'ಗೂಗಲ್ ಮ್ಯಾಪ್ಸ್' ಬಳಕೆದಾರರಿಗೊಂದು ಶಾಕಿಂಗ್ ಸುದ್ದಿ!

|

ಜನಪ್ರಿಯ ಗೂಗಲ್ ಮ್ಯಾಪ್ಸ್ ಆಪ್‌ನಲ್ಲಿ ಸುಮಾರು ಒಂದು ಕೋಟಿಕೂ ಹೆಚ್ಚು ನಕಲಿ ವಿಳಾಸ ಹಾಗೂ ಮೊಬೈಲ್ನಂಬರ್‌ಗಳು ಸೇರಿಕೊಂಡಿವೆ. ಕೆಲವೊಂದು ಮುಚ್ಚಿಹೋದ ಉದ್ಯಮದ ವಿಳಾಸವೂ ಗೂಗಲ್‌ನಲ್ಲಿದೆ. ಉಳಿದಂತೆ ಗೂಗಲ್ ಮ್ಯಾಪ್ ಬಳಸಿಕೊಂಡು ಸೇವೆ ಒದಗಿಸುತ್ತಿರುವ ಕೆಲವೊಂದು ಕಂಪನಿಗಳು ಕೂಡ ನಕಲಿಯಾಗಿದ್ದು, ಬಳಕೆದಾರರು ಇದರಿಂದ ಮೋಸ ಹೋಗುವಂತಾಗಿದೆ ಎಂದು ಇತ್ತಿಚಿನ ರಿಪೋರ್ಟ್ ಒಂದು ಗೂಗಲ್ ಮ್ಯಾಪ್ಸ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

'ಗೂಗಲ್ ಮ್ಯಾಪ್ಸ್' ಬಳಕೆದಾರರಿಗೊಂದು ಶಾಕಿಂಗ್ ಸುದ್ದಿ!

ಹೌದು, ಗೂಗಲ್‌ನ ಮ್ಯಾಪ್ಸ್ ಸೇವೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಆಧರಿಸಿ, ದಿ ವರ್ಜ್ ವರದಿ ಮಾಡಿದ್ದು, ನಕಲಿ ಜನರು ಮತ್ತು ಹಲವು ನಕಲಿ ಕಂಪನಿಗಳು ಸುಳ್ಳು ವಿಳಾಸ ಮತ್ತು ಫೋನ್ ನಂಬರ್ ನೀಡಿ ಗ್ರಾಹಕರನ್ನು ಯಾಮಾರಿಸುತ್ತಿವೆ ಎಂದು ಹೇಳಿದೆ. ಜಿಮೇಲ್ ಮತ್ತು ಫೋನ್ ನಂಬರ್ ಇದ್ದರೆ ಯಾರಾದರೂ ಕೂಡ ಗೂಗಲ್‌ ಮ್ಯಾಪ್ಸ್‌ನಲ್ಲಿ ವಿಳಾಸ ಸೇರಿಸಬಹುದಾದುದರಿಂದ ಇಂತಹ ಮೋಸ ನಡೆಯುತ್ತದೆ ಎಂದು ತಿಳಿಸಿದೆ.

ಯಾವುದಾದರೊಂದು ಪ್ರದೇಶದ, ಉದ್ಯಮದ ವಿಳಾಸ, ಮಾಹಿತಿ ಬೇಕೆಂದಾಗ ತಕ್ಷಣ ನಮಗೆ ನೆನಪಾಗುವುದು ಗೂಗಲ್ ಮತ್ತು ಗೂಗಲ್ ಮ್ಯಾಪ್ಸ್. ಅದರಲ್ಲೂ ಈಗ ಗೂಗಲ್ ಮ್ಯಾಪ್ಸ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಇದೀಗ ಮ್ಯಾಪ್ಸ್ ಕೂಡ ವಂಚನೆಗೆ ದಾರಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಇತ್ತೀಚಿಗಷ್ಟೇ ಗೂಗಲ್ ಮ್ಯಾಪ್ಸ್ ನಂಬಿ ಲಕ್ಷಾಂತರ ರೂಪಾಯಿಗಳ ವಂಚನೆಗೆ ಒಳಗಾದ ಒಂದು ಘಟನೆಯಿಂದಾಗಿ ಮ್ಯಾಪ್ಸ್ ಅನ್ನು ಪೂರ್ಣವಾಗಿ ನಂಬುವ ಮೊದಲೊಮ್ಮೆ ಯೋಚಿಸಬೇಕಿದೆ.

ವಂಚಕರಿಗೆ ಮ್ಯಾಪ್ಸ್ ಕೂಡ ದಾಳ

ವಂಚಕರಿಗೆ ಮ್ಯಾಪ್ಸ್ ಕೂಡ ದಾಳ

ಗೂಗಲ್ ಮ್ಯಾಪ್​ನಲ್ಲಿನ ಮಾಹಿತಿಗಳನ್ನು ವಿಕಿಪೀಡಿಯಾ ರೀತಿಯಲ್ಲೇ ಯಾರು ಬೇಕಾದರೂ ಬದಲಾಯಿಸಬಹುದಾಗಿದ್ದು, ಇದೇ ಸದಾವಕಾಶವನ್ನು ಬಳಸಿಕೊಂಡಿರುವ ವಂಚಕರು ಹಲವರಿಗೆ ವಂಚಿಸಿದ್ದಾರೆ. ಜನರು ಗೂಗಲ್​ ಅಥವಾ ಗೂಗಲ್‌ ಮ್ಯಾಪ್‌ ಮೂಲಕ ಬ್ಯಾಂಕ್​ಗಳ ಮಾಹಿತಿ ಶೋಧಿಸಿದಾಗ ಈ ಸಂಖ್ಯೆಗಳು ಮೂಡುತ್ತವೆ. ಅಪ್ಪಿತಪ್ಪಿ ಆ ಸಂಖ್ಯೆಗೆ ಕರೆ ಮಾಡಿದರೆ ಸಾಕು ವಂಚಕರು ತಮ್ಮ ಬಲೆಯನ್ನು ಬೀಸುತ್ತಿದ್ದಾರೆ.

ಮೂರು ಪ್ರಕರಣ ದಾಖಲು!

ಮೂರು ಪ್ರಕರಣ ದಾಖಲು!

ಕಳೆದ ಒಂದು ತಿಂಗಳಲ್ಲಿ ಈ ರೀತಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಗ್ರಾಹಕರಿಗೆ ಬ್ಯಾಂಕ್ ಖಾತೆಯ ಸಮಸ್ಯೆ ಎದುರಾದಾಗ ಸಂಬಂಧಿಸಿದ ಬ್ಯಾಂಕಿನ ಸಂಪರ್ಕ ವಿವರಗಳನ್ನು ಆನ್​ಲೈನ್​ನಲ್ಲಿ ಹೂಡುಕಿ ಆ ಸಂಖ್ಯೆಗೆ ಕರೆ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಸುಲಭವಾಗಿ ಬಲೆಗೆ ಬೀಳುತ್ತಿದ್ದಾರೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.

ವಂಚನೆ ನಡೆಸಿರುವುದು ಹೇಗೆ?

ವಂಚನೆ ನಡೆಸಿರುವುದು ಹೇಗೆ?

ಖದೀಮರು ನಕಲಿ ಗೂಗಲ್ ಖಾತೆ ಮೂಲಕ ಕೆಲವು ವಂಚಕರು ಗೂಗಲ್ ಮ್ಯಾಪ್​ನಲ್ಲಿನ ಬ್ಯಾಂಕ್​ಗಳ ದೂರವಾಣಿ ಸಂಖ್ಯೆ ಬದಲಾಯಿಸಿ ತಮ್ಮ ಸಂಖ್ಯೆ ಸೇರಿಸುತ್ತಿದ್ದಾರೆ. ಈ ಬಗ್ಗೆ ಅರಿವಿಲ್ಲದ ಜನರು ಬ್ಯಾಂಕ್ ಸಂಖ್ಯೆ ಎಂದು ಆ ಸಂಖ್ಯೆಗೆ ಕರೆ ಮಾಡಿದಾಗ ಅವರನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ನಂತರ ಕ್ರೆಡಿಟ್, ಡೆಬಿಟ್ ಕಾರ್ಡ್​ಗಳ ಮಾಹಿತಿ ಪಡೆದು ಹಣ ಲಪಟಾಯಿಸುತ್ತಿದ್ದಾರೆ.

ವಂಚನೆಗೆ ಸುಲಭ ದಾರಿ!

ವಂಚನೆಗೆ ಸುಲಭ ದಾರಿ!

ಗೂಗಲ್ ಮ್ಯಾಪ್​ನಲ್ಲಿನ ಬ್ಯಾಂಕ್​ಗಳ ದೂರವಾಣಿ ಸಂಖ್ಯೆ ಪಡೆದುಕೊಳ್ಳುವ ಬ್ಯಾಂಕ್ ಗ್ರಾಹಕರು ಆ ಸಂಖ್ಯೆ ಬ್ಯಾಂಕ್‌ನದ್ದೇ ಆಗಿರುತ್ತದೆ ಎಂದು ನಂಬಿಕೊಳ್ಳುತ್ತಾರೆ. ಇದರಿಂದ ವಂಚಕರಿಗೆ ಹಣ ಲಪಟಾಯಿಸಲು ಸುಲಭವಾಗಿದ್ದು, ಬ್ಯಾಂಕ್ ಗ್ರಾಹಕರಿಂದ ಕ್ರೆಡಿಟ್, ಡೆಬಿಟ್ ಕಾರ್ಡ್​ ನಂಬರ್, ಸಿವಿವಿ, ಹಾಗೂ ಒಟಿಪಿಯಗಳನ್ನು ಪಡೆದು ಹಣವನ್ನು ಎಗರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ಹೇಳಿದ್ದೇನು?

ಪೊಲೀಸರು ಹೇಳಿದ್ದೇನು?

ಗ್ರಾಹಕರು ಖಾತೆಯ ಸಮಸ್ಯೆ ಉದ್ಭವಿಸಿದ್ದಾಗ ಸಂಬಂಧಿಸಿದ ಬ್ಯಾಂಕಿನ ಸಂಪರ್ಕ ವಿವರಗಳನ್ನು ಆನ್​ಲೈನ್​ನಲ್ಲಿ ಹೂಡುಕಿ ಆ ಸಂಖ್ಯೆಗೆ ಕರೆ ಮಾಡುತ್ತಾರೆ.ಆ ನಂತರ ತಮ್ಮ ಖಾತೆಯ ರಹಸ್ಯ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡು ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಮಹಾರಾಷ್ಟ್ರ ಸೈಬರ್ ಇಲಾಖೆಯ ಎಸ್​ಪಿ ಬಾಲ್ಸಿಂಗ್ ರಜಪೂತ್ ಅವರು ಹೇಳಿದ್ದಾರೆ.

ಗೂಗಲ್ ಇಂಡಿಯಾ ಸ್ಪಷ್ಟನೆ!

ಗೂಗಲ್ ಇಂಡಿಯಾ ಸ್ಪಷ್ಟನೆ!

ಉತ್ತಮ ಸೇವೆ ನೀಡುವ ಉದ್ದೇಶದಿಂದ ದೂರವಾಣಿ ಸಂಖ್ಯೆ ಸೇರಿಸುವ ಅಥವಾ ಬದಲಾಯಿಸುವ ಅವಕಾಶ ನೀಡಿದ್ದೇವೆ. ಆದರೆ ದುರ್ಬಳಕೆ ಆಗುತ್ತಿರುವುದು ಗಮನಕ್ಕೆ ಬಂದ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಘಟನೆ ಬೆಳಕಿಗೆ ಬಂದ ತಕ್ಷಣ ಅಂತಹ ನಕ್ಷೆಯಲ್ಲಿನ ಸಂಪರ್ಕ ವಿವರ ಬದಲಾಯಿಸಿದ್ದೇವೆ ಎಂದು ಗೂಗಲ್ ಇಂಡಿಯಾ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನೀವು ಎಚ್ಚರ!

ನೀವು ಎಚ್ಚರ!

ಗೂಗಲ್ ಸರ್ಚ್ ಎಂಜಿನ್​ನಲ್ಲಿ ತೋರಿಸುವ ದೂರವಾಣಿ ಸಂಖ್ಯೆಗೆ ನೇರವಾಗಿ ಕರೆಮಾಡದೆ, ಪಾಸ್​ಬುಕ್ ಅಥವಾ ಬ್ಯಾಂಕ್ ನೀಡುವ ಕಿಟ್​ನಲ್ಲಿ ನಮೂದಿಸಿರುವ ಅಧಿಕೃತ ದೂರವಾಣಿ ಸಂಖ್ಯೆ ಬಳಸಿ ಎಂದು ಬ್ಯಾಂಕ್​ಗಳು ಗ್ರಾಹಕರಿಗೆ ತಿಳಿಸಿವೆ. ಬ್ಯಾಂಕ್‌ನವರೇ ಆದರೂ ಸಿವಿವಿ ಸಂಖ್ಯೆ, ಯೂಸರ್ ​ನೇಮ್, ಡೆಬಿಟ್ ಕಾರ್ಡ್‌ಗಳ ಸಂಖ್ಯೆ ಗಳನ್ನು ತಿಳಿಸದಂತೆ ಎಚ್ಚರವಾಗಿರಲು ಹೇಳಿವೆ.

Best Mobiles in India

English summary
Millions of business listings on Google Maps filled with fake addresses.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X