ಫೇಸ್‌ಬುಕ್‌ಗೆ ಆಘಾತ ನೀಡಿದ ಗೂಗಲ್‌ನ ಹೊಸ 'ಶೂಲೆಸ್'‌ ಆಪ್‌!

|

ಅಮೆರಿಕಾ ಮೂಲದ ಟೆಕ್‌ ದೈತ್ಯ ಗೂಗಲ್‌ ಸಾಮಾಜಿಕ ಜಾಲತಾಣಗಳ ಅಪ್ಲಿಕೇಶನ್ ಅಭಿವೃದ್ಧಿಯಲ್ಲಿ ಎಡವಿದ್ದು. ಕಂಪನಿಯ ಟೈಮೇ ಚೆನ್ನಾಗಿಲ್ಲ ಎನ್ನುವಂತಾಗಿದೆ. ಏಕೆಂದರೇ ಗೂಗಲ್‌ ಅಭಿವೃದ್ಧಿ ಪಡಿಸಿದ್ದ, 'ಆರ್ಕುಟ್' (Orkut) ಮತ್ತು 'ಗೂಗಲ್‌ ಪ್ಲಸ್‌' ಸೋಶಿಯಲ್‌ ತಾಣಗಳು ಆರಂಭದಲ್ಲಿ ಮಿಂಚಿದರೂ ಮುಂದೆ ಗಟ್ಟಿಯಾಗಿ ನಿಲ್ಲುವಲ್ಲಿ ವಿಫಲ್‌ವಾಗಿ ಹೋದವು. ಆದರೆ ಗೂಗಲ್‌ ಈಗ ಮತ್ತೆ ಮೈಕೊಡವಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

ಫೇಸ್‌ಬುಕ್‌ಗೆ ಆಘಾತ ನೀಡಿದ ಗೂಗಲ್‌ನ ಹೊಸ 'ಶೂಲೆಸ್'‌ ಆಪ್‌!

ಹೌದು, ಗೂಗಲ್ ಸಂಸ್ಥೆಯು ಈಗ ಮತ್ತೆ ಹೊಸದೊಂದು ಸೋಶಿಯಲ್ ನೆಟವರ್ಕ್‌ ತಾಣವನ್ನು ಘೋಷಿಸಿದ್ದು, ಅದಕ್ಕೆ 'ಶೂಲೆಸ್‌' ಎಂದು ಹೆಸರಿಟ್ಟಿದೆ. ಈ ಸೋಶಿಯಲ್‌ ಆಪ್‌ ಸಮನಾದ ಆಸಕ್ತಿ ಹೊಂದಿರುವ ವ್ಯಕ್ತಿಗಳ ನಡುವೆ ಕನೆಕ್ಟ್ ಮಾಡುವ ಆಯ್ಕೆಯನ್ನು ಹೊಂದಿದ್ದು, ಈ ಮೂಲಕ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಸೋಶಿಯಲ್ ತಾಣ 'ಫೇಸ್‌ಬುಕ್‌'ಗೆ ಭಾರಿ ಆಘಾತ ನೀಡಲು ಮುಂದಾಗಿದೆ.

ಫೇಸ್‌ಬುಕ್‌ಗೆ ಆಘಾತ ನೀಡಿದ ಗೂಗಲ್‌ನ ಹೊಸ 'ಶೂಲೆಸ್'‌ ಆಪ್‌!

ಬಳಕೆದಾರರಿಗೆ ಇಷ್ಟವೆನಿಸುವ ಹಲವಾರು ಆಕ್ಟಿವಿಟಿಗಳ ಆಯ್ಕೆಯನ್ನು ಗೂಗಲ್‌ ಶೂಲೆಸ್‌ ಆಪ್‌ ಒಳಗೊಂಡಿರಲಿದ್ದು, ಆಂಡ್ರಾಯ್ಡ್‌ ಮತ್ತು ಐಓಎಸ್‌ ಅಪರೇಟಿಂಗ್ ಸಿಸ್ಟಮ್‌ ಬಳಕೆದಾರರಿಬ್ಬರಿಗೂ ಈ ಆಪ್‌ ಲಭ್ಯವಾಗಲಿದೆ ಎನ್ನಲಾಗಿದೆ. ಹಾಗಾದರೇ ಗೂಗಲ್ ಸಂಸ್ಥೆಯ ಹೊಸ ಶೂಲೆಸ್‌ ಸೋಶಿಯಲ್ ಅಪ್ಲಿಕೇಶನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಗೂಗಲ್‌ ಅಸಿಸ್ಟಂಟ್‌ನಿಂದ ದಂಪತಿಗಳ ಬೆಡ್‌ರೂಮ್‌ ಸಂಭಾಷಣೆ ಸೋರಿಕೆ! ಓದಿರಿ : ಗೂಗಲ್‌ ಅಸಿಸ್ಟಂಟ್‌ನಿಂದ ದಂಪತಿಗಳ ಬೆಡ್‌ರೂಮ್‌ ಸಂಭಾಷಣೆ ಸೋರಿಕೆ!

ಫೇಸ್‌ಬುಕ್‌ಗೆ ಆಘಾತ

ಫೇಸ್‌ಬುಕ್‌ಗೆ ಆಘಾತ

ಗೂಗಲ್‌ ಸಂಸ್ಥೆಯು ಶೂಲೆಸ್‌ ಹೆಸರಿನ ಹೊಸ ಸೋಶಿಯಲ್ ಆಪ್‌ ಆರಂಭಿಸಲಿದ್ದು, ಈ ಸುದ್ದಿ ಬಹುಶಃ ಫೇಸ್‌ಬುಕ್‌ಗೆ ಭಾರಿ ಆಘಾತ ನೀಡಲಿದೆ ಎನ್ನಲಾಗಿದೆ. ಏಕೆಂದರೇ ಶೂಲೆಸ್‌ ಆಪ್‌ನಲ್ಲಿ ಬಳಕೆದಾರರನ್ನು ಸೆಳೆಯುವ ಹಲವು ಹೊಸ ಆಕರ್ಷಕ ಫೀಚರ್ಸ್‌ ಮತ್ತು ಆಕ್ಟಿವಿಟಿಗಳ ಜೊತೆ ಸಮಾನ ಆಸಕ್ತಿಯವರು ಆಪ್‌ನಲ್ಲಿ ಕನೆಕ್ಟ್ ಆಗುವ ಆಯ್ಕೆ ಸಹ ಇರಲಿದೆ ಎನ್ನುವ ಮಾಹಿತಿಯನ್ನು ಸಂಸ್ಥೆಯು ಹೊರಹಾಕಿದೆ.

ಆಕ್ಟಿವಿಟಿ ವಿಶೇಷತೆಗಳೆನು

ಆಕ್ಟಿವಿಟಿ ವಿಶೇಷತೆಗಳೆನು

ಗೂಗಲ್ ಶೂಲೆಸ್‌ ಆಪ್‌ನಲ್ಲಿ ಬಳಕೆದಾರರು ಭಾಗವಹಿಸುವ ಇವೆಂಟ್‌ ಮತ್ತು ಆಕ್ಟಿವಿಟಿಗಳ ಬಗ್ಗೆ ಲಿಸ್ಟ್‌ ಮಾಡಬಹುದಾಗಿದೆ. ಹಾಗೆಯೇ ಸ್ನೇಹಿತರನ್ನು ಮತ್ತು ಹೊಸಪರಿಚಿತ ಸ್ನೇಹಿತರನ್ನು ಅವರು ಭಾಗವಹಿಸುವ ಇವೆಂಟ್‌ ಮತ್ತು ಆಕ್ಟಿವಿಟಿಗಳಿಗೆ ಆಹ್ವಾನಿಸಬಹುದಾಗಿದೆ. ಆಸಕ್ತಿದಾಯಕ ಆಕ್ಟಿವಿಟಿಗಳ ಬಗ್ಗೆ ಇತರರಿಗೆ ಸಲಹೆ ನೀಡಬಹುದಾದ ಅವಕಾಶಗಳು ಇರಲಿವೆ.

ಓದಿರಿ : ಗೂಗಲ್ ಮ್ಯಾಪ್‌ನ ಈ ಹೊಸ ಆಯ್ಕೆಯಿಂದ ಪ್ರಯಾಣ ಇನ್ನು ನಿರಾತಂಕ!ಓದಿರಿ : ಗೂಗಲ್ ಮ್ಯಾಪ್‌ನ ಈ ಹೊಸ ಆಯ್ಕೆಯಿಂದ ಪ್ರಯಾಣ ಇನ್ನು ನಿರಾತಂಕ!

ಗೆಳೆತನ ಹೇಗೆ

ಗೆಳೆತನ ಹೇಗೆ

ಗೂಗಲ್ ಹೊಸ ಶೂಲೆಸ್‌ ಆಪ್‌ನಲ್ಲಿ ಗೆಳೆಯರ ಆಯ್ಕೆಯು ವಿಶೇಷವಾಗಿದ್ದು, ನಿಮ್ಮ ಅಭಿರುಚಿಗಳಿಗೆ ಸರಿ ಹೊಂದುವವರೇ ನಿಮ್ಮ ಸ್ನೇಹಿತರಾಗಲು ಈ ಆಪ್‌ ನೆರವಾಗಲಿದೆ. ಈ ಆಪ್‌ನಲ್ಲಿ ಸಮಾನ ಅಭಿರುಚಿ ಅಥವಾ ಸಮಾನ ಆಸಕ್ತಿಕರ ಆಕ್ಟಿವಿಟಿಗಳನ್ನು (ಉದಾಹರಣೆಗೆ : ಯೋಗ, ಸೈಕ್ಲಿಂಗ್, ಸ್ವಿಮ್ಮಿಂಗ್, ಓದುವುದು) ಹೊಂದಿದರರೊಂದಿಗೆ ಕನೆಕ್ಟ್ ಮಾಡುವ ಆಯ್ಕೆಯನ್ನು ಪಡೆದುಕೊಂಡಿದೆ.

ಎರಡು ಬಾರಿ ಗೆದ್ದು ಸೋತ್ ಗೂಗಲ್

ಎರಡು ಬಾರಿ ಗೆದ್ದು ಸೋತ್ ಗೂಗಲ್

ಗೂಗಲ್‌ 2004ರಲ್ಲಿ ಮೊದಲ ಬಾರಿಗೆ 'ಆರ್ಕುಟ್' (Orkut) ಹೆಸರಿನ ಮೂಲಕ ಸೋಶಿಯಲ್‌ ಆಪ್‌ ಪರಿಚಯಿಸಿತ್ತು. ಆರಂಭದಲ್ಲಿ ಬಾರಿ ಜನಪ್ರಿಯತೆ ಹೊಂದಿದ್ದ ಆರ್ಕುಟ್‌ ಕ್ರಮೇಣ ಹಿಂದೆ ಸರಿಯಿತು. ಹಾಗೆಯೇ 2011ರಲ್ಲಿ 'ಗೂಗಲ್ ಪ್ಲಸ್‌' ಹೆಸರಿನ ಮತ್ತೊಂದು ಸೋಶಿಯಲ್‌ ತಾಣವನ್ನು ಅಭಿವೃದ್ಧ ಪಡೆಸಿದ್ದು, ಈ ತಾಣವು ಸಹ ಗೂಗಲ್‌ ನಿರೀಕ್ಷಯ ಮಟ್ಟ ತಲುಪಲಿಲ್ಲ. ಇತ್ತೀಚಿಗೆ ಗೂಗಲ್ ಫ್ಲಸ್‌ ಖಾಯಂ ಬಾಗಿಲು ಮುಚ್ಚಿತು.

ಓದಿರಿ : ಮೈಕ್ರೋಮ್ಯಾಕ್ಸ್‌ನ 'ಆಂಡ್ರಾಯ್ಡ್‌ ಟಿವಿ' ಮತ್ತು 'ವಾಶಿಂಗ್ ಮಿಶಿನ್' ಲಾಂಚ್!.ಬೆಲೆ?ಓದಿರಿ : ಮೈಕ್ರೋಮ್ಯಾಕ್ಸ್‌ನ 'ಆಂಡ್ರಾಯ್ಡ್‌ ಟಿವಿ' ಮತ್ತು 'ವಾಶಿಂಗ್ ಮಿಶಿನ್' ಲಾಂಚ್!.ಬೆಲೆ?

ಶೂಲೆಸ್‌ ಆಪ್‌ ಲಭ್ಯತೆ

ಶೂಲೆಸ್‌ ಆಪ್‌ ಲಭ್ಯತೆ

ಗೂಗಲ್‌ ಸಂಸ್ಥೆಯ ನೂತನ ಸೋಶಿಯಲ್ ತಾಣ ಶೂಲೆಸ್‌ ಅಪ್ಲಿಕೇಶನ್ ಆರಂಭದಲ್ಲಿ ಸದ್ಯ 'ನ್ಯೂಯರ್ಕ್' ರಾಷ್ಟ್ರದಲ್ಲಿ ಲಭ್ಯವಿದೆ. ಆದರೆ ಉಳಿದ ರಾಷ್ಟ್ರಗಳಿಗೆ ಶೂಲೆಸ್‌ ಆಪ್‌ ಅನ್ನು ಯಾವಾಗ ವಿಸ್ತರಿಸಲಿದೆ ಎನ್ನುವ ಬಗ್ಗೆ ಕಂಪನಿಯು ಮಾಹಿತಿಯನ್ನು ಹೊರಹಾಕಿಲ್ಲ. ಬಹುತೇಕ ಸೋಶಿಯಲ್‌ ಆಪ್ಸ್‌ ಪ್ರಿಯರು ಗೂಗಲ್ ಶೂಲೆಸ್ ಆಪ್‌ ಅನ್ನು ಎದುರುನೋಡುತ್ತಿದ್ದಾರೆ.

ಓದಿರಿ : ಮಾರುಕಟ್ಟೆಗೆ ಲಗ್ಗೆ ಇಡಲಿದೆ 'ಶಿಯೋಮಿ ಸೂಪರ್‌ಬಾಸ್‌' ಹೆಡ್‌ಫೋನ್‌!ಓದಿರಿ : ಮಾರುಕಟ್ಟೆಗೆ ಲಗ್ಗೆ ಇಡಲಿದೆ 'ಶಿಯೋಮಿ ಸೂಪರ್‌ಬಾಸ್‌' ಹೆಡ್‌ಫೋನ್‌!

Best Mobiles in India

English summary
Shoelace App only available in the New York City of the United States for now, and there is no word on the global rollout. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X