Subscribe to Gizbot

ಮೋಡಿ ಮಾಡಲು ಬರುತ್ತಿದೆ ಗೂಗಲ್ ಪಿಕ್ಸಲ್ ಫೋನು..!!!

By: Precilla Dias

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸದ್ಯ ಫುಲ್ ಸ್ಕ್ರಿನ್ ಡಿಸ್ ಪ್ಲೇ ಟ್ರೆಂಡ್ ಶುರುವಾಗಿದ್ದು, ಅದುವೇ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಲ್ಲಿ ಕಾಣಬಹುದಾಗಿದೆ. ಈ ಮಾದರಿಯಲ್ಲಿ ಫೋನ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಲು ಕಾಯುತ್ತಿದ್ದು, ಇದೇ ಸಾಲಿನಲ್ಲಿ ಗೂಗಲ್ ಪಿಕ್ಸಲ್ ಸ್ಮಾರ್ಟ್ ಸಹ ಸೇರ್ಪಡೆಯಾಗಿದೆ ಎನ್ನಲಾಗಿದೆ.

ಮೋಡಿ ಮಾಡಲು ಬರುತ್ತಿದೆ ಗೂಗಲ್ ಪಿಕ್ಸಲ್ ಫೋನು..!!!

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಪಿಕ್ಸಲ್ ಸ್ಮಾರ್ಟ್ ಫೋನಿನಲ್ಲಿ ಬ್ರಿಜಿಲ್ ಲೈಸ್ ಡಿಸ್ ಪ್ಲೇ ಕಾಣಬಹುದಾಗಿದೆ. ಇದು ಸಹ ಸಂಪೂರ್ಣ ಸ್ಕ್ರಿನ್ ಹೊಂದಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಶಿಯೋಮಿ ಮಿ ಮ್ಯಾಕ್ಸ್ ಸಹ ಬ್ರಿಜಿಲ್ ಲೈಸ್ ಡಿಸ್ ಪ್ಲೇಯನ್ನು ಅಳವಡಿಸಿಕೊಂಡಿತ್ತು.

ಇದಲ್ಲದೇ ಈ ಬಾರಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಗೂಗಲ್ ತನ್ನ ಸ್ಮಾರ್ಟ್ ಫೋನಿನಲ್ಲಿ ಅಳವಡಿಸಿಕೊಂಡಿದೆ. ಕ್ಯಾಮೆರಾ ಪಕ್ಕದಲೇ LED ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಇದರೊಂದಿಗೆ ವೃತ್ತಕಾರದ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಹಿಂಭಾಗದ ಡ್ಯುಯಲ್ ಕ್ಯಾಮರಾ ಈ ಫೋನಿಗೆ ಹೊಸ ಲುಕ್ ನೀಡಿದೆ ಎನ್ನಬಹುದಾಗಿದೆ.

ಸದ್ಯ ಲೀಕ್ ಆಗಿರುವ ಮಾಹಿತಿಯ ಪ್ರಕಾರ ಈ ಫೋನ್ ಒಟ್ಟು ಎರಡು ಬಣ್ಣಗಳಲ್ಲಿ ಕಾಣಸಿಕೊಳ್ಳಲಿದೆ. ಕಳೆದ ಭಾರಿ ಕಾಣಿಸಿಕೊಂಡಿದ್ದ ಪಿಕ್ಸಲ್ ಸ್ಮಾರ್ಟ್ ಫೋನುಗಳಿಗಿಂತ ವಿಭಿನ್ನವಾಗಿ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶೀಘ್ರವೇ ಈ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಸ್ಯಾಮ್ ಸಂಗ್ ಮತ್ತು ಆಪಲ್ ಸೇರಿದಂತೆ ಟಾಪ್ ಎಂಡ್ ಸ್ಮಾರ್ಟ್ ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದ್ದು, ಮಾರುಕಟ್ಟೆಗೆ ಬಂದ ಮೇಲೆ ಇದರ ಕುರಿತು ಹೆಚ್ಚಿನ ಮಾಹಿತಿ ದೊರೆಯಲಿದೆ.

Read more about:
English summary
Another Google Pixel 2 mockup render has emerged online showing the possible design.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot