ಗೂಗಲ್ ಮ್ಯಾಪ್‌ ಡೌನ್‌; ದಾರಿ ತಿಳಿಯದೇ ಕಂಗಾಲಾದ ಬಳಕೆದಾರರು!

|

ಪ್ರಮುಖ ನ್ಯಾವಿಗೇಶನ್ ಆಪ್‌ ಆಗಿ ಗುರುತಿಸಿಕೊಂಡಿರುವ ಗೂಗಲ್ ಮ್ಯಾಪ್‌ ನಲ್ಲಿ ಅಡಚಣೆ ಕಂಡುಬಂದಿದೆ. ಯುನೈಟೆಡ್ ಸ್ಟೇಟ್ಸ್‌ನಾದ್ಯಂತ 12,000 ಕ್ಕೂ ಹೆಚ್ಚು ಬಳಕೆದಾರರು ಸ್ನ್ಯಾಗ್‌ಗಳನ್ನು ವರದಿ ಮಾಡುವ ಮೂಲಕ ಗೂಗಲ್ ನಕ್ಷೆಗಳು ಸ್ಥಗಿತಗೊಂಡಿವೆ ಎಂದು ಡೌನ್‌ಡೆಕ್ಟರ್ ವರದಿ ಮಾಡಿದೆ. ಗೂಗಲ್ ಮ್ಯಾಪ್‌ ಮಾತ್ರವಲ್ಲದೆ, ಸುಮಾರು 887 ಬಳಕೆದಾರರು ಗೂಗಲ್ ಸರ್ಚ್ ಎಂಜಿನ್ ಸಹ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಗೂಗಲ್ ಮ್ಯಾಪ್‌ ಡೌನ್‌; ದಾರಿ ತಿಳಿಯದೇ ಕಂಗಾಲಾದ ಬಳಕೆದಾರರು!

ಸುಮಾರು 12,000ಕ್ಕೂ ಹೆಚ್ಚು ಅಮೆರಿಕ, ಯುಕೆ, ಕೆನಡಾ, ಭಾರತ ಸೇರಿದಂತೆ ಕೆಲ ದೇಶದ ಬಳಕೆದಾರರು ಗೂಗಲ್ ಮ್ಯಾಪ್ ಸರಿಯಾಗಿ ಕೆಲಸ ಮಾಡದ ಕಾರಣ ಪರದಾಡಿದ್ದಾರೆ. ಗೂಗಲ್ ಮ್ಯಾಪ್ ಕ್ಲಿಕ್ ಮಾಡಿದಾಗ ಏನನ್ನೂ ತೋರಿಸುತ್ತಿಲ್ಲ ಎಂದು ಬಳಕೆದಾರರು ದೂರು ನೀಡಿದ್ದಾರೆ. ಇನ್ನು ಲಂಡನ್‌ನ 2,000 ಬಳಕೆದಾರರು ಸಹ ದೂರು ನೀಡಿದ್ದರೆ, ಕೆನಾಡಾದ 1,763 ಮಂದಿ ಗೂಗಲ್ ಮ್ಯಾಪ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ. ಆದರೆ ಭಾರತದಲ್ಲಿ ಕೇವಲ 288 ಮಂದಿ ಗೂಗಲ್ ಮ್ಯಾಪ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ.

ಗೂಗಲ್ ಮ್ಯಾಪ್‌ ಡೌನ್‌; ದಾರಿ ತಿಳಿಯದೇ ಕಂಗಾಲಾದ ಬಳಕೆದಾರರು!

ಗೂಗಲ್ ಮ್ಯಾಪ್ ಕಾರ್ಯನಿರ್ವಹಣೆ ಸಮಸ್ಯೆಯಿಂದ ಹಲವರು ದಾರಿ ತಿಳಿಯದೆ ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವರು ತಮ್ಮ ಪ್ರಯಾಣವನ್ನೇ ಮುಂದೂಡಿದ್ದಾರೆ. ಕೆಲವರು ಅರ್ಧದಲ್ಲಿ ಸಿಲುಕಿ ಒದ್ದಾಡುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಈ ಕುರಿತು ಸಾಮಾಜಿಕ ಜಾಲತಾಣಗಲ್ಲಿ ಸಿಕ್ಕಾಪಟ್ಟೆ ಮೇಮ್ಸ್ ಹರಿದಾಡುತ್ತಿದೆ. ಎಲ್ಲಡೆ ದಾರಿ ಕೇಳುತ್ತಾ ಸಾಗಿದರೆ ತಲುಪುವ ಸ್ಥಳ ಮುಟ್ಟಿದ್ದಾಗ ಕಾರ್ಯಕ್ರಮವೇ ಮುಗಿದು ಹೋಗಿರುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಗೂಗಲ್ ಮ್ಯಾಪ್‌ ಡೌನ್‌; ದಾರಿ ತಿಳಿಯದೇ ಕಂಗಾಲಾದ ಬಳಕೆದಾರರು!

ಅತ್ಯುತ್ತಮ ಡಿಜಿಟಲ್‌ ಮ್ಯಾಪ್ ಸೇವೆ ಒದಗಿಸುವ ಉದ್ದೇಶದೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೇ ಮೊದಲ ಬಾರಿಗೆ ಡಿಜಿಟಲ್‌ ಮ್ಯಾಪಿಂಗ್‌ ಸೇವೆ ನೀಡುವ ಖಾಸಗಿ ಸಂಸ್ಥೆ ಮ್ಯಾಪ್‌ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಗೂಗಲ್‌ ಅರ್ಥ ಹಾಗೂ ಗೂಗಲ್‌ ಮ್ಯಾಪ್‌ಗೆ ಸಡ್ಡು ಹೊಡೆಯಲು ಮುಂದಾಗಿದೆ. ಎರಡೂ ಸಂಸ್ಥೆಗಳೂ ಒಗ್ಗೂಡಿ ಉಪಗ್ರಹ ಚಿತ್ರ ಮತ್ತು ಭೂ ಅವಲೋಕನಾ ಅಂಕಿಅಂಶಗಳ ಆಧಾರದಲ್ಲಿ ನಿಖರ, ದೇಶೀಯ ಮ್ಯಾಪ್ ಸೇವೆಯನ್ನು ನೀಡಲಿವೆ.

Best Mobiles in India

English summary
Navigation platform Google map reported going blank, leaving netizens struggling for directions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X