ಗೂಗಲ್‌ ಬಳಕೆದಾರರಿಗೆ ಮಾತ್ರ ಸಾಗರ ಸೌಂದರ್ಯ ನೋಡುವ ಅವಕಾಶ

By Suneel
|

ಪ್ರಪಂಚದಲ್ಲಿ ಯಾವ ಸೌಂದರ್ಯಕ್ಕೆ ತಲೆಬಾಗದೆ ಹೋದರು, ಪ್ರಕೃತಿ ಮತ್ತು ಸಮುದ್ರಗಳ ನೈಜ ಸೌಂದರ್ಯಕ್ಕೆ ಮನಸೋಲುವುದು ಮನುಷ್ಯನ ಹುಟ್ಟುಗುಣ. ಅಂತಹ ಮನಮೋಹಕ ದೃಶ್ಯಗಳನ್ನು ನೋಡಲು ಹಲವರು ತಮ್ಮ ವೃತ್ತಿಗಳಿಗೆ ತಿಂಗಳು ಗಟ್ಟಲೇ ರಜೆಹಾಕಿ ಸಮುದ್ರ, ಅರಣ್ಯ, ಪ್ರಾಣಿಸಂಗ್ರಹಾಲಯ, ಬೆಟ್ಟಗುಡ್ಡಗಳಿಗೆ ಚಾರಣ ಹೋಗುತ್ತಾರೆ. ಈ ಪ್ರದೇಶಗಳೆಲ್ಲಾ ಭೂಮಿಯ ಮೈಲ್ಮೈನಲ್ಲಿರುವ ಪ್ರದೇಶಗಳು. ಎಲ್ಲರೂ ನೋಡಬಹುದು ಓಕೆ. ಆದ್ರೆ ಕೆಲವರಿಗೆ ಭೂಮಿಯ ಒಳಗಿನ ಕೌತುಕ, ಸಾಗರ- ನದಿಗಳಲ್ಲಿನ ಅಚ್ಚರಿ ಹಾಗೂ ಮನಮೋಹಕ ದೃಶ್ಯಗಳನ್ನು ನೋಡುವಾಸೆ ಇದ್ದೇ ಇರುತ್ತದೆ. ಈ ಕನಸು ನನಸಾಗುವ ಬಗ್ಗೆ ನಿಮಗೆ ನಿರಾಸೆ ಇರಬಹುದು.

ಓದಿರಿ:ಕೇವಲ 800 ರೂಪಾಯಿಗಳಲ್ಲಿ ನಿಮ್ಮ ಗ್ಯಾಜೆಟ್‌ಗಳ ರಕ್ಷಣೆ

ಈಗ ಆ ಕನಸುಗಳು ನನಸಾಗುವ ಸಮಯ. ಹೌದು ಗೂಗಲ್ ಸಮುದ್ರಗಳ ತಳಭಾಗದ ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಿದೆ. ಗೂಗಲ್‌ ಜೂನ್‌ 8 ರಂದು ಪ್ರಪಂಚ ಸಮುದ್ರ ದಿನ ಆಚರಿಸಿತು. ಅಲ್ಲದೆ ಆಸ್ಟ್ರೇಲಿಯಾದ ಪ್ರಖ್ಯಾತ ಮಹಾಗೋಡೆಯು ಸೇರಿದಂತೆ 40 ಸಮುದ್ರ ತಳಭಾಗ ವೀಕ್ಷಿಸುವ ಪ್ರದೇಶಗಳನ್ನು ಪ್ರಾರಂಭಿಸಿದೆ.

ಗೂಗಲ್ ಸ್ಟ್ರೀಟ್‌ವಿವ್- ಹೆರಾನ್‌ ದ್ವೀಪ, ಆಸ್ಟ್ರೇಲಿಯಾದ ಪ್ರಖ್ಯಾತ ಬ್ಯಾರಿಯರ್‌ ರೀಫ್

ಗೂಗಲ್ ಸ್ಟ್ರೀಟ್‌ವಿವ್- ಹೆರಾನ್‌ ದ್ವೀಪ, ಆಸ್ಟ್ರೇಲಿಯಾದ ಪ್ರಖ್ಯಾತ ಬ್ಯಾರಿಯರ್‌ ರೀಫ್

ಗೂಗಲ್‌ ಎಕ್ಸ್‌ಎಲ್‌ ಕ್ಯಾಟ್ಲಿನ್‌ ಸೀವಿವ್‌ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಬ್ಯಾರಿಯರ್‌ ರೀಫ್ ಸೇರಿದಂತೆ, ವಿಶ್ವದ ದೊಡ್ಡ ಹಾಗೂ ಸುಂದರ ಸಮುದ್ರಗಳ ತಳಭಾಗಗಳಲ್ಲಿ ಒಟ್ಟಾರೆ 20 ಕ್ಯಾಮೆರಾಗಳನ್ನು ಅಳವಡಿಸಿದೆ.

ಈ ನಕ್ಷೆಯಲ್ಲಿ ಗೂಗಲ್‌ ಸ್ಟ್ರೀಟ್ ವ್ಯೂ ಪ್ರದೇಶಗಳನ್ನು ತೋರಿಸಲಾಗಿದೆ.

ಈ ನಕ್ಷೆಯಲ್ಲಿ ಗೂಗಲ್‌ ಸ್ಟ್ರೀಟ್ ವ್ಯೂ ಪ್ರದೇಶಗಳನ್ನು ತೋರಿಸಲಾಗಿದೆ.

ಅರ್ಧದಷ್ಟು ಕ್ಯಾಮೆರಾಗಳನ್ನು ಗೂಗಲ್‌ ಪ್ರಪಂಚದಾದ್ಯಂತ ಆಕ್ವಾ ಸಂಸ್ಕೃತಿಯನ್ನು ತೋರಿಸಲು ಅಳವಡಿಸಿದ್ದು, ಕೆಲವು ಈ ನಕ್ಷೆಯಲ್ಲಿ ತೋರಿಸಲಾದ ಸ್ಥಳಗಳಲ್ಲಿ ಅಳವಡಿಸಲಾಗಿದೆ.

ಗೂಗಲ್‌ ಸ್ಟ್ರೀಟ್ ವ್ಯೂ -ರೊಚೆ ಸೈಂಟ್ ನಿಕೋಲಸ್, ಮೊನಾಕೊ

ಗೂಗಲ್‌ ಸ್ಟ್ರೀಟ್ ವ್ಯೂ -ರೊಚೆ ಸೈಂಟ್ ನಿಕೋಲಸ್, ಮೊನಾಕೊ

ಗೂಗಲ್ ಸಾಗರ ತಳಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳು ಸಾಗರ ಪ್ರಪಂಚದಲ್ಲಿ ಪ್ರಾಣಿಗಳು ಮತ್ತು ಸಸ್ಯಗಳ ಜೀವನದ ಸುಂದರ ಛಾಯಾಚಿತ್ರಗಳನ್ನು ಸೆರೆಹಿಡಿಯಲಿವೆ. ಹಾಗೂ ಕರಾವಳಿ ಪ್ರದೇಶಗಳಿಗಿಂತ ಹೆಚ್ಚಾಗಿ ಸಮುದ್ರ ತಳದ ಅಂದದ ಫೋಟೋಗಳನ್ನು ವೀಕ್ಷಣೆಗೆ ಅವಕಾಶ ಕಲ್ಪಿಸಲಿದೆ.

ಗೂಗಲ್‌ ಸ್ಟ್ರೀಟ್ ವ್ಯೂ -ಗಲಪಗೊಸ್ ದ್ವೀಪ, ಕ್ವಾಡರ್‌

ಗೂಗಲ್‌ ಸ್ಟ್ರೀಟ್ ವ್ಯೂ -ಗಲಪಗೊಸ್ ದ್ವೀಪ, ಕ್ವಾಡರ್‌

ಗೂಗಲ್‌ ಎಕ್ಸ್ಎಲ್ ಕ್ಯಾಟ್ಲಿನ್‌ ಸೀವಿವ್ ತಂಡದೊಂದಿಗೆ ವಿಜ್ಞಾನಾಧಾರಿತ ಯೋಜನೆ ಕೈಗೊಂಡಿದ್ದು, ವಿಶ್ವದ ಹವಳ ದಿಬ್ಬಗಳನ್ನು 360 ಡಿಗ್ರಿಯಲ್ಲಿ ಪನೋರಮ ದೃಶ್ಯಗಳನ್ನು ಸೆರೆಹಿಡಿದು ಸಾಗರ ತಳದ ದಾಖಲೆ ಮಾಡಲು ಪೂರ್ವ ಯೋಜನೆ ಸಿದ್ದಗೊಳಿಸಿದೆ. ಸಮುದ್ರ ತಳದ ಫೋಟೋಗಳನ್ನು ಸೆರೆಹಿಡಿದು ಜನರಿಗೆ ತಲುಪಿಸುವುದರಿಂದ ಸಾಗರ ತಳದ ಮನೋಹರ ಸೌಂದರ್ಯ ಮಾನವನ ಹಲವು ಚಟುವಟಿಕೆಗಳಿಂದ ಹೇಗೆ ಬದಲಾಗುತ್ತಿದೆ ಎಂಬುದನ್ನು ತಿಳಿಸಲು ಅನುಕೂಲವಾಗುತ್ತದೆ. ಇದರಿಂದ ಕಾನೂನು ರೂಪಿಸುವವರಿಗೂ ಸುಂದರ ಸಾಗರ ಪ್ರಪಂದ ಹೇಗೆ ಬದಲಾಗುತ್ತಿದೆ. ಎಂಬುದು ತಿಳಿಯುತ್ತದೆ ಎಂಬ ಆಶಯ ಇಟ್ಟುಕೊಳ್ಳಲಾಗಿದೆ.

ಗೂಗಲ್‌ ಸ್ಟ್ರೀಟ್ ವ್ಯೂ- ಲೇಡಿ ಇಲಿಯಟ್‌ ದ್ವೀಪ, ಗ್ರೇಟ್‌ ಬ್ಯಾರಿಯರ್‌ ರೀಫ್

ಗೂಗಲ್‌ ಸ್ಟ್ರೀಟ್ ವ್ಯೂ- ಲೇಡಿ ಇಲಿಯಟ್‌ ದ್ವೀಪ, ಗ್ರೇಟ್‌ ಬ್ಯಾರಿಯರ್‌ ರೀಫ್

ಗೂಗಲ್‌ ಸಾಗರ ಕಾರ್ಯಕ್ರಮದ ಸಿಬ್ಬಂದಿಗಳ ಹೇಳಿಕೆ:

" ಖಂಡಿತ ನಮಗೆ ನಂಬಿಕೆ ಇದೆ. ಈ ಛಾಯಾಚಿತ್ರಗಳನ್ನು ಬಿಡುಗಡೆ ಮಾಡುವುದರಿಂದ ಜನರು ಸಾಗರ ತಳದ ಸೌಂದರ್ಯದಿಂದ ಸ್ಫೂರ್ತಿಗೊಂಡು, ನೈಸರ್ಗಕ ಸಂಪತ್ತನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ಕಲಿಯುತ್ತಾರೆ. ಹೊಸ ತಂತ್ರಜ್ಞಾನಗಳನ್ನು ಬಳಸಿ ಸಮುದ್ರದ ಬದಲಾವಣೆಯನ್ನು ಚಿತ್ರಿಸಿ ಇಟ್ಟುಕೊಳ್ಳಬೇಕು. ಇದರಿಂದ ಸಮುದ್ರದ ಬದಲಾವಣೆ ಬಗ್ಗೆ ತಿಳಿಯಬಹದು".

ಗೂಗಲ್‌ ಸ್ಟ್ರೀಟ್ ವ್ಯೂ- ಅಪೊ ದ್ವೀಪ, ಫಿಲಿಫೈನ್ಸ್

ಗೂಗಲ್‌ ಸ್ಟ್ರೀಟ್ ವ್ಯೂ- ಅಪೊ ದ್ವೀಪ, ಫಿಲಿಫೈನ್ಸ್

ಇತ್ತೀಚಿನ ದಿನಗಳಲ್ಲಿ ಕಾರ್ಬನ್‌ ಡೈ ಆಕ್ಸೈಡ್‌ಹೆಚ್ಚಾಗುತ್ತಿದ್ದು, ಸಮುದ್ರಗಳಲ್ಲಿ ಆಸಿಡ್‌ ಪ್ರಮಾಣ ಹೆಚ್ಚುತ್ತಿದೆ. ಅಲ್ಲದೆ ಮಾನವನ ಇತರೆ ಹಲವು ಚಟುವಟಿಕೆಗಳಿಂದ ಹವಳಗಳ ಬೆಳವಣಿಗೆ ಕುಸಿಯುತ್ತಿದ್ದು, ಅಲ್ಲದೆ ಮೀನುಗಳನ್ನು ಬ್ಲಾಸ್ಟ್‌ ಮಾಡುವುದು ಕೂಡ ಮಾರಕವಾಗುತ್ತಿದೆ. ಇಂತಹ ಹಲವು ಕಾರಣಗಳಿಂದ ಸಮುದ್ರದ ಉಷ್ಣಾಂಶ ಹೆಚ್ಚುತ್ತಿದ್ದು, ವಾತಾವರಣ ಬದಲಾವಣೆಗೆ ಕಾರಣವಾಗಿದೆ. ಈ ಎಲ್ಲಾ ಚಟುವಟಿಕೆಗಳಿಂದ ಹವಳಗಳು ಬೆಳವಣಿಗೆಯಾಗಲು ವೈಜ್ಞಾನಿಕವಾಗಿ ಸಾಧ್ಯವಾಗುತ್ತಿಲ್ಲ ಎಂಬುದು ತಿಳಿಯಲಾಗಿದೆ.

 ಗೂಗಲ್‌ ಸ್ಟ್ರೀಟ್ ವ್ಯೂ- ಟೆಫಿ ಕೋವ್, ಅಮೇರಿಕನ್‌ ಸಮೋಅ

ಗೂಗಲ್‌ ಸ್ಟ್ರೀಟ್ ವ್ಯೂ- ಟೆಫಿ ಕೋವ್, ಅಮೇರಿಕನ್‌ ಸಮೋಅ

ಗೂಗಲ್ ಹೊಸ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಗೂಗಲ್‌ ಸ್ಟ್ರೀಟ್ ವ್ಯೂ- ಪೆಡ್ರಾಸ್‌ ಸೆಕಾಸ್

ಗೂಗಲ್‌ ಸ್ಟ್ರೀಟ್ ವ್ಯೂ- ಪೆಡ್ರಾಸ್‌ ಸೆಕಾಸ್

ಗೂಗಲ್‌ ಸ್ಟ್ರೀಟ್ ವ್ಯೂ- ಪೆಡ್ರಾಸ್‌ ಸೆಕಾಸ್

ಗೂಗಲ್‌ ಸ್ಟ್ರೀಟ್ ವ್ಯೂ- ಸಮುದ್ರ ತಳಭಾಗದ ಇಸ್ಲಾ ಮುಗೆರೆಸ್ ಮ್ಯೂಸಿಯಮ್‌, ಮೆಕ್ಸಿಕೊ

ಗೂಗಲ್‌ ಸ್ಟ್ರೀಟ್ ವ್ಯೂ- ಸಮುದ್ರ ತಳಭಾಗದ ಇಸ್ಲಾ ಮುಗೆರೆಸ್ ಮ್ಯೂಸಿಯಮ್‌, ಮೆಕ್ಸಿಕೊ

ಗೂಗಲ್‌ ಸ್ಟ್ರೀಟ್ ವ್ಯೂ- ಸಮುದ್ರ ತಳಭಾಗದ ಇಸ್ಲಾ ಮುಗೆರೆಸ್ ಮ್ಯೂಸಿಯಮ್‌, ಮೆಕ್ಸಿಕೊ

 ಗೂಗಲ್‌ ಸ್ಟ್ರೀಟ್ ವ್ಯೂ- ಶೆಲ್ಲಿ ಬೀಚ್, ಸಿಡ್ನಿ, ಆಸ್ಟ್ರೇಲಿಯಾ

ಗೂಗಲ್‌ ಸ್ಟ್ರೀಟ್ ವ್ಯೂ- ಶೆಲ್ಲಿ ಬೀಚ್, ಸಿಡ್ನಿ, ಆಸ್ಟ್ರೇಲಿಯಾ

ಗೂಗಲ್‌ ಸ್ಟ್ರೀಟ್ ವ್ಯೂ- ಶೆಲ್ಲಿ ಬೀಚ್, ಸಿಡ್ನಿ, ಆಸ್ಟ್ರೇಲಿಯಾ

Most Read Articles
Best Mobiles in India

English summary
On June 8, Google celebrated World Oceans Day by launching 40 underwater Street View locations that include astonishing views of Australia's Great Barrier Reef.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more