Subscribe to Gizbot

ಇನ್ಮುಂದೆ ಆಪಲ್‌ಗೆ ಡೀಫಾಲ್ಟ್ ಸರ್ಚ್ ಎಂಜಿನ್‌ ಆಗಲಿದೆ ಗೂಗಲ್!!

Written By:

ಆಪಲ್ ಕಂಪೆನಿ ಎಂದರೆ ಗೂಗಲ್‌ಗೂ ಭಯ ಶುರುವಾಗಿದೆಯೇ? ಇಂತದೊಂದು ಅನುಮಾನ ಮೂಡಲು ಕಾರಣವಾಗಿದ್ದು, ಅಂತರ್ಜಾಲ ದೈತ್ಯ ಸಂಸ್ಥೆ ಗೂಗಲ್ ಇದೀಗ ಆಪಲ್ ಜೊತೆ ಭಾರಿ ಒಪ್ಪಂದವನ್ನು ಮಾಡಿಕೊಂಡಿದೆ.!! ಇಂಟರ್‌ನೆಟ್‌ ಸೇವೆ ನೀಡುವ ದೈತ್ಯ ಸಂಸ್ಥೆಯೇ ತನ್ನ ಬಳಿ ಬರುವಂತೆ ಆಪಲ್ ಸೆಳೆದಿದೆ.!!

ಐಪೋನ್‌ನಲ್ಲಿ ಡೀಫಾಲ್ಟ್‌ ಸರ್ಚ್ ಇಂಜಿನ್‌ ಆಗಿ ಉಳಿದುಕೊಳ್ಳಲು ಆಪಲ್‌ ಕಂಪೆನಿಗೆ ದೊಡ್ಡ ಮೊತ್ತದ ಹಣ ಪಾವತಿಸಲು ಗೂಗಲ್ ಮುಂದಾಗಿದ್ದು, ಇದಕ್ಕಾಗಿ, ಆಪಲ್‌ ಕಂಪೆನಿಗೆ ಗೂಗಲ್‌ ನೀಡುತ್ತಿರುವ ಹಣದ ಪ್ರಮಾಣ ಇಂಟರ್‌ನೆಟ್ ಲೋಕವನ್ನೇ ಬೆಚ್ಚಿಬೀಳಿಸಿದೆ.!! ಹಾಗಾದರೆ, ಗೂಗಲ್ ಆಪಲ್‌ಗೆ ನೀಡುತ್ತಿರುವ ಹಣವೆಷ್ಟು? ಇದರಿಂದ ಗೂಗಲ್‌ಗೇನು ಲಾಭ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವರ್ಷಕ್ಕೆ 3 ಶತಕೋಟಿ ಡಾಲರ್‌!!

ವರ್ಷಕ್ಕೆ 3 ಶತಕೋಟಿ ಡಾಲರ್‌!!

ಐಪೋನ್‌ನಲ್ಲಿ ಗೂಗಲ್ ಅನ್ನು ಡೀಫಾಲ್ಟ್‌ ಸರ್ಚ್‌ ಇಂಜಿನ್ ಆಗಿ ಬಳಸಿಕೊಳ್ಳಲು ಗೂಗಲ್ ಆಫರ್ ನೀಡಿದೆ.!! ಇದಕ್ಕಾಗಿ ಗೂಗಲ್ ಪ್ರತಿವರ್ಷವೂ 19,200 ಕೋಟಿ ರೂ. ಹಣವನ್ನು ಆಪಲ್ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದೆ.!!

ಶೇ 5 ರಷ್ಟು ಆಪಲ್ ಲಾಭ ಗೂಗಲ್‌ಗೆ!!

ಶೇ 5 ರಷ್ಟು ಆಪಲ್ ಲಾಭ ಗೂಗಲ್‌ಗೆ!!

ಐಪೋನ್‌ನಲ್ಲಿ ಗೂಗಲ್ ಕ್ರೋಮ್ ಅನ್ನು ಡೀಫಾಲ್ಟ್‌ ಆಗಿ ಬಳಸುವುದಕ್ಕೆ ಗೂಗಲ್‌ ಹಣವನ್ನು ನೀಡಿದರೇ, ಇದಕ್ಕೆ ಪ್ರತಿಯಾಗಿ ಆಪಲ್ ಕಂಪೆನಿ ಕೂಡ ತನ್ನ ಒಟ್ಟು ಆಪರೇಟಿಂಗ್‌ ಲಾಭದ ಶೇ5 ರಷ್ಟನ್ನು ಗೂಗಲ್‌ಗೆ ನೀಡಲು ಮುಂದಾಗಿದೆ.!!

ಜಾಗತಿಕ ಶಕ್ತಿಯಾಗಲಿದೆ ಗೂಗಲ್!!

ಜಾಗತಿಕ ಶಕ್ತಿಯಾಗಲಿದೆ ಗೂಗಲ್!!

ಗೂಗಲ್ ಬಳಸದವರೇ ಇಲ್ಲ ಎನ್ನುವಹಾಗಿದ್ದರೂ ಆಪಲ್ ಬಳಕೆದಾರರು ಡೀಫಾಲ್ಟ್‌ ಸರ್ಚ್‌ ಇಂಜಿನ್ ಆಗಿ ಗೂಗಲ್ ಅನ್ನು ಹೊಂದಿರಲಿಲ್ಲ. ಆದರೆ, ಇನ್ನು ಗೂಗಲ್ ಆಪಲ್ ಕಂಪೆನಿ ಎಲ್ಲಾ ಮೊಬೈಲ್‌ಗಳಲ್ಲಿ ಡೀಫಾಲ್ಟ್‌ ಸರ್ಚ್‌ ಇಂಜಿನ್ ಆಗುವುದರಿಂದ ಜಾಗತಿಕ ಶಕ್ತಿಯಾಗಲಿದೆ ಗೂಗಲ್!!

ಅಭಿವೃದ್ಧಿಗೆ ಮುನ್ನುಡಿ.!!

ಅಭಿವೃದ್ಧಿಗೆ ಮುನ್ನುಡಿ.!!

ಎರಡು ತಂತ್ರಜ್ಞಾನ ದೈತ್ಯಕಂಪೆನಿಗಳು ಇದೀಗ ಒಪ್ಪಂದ ಮಾಡಿಕೊಂಡು ಎರಡೂ ಸಂಸ್ಥೆಗಳು ಕೂಡ ತಮ್ಮ ಅಭಿವೃದ್ಧಿಗಾಗಿ ಒಂದು ಇನ್ನೊಂದನ್ನು ಬಳಸುತ್ತಿವೆ.ಹಾಗಾಗಿ, ಇನ್ನು ಗೂಗಲ್‌ ಇಲ್ಲದೆ ಆಪಲ್‌ ಇಲ್ಲ, ಆಪಲ್‌ ಇಲ್ಲದೆ ಗೂಗಲ್‌ ಇಲ್ಲ ಎನ್ನುವ ಪರಿಸ್ತಿತಿ ಬರಬಹುದು.!!

ಓದಿರಿ:ಮೋಡಬಿತ್ತನೆ ಕಾರ್ಯ ಹೇಗಿರುತ್ತದೆ?..ಇಲ್ಲಿದೆ ಸಂಪೂರ್ಣ ಮಾಹಿತಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
As the Android vs iPhone rivalry began to intensify a few years ago.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot