ಗೂಗಲ್‌ 'ಪಿಕ್ಸಲ್‌ 3 XL' ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

|

ಟೆಕ್‌ ದಿಗ್ಗಜ ಗೂಗಲ್ ತನ್ನ ಪಿಕ್ಸಲ್ ಸ್ಮಾರ್ಟ್‌ಫೋನ್‌ ಸರಣಿ ಮೂಲಕ ಸ್ಮಾರ್ಟ್‌ಫೋನ್‌ ಕ್ಷೇತ್ರಕ್ಕೂ ಕಾಲಿಟ್ಟಿದ್ದ, ಕಂಪನಿಯ ಸ್ಮಾರ್ಟ್‌ಫೋನ್‌ಗಳು ವಿಶ್ವ ಮಾರುಕಟ್ಟೆಯಲ್ಲಿ ಗಮನ ಸೆಳೆದಿವೆ. ಕಳೆದ ವರ್ಷ ಪಿಕ್ಸಲ್ 3 XL ಸ್ಮಾರ್ಟ್‌ಪೋನ್‌ ಅನ್ನು ಪರಿಚಯಿಸಿ ಸುದ್ದಿ ಮಾಡಿದ್ದ ಕಂಪನಿಯು ಈಗ ಗ್ರಾಹಕರಿಗೆ ಬಿಗ್‌ ಸರ್ಪ್ರೈಸ್‌ ನೀಡುವ ಮೂಲಕ ಮತ್ತೆ ಸುದ್ದಿಗೆ ಬಂದಿದೆ. ಕಂಪನಿಯು ಪಿಕ್ಸಲ್‌ 3 XL ಸ್ಮಾರ್ಟ್‌ಫೋನ್‌ನ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ.

ಗೂಗಲ್‌ 'ಪಿಕ್ಸಲ್‌ 3 XL' ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

ಹೌದು, ಗೂಗಲ್ ಸಂಸ್ಥೆಯು ತನ್ನ ಪಿಕ್ಸಲ್ 3XL ಸ್ಮಾರ್ಟ್‌ಫೋನ್‌ನ 64GB ಮತ್ತು 128GB ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯಂಟ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಿದೆ. ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಸದ್ಯ 4GB RAM ಮತ್ತು 64GB ಸಂಗ್ರಹ ಸಾಮರ್ಥ್ಯದ ವೇರಿಯಂಟ್‌ 54,999ರೂ.ಗೆ ಲಭ್ಯವಿದೆ. ಹಾಗೆಯೇ 4GB RAM ಮತ್ತು 64GB ಆಂತರಿಕ ಸ್ಟೋರೇಜ್‌ ವೇರಿಯಂಟ್‌ 65,999ರೂ.ಗಳಿಗೆ ದೊರೆಯಲಿದೆ.

ಗೂಗಲ್‌ 'ಪಿಕ್ಸಲ್‌ 3 XL' ಫೋನ್‌ ಬೆಲೆಯಲ್ಲಿ ಭಾರಿ ಇಳಿಕೆ!

ಲಾಂಚ್‌ ಆದ ಆರಂಭದಲ್ಲಿ 4GB RAM ಮತ್ತು 64GB ವೇರಿಯಂಟ್‌ ಬೆಲೆಯು 83,000ರೂ.ಗಳು ಆಗಿತ್ತು. ಹಾಗೆಯೇ 4GB RAM ಮತ್ತು 64GB ವೇರಿಯಂಟ್‌ ಬೆಲೆಯು 92,000ರೂ.ಗಳು ಆಗಿತ್ತು. ಆದರೆ ಈಗ ಕ್ರಮವಾಗಿ 28,000ರೂ.ಗಳು ಮತ್ತು 26,000ರೂ.ಗಳಷ್ಟು ಬೆಲೆ ಇಳಿಕೆ ಕಂಡಿವೆ. ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯ ಇವೆ. ಹಾಗಾದರೇ ಗೂಗಲ್‌ ಪಿಕ್ಸಲ್ 3 XL ಸ್ಮಾರ್ಟ್‌ಫೋನಿನ್‌ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ! ಓದಿರಿ : ಗೂಗಲ್‌ ಸರ್ಚ್‌ ಹಿಸ್ಟರಿ ಆಫ್‌ ಮಾಡಬೇಕೆ?..ಹೀಗೆ ಮಾಡಿ!

ಡಿಸೈನ್‌

ಡಿಸೈನ್‌

ಆಕರ್ಷಕ ಹೊರ ನೋಟವನ್ನು ಹೊಂದಿರುವ ಈ ಸ್ಮಾರ್ಟ್‌ಫೋನಿನ ಸುತ್ತಳತೆಯು 158 x 76.7 x 7.9 mm ಆಗಿದೆ. ಎರಡು ಬದಿಯಲ್ಲಿ ಗೊರಿಲ್ಲಾ ಗ್ಲಾಸ್‌ ರಚನೆ ನೀಡಲಾಗಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆದಿದೆ. ಸುತ್ತಲೂ ಅಲ್ಯೂಮಿನಿಯಮ್ ಫ್ರೇಮ್‌ನ ಡಿಸೈನ್‌ ರಚನೆ ಇದ್ದು, ಇದರ ತೂಕವು 184 ಗ್ರಾಂ ಆಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

2960 x 1440 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದಒಂದಿಗೆ 6.3 ಇಂಚಿನ ಹೆಚ್‌ಡಿ ಪ್ಲಸ್‌ P-OLED ಮಾದರಿಯ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಡಿಸ್‌ಪ್ಲೇಯಿಂದ ಬಾಹ್ಯಬಾಡಿಯ ನಡುವುನ ಅಂತರ ಶೇ.82.8% ಆಗಿದ್ದು, ಡಿಸ್‌ಪ್ಲೇಯ ಅನುಪಾತವು 18.5:9 ಆಗಿದೆ. ಅದೇ ರೀತಿ ಸ್ಕ್ರೀನಿನ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 523ppi ಆಗಿದೆ.

ಓದಿರಿ : ಅಮೆಜಾನ್‌ನಲ್ಲಿ ಹೊಸತನ : ಅಲೆಕ್ಸಾ 'ವಾಯಿಸ್‌ ಮೆಸೆಜ್' ಫೀಚರ್‌ ವಿಸ್ತರಣೆ! ಓದಿರಿ : ಅಮೆಜಾನ್‌ನಲ್ಲಿ ಹೊಸತನ : ಅಲೆಕ್ಸಾ 'ವಾಯಿಸ್‌ ಮೆಸೆಜ್' ಫೀಚರ್‌ ವಿಸ್ತರಣೆ!

ಪ್ರೊಸೆಸರ್‌

ಪ್ರೊಸೆಸರ್‌

ಕ್ವಾಲ್ಕಮ್ SDM845 ಸ್ನ್ಯಾಪ್‌ಡ್ರಾಗನ್‌ 845 ಸಾಮರ್ಥ್ಯದ ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 9.0 ಓಎಸ್‌ ಇದರಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಜಿಪಿಯು ಅಂಡ್ರಿನೊ 630 ಸಹ ಇದ್ದು, 4 GB RAM ಸಾಮರ್ಥ್ಯದೊಂದಿಗೆ ಆಂತರಿಕವಾಗಿ 64 ಮತ್ತು 128 GB ಎರಡು ವೇರಿಯಂಟ್‌ಗಳ ಆಯ್ಕೆಯನ್ನು ಹೊಂದಿದೆ.

ಕ್ಯಾಮೆರಾ

ಕ್ಯಾಮೆರಾ

ಪ್ರಾಥಮಿಕ ರೇರ್‌ ಕ್ಯಾಮೆರಾವು 12.2 ಎಂಪಿ ಸಾಮರ್ಥ್ಯದಲ್ಲಿದ್ದು, ವೈಲ್ಡ್‌ ಆಂಗಲ್‌ ಲೆನ್ಸ್‌ f/2.2-ಅಪರ್ಚರ್‌) ಮತ್ತು ಟೆಲಿಫೋಟೋ ಲೆನ್ಸ್ (f/1.8-ಅಪರ್ಚರ್‌) ಗಳ ಸಂಯೋಜನೆಯನ್ನು ಪಡೆದಿದೆ. ಮುಂಬದಿಯಲ್ಲಿ ಸೆಲ್ಫಿಗಾಗಿ 8 ಎಂಪಿ ಕ್ಯಾಮೆರಾ ನೀಡಲಾಗಿದ್ದು, ವೈರ್ಲ್ಡ್‌ ಮತ್ತು ಅಲ್ಟ್ರಾವೈರ್ಲ್ಡ್‌ ಲೆನ್ಸ್‌ಗಳನ್ನು ಹೊಂದಿದೆ. ಎಲ್‌ಇಡಿ ಫ್ಲ್ಯಾಶ್‌ ಸಹ ಇದೆ.

ಬ್ಯಾಟರಿ

ಬ್ಯಾಟರಿ

3,430mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಬಲವನ್ನು ಹೊಂದಿದೆ. ಇದರೊಂದಿಗೆ 18W ಶಕ್ತಿ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಸಹ ನೀಡಲಾಗಿದ್ದು, ಹಾಗೆಯೇ ವಾಯರ್‌ಲೆಸ್‌ ಚಾರ್ಜಿಂಗ್‌ ಸೌಲಭ್ಯವನ್ನು ಸಹ ನೀಡಲಾಗಿದೆ.

ಓದಿರಿ : ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!ಓದಿರಿ : ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!

Best Mobiles in India

English summary
Google Pixel 3 XL receives a massive price cut of up to Rs 28,000.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X