ಗೂಗಲ್‌ನ ನಿಯರ್‌ ಬೈ ಶೇರ್‌ ಫೀಚರ್ಸ್‌ನಲ್ಲಿ ಆಗಲಿದೆ ಹೊಸ ಬದಲಾವಣೆ!

|

ಪ್ರಸ್ತುತ ದಿನಗಳಲ್ಲಿ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಫೈಲ್‌ಗಳನ್ನು ಶೇರ್‌ ಮಾಡುವುದಕ್ಕೆ ನಿಯರ್‌ ಬೈ ಶೇರ್‌ ಫೀಚರ್ಸ್‌ ಉಪಯುಕ್ತವಾಗಿದೆ. ಗೂಗಲ್‌ನ ನಿಯರ್‌ಬೈ ಶೇರ್‌ ಫೀಚರ್ಸ್‌ ಆಪಲ್‌ ಏರ್‌ಡ್ರಾಪ್‌ ಫೀಚರ್ಸ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ವೈಫೈ ಮತ್ತು ಬ್ಲೂಟೂತ್ ಬಳಸಿಕೊಂಡು ಹತ್ತಿರದ ಆಂಡ್ರಾಯ್ಡ್‌ ಮತ್ತು ಕ್ರೋಮ್‌OS ಡಿವೈಸ್‌ಗಳಿಗೆ ನಿಮ್ಮ ಡೇಟಾವನ್ನು ವರ್ಗಾಯಿಸುವುದಕ್ಕೆ ಅವಕಾಶ ನೀಡಲಿದೆ. ಇನ್ನು ಈ ಫೀಚರ್ಸ್‌ ಆನ್‌ಲೈನ್ ಮಾತ್ರವಲ್ಲ, ಆಫ್‌ಲೈನ್‌ನಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತದೆ.

ನಿಯರ್‌ ಬೈ ಶೇರ್‌ ಫೀಚರ್ಸ್‌

ಹೌದು, ಗೂಗಲ್‌ನ ನಿಯರ್‌ ಬೈ ಶೇರ್‌ ಫೀಚರ್ಸ್‌ ಮೂಲಕ ಫೈಲ್‌ ವರ್ಗಾಯಿಸುವುದು ಸುಲಭವಾಗಿದೆ.ಇದೇ ಕಾರಣಕ್ಕೆ ಗೂಗಲ್‌ ಕೂಡ ತನ್ನ ನಿಯರ್‌ ಬೈ ಶೇರ್‌ನಲ್ಲಿ ಸಾಕಷ್ಟು ಅಪ್ಡೇಟ್‌ಗಳನ್ನು ನೀಡುತ್ತಲೇ ಬಂದಿದೆ. ಸದ್ಯ ಇದೀಗ ನಿಯರ್‌ ಬೈ ಶೇರ್‌ನಲ್ಲಿ ಯಾವುದೇ ಅಪ್ರೂವಲ್‌ ಇಲ್ಲದೆ ಫೈಲ್‌ ರಿಸೀವ್‌ ಮಾಡಲು ಅವಕಾಶ ನೀಡಲು ಮುಂದಾಗಿದೆ. ಬಳಕೆದಾರರಿಂದ ಫೈಲ್‌ಗಳನ್ನು ಸ್ವೀಕರಿಸುವ ಮೊದಲು ಬಳಕೆದಾರರು ಶೇರ್‌ ವಿನಂತಿಯನ್ನು ಅನುಮೋದಿಸವುದು ಶೀಘ್ರದಲ್ಲೇ ಬದಲಾಗಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಗೂಗಲ್‌ನ ಈ ಹೊಸ ಪ್ರಯತ್ನ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್

ಗೂಗಲ್ ತನ್ನ ಆಂಡ್ರಾಯ್ಡ್ ಮತ್ತು ಕ್ರೋಮ್ ಓಎಸ್-ಚಾಲಿತ ಡಿವೈಸ್‌ಗಳಲ್ಲಿ ಹೊಸ ಅಪ್ಡೇಟ್‌ ತರಲು ಪ್ಲಾನ್‌ ಮಾಡಿದೆ. ಅದರಂತೆ ಬಳಕೆದಾರರು ಪ್ರತಿ ಬಾರಿ ಫೈಲ್‌ ಶೇರ್‌ ಮಾಡುವಾಗ ಅಪ್ರೂವಲ್‌ ಮಾಡುವ ಅಗತ್ಯವಿರುವುದಿಲ್ಲ. ಅನುಮೋದನೆಯ ಅಗತ್ಯವಿಲ್ಲದೆ ಫೈಲ್‌ಗಳನ್ನು ನಿಯರ್‌ ಬೈ ಶೇರ್‌ನಲ್ಲಿ ಶೇರ್‌ ಮಾಡಲು ಅನುವು ಮಾಡಿಕೊಡುತ್ತದೆ. ಇದಕ್ಕಾಗಿ ಗೂಗಲ್‌ ಕಂಪನಿಯು 'ಸೆಲ್ಫ್ ಶೇರ್' ಫೀಚರ್ಸ್‌ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಇದರಿಂದ ಬಳಕೆದಾರರು ಫೈಲ್ ಅನ್ನು ಹಂಚಿಕೊಳ್ಳಲು ಪ್ರತಿ ಬಾರಿ ಅನುಮೋದನೆಯನ್ನು ನೀಡುವ ಅಗತ್ಯವಿಲ್ಲ. ಬದಲಿಗೆಅದೇ ಖಾತೆಗೆ ಸೈನ್ ಇನ್ ಮಾಡಿದ ಡಿವೈಸ್‌ಗಳೊಂದಿಗೆ ಫೈಲ್‌ಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಗೂಗಲ್‌ನ

ಪ್ರಸ್ತುತ ಗೂಗಲ್‌ನ ನಿಯರ್‌ ಬೈ ಶೇರ್‌ ಅನ್ನು ಬಳಸಿಕೊಂಡು ಫೈಲ್‌ಗಳನ್ನು ಶೇರ್‌ ಮಾಡುವಾಗ 'ಎಲ್ಲರೂ,' 'ಸಂಪರ್ಕಗಳು' ಮತ್ತು 'ಹೈಡನ್‌' ಎಂಬ ಮೂರು ಆಯ್ಕೆಗಳನ್ನು ಕಾಣಬಹುದು. ಆದರೆ ಗೂಗಲ್ ಇದೀಗ ತನ್ನ ಮೂರನೇ ಆಯ್ಕೆಯಾದ 'ಹಿಡನ್' ಆಯ್ಕೆಯನ್ನು ಹೊಸದಾಗಿ 'ನಿಮ್ಮ ಸಾಧನಗಳು' ಆಯ್ಕೆಯೊಂದಿಗೆ ಬದಲಾಯಿಸಲು ಪ್ಲಾನ್‌ ಮಾಡಿದೆ. ಇದಲ್ಲದೆ ಹೆಚ್ಚುವರಿಯಾಗಿ, ಬಳಕೆದಾರರು ತಮ್ಮ ಆಂಡ್ರಾಯ್ಡ್‌ ಅಥವಾ ಕ್ರೋಮ್‌ OS ಬೆಂಬಲಿತ ಡಿವೈಸ್‌ ಅನ್ನು ಇತರ ಹತ್ತಿರದ ಡಿವೈಸ್‌ಗಳಿಗೆ ಗೋಚರಿಸುವಂತೆ ಮಾಡಲು ಟಾಗಲ್ ಬಟನ್ ಅನ್ನು ಸೇರಿಸಲು ಪ್ಲಾನ್‌ ರೂಪಿಸಿದೆ.

ಗೂಗಲ್‌

ಗೂಗಲ್‌ ಶೀಘ್ರದಲ್ಲೇ ಹೊಸದಾಗಿ ಪರಿಚಯಿಸಲಿರುವ ಮೂರನೇ ಆಯ್ಕೆಯನ್ನು ಆರಿಸುವುದರಿಂದ ಬಳಕೆದಾರರು ತಮ್ಮ ಸ್ವಂತ ಸಾಧನಗಳ ನಡುವೆ ಯಾವುದೇ ವಿಳಂಬವಿಲ್ಲದೆ ಫೈಲ್‌ಗಳನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ಸಧ್ಯ ಈ ಫೀಚರ್ಸ್‌ ಅನ್ನು ಗೂಗಲ್ ಇನ್ನೂ ಪ್ರಕಟಿಸಿಲ್ಲ. ಆದರೆ ಈ ಫೀಚರ್ಸ್‌ ಗೂಗಲ್‌ ಪ್ಲೇ ಸರ್ವಿಸ್‌ನ ಇತ್ತೀಚಿನ ಆವೃತ್ತಿಯಲ್ಲಿದೆ. ಅಂದರೆ ಆಂಡ್ರಾಯ್ಡ್‌ ಮತ್ತು ಕ್ರೋಮ್‌ OS ಬಳಕೆದಾರರು ಶೀಘ್ರದಲ್ಲೇ ಈ ಫೀಚರ್ಸ್‌ ಅನ್ನು ಬಳಸುವುದಕ್ಕೆ ಸಾಧ್ಯವಾಗಲಿದೆ.

ಗೂಗಲ್‌ ನಿಯರ್‌ ಬೈ ಶೇರ್‌ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

ಗೂಗಲ್‌ ನಿಯರ್‌ ಬೈ ಶೇರ್‌ ಫೀಚರ್ಸ್‌ ಅನ್ನು ಬಳಸುವುದು ಹೇಗೆ?

ಹಂತ:1 ಮೊದಲಿಗೆ ಫೋಟೋ ಅಥವಾ ವೆಬ್‌ ಪೇಜ್‌ನಂತಹ ಕಂಟೆಟ್‌ ಅನ್ನು ತೆರೆಯಿರಿ.
ಹಂತ:2 ಶೇರ್‌ ಬಟನ್ ಟ್ಯಾಪ್ ಮಾಡಿ. ನಂತರ ನಿಯರ್‌ ಬೈ ಶೇರ್‌ ಬಟನ್ ಟ್ಯಾಪ್ ಮಾಡಿ.
ಹಂತ:3 ಈಗ ಆನ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ನಿಮ್ಮ ಫೋನ್ ಮತ್ತು ನಿಮ್ಮ ಸ್ನೇಹಿತರ ಡಿವೈಸ್‌ ಅನ್ನು ಪರಸ್ಪರ ಹತ್ತಿರ ಹಿಡಿದುಕೊಳ್ಳಿ.
ಹಂತ:5 ನಿಮ್ಮ ಹತ್ತಿರದ ಡಿವೈಸ್‌ಗಳಿಗಾಗಿ ಸರ್ಚ್‌ ಮಾಡಲಾಗುತ್ತಿದೆ" ಅಡಿಯಲ್ಲಿ ನಿಮ್ಮ ಸ್ನೇಹಿತರ ಡಿವೈಸ್‌ ಅನ್ನು ಟ್ಯಾಪ್ ಮಾಡಿ.
ಹಂತ:6 ಇದೀಗ ನಿಮ್ಮ ಕಂಟೆಂಟ್‌ ಶೇರ್‌ ಮಾಡಿದ ನಂತರ, ಡನ್‌ ಟ್ಯಾಪ್ ಮಾಡಿ.

Best Mobiles in India

English summary
Google Nearby Share feature will enable users to share files without approval

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X