ಗೂಗಲ್‌ ಪಿಕ್ಸೆಲ್‌ 4a ಸ್ಮಾರ್ಟ್‌ಫೋನ್‌ನ ಫೋಟೋ ಫೀಚರ್ಸ್‌ ಲೀಕ್‌ !

|

ಇದು ಸ್ಮಾರ್ಟ್‌ಫೋನ್‌ಗಳ ಜಮಾನ, ಇಂದು ಎಲ್ಲರ ಕೈ ನಲ್ಲೂ ಸ್ಮಾರ್ಟ್‌ಫೋನ್‌ಗಳು ರಿಂಗಣಿಸುತ್ತಿವೆ. ಅಷ್ಟರ ಮಟ್ಟಿಗೆ ಸ್ಮಾರ್ಟ್‌ಫೋನ್‌ಗಳ ಮೇಲೆ ಇಂದಿನ ಜನತೆಗೆ ವ್ಯಾಮೋಹ ಶುರುವಾಗಿ ಬಿಟ್ಟಿದೆ. ಇದಕ್ಕೆ ತಕ್ಕಂತೆ ಹಲವಾರು ಕಂಪೆನಿಗಳು ಬಿನ್ನ ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದ್ದಾರೆ. ಪ್ರತಿ ಸ್ಮಾರ್ಟ್‌ಫೋನ್‌ಗಳಲ್ಲಿಯೂ ವಿಶೇಷ ಫೀಚರ್ಸ್‌ಗಳನ್ನ ಪರಿಚಯಿಸೋ ಮೂಲಕ ಗ್ರಾಹಕರನ್ನ ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದರಲ್ಲಿ ಗೂಗಲ್‌ ಪಿಕ್ಸೆಲ್‌ ಕಂಪೆನಿ ಕೂಡ ಒಂದಾಗಿದ್ದು, ಈಗಾಗ್ಲೆ ಹಲವು ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸಲು ವೇದಿಕೆ ಸಿದ್ದ ಪಡಿಸಿಕೊಂಡಿದೆ.

ಹೌದು

ಹೌದು, ಗೂಗಲ್‌ ಪಿಕ್ಸೆಲ್‌ ಕಂಪೆನಿ ಹಲವು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ತನ್ನ ಹೊಸ ಗೂಗಲ್‌ ಪಿಕ್ಸೆಲ್‌ 4a ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಪ್ಲ್ಯಾನ್‌ ರೂಪಿಸಿಕೊಂಡಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಹೇಗಿರಲಿದೆ ಅನ್ನೊದರ ಬಗ್ಗೆ ಇನ್ನು ಯಾವುದೇ ಮಾಹಿತಿಯನ್ನ ಕಂಪೆನಿ ಬಿಟ್ಟು ಕೊಟ್ಟಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಯಾವ ಮಾದರಿಯಲ್ಲಿರಲಿದೆ ಅನ್ನುವ ಫೋಟೋ ಇಮೇಜ್‌ಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ.

ಗೂಗಲ್‌ ಪಿಕ್ಸೆಲ್‌ 4A

ಗೂಗಲ್‌ ಪಿಕ್ಸೆಲ್‌ 4A

ಗೂಗಲ್‌ ಪಿಕ್ಸೆಲ್‌ ಕಂಪೆನಿಯ ಬಹು ನಿರೀಕ್ಷಿತ ಗೂಗಲ್‌ ಪಿಕ್ಸೆಲ್‌ 4A ಸ್ಮಾರ್ಟ್‌ಫೋನ್‌ ಗೆ ಸಂಬಂಧಿಸಿದ ಫೋಟೋ ಇಮೇಜ್‌ಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರಲ್ಲಿ ಭಾರಿ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಇತರೆ ಯಾವುದೇ ಮಾಹಿತಿ ಲಭ್ಯವಿಲ್ಲವಾದರೂ ಫೋಟೋ ಇಮೇಜ್‌ ಪ್ರಕಾರ ಈ ಸ್ಮಾರ್ಟ್‌ಫೋನ್‌ ಪಂಚ್‌ಹೋಲ್‌ ಕ್ಯಾಮೆರಾ ಡಿಸ್‌ಪ್ಲೇಯನ್ನ ಹೊಂದಿರಲಿದೆ ಎಂದು ಊಹಿಸಲಾಗಿದೆ.

ವಿನ್ಯಾಸ

ವಿನ್ಯಾಸ

ಇನ್ನು ಈ ಸ್ಮಾರ್ಟ್‌ಫೋನಬ್‌ ಈಗಾಗ್ಲೇ ಗೂಗಲ್‌ ಪರಿಚಯಿಸಿರುವ ಗೂಗಲ್‌ಪಿಕ್ಸೆಲ್‌ 3a ಸರಣಿಯ ಮುಂದುವರೆದ ಆವೃತ್ತಿಯಾಗಿದೆ. ಸದ್ಯ ಆನ್‌ಲೈನ್‌ನಲ್ಲಿ ಸೋರಿಕೆಯಾದ ಚಿತ್ರಗಳಲ್ಲಿ ಈ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಹಾಗೂ ಹಿಂಭಾಗದ ಚಿತ್ರಗಳು ಮಾತ್ರ ಲಭ್ಯವಾಗಿವೆ. ಇದರ ಪ್ರಕಾರ ಇದು ಸಿಂಗಲ್‌ ರಿಯರ್‌ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಆಗಿರಲಿದ್ದು, ಸಿಂಗಲ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲ ಇದು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ವಿಶೇಷತೆ

ವಿಶೇಷತೆ

ಇನ್ನು ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾದ ಜೊತೆಗೆ ಎಲ್ಇಡಿ ಫ್ಲ್ಯಾಶ್ ಯೂನಿಟ್‌ ಹೊಂದಿರುವ ಸಾಧ್ಯತೆ ಇದೆ. ಅಲ್ಲದೆ ಕೆಲವು ವರದಿಗಳ ಈ ಸ್ಮಾರ್ಟ್‌ಫೋನ್‌ 5.81-ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಸಾಧ್ಯತೆ ಇದೆ. ಅಲ್ಲದೆ ಈ ಡಿಸ್‌ಪ್ಲೇಯು ಎಲ್‌ಸಿಡಿ ಸ್ಕ್ರೀನ್‌ ಹೊಂದಿರಬಹುದು ಎನ್ನಲಾಗಿದೆ. ಅಲ್ಲದೆ ಇದು ಗೇಮಿಂಗ್‌ಗೆ ಸಫೋರ್ಟ್‌ ಮಾಡುವ ಡಿಸ್‌ಪ್ಲೇ ಮಾದರಿಯನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ.

ಇತರೆ

ಇತರೆ

ಈ ಸ್ಮಾರ್ಟ್‌ಫೋನ್‌ ನ ಬ್ಯಾಟರಿ ಪ್ಯಾಕ್‌ಅಪ್‌ ಎಷ್ಟಿರಬಹುದು ಅನ್ನುವ ವಿಚಾರವಾಗಲಿ, ಸ್ಮಾರ್ಟ್‌ಫೋನ್‌ನ ವಿನ್ಯಾಸದ ಬಗ್ಗೆ ಆಗಲಿ ಇನ್ನು ಯಾವುದೇ ಮಾಹಿತಿಯನ್ನ ಕಂಪೆನಿ ಬಿಟ್ಟುಕೊಟ್ಟಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ಹಾಟ್‌ಸ್ಪಾಟ್‌, ಯುಎಸ್‌ಬಿ ಟೈಪ್-ಸಿ ಪೋರ್ಟ್ ಹಾಗೂ 3.5mm ಆಡಿಯೊ ಜ್ಯಾಕ್ ಅನ್ನು ಸಹ ಬೆಂಬಲಿಸಲಿದೆ ಎಂದು ಹೇಳಲಾಗ್ತಿದೆ.

Most Read Articles
Best Mobiles in India

English summary
The company has not revealed any information about the Google Pixel 4a in an official capacity. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X