ಜಿಯೋ ಫೋನ್ ಗೆ ಸ್ಪರ್ಧೆಯೊಡ್ಡುವಂತಿರುವ 500 ರುಪಾಯಿ ಫೋನ್ ಬಿಡುಗಡೆಗೊಳಿಸಿದ ಗೂಗಲ್

  |

  ಗೂಗಲ್ ಫೀಚರ್ ಫೋನ್ ಗಳ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂಬ ಸೂಚನೆಗಳು ಸಿಗುತ್ತಿದೆ. ಕಂಪೆನಿಯು ಹೊಸ ಫೋನ್ ವೊಂದನ್ನು ಬಿಡುಗಡೆಗೊಳಿಸಿದ್ದು ಅದರ ಹೆಸರು ಬಹಳ ವಿಚಿತ್ರವಾಗಿದೆ. ಅದುವೇ ವಿಝ್ ಫೋನ್ ಡಬ್ಲ್ಯೂಪಿ006. ಈ ಹೊಸ ಗೂಗಲ್ ಫೋನ್ ಫೀಚರ್ ಫೋನ್ ನಂತೆಯೇ ಕಾಣಿಸುತ್ತದೆ. ಜಿಯೋ ಫೋನ್ ನಂತೆಯೇ ಇದೆ. ಇದರಲ್ಲಿ KaiOS ಇದೆ ಮತ್ತು ಕೆಲವು ಸ್ಮಾರ್ಟ್ ಫಂಕ್ಷನಾಲಿಟಿಗಳಿವೆ ಉದಾಹರಣೆಗೆ ಗೂಗಲ್ ಅಸಿಸ್ಟೆಂಟ್ ಇದ್ದು ಅದು ವಾಯ್ಸ್ ಕಮಾಂಡ್ ಗಳನ್ನು ಪಡೆಯುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಜಿಯೋಫೋನ್ ನಂತೆಯೇ ಕಾಣುವ ಫೋನ್:

  ಇದೀಗ ನೀವು ವಿಝ್ ಫೋನ್ ಡಬ್ಲ್ಯೂಪಿ 006 ಜಿಯೋ ಫೋನ್ ನಂತೆಯೇ ಎಂದು ಆಲೋಚಿಸಿದರೆ ಖಂಡಿತ ನೀವು ಸರಿಯಾಗಿಯೇ ಯೋಚಿಸಿದ್ದೀರಿ. ಖಂಡಿತ ಇದು ಜಿಯೋ ಫೋನ್ ನಂತೆಯೇ ಕಾಣುತ್ತದೆ ಮತ್ತು ಕೆಲಸವನ್ನೂ ಕೂಡ ಜಿಯೋಫೋನ್ ನಂತೆಯೇ ಮಾಡುತ್ತದೆ. ಇದು ಕೂಡ KaiOS ನಿಂದಲೇ ಕೂಡಿದ್ದು ಜಿಯೋ ಫೋನ್ ಮತ್ತು ಜಿಯೋಫೋನ್ 2 ಎರಡೂ ಕೂಡ ಇದರಿಂದಲೇ ಪವರ್ಡ್ ಆಗಿದೆ. ಜಿಯೋ ಫೋನ್ ನಂತೆಯೇ ವಿಝ್ ಫೋನ್ ಡಬ್ಲ್ಯೂಪಿ006 ನಲ್ಲೂ ವಿಶೇಷವಾಗಿ KaiOS ಬೆಂಬಲವಾಗುವಂತೆ ವಾಟ್ಸ್ ಆಪ್ ಸೇರಿದಂತೆ ಹಲವು ಆಪ್ ಗಳಿಗೆ ಬೆಂಬಲ ನೀಡಲಾಗಿದೆ.

  ಇಂಡೋನೇಷಿಯಾದಲ್ಲಿ ಬಿಡುಗಡೆಗೊಂಡಿರುವ ಫೋನ್:

  ಸದ್ಯ ಈ ಫೋನ್ ನ್ನು ಇಂಡೋನೇಷಿಯಾದಲ್ಲಿ ಮಾತ್ರವೇ ಗೂಗಲ್ ಬಿಡುಗಡೆಗೊಳಿಸಿದೆ. ಆದರೆ ಇದೊಂದು ದೊಡ್ಡ ಡೀಲ್ ಎಂದು ಅನ್ನಿಸುತ್ತಿದೆ ಯಾಕೆಂದರೆ ಗೂಗಲ್ ನ ಹೀರಿಯ ಎಕ್ಸಿಕ್ಯೂಟೀವ್ ಆಗಿರುವ ಸ್ಕಾಟ್ ಹುಫ್ಮ್ಯಾನ್ ಅವರು ಗೂಗಲ್ ಫಾರ್ ಇಂಡೋನೇಷಿಯಾ ಎಂಬ ದೊಡ್ಡ ಕಾರ್ಯಕ್ರಮವೊಂದರಲ್ಲಿ ಇದನ್ನು ಬಿಡುಗಡೆಗೊಳಿಸಿದ್ದಾರೆ.

  ಬೆಲೆ ಎಷ್ಟಿದೆ ಗೊತ್ತಾ?

  ಇದರ ಬೆಲೆ ಇಂಡೋನೇಷಿಯಾದಲ್ಲಿ IDR 99,000, ಭಾರತೀಯ ಕರೆನ್ಸಿಯಲ್ಲಿ ಹೇಳುವುದಾದರೆ ಅಂದಾಜು 490 ರುಪಾಯಿಗಳು.ಡಾಲರ್ ಲೆಕ್ಕದಲ್ಲಿ ಆದರೆ ಕೇವಲ 7 ಡಾಲರ್ ನ ಫೋನ್ ಇದು.

  ಫೋನಿನ ವಿಶೇಷತೆಗಳು:

  ಖಂಡಿತ ಇದು ಫೀಚರ್ ಫೋನ್ ಆದರೆ ಇದರಲ್ಲೂ ಕೆಲವು ಸ್ಮಾರ್ಟ್ ಫಂಕ್ಷನಾಲಿಟಿಗಳನ್ನು ಅಳವಡಿಸಲಾಗಿದೆ. ಜಿಯೋ ಫೋನ್ ನಂತೆಯೇ ಇದು 4ಜಿ ಕನೆಕ್ಟಿವಿಟಿಗೆ ಬೆಂಬಲ ನೀಡುತ್ತದೆ.ಇದರಲ್ಲಿ ವಾಟ್ಸ್ ಆಪ್ ನ ಸ್ಪೆಷಲ್ ವರ್ಷನ್ ನ್ನು ಇನ್ಸ್ಟಾಲ್ ಮಾಡಿ ಇಡಲಾಗಿರುತ್ತದೆ. ವಾಯ್ಸ್ ಕಮಾಂಡ್ ಬಳಸಿ ಗೂಗಲ್ ಅಸಿಸ್ಟೆಂಟ್ ಬಳಕೆ ಮಾಡಬಹುದು.

  ಇಂಡೋನೇಷಿಯಾದಲ್ಲಿ ಗೂಗಲ್ ಛಾಪು:

  ಮೀಡಿಯಾ ನೋಟ್ ನಲ್ಲಿ KaiOS ಸಂಸ್ಥೆ ಹೇಳಿರುವಂತೆ ಗೂಗಲ್ ಒಂದು ಹೊಸತನದ ಅವಕಾಶವನ್ನು ಗ್ರಾಹಕರಿಗೆ ವಿಝ್ ಫೋನ್ ಮೂಲಕ ನೀಡುತ್ತಿದ್ದು ಗೂಗಲ್ ಮ್ಯಾಪ್, ಗೂಗಲ್ ಅಸಿಸ್ಟೆಂಟ್, ಗೂಗಲ್ ಸರ್ಚ್ ಸೇರಿದಂತೆ ಹಲವು ಆಪ್ ಗಳಿಗೆ ಅವಕಾಶ ನೀಡುತ್ತದೆ. ಇಂಡೋನೇಷಿಯಾದಲ್ಲಿ ಇನ್ನು ಮುಂದೆ ಗೂಗಲ್ ಅಸಿಸ್ಟೆಂಟ್ ಕೆಲಸ ಮಾಡಲಿದೆ. ಅಂತರ್ಜಾಲವನ್ನು ವಾಯ್ಸ್ ಮೂಲಕ ಆಕ್ಸಿಸ್ ಮಾಡುವುದಕ್ಕೆ ಇನ್ನು ಮುಂದೆ ಇದು ಅವಕಾಶ ನೀಡಲಿದೆ ಎಂದು ತಿಳಿಸಿದೆ.

  ಫೋನಿನ ವೈಶಿಷ್ಟ್ಯತೆಗಳು:

  ವಿಝ್ ಫೋನೋ ಡಬ್ಲ್ಯೂಪಿ006 512 ಎಂಬಿ ಮೆಮೊರಿ ಮತ್ತು 4ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದ್ದು, 2.4 ಇಂಚಿನ ಸ್ಕ್ರೀನ್ ಹೊಂದಿದೆ. ಹಿಂಭಾಗದಲ್ಲಿ 2ಎಂಪಿ ಕ್ಯಾಮರಾ ಮತ್ತು ವಿಜಿಎ ಮುಂಭಾಗದ ಕ್ಯಾಮರಾ ಇದೆ. 1800 mAh ಬ್ಯಾಟರಿ ಇದ್ದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ MSM8905 ಚಿಪ್ ಸೆಟ್ ಮೂಲಕ ಕಾರ್ಯ ನಿರ್ವಹಿಸುತ್ತದೆ.

  ಭಾರತಕ್ಕೆ ಬರುತ್ತಾ?

  ವಿಝೋ ಫೋನ್ ಡಬ್ಲ್ಯೂಪಿ006 ನ್ನು ಭಾರತಕ್ಕೂ ಗೂಗಲ್ ಪರಿಚಯಿಸಲಿದೆಯಾ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಇಲ್ಲ. ಆದರೆ ಇದೆಲ್ಲಾ ಬೆಳವಣಿಗೆಯನ್ನು ಗಮನಿಸಿದರೆ ಈ ಫೋನ್ ನ್ನು ಗೂಗಲ್ ತಯಾರಿಸಿರುವುದಲ್ಲ ಆದರೆ ಗೂಗಲ್ ನ ಆಶಿರ್ವಾದದಿಂದ ಗೂಗಲ್ ಸೇವೆಗಳು ಲಭ್ಯವಿರುವಂತೆ ತಯಾರಿಸಿರುವ ಫೋನ್ ಇದಾಗಿದೆ. ಹಾಗಾಗಿ ಭಾರತದಲ್ಲಿ ಈಗಾಗಲೇ ಜಿಯೋಫೋನ್ ಮತ್ತು ಜಿಯೋಫೋನ್ 2 ಎರಡೂ ಕೂಡ ಇರುವುದರಿಂದಾಗಿ ಈ ಫೋನ್ ಇಲ್ಲಿಗೆ ಕಾಲಿಡುವುದು ಬಹುತೇಕ ಅನುಮಾನ. ಮತ್ತೊಂದು ಫೋನ್ ನ್ನು ಬಿಡುಗಡೆಗೊಳಿಸಿ ಭಾರತದಲ್ಲಿ ಕೈಸುಟ್ಟುಕೊಳ್ಳುವ ಬದಲು ಜಿಯೋ ಜೊತೆಗೆ ಕೈಜೋಡಿಸಿ ತನ್ನ ಸೇವೆಗಳು ಜಿಯೋ ಫೋನ್ ಮೂಲಕ ಲಭ್ಯವಾಗುವಂತೆ ಮಾಡುವ ಸಾಧ್ಯತೆ ಗಳು ಹೆಚ್ಚಿದೆ.

  ಭಾರತದಲ್ಲಿ ಬಿಡುಗಡೆಗೊಂಡಲ್ಲಿ ಏನಾದೀತು?

  ಒಂದು ವೇಳೆ ಗೂಗಲ್ ಈ ಫೋನ್ ನ್ನು ಭಾರತಕ್ಕೆ ತಂದಿದ್ದೇ ಆದಲ್ಲಿ ಖಂಡಿತ ಜಿಯೋ ಫೋನ್ ಗೆ ಕಠಿಣ ಸ್ಪರ್ಧೆ ಏರ್ಪಡಲಿದೆ. ಇತ್ತೀಚಿನ ದಿನಗಳಲ್ಲಿ ಜನರು ಅತೀ ಹೆಚ್ಚು ಸ್ಮಾರ್ಟ್ ಫೋನ್ ಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಅದರಲ್ಲೂ ಉತ್ತಮ ಫೀಚರ್ ಗಳಿರುವ ಕಡಿಮೆ ಬೆಲೆಯ ಫೋನ್ ವೊಂದು ಲಭ್ಯವಾಗುತ್ತದೆ ಎಂದರೆ ಜನರು ಮುಗಿಬೀಳುತ್ತಾರೆ. 5000 ರುಪಾಯಿ ಒಳಗೆ ಗೂಗಲ್ ಇಂತಹ ಫೋನ್ ವೊಂದನ್ನು ಭಾರತದಲ್ಲಿ ಬಿಡುಗಡೆಗೊಳಿಸಿದರೆ ಖಂಡಿತ ಹೆಚ್ಚಿನ ಜನರು ಇಷ್ಟಪಡುವ ಸಾಧ್ಯತೆ ಇದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Google launches a Rs 500 JioPhone competitor called WizPhone WP006, not available in India yet

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more