ಗೂಗಲ್‌ ಪೇ ಬಳಕೆದಾರರು ಅಂದ ಮೇಲೆ ಚಿಂತೆ ಇಲ್ಲ ಬಿಡಿ; ನೀವು ಸೆಕ್ಯೂರ್‌!

|

ಬ್ಯಾಂಕ್‌ನಲ್ಲಿ ಕ್ಯೂ ನಿಂತು ಹಣ ವರ್ಗಾಯಿಸುವ ಅಥವಾ ಹಣ ಬಿಡಿಸಿಕೊಳ್ಳುವ ಕಾಲ ಎಂದೋ ಮುಗಿದುಹೋಗಿದೆ. ಈಗೇನಿದ್ದರು ಯುಪಿಐ ಆಧಾರಿತ ಪೇಮೆಂಟ್‌ಗಳ ಕಾಲ. ಪರಿಣಾಮ ಪೇಟಿಎಮ್‌, ಗೂಗಲ್‌ ಪೇ, ಫೋನ್ ಪೇ, ಭಾರತ್‌ ಪೇ ಸೇರಿದಂತೆ ಇನ್ನಿತರೆ ಆಪ್‌ಗಳ ಮೂಲಕ ಈ ಯುಪಿಐ ಪಾವತಿ ಪ್ರಕ್ರಿಯೆ ನಡೆಸಬಹುದಾಗಿದೆ. ಅದಾಗ್ಯೂ ಇಷ್ಟೆಲ್ಲಾ ಆಪ್‌ಗಳ ನಡುವೆ ಯಾವುದು ಸೇಫ್‌ ಅಥವಾ ಯಾವುದು ನಿಮ್ಮ ಬ್ಯಾಂಕ್‌ ಹಾಗೂ ಮೊಬೈಲ್‌ಗೆ ತೊಡಕು ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?.

ಯುಪಿಐ

ಹೌದು, ಯುಪಿಐ ಆಧಾರಿತ ಪೇಮೆಂಟ್‌ ಆಪ್‌ಗಳಲ್ಲಿ ಹಲವಾರು ಆಪ್‌ಗಳಿದ್ದು, ಇವು ತಮ್ಮದೇ ಆದ ಫೀಚರ್ಸ್‌ ಮೂಲಕ ಅಥವಾ ಕ್ಯಾಶ್ ಬ್ಯಾಕ್‌ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಆದರೆ, ಕೆಲವು ಆಪ್‌ಗಳಲ್ಲಿ ಭದ್ರತಾ ದೋಷವಿದ್ದರೆ, ಇನ್ನೂ ಕೆಲವು ಆಪ್‌ಗಳು ಬಳಕೆದಾರರಿಗೆ ಹೆಚ್ಚಿನ ಭದ್ರತೆ ನೀಡುವಲ್ಲಿ ಹೆಸರಾಗಿವೆ. ಅದರಂತೆ ಗೂಗಲ್ ಪೇ ಹೆಚ್ಚು ಭದ್ರತೆ ಹೊಂದಿರುವ ಆಪ್‌ ಎಂದು ಇನ್ಮುಂದೆ ಪರಿಗಣಿಸಬಹುದಾಗಿದೆ.

ಗೂಗಲ್‌ ಪೇ ನಲ್ಲಿ ಮೋಸದ ವಹಿವಾಟುಗಳನ್ನು ಪತ್ತೆಹಚ್ಚಲು ಮೆಶಿನ್ ಲರ್ನಿಂಗ್ ಫೀಚರ್ಸ್‌ ಬಳಕೆ ಮಾಡಲಾಗುತ್ತಿದ್ದು, ಇದು ಲಕ್ಷಾಂತರ ಬಳಕೆದಾರರ ಒಟ್ಟು ವಹಿವಾಟಿನ ಮಾದರಿಗಳನ್ನು ವಿಶ್ಲೇಷಿಸುತ್ತದೆ ಹಾಗೂ ಮೋಸದ ಚಟುವಟಿಕೆಗಳು ಅಥವಾ ಅನುಮಾನಾಸ್ಪದ ಪಾವತಿ ವಿನಂತಿಗಳನ್ನು ಫ್ಲ್ಯಾಗ್ ಮಾಡುತ್ತದೆ. ಈ ಮೂಲಕ ಗೂಗಲ್‌ ಪೇ ಇತರೆ ಆಪ್‌ಗಳಿಗಿಂತ ಹೆಚ್ಚು ಭದ್ರತೆ ಹೊಂದಿದೆ.

ಕಂಪಿಸುವ ಮೂಲಕ ಎಚ್ಚರಿಕೆ

ಕಂಪಿಸುವ ಮೂಲಕ ಎಚ್ಚರಿಕೆ

ಬಳಕೆದಾರರು ಮೋಸದ ವಹಿವಾಟು ನಡೆಸುವಾಗ ಗೂಗಲ್‌ ಪೇ ನ ಈ ಹೊಸ ಫೀಚರ್ಸ್‌ನಲ್ಲಿ ಎಚ್ಚರಿಕೆಯನ್ನು ಸಹ ನೀಡಲಾಗುತ್ತದೆ. ಈ ಬಗ್ಗೆ ಟೆಕ್ ದೈತ್ಯ ಗೂಗಲ್, ಹೊಸ ಆಪ್‌ನ ಫೀಚರ್ಸ್‌ ಅನ್ನು ಬಹಿರಂಗಪಡಿಸಿದೆ. ಇದು ಭಾರತೀಯರಿಗೆ ಪಾವತಿಗಳನ್ನು ಹೆಚ್ಚು ಸುರಕ್ಷಿತಗೊಳಿಸುತ್ತದೆ ಎಂದು ತಿಳಿಸಿದೆ.

ಇಂಡಿಯಾ

ಸೋಮವಾರ ನಡೆದ ಗೂಗಲ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ ಈ ಹೊಸ ನವೀಕರಣವನ್ನು ಪರಿಚಯಿಸಲಾಗಿದೆ. ಬಹು-ಪದರದ ಎಚ್ಚರಿಕೆಗಳನ್ನು ಬಳಸುವ ಮೂಲಕ, ಯಾವುದೇ ಅನುಮಾನಾಸ್ಪದ ಚಟುವಟಿಕೆಯ ಬಳಕೆದಾರರನ್ನು ಎಚ್ಚರಗೊಳ್ಳುವಂತೆ ಮಾಡುವುದು ಗೂಗಲ್‌ ಉದ್ದೇಶವಾಗಿದೆ.

ಮೋಸದ ವಹಿವಾಟುಗಳನ್ನು ಹೇಗೆ ಪತ್ತೆ ಮಾಡುತ್ತದೆ?

ಮೋಸದ ವಹಿವಾಟುಗಳನ್ನು ಹೇಗೆ ಪತ್ತೆ ಮಾಡುತ್ತದೆ?

ಗೂಗಲ್ ಪ್ರಕಾರ, ಗೂಗಲ್‌ ಪೇ ನಲ್ಲಿ ಯಾವುದೇ ವಹಿವಾಟು ನಡೆಸಿದರೂ ಅದನ್ನು ಮೆಶಿಲ್‌ ಲರ್ನಿಂಗ್‌ ಫೀಚರ್ಸ್‌ ವಿಶ್ಲೇಷಣೆ ಮಾಡಲು ಮುಂದಾಗುತ್ತದೆ. ಆ ವೇಳೆ ಅದೇನಾದರೂ ಮೋಸದಿಂದ ಕೂಡಿದೆ ಅಥವಾ ಅನುಮಾನಾಸ್ಪದವಾಗಿದೆ ಎಂದು ಕಂಡುಬಂದರೆ ಬಳಕೆದಾರರಿಗೆ ತಕ್ಷಣವೇ ಮಾಹಿತಿ ರವಾನೆ ಮಾಡುತ್ತದೆ. ಅದರಲ್ಲೂ ಪ್ರಮುಖ ವಿಷಯ ಎಂದರೆ ಈ ಸೇವೆ ಬೇಕಾದ ಭಾಷೆಯಲ್ಲಿ ಲಭ್ಯವಿದ್ದು, ಬಳಕೆದಾರರ ಗಮನವನ್ನು ಬೇಗನೆ ಸೆಳೆಯಲು ಮೊಬೈಲ್‌ ಕಂಪಿಸುತ್ತದೆ.

ವಹಿವಾಟಿನ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು!

ವಹಿವಾಟಿನ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು!

ಈ ಫೀಚರ್ಸ್‌ ಜೊತೆಗೆ ನಿಮ್ಮದೇ ಆದ್ಯತೆಯ ಭಾಷೆಯಲ್ಲಿ ಈ ವಾರದಲ್ಲಿ ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಪ್ರಶ್ನೆ ಕೇಳುವ ಮೂಲಕ ಗೂಗಲ್‌ ಪೇ ನಿಂದ ಉತ್ತರ ಪಡೆದುಕೊಳ್ಳಬಹುದಾಗಿದೆ. ಅಂದರೆ ನೀವು ಈ ವಾರ ದಿನಸಿಗೆ ಎಚ್ಟು ಖರ್ಚು ಮಾಡಿದ್ದೇವೆ ಎಂದು ಪ್ರಶ್ನಿಸಿದರೆ ಅದು ಪ್ರತ್ಯುತ್ತರ ನೀಡುತ್ತದೆ. ಈ ಮೂಲಕ ವಹಿವಾಟಿನ ಇತಿಹಾಸವನ್ನು ಸುಲಭವಾಗಿ ತಿಳಿದುಕೊಳ್ಳುವಂತೆ ಮಾಡಲಾಗಿದೆ.

ಸಮೀಕ್ಷೆ

ಅಕ್ಟೋಬರ್ 2021 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, 29% ಜನರು ತಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಪಿನ್ ಮಾಹಿತಿಯನ್ನು ತಕ್ಷಣವೇ ಕುಟುಂಬದ ಸದಸ್ಯರೊಂದಿಗೆ ಬಹಿರಂಗಪಡಿಸುತ್ತಾರಂತೆ. ಹಾಗೂ 4% ಜನರು ಅದನ್ನು ತಮ್ಮ ಮನೆಕೆಲಸದಾಕೆ ಅಥವಾ ಕಚೇರಿ ಉದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರಂತೆ. ಯಾವುದೇ ಸೂಕ್ಷ್ಮ ಡೇಟಾವನ್ನು ಇತರ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಲು ಸರ್ಕಾರಗಳು ಮತ್ತು ಬ್ಯಾಂಕ್‌ಗಳು ಹಲವಾರು ಪ್ರಯತ್ನಗಳನ್ನು ಮಾಡಿವೆ. ಇದರ ಭಾಗವಾಗಿ ಈಗ ಗೂಗಲ್‌ ಈ ರೀತಿಯ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ.

Best Mobiles in India

Read more about:
English summary
Google Pay Becomes More Secure for Indians ; you know why?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X