India

ಗೂಗಲ್‌ ಮ್ಯಾಪ್‌ನಲ್ಲಿ ಇನ್ನು ಸ್ಥಳೀಯ ಭಾಷೆ ಲಭ್ಯ!.ಪ್ರಯಾಣಿಕರ ಹಾದಿ ಸುಗಮ!

|

ಟೆಕ್ ದಿಗ್ಗಜ ಗೂಗಲ್ ಸಂಸ್ಥೆಯ ಪ್ರತಿ ಸೇವೆಗಳು ಬಳಕೆದಾರರಿಗೆ ಅನುಕೂಲಕರವಾಗಿದ್ದು, ಅದರಲ್ಲಿಯೂ ಗೂಗಲ್ ಮ್ಯಾಪ್‌ ಅತ್ಯುತ್ತಮ ಮಾರ್ಗದರ್ಶಿಯಾಗಿ ಬಿಂಬಿತವಾಗಿದೆ. ಒಂದಿಲ್ಲೊಂದು ಅಪ್‌ಡೇಟ್ ಫೀಚರ್ಸ್‌ಗಳನ್ನು ಅಳವಡಿಸಿಕೊಳ್ಳುತ್ತಲೇ ಸಾಗಿರುವ ಗೂಗಲ್ ಮ್ಯಾಪ್‌ ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗಿದೆ. ಸಂಸ್ಥೆಯು ಇದೀಗ ಮತ್ತೊಂದು ಫೀಚರ್‌ ಅನ್ನು ಗೂಗಲ್ ಮ್ಯಾಪ್‌ನಲ್ಲಿ ಸೇರಿಸಲಿದೆ.

ಗೂಗಲ್ ಮ್ಯಾಪ್‌

ಹೌದು, ಗೂಗಲ್ ಮ್ಯಾಪ್‌ನಲ್ಲಿ ಒಂದು ನಿಗದಿತ ಸ್ಥಳದಿಂದ ತಲುಪುವ ಸ್ಥಳದ ವರೆಗೂ ವಾಯಿಸ್‌ ಮೂಲಕ ಮಾರ್ಗ ಮಾಹಿತಿ ತಿಳಿಸುವ ಸೌಲಭ್ಯ ಇದೆ. ಆದ್ರೆ ಇದೀಗ ಹೊಸದಾಗಿ ಟ್ರಾನ್ಸ್‌ಲೇಟ್‌ ಫೀಚರ್‌ ಸೇರಿದ್ದು, ಸ್ಥಳದ ಹೆಸರು ಮತ್ತು ವಿಳಾಸ ಮಾಹಿತಿಯನ್ನು ಪ್ರಾದೇಶಿಕ ಭಾಷೆಯಲ್ಲಿಯೇ ತಿಳಿಸುತ್ತದೆ. ಇಲ್ಲಿ 'ಟೆಕ್ಟ್ಸ್ ಟು ಸ್ಪೀಚ್' ತಂತ್ರಜ್ಞಾನ ಬಳಕೆ ಇರಲಿದೆ. ಇದರಿಂದ ಪ್ರವಾಸಿಗರಿಗೆ ಹೆಚ್ಚು ಪರಿಣಾಮಕಾರಿಯಾಗಲಿದೆ.

ಸ್ಥಳದ ಹೆಸರು

ಗೂಗಲ್ ಮ್ಯಾಪ್‌ನಲ್ಲಿ ಸ್ಥಳದ ಹೆಸರು ಮತ್ತು ವಿಳಾಸದ ಪಕ್ಕದಲ್ಲಿನ ಹೊಸ ಸ್ಪೀಕರ್‌ ಐಕೋನ್‌ ಟ್ಯಾಪ್ ಮಾಡಿದರೇ ಗೂಗಲ್ ಲೌಡ್‌ ಸ್ಪೀಕರ್‌ನಲ್ಲಿ ಮಾಹಿತಿ ತಿಳಿಸುತ್ತದೆ. ಈ ಮಾಹಿತಿಯು ಪ್ರಯಾಣಿಕರ ಮುಂದಿನ ಹಾದಿಯನ್ನು ಸುಗಮಗೊಳಿಸುತ್ತದೆ. ಹಾಗೆಯೇ ಪ್ರಯಾಣಿಕರು/ಬಳಕೆದಾರರು ಇನ್ನಷ್ಟು ಹೆಚ್ಚಿನ ಮಾಹಿತಿ ಬಯಸಿದರೇ ಗೂಗಲ್ ಮ್ಯಾಪ್‌ ತ್ವರಿತವಾಗಿ ಗೂಗಲ್ ಟ್ರಾನ್ಸ್‌ಲೇಶನ್‌ ಆಪ್‌ಗೆ ಲಿಂಕ್ ಮಾಡುತ್ತದೆ ಎಂದು ಸಂಸ್ಥೆಯು ತಿಳಿಸಿದೆ.

ಆಪರೇಟಿಂಗ್ ಸಿಸ್ಟಮ್

ಗೂಗಲ್‌ ಈ ಹೊಸ ಫೀಚರ್‌ ಅನ್ನು ಇದೇ ತಿಂಗಳಿನಲ್ಲಿ ಬಿಡುಗಡೆ ಮಾಡಲಿದ್ದು, ಆಂಡ್ರಾಯ್ಡ್‌ ಮತ್ತು ಐಓಎಸ್‌ ಆಪರೇಟಿಂಗ್ ಸಿಸ್ಟಮ್ ಬಳಕೆದಾರರಿಬ್ಬರಿಗೂ ಲಭ್ಯವಾಗಲಿದೆ. ಹಾಗೆಯೇ ಈ ಫೀಚರ್‌ ಆರಂಭದಲ್ಲಿ ಸುಮಾರು 50 ಪ್ರಾದೇಶಿಕ ಭಾಷೆಗಳಿಗೆ ಸಫೋರ್ಟ್‌ ಮಾಡಲಿದೆ. ಆ ನಂತರದಲ್ಲಿ ಇನ್ನಷ್ಟು ಸ್ಥಳೀಯ ಭಾಷೆಗಳಿಗೂ ಬೆಂಬಲ ನೀಡುವ ಯೋಜನೆಯನ್ನು ಒಳಗೊಂಡಿರುವುದಾಗಿ ಗೂಗಲ್ ಹೇಳಿದೆ.

ಟೆಕ್ಟ್ಸ್ ಟು ಸ್ಪೀಚ್

'ಟೆಕ್ಟ್ಸ್ ಟು ಸ್ಪೀಚ್' ತಂತ್ರಜ್ಞಾನವು ಆಟೋಮ್ಯಾಟಿಕ್ ಆಗಿ ಬಳಕೆದಾರರು ಫೋನಿನಲ್ಲಿ ಯಾವ ಭಾಷೆಯನ್ನು ಬಳಕೆಮಾಡುತ್ತಿದ್ದಾರೆ ಎನ್ನುವುದನ್ನು ಗ್ರಹಿಸುತ್ತದೆ. ಮತ್ತು ಯಾವ ಸ್ಥಳಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನುವ ಮಾಹಿತಿ ಗ್ರಹಿಸಿಕೊಳ್ಳಲಿದೆ ಎನ್ನಲಾಗಿದೆ. ಇದನ್ನು ಹೊರತುಪಡಿಸಿ ಹೆಚ್ಚಿನ ಮಾಹಿತಿ ಅಗತ್ಯ ಎನಿಸಿದರೇ ಬಳಕೆದಾರರಿಗೆ ಗೂಗಲ್ ಟ್ರಾನ್ಸ್‌ಲೇಶನ್‌ ಆಪ್‌ ಕನೆಕ್ಟ್‌ ಮಾಡುತ್ತದೆ.

ಆಂಡ್ರಾಯ್ಡ್

ಇನ್ನು ಗೂಗಲ್‌ನ ಈ ಹೊಸ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್‌ ಬಳಕೆದಾರರಿಗೆ ಮುಂದಿನ ತಿಂಗಳು ದೊರೆಯಲಿದೆ. ಗೂಗಲ್ ಐಓ ಕಾರ್ಯಕ್ರಮದಲ್ಲಿ ಈ ಫೀಚರ್‌ ಬಗ್ಗೆ ಸಂಸ್ಥೆಯು ಮಾಹಿತಿ ನೀಡಿತ್ತು.

Most Read Articles
Best Mobiles in India

English summary
Google Maps is adding a new translation feature that will allow a phone to read out a place name and address in the local lingo. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X