ಗೂಗಲ್‌ನ 'ಶಾಪಿಂಗ್ ಟ್ಯಾಬ್' ಆರಂಭ!..ಭಾರತೀಯರು ಫುಲ್ ಖುಷ್!!

|

ವಿಶ್ವದ ದೈತ್ಯ ಸರ್ಜ್ ಎಂಜಿನ್‌ ಸಂಸ್ಥೆ ಗೂಗಲ್ ಭಾರತದಲ್ಲಿ ತನ್ನ 'ಶಾಪಿಂಗ್' ಟ್ಯಾಬ್ ಆರಂಭಿಸಿ ಸಾರ್ವಜನಿಕರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಇ ಕಾಮರ್ಸ್ ಕಂಪೆನಿಗಳು ಮತ್ತು ವ್ಯಾಪಾರಿ ವೆಬ್‌ಸೈಟ್‌ ಪ್ಲಾಟ್‌ಫಾರ್ಮ್‌ಗಳಿಗೆ ನಿರ್ದೇಶಿಸಲು ಹಾಗೂ ಗೂಗಲ್ ಬಳಕೆದಾರರಿಗೆ ಹೊಸ ಉತ್ಪನ್ನಗಳನ್ನು ಹುಡುಕಲು ಅನುವು ಮಾಡಿಕೊಡುವಂತಹ ಶಾಪಿಂಗ್ ಟ್ಯಾಬ್ ಇದಾಗಿದೆ.

ಗೂಗಲ್ ಪರಿಚಯಿಸಲಿರುವ ಈ ನೂತನ ಶಾಪಿಂಗ್ ಟ್ಯಾಬ್‌ನಲ್ಲಿ ಬಳಕೆದಾರರು ತಮಗೆ ಬೇಕಾದ ಉತ್ಪನ್ನಗಳನ್ನು ಹುಡುಕಬಹುದಾಗಿದ್ದು, ಗ್ರಾಹಕರನ್ನು ಸಂಬಂಧಿಸಿದ ಇ-ಕಾಮರ್ಸ್ ತಾಣಗಳಿಗೆ ಈ ಟ್ಯಾಬ್‌ ಕರೆದೊಯ್ಯುಲಿದೆ. ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದ ಗೂಗಲ್‌ ಕಂಪೆನಿ, ವರ್ಷಾಂತ್ಯದ ವೇಳೆಗೆ ಈ ಹೊಸ ಟ್ಯಾಬ್ ಅನ್ನು ಬಿಡುಗಡೆ ಮಾಡಿ ಗಮನಸೆಳೆದಿದೆ.

ಗೂಗಲ್‌ನ 'ಶಾಪಿಂಗ್ ಟ್ಯಾಬ್' ಆರಂಭ!..ಭಾರತೀಯರು ಫುಲ್ ಖುಷ್!!

ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳನ್ನು ಹುಡುಕಲು ಗೂಗಲ್‌ನ ಶಾಪಿಂಗ್‌ ಟ್ಯಾಬ್ ವಿಶಿಷ್ಟವಾಗಿ ನೆರವು ನೀಡಲಿದ್ದು, ಸ್ಥಳೀಯ ವರ್ತಕರನ್ನು ಗ್ರಾಹಕರ ಜತೆ ಬೆಸೆಯುವ ಕೆಲಸವನ್ನು ಈ ಟ್ಯಾಬ್‌ ಮಾಡಲಿದೆ. ದೊಡ್ಡ ಇ-ಕಾಮರ್ಸ್ ಕಂಪೆನಿಗಳ ಹೊರತಾಗಿ, ಸಣ್ಣ ಮತ್ತು ಮಧ್ಯಮ ಆನ್‌ಲೈನ್ ಉದ್ಯಮಗಳನ್ನು ಸಹ ಮೇಲಕ್ಕೆತ್ತುವ ಗುರಿಯನ್ನು ಗೂಗಲ್ ಹಾಕಿಕೊಂಡಿರುವಂತಿದೆ.

ಕಿರಾಣಿ ಸ್ಟೋರ್‌ಗಳಿಂದ ಹಿಡಿದು, ಕೊನೆಯ ಕರಕುಶಲ ಮಳಿಗೆಗಳವರೆಗೆ ಬಳಕೆದಾರರು ಹುಡುಕುತ್ತಿರುವ ಉತ್ಪನ್ನಗಳನ್ನು ಕಂಡುಹಿಡಿಯಲು ಈ ಗೂಗಲ್ 'ಶಾಪಿಂಗ್ ಟ್ಯಾಬ್' ಸಹಾಯ ಮಾಡಲಿದೆ. ಬಳಕೆದಾರರು ತಮ್ಮ ಹುಡುಕಾಟದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಗಳಿಸುತ್ತಾರೆ. ಉತ್ಪನ್ನದ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಬಹುದು ಎಂದು ಮಾಹಿತಿಗಳು ತಿಳಿಸಿವೆ.

ಗೂಗಲ್‌ನ 'ಶಾಪಿಂಗ್ ಟ್ಯಾಬ್' ಆರಂಭ!..ಭಾರತೀಯರು ಫುಲ್ ಖುಷ್!!

ಈ ಸುದ್ದಿ ಮತ್ತೊಂದು ರೀತಿಯಲ್ಲಿ ವೈರಲ್ ಆಗಿದ್ದು, ಗೂಗಲ್‌ನ ಶಾಪಿಂಗ್ ಟ್ಯಾಬ್ ಎಂಬುದು ಅಂತಿಮವಾಗಿ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಗೂಗಲ್ ಹೆಜ್ಜೆಯನ್ನಿಡಬಹುದು ಕೆಲವು ತಜ್ಞರು ಭಾವಿಸುತ್ತಿದ್ದಾರೆ. ಜನಪ್ರಿಯ ಇ ಕಾಮರ್ಸ್ ಜಾಲತಾಣ ಅಮೆಜಾನ್ ಬೆಳವಣಿಗೆಯನ್ನು ನೋಡುತ್ತಿರುವ ಗೂಗಲ್ 'ಶಾಪಿಂಗ್' ಟ್ಯಾಬ್ ಆರಂಭಿಸುವ ಉದ್ದೇಶ ಇದೂ ಕೂಡ ಆಗಿರಬಹುದು.

ಓದಿರಿ: 'ಈಡಿಯೇಟ್' ಎಂದು ಸರ್ಚ್ ಮಾಡಿದರೆ 'ಟ್ರಂಪ್' ಫೋಟೊ!..ಕಾರಣ ತಿಳಿಸಿದ ಗೂಗಲ್!!

Best Mobiles in India

English summary
Users can filter through offers, review prices from retailers and easily find the desired products.to know more visi tto kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X