ಗೂಗಲ್‌ನ ಹೊಸ ಫೀಚರ್!..ಇನ್ನು ಮತ್ತಷ್ಟು ಸುಲಭವಾಗಲಿದೆ ಆನ್‌ಲೈನ್‌ ಫುಡ್‌ ಆರ್ಡರ್‌!

|

ಅಂತರ್ಜಾಲ ದಿಗ್ಗಜ ಗೂಗಲ್ ಹಲವಾರು ಸ್ಮಾರ್ಟ್‌ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಟೆಕ್‌ ಲೋಕದಲ್ಲಿ ಮುಂಚೂಣಿಯ ಸ್ಥಾನದಲ್ಲಿದೆ. ಇದೀಗ ಗೂಗಲ್ ಮತ್ತೊಂದು ಸ್ಮಾರ್ಟ್‌ ಫೀಚರ್‌ ಅನ್ನು ಸೇರಿಸಿಕೊಳ್ಳಲು ಮುಂದಾಗಿದೆ. ಈ ಹೊಸ ಫೀಚರ್‌ 'ಆನ್‌ಲೈನ್‌ ಫುಡ್‌ ಆರ್ಡರ್‌'ಗೆ ಸಂಬಂಧಿಸಿದ್ದಾಗಿದ್ದು, ಗ್ರಾಹಕರು ಗೂಗಲ್‌ ಸರ್ಚ್‌, ಮ್ಯಾಪ್‌ ಅಥವಾ ಅಸಿಸ್ಟಂಟ್‌ ಫೀಚರ್ಸ್‌ಗಳಿಂದಲೇ ಆನ್‌ಲೈನ್‌ ಮೂಲಕ ನೇರವಾಗಿ ಫುಡ್‌ ಆರ್ಡರ್‌ ನೀಡಬಹುದಾಗಿದ ಆಯ್ಕೆಗಳು ಕಾಣಿಸಿಕೊಳ್ಳಲಿವೆ.

ಗೂಗಲ್‌ನ ಹೊಸ ಫೀಚರ್!..ಇನ್ನು ಮತ್ತಷ್ಟು ಸುಲಭವಾಗಲಿದೆ ಆನ್‌ಲೈನ್‌ ಫುಡ್‌ ಆರ್ಡರ್‌

ಹೌದು, ಗೂಗಲ್ ಸರ್ಚ್‌ ಮತ್ತು ಗೂಗಲ್ ಮ್ಯಾಪ್‌ ಗಳಲ್ಲಿ ಹೊಸದಾಗಿ 'ಆರ್ಡರ್‌ ಆನ್‌ಲೈನ್‌' ಬಟನ್‌ ಸೇರಿಸಲಿದ್ದು, ಈ ಫೀಚರ್‌ ಮೂಲಕ ಗ್ರಾಹಕರು ಪ್ರಮುಖ ರೆಸ್ಟೊರಂಟ್‌ಗಳಿಂದ ಫುಡ್‌ ಆರ್ಡರ್‌ ಮಾಡಬಹುದಾಗಿದೆ. ಹಾಗೆಯೇ ಗೂಗಲ್‌ ಅಸಿಸ್ಟಂಟ್‌ ಸೌಲಭ್ಯವನ್ನು ಈ ಸೇವೆಗೆ ಸೇರಿಸಲಿದೆ. ಹೀಗಾಗಿ ಇನ್ಮುಂದೆ ಆನ್‌ಲೈನ್‌ ಮೂಲಕ ಫುಡ್‌ ಆರ್ಡರ್‌ ಮಾಡಲು ಬೇರೆ ಫುಡ್‌ ಆಪ್‌ಗಳ ಅಗತ್ಯ ಎನಿಸುವುದಿಲ್ಲ.

ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ! ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ!

ಗೂಗಲ್‌ನ ಹೊಸ ಫೀಚರ್!..ಇನ್ನು ಮತ್ತಷ್ಟು ಸುಲಭವಾಗಲಿದೆ ಆನ್‌ಲೈನ್‌ ಫುಡ್‌ ಆರ್ಡರ್‌

ಫುಡ್‌ ಆರ್ಡರ್‌ ಬಟನ್‌ ಮೂಲಕ ಗ್ರಾಹಕರು ತಮಗಿಷ್ಟವಾದ ರೆಸ್ಟೊರಂಟ್‌ಗಳ, ಆಹಾರಗಳನ್ನು ಆರ್ಡರ್‌ ಮಾಡಬಹುದಾಗಿದ್ದು, ಫುಡ್‌ ಡೆಲಿವರಿಗಾಗಿ ಎರಡು ಆಯ್ಕೆಗಳು ಇರಲಿವೆ. ರೆಸ್ಟೊರಂಟ್‌ಗಳಿಂದ ಗ್ರಾಹಕರೇ ಫುಡ್‌ ಸ್ವೀಕರಿಸುವುದು ಅಥವಾ ಹೋಮ್‌ ಡೆಲಿವರಿ ಆಯ್ಕೆಗಳಿವೆ. ಇದಕ್ಕಾಗಿ ಕಂಪನಿಯು ಲೋಕಲ್ ಫುಡ್‌ ಡೆಲಿವರಿ ಪಾರ್ಟ್‌ನರ್‌ಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿದೆ.

ಗೂಗಲ್‌ನ ಹೊಸ ಫೀಚರ್!..ಇನ್ನು ಮತ್ತಷ್ಟು ಸುಲಭವಾಗಲಿದೆ ಆನ್‌ಲೈನ್‌ ಫುಡ್‌ ಆರ್ಡರ್‌

ಗೂಗಲ್‌ ಅಸಿಸ್ಟಂಟ್ ಸೌಲಭ್ಯದೊಂದಿಗೆ ಸಹ ಫುಡ್‌ ಆರ್ಡರ್‌ ಮಾಡುವ ಸೇವೆ ಸೇರಿಸಲಿದ್ದು, ಗೂಗಲ್‌ ಅಸಿಸ್ಟಂಟ್ ಮೂಲಕ ನೀಡಿದ ಆರ್ಡರ್‌ ಅನ್ನು ರೀಪೀಟ್‌ ಮಾಡುವ ಆಯ್ಕೆ ಸಹ ನೀಡಲಿದೆ ಎನ್ನಲಾಗಿದೆ. ಹಾಗೆಯೇ ಖರೀದಿಸಿದ ಫುಡ್‌ಗೆ ಹಣವನ್ನು ಸಹ ಗೂಗಲ್ ಪೇ ಆಪ್‌ ಮೂಲಕ ನೇರವಾಗಿ ರೆಸ್ಟೊರಂಟ್‌ಗಳಿಗೆ ಪೇ ಮಾಡುವ ಆಯ್ಕೆಯ ಸೌಲಭ್ಯವನ್ನು ಒಳಗೊಂಡಿರಲಿದೆ.

ಓದಿರಿ : 'ಗ್ಯಾಲ್ಯಾಕ್ಸಿ ಎ' ಸರಣಿ ಸೇರಲಿದೆ ಮತ್ತೊಂದು ಸ್ಮಾರ್ಟ್‌ಫೋನ್‌!..64ಎಂಪಿ ಕ್ಯಾಮೆರಾ! ಓದಿರಿ : 'ಗ್ಯಾಲ್ಯಾಕ್ಸಿ ಎ' ಸರಣಿ ಸೇರಲಿದೆ ಮತ್ತೊಂದು ಸ್ಮಾರ್ಟ್‌ಫೋನ್‌!..64ಎಂಪಿ ಕ್ಯಾಮೆರಾ!

ಗೂಗಲ್‌ ಸಂಸ್ಥೆಯ ಈ ಹೊಸ ಸೇವೆಯನ್ನು ಯುಎಸ್‌ನಲ್ಲಿ ಪ್ರಾರಂಭಿಕವಾಗಿ ಆರಂಭಿಸಿದ್ದು, ಡೋರ್ಡಶ್, ಪೋಸ್ಟ್ಮೇಟ್ಸ್, ಡೆಲಿವರಿ.ಕಾಮ್, ಸ್ಲೈಸ್ ಮತ್ತು ಚೌನೌ ಡೆಲಿವರಿ ಪಾರ್ಟ್ನರ್ಸ್‌ಗಳು ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿ 'ಝಪ್ಪ್ಲರ್' ಮತ್ತು ಇತರೆ ಡೆಲಿವರಿ ಪಾರ್ಟ್‌ನರ್‌ಗಳ ಬೆಂಬಲವನ್ನು ಪಡೆಯಲಾಗುವುದು ಎನ್ನಲಾಗಿದೆ. ಗೂಘಲ್‌ನ ಆನ್‌ಲೈನ್‌ ಫುಡ್‌ಆರ್ಡರ್‌ ಸೇವೆ ಭಾರತಕ್ಕೂ ವಿಸ್ತರಿಸಲಿದೆ ಎಂದು ಹೇಳಲಾಗಿದೆ.

ಓದಿರಿ : ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!ಓದಿರಿ : ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!

Best Mobiles in India

English summary
Google Now Lets Users Order Food via Search, Maps, Assistant.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X