ಟ್ಯಾಕ್ಸಿ ಬಾಡಿಗೆ ಉಳಿಕೆಗೆ ನೆರವಾಗಲಿದೆ 'ಗೂಗಲ್‌ ಮ್ಯಾಪ್‌'ನ ಈ ಹೊಸ ಫೀಚರ್!

|

ಪ್ರಸ್ತುತ ಗೂಗಲ್ ಮ್ಯಾಪ್‌ ನೆರವಿನಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳವನ್ನು ತಲುಪುವುದು ಬಹಳ ಸುಲಭ ಎನಿಸಿದ್ದರೂ, ಕೆಲವೊಮ್ಮೆ ಗೂಗಲ್ ಮ್ಯಾಪ್‌ನಲ್ಲಿ ದಾರಿ ತಪ್ಪುವ ಸಾಧ್ಯತೆಗಳಿರುತ್ತದೆ. ಈ ನಿಟ್ಟಿನಲ್ಲಿ ಗೂಗಲ್ ಹೊಸದೊಂದು ಫೀಚರ್‌ ಪರಿಚಯಿಸಲು ಮುಂದಾಗಿದ್ದು, ಒಂದು ವೇಳೆ ಬಳಕೆದಾರರೇನಾದರೂ 'ಗೂಗಲ್ ಮ್ಯಾಪ್‌'ನಲ್ಲಿ ದಾರಿ ತಪ್ಪಿದರೇ ಅವರಿಗೆ ಅಲರ್ಟ್‌ ಮಾಹಿತಿ ನೀಡಲಿದೆ.

ಟ್ಯಾಕ್ಸಿ ಬಾಡಿಗೆ ಉಳಿಕೆಗೆ ನೆರವಾಗಲಿದೆ 'ಗೂಗಲ್‌ ಮ್ಯಾಪ್‌'ನ ಈ ಹೊಸ ಫೀಚರ್!

ಹೌದು, ಗೂಗಲ್ ಈಗಾಗಲೇ ಗೂಗಲ್‌ ಮ್ಯಾಪ್‌ನಲ್ಲಿ ಸಾಕಷ್ಟು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿದ್ದು, ಇದೀಗ ಮತ್ತೊಂದು ಫೀಚರ್ಸ್‌ ಅನ್ನು ಪರಿಚಯಿಸುವ ತವಕದಲ್ಲಿದೆ. ಟ್ಯಾಕ್ಸಿಯಲ್ಲಿ ಪ್ರಯಾಣಿಸುವಾಗ ಡ್ರೈವರ್‌ ಸನಿಹದ ದಾರಿ ಬಿಟ್ಟು, ದೂರದ ದಾರಿಯಲ್ಲಿ ಚಲಿಸಲಾರಂಭಿಸಿದರೇ ತಕ್ಷಣವೇ ಪ್ರಯಾಣಿಕರಿಗೆ ಅಲರ್ಟ್‌ ಬರಲಿದೆ. ಗೂಗಲ್‌ ಮ್ಯಾಪ್‌ನ ಈ ಫೀಚರ್ಸ್‌ ಟ್ಯಾಕ್ಸಿಗೆ ಹೆಚ್ಚಿನ ಹಣ ನೀಡುವುದನ್ನು ಉಳಿಸಲಿದೆ.

ಟ್ಯಾಕ್ಸಿ ಬಾಡಿಗೆ ಉಳಿಕೆಗೆ ನೆರವಾಗಲಿದೆ 'ಗೂಗಲ್‌ ಮ್ಯಾಪ್‌'ನ ಈ ಹೊಸ ಫೀಚರ್!

ಗೂಗಲ್‌ನ ಮ್ಯಾಪ್‌ನಲ್ಲಿ ಅಲರ್ಟ್‌ ಆಯ್ಕೆ ಲಭ್ಯವಾಗಲಿದ್ದು, ಒಂದು ವೇಳೆ ಟ್ಯಾಕ್ಸಿ ಡ್ರೈವರ್‌ಗಳು ಸಮೀಪ ಎನಿಸುವ ಮಾರ್ಗದಲ್ಲಿ ಚಲಿಸುವ ಬದಲು, ದೂರ ದಾರಿಯ ಮೂಲಕ ಪ್ರಯಾಣಿಸಲು ಆರಂಭಿಸಿದರೇ ದಾರಿ ತಪ್ಪಿರುವ ಕುರಿತು ಅಲರ್ಟ್‌ ಬರಲಿದೆ. ಹಾಗಾದರೇ ಗೂಗಲ್ ಮ್ಯಾಪ್‌ನಲ್ಲಿ ಲಭ್ಯವಾಗಲಿರುವ ನೂತನ ಫೀಚರ್‌ ಏನೆಲ್ಲಾ ಮಹತ್ತರ ಅಂಶಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಶುರುವಾಯ್ತು 'ಶಿಯೋಮಿ ಸೂಪರ್‌ ಸೇಲ್'!..ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!ಓದಿರಿ : ಶುರುವಾಯ್ತು 'ಶಿಯೋಮಿ ಸೂಪರ್‌ ಸೇಲ್'!..ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!

ವ್ಯಾಪ್ತಿ ಎಷ್ಟು

ವ್ಯಾಪ್ತಿ ಎಷ್ಟು

ಗೂಗಲ್ ಮ್ಯಾಪ್‌ನಲ್ಲಿ ಹೊಸದಾಗಿ ಅಲರ್ಟ್ ಫೀಚರ್‌ ಲಭ್ಯವಾಗಲಿದ್ದು, ದಾರಿ ಬದಲಾದರೇ ನಿಗದಿತ ವ್ಯಾಪ್ತಿಯೊಳಗೆ ಮಾಹಿತಿ ನೀಡುತ್ತದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ಟ್ಯಾಕ್ಸಿ ಸಮೀಪದ ದಾರಿ ಬಿಟ್ಟು ಸುಮಾರು 500 ಮೀಟರ್‌ ದೂರ್‌ ಪ್ರಯಾಣಿಸಿದರೇ ಕೂಡಲೇ ಅಲರ್ಟ್‌ ಮಾಹಿತಿಯು ಬಳಕೆದಾರರಿಗೆ ಲಭ್ಯವಾಗಲಿದೆ.

ಟ್ಯಾಕ್ಸಿ ದಾರಿ ತಪ್ಪಿದರೇ ಎಚ್ಚರಿಸಲಿದೆ

ಟ್ಯಾಕ್ಸಿ ದಾರಿ ತಪ್ಪಿದರೇ ಎಚ್ಚರಿಸಲಿದೆ

ನೀವು ಟ್ಯಾಕ್ಸಿ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೊರಟಿರುತ್ತಿರಿ. ಆದರೆ ಒಂದು ವೇಳೆ ಟ್ಯಾಕ್ಸಿ ಡ್ರೈವರ್‌ ನೀವು ತಲುಪಬೇಕಿರುವ ಸ್ಥಳಕ್ಕೆ ಕಡಿಮೆ ಅಂತರದ ದಾರಿಯಲ್ಲಿ ಚಲಿಸುವ ಬದಲಿಗೆ ದೂರದ ದಾರಿಯಲ್ಲಿ ಚಲಿಸಲು ಶುರು ಮಾಡಿದರೇ, ನಿಮಗೆ ದಾರಿ ಬದಲಾಗಿರುವ ಕುರಿತು ಎಚ್ಚರಿಸಲಿದೆ ಗೂಗಲ್ ಮ್ಯಾಪ್‌ನ ಹೊಸ ಫೀಚರ್‌.

ಓದಿರಿ : ಐಫೋನ್ ಸೇರಲಿವೆ ನೀವು ನಿರೀಕ್ಷಿಸದ ಹೊಸ ಫೀಚರ್ಸ್‌ಗಳು! ಓದಿರಿ : ಐಫೋನ್ ಸೇರಲಿವೆ ನೀವು ನಿರೀಕ್ಷಿಸದ ಹೊಸ ಫೀಚರ್ಸ್‌ಗಳು!

ಸಮಯ ಉಳಿಕೆ

ಸಮಯ ಉಳಿಕೆ

ಗೂಗಲ್‌ನ ಈ ಫೀಚರ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುವವರಿಗೆ ಸಮೀಪದ ದಾರಿಯಲ್ಲಿ ಪ್ರಯಾಣಿಸುವಂತೆ ಮಾಡಲಿದೆ. ಸಮೀಪ ದಾರಿಯಲ್ಲಿ ಚಲಿಸುವುದರಿಂದ ಪ್ರಯಾಣಿಕರ ಟ್ಯಾಕ್ಸಿ ಪ್ರಯಾಣದ ವೆಚ್ಚವು ಕಡಿಮೆ ಬರಲಿದ್ದು, ಸಮೀಪದ ದಾರಿಯಲ್ಲಿ ಪ್ರಯಾಣಿಸಿದರೇ ಸಮಯವು ಉಳಿಕೆಯಾಗಲಿದೆ.

ಉಪಯುಕ್ತ ಫೀಚರ್ಸ್‌

ಉಪಯುಕ್ತ ಫೀಚರ್ಸ್‌

ಗೂಗಲ್ ಇತ್ತೀಚಿಗೆ ಹಲವು ನೂತನ ಫೀಚರ್ಸ್‌ಗಳನ್ನು ಮ್ಯಾಪ್‌ನಲ್ಲಿ ಸೇರಿಸಿದ್ದು, ಅವುಗಳಲ್ಲಿ ರಸ್ತೆಯ ಸ್ಪೀಡ್‌ ಲಿಮಿಟ್, ಮಾರ್ಗ ಮಧ್ಯ ಲಭ್ಯವಿರುವ ಅಗತ್ಯ ಸೌಲಭ್ಯಗಳ ಮಾಹಿತಿ, ಟ್ರೈನ್‌ ಲೈವ್‌ ಸ್ಟೇಟಸ್‌ ಚೆಕ್ಕಿಂಗ್, ನಿಗದಿತ ಸ್ಥಳ ತಲುಪಲು ಬಸ್ ತೆಗೆದುಕೊಳ್ಳುವ ಸಮಯ ಫೀಚರ್ಸ್‌ಗಳು ಪ್ರಯಾಣಿಕರಿಗೆ ಬೆಸ್ಟ್ ಎನಿಸಿವೆ. ಅವುಗಳ ಲಿಸ್ಟ್‌ಗೆ ಈಗ ಈ ಹೊಸ ಫೀಚರ್‌ ಸೇರಲಿದೆ.

ಓದಿರಿ : ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!ಓದಿರಿ : ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

Best Mobiles in India

English summary
google map new feature will hopefully prevent folks from paying too much for a taxi ride due to a driver taking the long way. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X