ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಏರ್‌ಟೆಲ್ ಸ್ಟೋರ್‌ನಲ್ಲಿ ಭರ್ಜರಿ ಆಫರ್!!

By GizBot Bureau
|

ಪ್ರಮುಖ ಟೆಲಿಕಾಂ ಆಪರೇಟರ್ ಏರ್ ಟೆಲ್ , ಗೂಗಲ್ ಪಿಕ್ಸಲ್ ರೇಂಜಿನ ಸ್ಮಾರ್ಟ್ ಫೋನ್ ಗಳು ಈಗ ಏರ್ ಟೆಲ್ ಆನ್ ಲೈನ್ ಸ್ಟೋರ್ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 10,599 ರುಪಾಯಿಗಳಿಗೆ ಲಭ್ಯವಿಗೆ ಎಂದು ಪ್ರಕಟ ಪಡಿಸಿದೆ.

ಗೂಗಲ್ ಎಂಬ ಸ್ವಾರಸ್ಯಕರ ಹುಡುಕಾಟ..! ನಿಮಗೆ ಗೊತ್ತಿಲ್ಲ ಹಲವು ಅಂಶಗಳು..!ಗೂಗಲ್ ಎಂಬ ಸ್ವಾರಸ್ಯಕರ ಹುಡುಕಾಟ..! ನಿಮಗೆ ಗೊತ್ತಿಲ್ಲ ಹಲವು ಅಂಶಗಳು..!

ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಏರ್‌ಟೆಲ್ ಸ್ಟೋರ್‌ನಲ್ಲಿ ಭರ್ಜರಿ ಆಫರ್!!

ಏರ್ ಟೆಲ್ ಆನ್ ಲೈನ್ ಸ್ಟೋರ್ ನಲ್ಲಿ ಗೂಗಲ್ ಪಿಕ್ಸಲ್ ಸ್ಮಾರ್ಟ್ ಫೋನ್ ಗಳನ್ನು ಪಡೆಯುವುದು ಹೇಗೆ?

www.airtel.in/onlinestore ಗೆ ಲಾಗಿನ್ ಆಗಿ. ನಿಮ್ಮ ಆಯ್ಕೆಯ ಡಿವೈಸ್ ನ್ನ ಸೆಲೆಕ್ಟ್ ಮಾಡಿ.

ನಿಮ್ಮ ಮಾನದಂಡಗಳನ್ನು ಪರೀಕ್ಷಿಸಿ ಮತ್ತು ಇನ್ಸ್ಟೆಂಟ್ ಸಾಲಕ್ಕೆ ಅನುಮತಿ ಪಡೆಯಿರಿ. ಡೌನ್ ಪೇಮೆಂಟ್ ಮಾಡಿ.

ನಿಮ್ಮ ಮನೆಗೆ , ನೀವು ಹೆಸರಿಸಿದ ವಿಳಾಸಕ್ಕೆ ಡಿವೈಸ್ ನ್ನು ಕಳುಹಿಸಿಕೊಡಲಾಗುತ್ತೆ.

ಹೊಸ ಸ್ಮಾರ್ಟ್ ಫೋನ್ ನಲ್ಲಿ ಸೂಪರ್ ಫಾಸ್ಟ್ ಡಾಟಾ ಮತ್ತು ಅನ್ ಲಿಮಿಟೆಡ್ ವಾಯ್ಸ್ ಕಾಲ್ ಮಾಡುವ ಅವಕಾಶವನ್ನು ಗ್ರಾಹಕರಿಗೆ ಅಟೋಮ್ಯಾಟಿಕ್ ಆಗಿ ಏರ್ ಟೆಲ್ ಪೋಸ್ಟ್ ಪೇಯ್ಡ್ ಪ್ಲಾನ್ ಮೂಲಕ ನೀಡಲಾಗುತ್ತೆ.

ಗೂಗಲ್ ಪಿಕ್ಸಲ್ 2 , 64 ಜಿಬಿ ವರ್ಷನ್ ಗೆ , ಏರ್ ಟೆಲ್ 10,599 ರುಪಾಯಿ ಡೌನ್ ಪೇಮೆಂಟ್ ಪಡೆಯಲಿದೆ. 128 ಜಿಬಿ ಗುಗಲ್ ಪಿಕ್ಸಲ್ 2 ಗೆ 12599 ರುಪಾಯಿ ನೀಡಬೇಕು. ಗೂಗಲ್ ಪಿಕ್ಸಲ್ 2 ಎಕ್ಸ್ ಎಲ್ 64 ಜಿಬಿ ವರ್ಷನ್ ಗೆ 15,599 ರುಪಾಯಿ ಮತ್ತು 128 ಜಿಬಿ ವರ್ಷನ್ ಗೆ 25,599 ರುಪಾಯಿ ಡೌನ್ ಪೇಮೆಂಟ್ ಮಾಡಬೇಕು.

ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಏರ್‌ಟೆಲ್ ಸ್ಟೋರ್‌ನಲ್ಲಿ ಭರ್ಜರಿ ಆಫರ್!!

ಇದರ ಜೊತೆಗೆ ಇನ್ನೂ ಕೆಲವು ಆಫರ್ ಗಳನ್ನು ಏರ್ ಟೆಲ್ ಗ್ರಾಹಕರಿಗೆ ನೀಡುತ್ತಿದೆ. 50 ಜಿಬಿ ಡಾಟಾ ಒಂದು ತಿಂಗಳಿಗೆ ಫ್ರೀ, ಅನ್ ಲಿಮಿಟೆಡ್ ಕಾಲಿಂಗ್, ಅಮೇಜಾನ್ ಪ್ರೈಮ್ ಗೆ ಒಂದು ವರ್ಷದ ಚಂದಾದಾರಿಕೆ, ಡಿಸೆಂಬರ್ 2018 ರ ವರೆಗೆ ಫ್ರೀ ಏರ್ ಟೆಲ್ ಟಿವಿ, ಸೆಕ್ಯೂರ್ ಡಿವೈಸ್ ಪ್ರೊಟೆಕ್ಷನ್ ಪ್ಯಾಕೇಜ್ ಕೂಡ ಫ್ರೀ ಆಗಿ ಸಿಗಲಿದೆ.

ಭಾರತಿ ಏರ್ ಟೆಲ್ ನ ಚೀಫ್ ಮ್ಯಾನೇಜರ್ ಆಗಿರುವ ವಾಣಿ ವೆಂಕಟೇಶ್ ಆಫರ್ ಗಳ ಬಗ್ಗೆ ಹೇಳಿದ್ದು, ಗ್ರಾಹಕರಿಗೆ ಉತ್ತಮ ಬೆಲೆ ನೀಡುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ಸ್ಮಾರ್ಟ್ ಫೋನ್ ಗಳ ಖರೀದಿಗೆ ಬಳಕೆದಾರರು ಹೆಚ್ಚು ಏರ್ ಟೆಲ್ ಆನ್ ಲೈನ್ ಸ್ಟೋರ್ ಬಳಕೆ ಮಾಡುವಂತೆ ಮಾಡಲು ಮುಂದಿನ ದಿನಗಳಲ್ಲೂ ನಾವು ಫೈನಾನ್ಸ್ ಪಾರ್ಟ್ನರ್ ಗಳ ಜೊತೆ ಬೆರೆತು ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಎನಿ ವೇ, ಬಂಪರ್ ಆಫರ್ ಗಳಂತೂ ಲಭ್ಯವಿದೆ.. ಯಾರಿಗುಂಟು ಯಾರಿಗಿಲ್ಲ.. ನಿಮಗೂ ಬೇಕಿದ್ದರೆ ಕೂಡಲೇ ಲಾಗಿನ್ ಆಗಿ..

Best Mobiles in India

English summary
Google Pixel 2 range available on Airtel store: Here's all that you will get free with the smartphones. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X