ಗೂಗಲ್‌ನಿಂದ ಹೊಸ ಆಪ್ ಬಿಡುಗಡೆ!..ಈಗಲೇ ಡೌನ್‌ಲೋಡ್ ಮಾಡಿಬಿಡಿ!

|

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚಿನ ಮೊಬೈಲ್ ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ನಲ್ಲಿ ಕಡಿಮೆ ಜಾಗವನ್ನು ಹೊಂದಿರುವ ಸಮಸ್ಯೆ ಇರುವುದರಿಂದ ಗೂಗಲ್ ಮತ್ತೊಂದು ಹೊಚ್ಚ ಹೊಸ ಆಪ್ ಅನ್ನು ಬಿಡುಗಡೆ ಮಾಡಿದೆ. ಸ್ಮಾರ್ಟ್‌ಫೋನ್‌ನಲ್ಲಿ ಕಡಿಮೆ ಜಾಗ ಹೊಂದಿರುವ ಸಮಸ್ಯೆಯನ್ನು ನಿಭಾಯಿಸಲು, 'ಗೂಗಲ್ ಗ್ಯಾಲರಿ ಗೋ' ಎಂದು ಕರೆಯಲ್ಪಡುವ ಗೂಗಲ್ ಫೋಟೋಗಳ ಹೊಸ ಆವೃತ್ತಿಯನ್ನು ಗೂಗಲ್ ಕಂಪೆನಿ ಬಿಡುಗಡೆ ಮಾಡಿದೆ.

ಗೂಗಲ್‌ನಿಂದ ಹೊಸ ಆಪ್ ಬಿಡುಗಡೆ!..ಈಗಲೇ ಡೌನ್‌ಲೋಡ್ ಮಾಡಿಬಿಡಿ!

ಹವದು, ಗೂಗಲ್ ಪ್ಲೇ ಸ್ಟೋರ್ ವಿವರಣೆಯ ಪ್ರಕಾರ, ನೂತನ ಗ್ಯಾಲರಿ ಗೋ ಆಪ್ ಬಳಕೆದಾರರಿಗೆ ಸಹಾಯ ಮಾಡಲು ಗೂಗಲ್ ನಿರ್ಮಿಸಿದ ಸ್ಮಾರ್ಟ್, ಲೈಟ್ ಮತ್ತು ವೇಗದ ಫೋಟೋ ಮತ್ತು ವಿಡಿಯೋ ಗ್ಯಾಲರಿ ಅಪ್ಲಿಕೇಶನ್ ಆಗಿದೆ. ಗ್ಯಾಲರಿ ಗೋ ಮೂಲಕ, ಬಳಕೆದಾರರು ಸ್ವಯಂಚಾಲಿತವಾಗಿ ಫೋಟೋಗಳನ್ನು ವೇಗವಾಗಿ ಹುಡುಕಬಹುದು ಮತ್ತು ಇದು ಆಫ್‌ಲೈನ್‌ನಲ್ಲಿ ಸಹ ಕಾರ್ಯನಿರ್ವಹಿಸುತ್ತದೆ. ಇದರಿಂದ ಗೂಗಲ್ ಫೋಟೋ ಆಪ್‌ನಲ್ಲಿನ ಸಮಸ್ಯೆ ನಿವಾರಣೆಯಾಗಲಿದೆ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಓ ಹೊಸ ಗ್ಯಾಲರಿ ಗೋ ಅಪ್ಲಿಕೇಶನ್‌ಗೆ 10MB ಗಿಂತ ಕಡಿಮೆ ಶೇಖರಣಾ ಸ್ಥಳ ಬೇಕಾಗುತ್ತದೆ. ಜೊತೆಗೆ ಈ ಆಪ್ ಆರಾಮದಾಯಕ ಅನುಭವವನ್ನು ತರಲು ಕೃತಕ ಬುದ್ದಿಮತ್ತೆಯನ್ನು ಬಳಸುತ್ತದೆ. ಹಾಗಾಗಿ, ಈ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಬಳಕೆದಾರರ ಫೋಟೋಗಳು ಮತ್ತು ವೀಡಿಯೊಗಳನ್ನು ಸೆಲ್ಫಿಗಳು, ಭೂದೃಶ್ಯಗಳು, ಆಹಾರಗಳು ಮುಂತಾದ ವಿವಿಧ ವರ್ಗಗಳಾಗಿ ಸ್ವಯಂ ಆಗಿ ಆಯೋಜಿಸುತ್ತದೆ ಎಂದು ಗೂಗಲ್ ಕಂಪೆನಿಯು ತಿಳಿಸಿದೆ.

ಗೂಗಲ್‌ನಿಂದ ಹೊಸ ಆಪ್ ಬಿಡುಗಡೆ!..ಈಗಲೇ ಡೌನ್‌ಲೋಡ್ ಮಾಡಿಬಿಡಿ!

ಗೂಗಲ್ ಫೋಟೋಗಳಂತೆ ಕೆಲವು ಮೂಲ ಫೋಟೋ ಎಡಿಟಿಂಗ್ ವೈಶಿಷ್ಟ್ಯಗಳನ್ನು ಗೂಗಲ್ ಗ್ಯಾಲರಿ ಗೋನಲ್ಲಿ ಸೇರಿಸಲಾಗಿದೆ. ಇದು ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುವುದರಿಂದ, ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಬ್ಯಾಕಪ್ ಮಾಡಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಅಪ್ಲಿಕೇಶನ್ ತೋರಿಸುವುದಿಲ್ಲ. ಬದಲಾಗಿ. ಇದು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಸಂಗ್ರಹವಾಗಿರುವ ಫೋಟೋಗಳನ್ನು ಮಾತ್ರ ತೋರಿಸುತ್ತದೆ.

'ಹಾನರ್ ವ್ಯೂ 20' ಮೇಲೆ 12 ಸಾವಿರ ಡಿಸ್ಕೌಂಟ್!..ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ!'ಹಾನರ್ ವ್ಯೂ 20' ಮೇಲೆ 12 ಸಾವಿರ ಡಿಸ್ಕೌಂಟ್!..ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ!

ಗೂಗಲ್ ಫೋಟೋಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಆಪ್ ಆಗಿದ್ದು, ಅದನ್ನು ಲಕ್ಷಾಂತರ ಬಳಕೆದಾರರು ಬಳಸುತ್ತಿದ್ದಾರೆ. ಆದಾಗ್ಯೂ, ಈ ಅಪ್ಲಿಕೇಶನ್ ಇಂಟರ್ನೆಟ್ ಸಂಪರ್ಕವನ್ನು ಅವಲಂಬಿಸಿರುತ್ತದೆ ಎಂದು ನಿಮಗೆ ತಿಳಿದಿರಬಹುದು. ಈ ಅಪ್ಲಿಕೇಶನ್ ಹೆಚ್ಚಾಗಿ ಕ್ಲೌಡ್ ಸಂಗ್ರಹಣೆ ಮತ್ತು ಬ್ಯಾಕಪ್ ಉದ್ದೇಶಕ್ಕಾಗಿ ಬಳಸಲ್ಪಟ್ಟಿರುವುದರಿಂದ, ಸರಿಯಾದ ಇಂಟರ್ನೆಟ್ ಸಂಪರ್ಕವಿಲ್ಲದೆ ಈ ಅಪ್ಲಿಕೇಶನ್ ಏನೂ ಅಲ್ಲ ಎಂದು ಹೇಳಬಹುದು.

Best Mobiles in India

English summary
Gallery Go, a newly launched lightweight app that can substitute Google Photos. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X