'ಗೂಗಲ್ ಪೇ'ನಲ್ಲಿ ಚೆಕ್ ಅಕೌಂಟ್ ಬ್ಯಾಲೆನ್ಸ್ ತಾತ್ಕಾಲಿಕವಾಗಿ ಸ್ಥಗಿತ!

|

ಜನಪ್ರಿಯ ಡಿಜಿಟಲ್ ಪೇಮೆಂಟ್ ಆಪ್ ಗೂಗಲ್ ಪೇ ನಲ್ಲಿ ಬಳಕೆದಾರರ ಅಕೌಂಟ್ ಬ್ಯಾಲೆನ್ಸ್‍ ಚೆಕ್ ಮಾಡುವ ಆಯ್ಕೆ ಕಾಣಿಸುತ್ತಿಲ್ಲ ಎನ್ನುವ ಮಾತುಗಳು ನಿನ್ನೆ ಸಂಜೆಯಿಂದ ಕೇಳಿಬರುತ್ತಿವೆ. ಅದು ನಿಜವು ಆಗಿದೆ. ಆದರೆ ಬಳಕೆದಾರರು ಗಾಬರಿಯಾಗುವ ಅಗತ್ಯವಿಲ್ಲ. ಏಕೆಂದರೇ ಗೂಗಲ್ ಪೇ ಚೆಕ್ ಅಕೌಂಟ್ ಬ್ಯಾಲೆನ್ಸ್‍ ಫೀಚರ್ ಅನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ.

'ಗೂಗಲ್ ಪೇ'ನಲ್ಲಿ ಚೆಕ್ ಅಕೌಂಟ್ ಬ್ಯಾಲೆನ್ಸ್ ತಾತ್ಕಾಲಿಕವಾಗಿ ಸ್ಥಗಿತ!

ಸದ್ಯ ಯುಪಿಐನಲ್ಲಿ ಹೆಚ್ಚಿನ ಹೊರೆ ಇರುವುದರಿಂದ, ನಾವು 'ಚೆಕ್ ಅಕೌಂಟ್ ಬ್ಯಾಲೆನ್ಸ್' ವೈಶಿಷ್ಟ್ಯವನ್ನು ತಾತ್ಕಾಲಿಕವಾಗಿ ಆಫ್ ಮಾಡುತ್ತಿದ್ದೇವೆ. ಈ ಆಯ್ಕೆಯನ್ನು ಶೀಘ್ರದಲ್ಲೇ ಹಿಂತಿರುಗಲಿದೆ. ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಎಂದು ಗೂಗಲ್ ಪೇ ಬ್ಯಾಲೆನ್ಸ್‌ ಚೆಕ್ ಫೀಚರ್‌ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಬಗ್ಗೆ ಗೂಗಲ್ ಪೇ ಇಂಡಿಯಾ ಟ್ವಿಟ್ ಮಾಡಿದೆ.

'ಗೂಗಲ್ ಪೇ'ನಲ್ಲಿ ಚೆಕ್ ಅಕೌಂಟ್ ಬ್ಯಾಲೆನ್ಸ್ ತಾತ್ಕಾಲಿಕವಾಗಿ ಸ್ಥಗಿತ!

ಅಂದಹಾಗೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರ ಗೂಗಲ್ ಪೇ ಚೆಕ್ ಬ್ಯಾಲೆನ್ಸ್ ಫೀಚರ್ ಕಾಣಿಸುತ್ತಿಲ್ಲ. ಆದರೆ ಐಫೋನ್‌ನ ಗೂಗಲ್ ಪೇ ಆಪ್‌ನಲ್ಲಿ ಚೆಕ್ ಬ್ಯಾಲೆನ್ಸ್ ಫೀಚರ್ ಲಭ್ಯವಿದೆ. ಯಾವುದೇ ಅಡಚಣೆ ಕಾಣಿಸಿಲ್ಲ.

'ಗೂಗಲ್ ಪೇ'ನಲ್ಲಿ ಚೆಕ್ ಅಕೌಂಟ್ ಬ್ಯಾಲೆನ್ಸ್ ತಾತ್ಕಾಲಿಕವಾಗಿ ಸ್ಥಗಿತ!

ಗೂಗಲ್ ಪೇ ಪೇಮೆಂಟ್ ಆಪ್‌ ಮೂಲಕ ಯಾವುದೇ ರೀತಿಯ ಹಣ ವ್ಯವಹಾರ ಪ್ರಕ್ರಿಯೇಗಳಲ್ಲಿ ಅಡಚಣೆ ಇಲ್ಲ ಎಂದು ಹೇಳಿದೆ. ಹೀಗಾಗಿ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ತಮ್ಮ ವ್ಯವಹಾರಗಳಿಗೆ ಗೂಗಲ್ ಪೇ ಬಳಸುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದಿದೆ.

Most Read Articles
Best Mobiles in India

English summary
Google Pay Removes Balance Check Feature On Android Due To Increased UPI Load.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X