ಚೀನಾಗೆ ಗುಡ್‌ಬೈ ಹೇಳಿದ ಗೂಗಲ್‌!..ಭಾರತ ಅಥವಾ ವಿಯೆಟ್ನಾಂನಲ್ಲಿ ಉತ್ಪಾದನೆಗೆ ಒಲವು!

|

ಅಮೆರಿಕಾ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧದ ಪರಿಣಾಮವಾಗಿ ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯನ್ನು ಚೀನಾದ ಬದಲು ಭಾರತ ಅಥವಾ ವಿಯೆಟ್ನಾಂಗೆ ಸ್ಥಳಾಂತರಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಚೀನಾದ ಹೆಚ್ಚಿನ ಕಾರ್ಮಿಕ ವೆಚ್ಚಗಳು ಮತ್ತು ಯುಎಸ್ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧದ ಪರಿಣಾಮವಾಗಿ ಉಂಟಾಗುವ ಸುಂಕಗಳನ್ನು ತಪ್ಪಿಸುವ ಸಲುವಾಗಿ ಗೂಗಲ್ ಹೀಗೆ ಯೋಜಿಸುತ್ತಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಚೀನಾಗೆ ಗುಡ್‌ಬೈ ಹೇಳಿದ ಗೂಗಲ್‌!..ಭಾರತ ಅಥವಾ ವಿಯೆಟ್ನಾಂನಲ್ಲಿ ಉತ್ಪಾದನೆಗೆ ಒಲವು

ಹೌದು, ಅಮೆರಿಕದಲ್ಲಿ ಚೀನಾ ಉತ್ಪನ್ನಗಳಿಗೆ ಅಧಿಕ ತೆರಿಗೆ ಮತ್ತು ಆಮದಿನ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಕ್ರಮದಿಂದ ಉಭಯ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಗೂಗಲ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ, ಭಾರತದ ಅಥವಾ ವಿಯೆಟ್ನಾಂನ ಸಹಕಾರದೊಂದಿಗೆ, ಅಲ್ಲಿನ ಹಳೆಯ ನೋಕಿಯಾ ಫ್ಯಾಕ್ಟರಿಯಲ್ಲಿ ಪಿಕ್ಸೆಲ್ ಫೋನ್ ಉತ್ಪಾದನಾ ಘಟಕವನ್ನು ಪುನರಾರಂಭಿಸಲು ಗೂಗಲ್ ಮುಂದಾಗಿದ್ದು, ಚೀನಾದ ಕಿರಿಕಿರಿಯಿಂದ ಪಾರಾಗಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ನಿಕ್ಕಿ ಏಷ್ಯಾ ರಿವ್ಯೂ ಪ್ರಕಾರ, ಯುಎಸ್ ಟೆಕ್ ದೈತ್ಯ ಉತ್ತರ ವಿಯೆಟ್ನಾಂ ಪ್ರಾಂತ್ಯದ ಬಾಕ್ ನಿನ್ಹ್‌ನಲ್ಲಿರುವ ಹಳೆಯ ನೋಕಿಯಾ ಕಾರ್ಖಾನೆಯನ್ನು ಪರಿವರ್ತಿಸಲು ಪ್ರಾರಂಭಿಸಿದೆ. ಪಿಕ್ಸೆಲ್ ಫೋನ್‌ಗಳ ಉತ್ಪಾದನೆಯನ್ನು ನಿರ್ವಹಿಸಲು ಕಾರ್ಖಾನೆಯನ್ನು ಬಳಸಲಾಗುವುದು ಎಂದು ಪ್ರಕಟಣೆ ಬುಧವಾರ ವರದಿ ಮಾಡಿದೆ. ವರದಿಯ ಪ್ರಕಾರ, ಕಂಪನಿಯು ತನ್ನ ಅಮೆರಿಕಾದ ಎಲ್ಲ ಯಂತ್ರಾಂಶಗಳ ಉತ್ಪಾದನೆಯನ್ನು ಚೀನಾದ ಹೊರಗೆ ಸರಿಸಲಿದೆ. ಇದು ಪಿಕ್ಸೆಲ್ ಫೋನ್‌ಗಳು ಮತ್ತು ಅದರ ಗೂಗಲ್ ನೆಸ್ಟ್ ಹಬ್ ಸ್ಮಾರ್ಟ್ ಸ್ಪೀಕರ್‌ಗಳನ್ನು ಸಹ ಒಳಗೊಂಡಿರುತ್ತದೆ.

ಚೀನಾಗೆ ಗುಡ್‌ಬೈ ಹೇಳಿದ ಗೂಗಲ್‌!..ಭಾರತ ಅಥವಾ ವಿಯೆಟ್ನಾಂನಲ್ಲಿ ಉತ್ಪಾದನೆಗೆ ಒಲವು

ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯನ್ನು ಚೀನಾದಿಂದ ಹೊರತರುವ ವೇಳೆಗಾಗಲೇ, ಆಪಲ್ ಕಂಪೆನಿ ಚೀನಾದಲ್ಲಿ ಉತ್ಪಾದನೆಯಾಗುವ ಐಫೋನ್ ಮತ್ತು ಇತರ ಆಪಲ್ ಉತ್ಪನ್ನಗಳನ್ನು ಹಂತಹಂತವಾಗಿ ವಿಯೆಟ್ನಾಂ ಮತ್ತು ಭಾರತಕ್ಕೆ ಸ್ಥಳಾಂತರಿಸಲು ಮುಂದಾಗಿದೆ. ಇದೀಗ ಗೂಗಲ್ ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿದ್ದು, ಚೀನಾದಲ್ಲಿನ ಪಿಕ್ಸೆಲ್ ಫೋನ್ ಉತ್ಪಾದನಾ ಘಟಕವನ್ನು ಸ್ಥಳಾಂತರಿಸಲು ಮುಂದಾಗಿರುವುದು ಚೀನಾಗೆ ನಷ್ಟವಾಗಲಿದೆ ಎಂದು ವರದಿಗಳು ಅಭಿಪ್ರಾಯಪಟ್ಟಿವೆ.

ಭಾರತದ ಹುವಾವೆ ಮತ್ತು ಹಾನರ್ ಫೋನ್ ಬಳಕೆದಾರರ ಕಥೆ ಅಷ್ಟೇ!ಭಾರತದ ಹುವಾವೆ ಮತ್ತು ಹಾನರ್ ಫೋನ್ ಬಳಕೆದಾರರ ಕಥೆ ಅಷ್ಟೇ!

ಸರ್ಚ್ ದೈತ್ಯ ಈ ವರ್ಷ ಸುಮಾರು 8 ರಿಂದ 10 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ರವಾನಿಸುವ ಗುರಿ ಹೊಂದಿದೆ. ಈ ಸಂಖ್ಯೆಗಳು ಪಿಕ್ಸೆಲ್ 3 ಎ ಸಾಗಣೆಯನ್ನು ಮಾತ್ರ ಆಧರಿಸಿವೆ ಅಥವಾ ಪಿಕ್ಸೆಲ್ 4 ಸರಣಿಯನ್ನು ಒಳಗೊಂಡಿವೆ ಎಂಬುದು ಸ್ಪಷ್ಟವಾಗಿಲ್ಲ. ವದಂತಿಗಳಂತೆ ಈಗಾಗಲೇ ಪಿಕ್ಸೆಲ್ 4ರ ಚಿತ್ರ ಬಿಡುಗಡೆಯಾಗಿದೆ. ಇದು ಚದರ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಇರಿಸಲಾಗಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಫೋನಿನಲ್ಲಿ 3ಡಿ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ಸೇರ್ಪಡೆಗೊಳಿಸುವುದನ್ನು ಕಂಪೆನಿ ಖಚಿತಪಡಿಸಿದೆ.

Best Mobiles in India

English summary
Google is planning to move the production of its Pixel smartphones from China to Vietnam or India. The move will come amidst the ongoing trade war between the US and China.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X