪಟ್ಟಿಯಲ್ಲಿ ಗೂಗಲ್‌ ಅಗ್ರಸ್ಥಾನ ಪಡೆದಿದೆ. ಅಂತೆಯೇ, ಸಾಫ್ಟ್‌ವೇರ್‌ ಅಭಿವೃದ್ದಿ ಕಂಪನಿ SAS ಸಂಸ್ಥೆ ಎರಡನೇ ಎಂಎನ್‌ಸಿ ಕಂಪನಿ ಸ್ಥಾನ ಮತ್ತು ಉತ್ಪಾದನಾ ಸಂಸ್ಥೆ W L Gore ಮೂರನೇ ಸ್ಥಾನ ಪಡೆದಿದೆ.

ಓದಿರಿ: ವಾಟ್ಸಾಪ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಾಕಿದರೆ ಬಂಧನ

ಗೂಗಲ್‌ ತನ್ನ ಪ್ರಾಬಲ್ಯವನ್ನು ಮಾಹಿತಿ ತಂತ್ರಜ್ಞಾನ ಮತ್ತು ಟೆಕ್‌ ಉತ್ಪನ್ನಗಳ ಸಾಲಿನಲ್ಲೂ ಇಂದಿಗೂ ಹೆಸರು ಮಾಡುತ್ತಲೇ ಬಂದಿದೆ. ಅಲ್ಲದೇ ಈಗ ಪ್ರಪಂಚದ ಅತ್ಯುತ್ತಮ ಕೆಲಸ ನಿರ್ವಹಿಸುವ ಸ್ಥಳ ಎಂದೂ ಸಹ ಪ್ರಖ್ಯಾತವಾಗಿದೆ. ದಿನನಿತ್ಯ ಮಾಹಿತಿ ಹುಡುಕಾಟಕ್ಕಾಗಿ ಗೂಗಲ್‌ ಸರ್ಚ್‌ ಇಂಜಿನ್‌ ಬಳಸುವ ನೀವು ಗೂಗಲ್‌ ಬಗೆಗಿನ ಈ ಮಾಹಿತಿಯನ್ನು ತಿಳಿಯಲೇ ಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವರ್ಲ್ಡ್ಸ್‌ ಬೆಸ್ಟ್‌ ವರ್ಕ್‌ಪ್ಲೇಸ್

ವರ್ಲ್ಡ್ಸ್‌ ಬೆಸ್ಟ್‌ ವರ್ಕ್‌ಪ್ಲೇಸ್

ವಾರ್ಷಿಕ ' ವರ್ಲ್ಡ್ಸ್‌ ಬೆಸ್ಟ್‌ ವರ್ಕ್‌ಪ್ಲೇಸ್‌ ' ಪಟ್ಟಿಯಲ್ಲಿ ಒಟ್ಟಾರೆ 25 ಜಾಗತಿಕ ಕಂಪನಿಗಳನ್ನು ಸೇರಿಸಲಾಗಿದೆ.

ಟಾಪ್‌ 5ನೇ ಸ್ಥಾನ

ಟಾಪ್‌ 5ನೇ ಸ್ಥಾನ

ಈ ಪಟ್ಟಿಯ ಟಾಪ್‌ 5ನೇ ಸ್ಥಾನದಲ್ಲಿ ಡಾಟಾ ಸ್ಟೋರೇಜ್‌ ತಜ್ಞ ಕಂಪನಿ NetApp ಮತ್ತು ಮೊಬೈಲ್‌ ಸಂವಹನ ಸೇವೆ ಕಂಪನಿ ಟೆಲಿಫೋನಿಯಾ ಇವೆ.

ಇತರೆ

ಇತರೆ

EMC ಕಾರ್ಪೋರೇಷನ್‌ ಆರನೇ ಸ್ಥಾನದಲಲ್ಲಿ ಮತ್ತು ಸಾಫ್ಟ್‌ವೇರ್‌ ಕಂಪನಿ ಮೈಕ್ರೋಸಾಫ್ಟ್‌ ಏಳನೇ ಸ್ಥಾನದಲ್ಲಿ ಕೆಲಸ ನಿರ್ವಹಿಸಲು ಉತ್ತಮ ಸ್ಥಳಗಳಾಗಿವೆ.

 ಭಾರತ

ಭಾರತ

ಈ ಪಟ್ಟಿಯಲ್ಲಿ ಯಾವುದೇ ಭಾರತೀಯ ಕಂಪನಿಗಳಿಲ್ಲ.

ಟಾಪ್‌ 10

ಟಾಪ್‌ 10

'ವರ್ಲ್ಡ್ಸ್‌ ಬೆಸ್ಟ್‌ ವರ್ಕ್‌ಪ್ಲೇಸ್‌' ಪಟ್ಟಿಯ ಟಾಪ್‌ 10 ಕಂಪನಿಗಳಲ್ಲಿ ಬಿಬಿವಿಎ (8 ನೇ ಸ್ಥಾನ), ಮಾನ್‌ಸಾನ್‌ಟೊ (9 ನೇ ಸ್ಥಾನ) ಮತ್ತು ಅಮೇರಿಕ ಎಕ್ಸ್‌ಪ್ರೆಸ್‌ (10 ನೇ ಸ್ಥಾನ) ಪಡೆದಿವೆ.

ಇತರೆ

ಇತರೆ

ಮ್ಯಾರಿಯಾಟ್‌ 11 ನೇ ಸ್ಥಾನ, ಬೆಲ್‌ಕಾರ್ಪ್‌(12), ಸ್ಕಾಟಿಯೋ ಬ್ಯಾಂಕ್‌ (13), ಆಟೋಡೆಸ್ಕ್‌(14), ಸಿಸ್ಕೋ (15), ಅಟೆಂಟೊ (16), ಡಿಯಾಜಿಯೊ (17), ಅಕೋರ್ (18), ಹ್ಯಾಟ್ (19), ಮಂಗಳ (20), ಕ್ಯಾಡೆನ್ಸ್ (21), ಹಿಲ್ಟಿ (22), EY (23), H & M, (24) ಮತ್ತು ನೋವೋ ನಾರ್ಡಿಸ್ಕ್ (25) ನೇ ಸ್ಥಾನ ಪಡೆದಿವೆ.

ಅಧ್ಯಯನ ಸಮೀಕ್ಷೆ

ಅಧ್ಯಯನ ಸಮೀಕ್ಷೆ

ಈ ಅಧ್ಯಯನ ಸಮೀಕ್ಷೆಯಲ್ಲಿ ಅರ್ಧ ಮಿಲಿಯನ್‌ಗಿಂತ ಹೆಚ್ಚು ಉದ್ಯೋಗಿಗಳು ಭಾಗವಹಿಸಿ, 2015 ರ ಪ್ರಪಂಚದ ಉತ್ತಮ ವರ್ಕ್‌ಪ್ಲೇಸ್‌ಎಂಬುದಕ್ಕೆ ನಿಕಟ ಸ್ನೇಹಿ ಉತ್ತರ ನೀಡಿದ್ದಾರೆ.

47 ದೇಶಗಳಲ್ಲಿ ಕಾರ್ಯಾಚರಣೆ

47 ದೇಶಗಳಲ್ಲಿ ಕಾರ್ಯಾಚರಣೆ

ಈ ವರ್ಷದ ಉತ್ತಮ ವರ್ಕ್‌ಪ್ಲೇಸ್‌ಗಾಗಿ 47 ದೇಶಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಅಧ್ಯಯನ ಕ್ಷೇತ್ರ ಕಂಪನಿಗಳು

ಅಧ್ಯಯನ ಕ್ಷೇತ್ರ ಕಂಪನಿಗಳು

ಈ ಕಾರ್ಯಾಚರಣೆಯಲ್ಲಿ ಕಾಸ್ಮೆಟಿಕ್ಸ್‌ ಕಂಪನಿಗಳು, ಕಂಪ್ಯೂಟರ್‌ ಸಾಫ್ಟ್‌ವೇರ್‌ ಮತ್ತು ಕೆಮಿಕಲ್‌ ಕಂಪನಿಗಳು ಸಹ ಒಳಗೊಂಡಿವೆ. ಹಾಗೂ ಚಿಲ್ಲರೆ, ಹಣಕಾಸು ಸೇವೆಗಳು ಮತ್ತು ಆತಿಥ್ಯ ಸೇವಾ ಕಂಪನಿಗಳನ್ನು ಸಹ ಕಾರ್ಯಾಚರಣೆಯಲ್ಲಿ ಸೇರಿಸಲಾಗಿದೆ.

ಆಯ್ಕೆ ಆಗಲು ಅರ್ಹತೆ

ಆಯ್ಕೆ ಆಗಲು ಅರ್ಹತೆ

ವರ್ಲ್ಡ್ಸ್‌ ಬೆಸ್ಟ್‌ ವರ್ಕ್‌ಪ್ಲೇಸ್‌ ಪಟ್ಟಿಗೆ ಆಯ್ಕೆ ಆಗಲು ರಾಷ್ಟ್ರೀಯವಾಗಿ 5 ಉತ್ತಮ ಕೆಲಸ ನಿರ್ವಹಣೆ ಸ್ಥಳ ಹೊಂದಿರಬೇಕು, ಹಾಗೂ ಪ್ರಪಂಚದಾದ್ಯಂತ 5000 ಉದ್ಯೋಗಿಗಳನ್ನು ಹೊಂದಿರಬೇಕು, ಮತ್ತು ಕಂಪನಿಯ ಸಂಸ್ಥಾಪನ ಕೇಂದ್ರ ದೇಶದಿಂದ ಶೇಕಡ 40 ಜಾಗತಿಕ ಕಾರ್ಯಾಚರಣೆ ಕೇಂದ್ರಗಳನ್ನು ಹೊಂದಿರಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google has topped the list of world's best companies to work for, grabbing the numero uno position for the third straight year, while software developer SAS Institute and manufacturing firm W L Gore were ranked second and third respectively.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot