ಏನೀದು ಗೂಗಲ್ ಗೋ ಫೋನ್! ಬೆಲೆ ಏಕೆ ಕೇವಲ ರೂ.2000? ಇಲ್ಲಿದೇ ಉತ್ತರ!

|

ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಗೂಗಲ್ CEO ಭಾರತೀಯ ಮೂಲಕ ಸುಂದರ್ ಪಿಚೈ, ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವುದನ್ನು ಕಂಡು ಭಾರತೀಯರಿಗಾಗಿಯೇ ಗೂಗಲ್ ನಿಂದ ರೂ.2000ಕ್ಕೆ ಸ್ಮಾರ್ಟ್‌ಪೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.

ಏನೀದು ಗೂಗಲ್ ಗೋ ಫೋನ್! ಬೆಲೆ ಏಕೆ ಕೇವಲ ರೂ.2000? ಇಲ್ಲಿದೇ ಉತ್ತರ!

ಓದಿರಿ: ಸ್ಯಾಮ್‌ಸಂಗ್‌ನೊಂದಿಗೆ ಕೈ ಜೋಡಿಸಿದ ವೊಡಾಫೋನ್: ವಿಶೇಷ ಆಫರ್-ಭರ್ಜರಿ ಕ್ಯಾಷ್ ಬ್ಯಾಕ್..!

ಇದೇ ಹಿನ್ನಲೆಯಲ್ಲಿ ಬಿಡುಗಡೆ ಆಗುತ್ತಿರುವುದು ಗೂಗಲ್ ಗೋ ಸ್ಮಾರ್ಟ್‌ಫೋನ್, ಗೂಗಲ್ ಸಹಭಾಗಿತ್ವದಲ್ಲಿ ದೇಶೀಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ರೂ.2000ಕ್ಕೆ ಭಾರತ್ ಸರಣಿಯ ಸ್ಮಾರ್ಟ್ ಫೋನ್ ವೊಂದನ್ನು ಲಾಂಚ್ ಮಾಡಲಿದ್ದು, ಇದೇ ಜನವರಿ 26 ರಂದು ಈ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ.

ಗೋ ವಿಶೇಷತೆಗಳೇನು..?

ಗೋ ವಿಶೇಷತೆಗಳೇನು..?

ಗೂಗಲ್ ತನ್ನ ಆಂಡ್ರಾಯ್ಡ್ ಗೋ ಆಪರೇಟಿಂಗ್ ಸಿಸ್ಟಮ್ ಅನ್ನು ವಿಶೇಷವಾಗಿ ವಿನ್ಯಾಸ ಮಾಡಿದ್ದು, ಇದರಲ್ಲಿ ಕಡಿಮೆ ಮೆಮೊರಿಯಲ್ಲಿ ಅತೀ ಹೆಚ್ಚಿನ ಆಪ್‌ಗಳು ರನ್ ಆಗುತ್ತವೆ. 512 MB RAM ಇಲ್ಲವೇ 1GB RAM ಇದ್ದರೂ ಬಳಕೆದಾರರು ಹೆಚ್ಚಿನ ಆಪ್‌ ಸೇವೆಯನ್ನು ಪಡೆಯಬಹುದಾಗಿದೆ. ಈ ಕಾರಣಕ್ಕಾಗಿ ಕಡಿಮೆ ಬೆಲೆಗೆ ಮಾರಾಟವಾಗುವ ಫೋನ್ಗಳಲ್ಲಿ ಇದನ್ನು ಅಳವಡಿಸಲು ಮುಂದಾಗಿದೆ.

ಗೋ ವಿಶೇಷ ಆಪ್‌ಗಳು:

ಗೋ ವಿಶೇಷ ಆಪ್‌ಗಳು:

ಗೂಗಲ್ ತನ್ನ ಆಂಡ್ರಾಯ್ಡ್ ಗೋ ಆಪರೇಟಿಂಗ್ ಸಿಸ್ಟಮ್‌ಗಾಗಿಯೇ ವಿಶೇಷ ಅಪ್ಲಿಕೇಶನ್ ರೂಪಿಸಿದೆ. ಗೂಗಲ್ ಗೋ, ಗೂಗಲ್ ಅಸಿಸ್ಟೆಂಟ್ ಗೋ, ಯೂ ಟ್ಯೂಬ್ ಗೋ, ಗೂಗಲ್ ಮ್ಯಾಪ್ಸ್ ಗೋ, ಜಿಮೇಲ್ ಗೋ, ಜಿ ಬೋರ್ಡ್, ಗೂಗಲ್ ಪ್ಲೇ, ಕ್ರೋಮ್, ಮತ್ತು ಫೈಲ್ಸ್ ಗೋ ಆಪ್‌ಗಳು ಇನ್‌ಬಿಲ್ಟ್‌ಆಗಿ ಇಲ್ಲಿ ಕಾಣಿಸಿಕೊಳ್ಳಲಿದ್ದು, ಇವು 5MB ಗಿಂತಲೂ ಕಡಿಮೆ ಗಾತ್ರದಲ್ಲಿ ಇರಲಿದೆ.

ಇನ್ನು ಅನೇಕ ಸ್ಮಾರ್ಟ್‌ಫೋನ್ ಬರಲಿದೆ:

ಇನ್ನು ಅನೇಕ ಸ್ಮಾರ್ಟ್‌ಫೋನ್ ಬರಲಿದೆ:

ಮೈಕ್ರೋ ಮಾಕ್ಸ್ ಮಾತ್ರವಲ್ಲ ಆಂಡ್ರಾಯ್ಡ್ ಆಂಡ್ರಾಯ್ಡ್ ಒರಿಯೋ ಗೊ ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ಗಳನ್ನು ಲಾವಾ, ಕಾರ್ಬನ್, ಇಂಟೆಕ್ಸ್ ಕಂಪನಿಗಳು ಗಳು ಬಿಡುಗಡೆ ಮಾಡಲು ಸಿದ್ಧತೆ ನಡೆಸಿವೆ ಎನ್ನಲಾಗಿದೆ.

How to Sharing a Mobile Data Connection with Your PC (KANNADA)
ಚೀನಾ ಕಂಪನಿಗಳು ಕುತ್ತು:

ಚೀನಾ ಕಂಪನಿಗಳು ಕುತ್ತು:

ಗೂಗಲ್ ಆಂಡ್ರಾಯ್ಡ್ ಗೋ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಕಂಪನಿಗಳೆ ನಿರ್ಮಿಸಿ ಅತೀ ಕಡಿಮೆ ಬೆಲೆಗೆ ನೀಡುತ್ತಿರುವು ಕಾರಣ ಚೀನಾ ಕಂಪನಿಗಳು ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಆಸ್ತಿತ್ವವನ್ನು ಕಳೆದುಕೊಳ್ಳಲಿದೆ ಎನ್ನಲಾಗಿದೆ.

Best Mobiles in India

English summary
Google Partners Micromax For The First Android Go Smartphone In India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X