ಇಂದು 'ಗೂಗಲ್ ಪಿಕ್ಸೆಲ್ 6' ಮತ್ತು 'ಗೂಗಲ್ ಪಿಕ್ಸೆಲ್ 6 ಪ್ರೊ' ಲಾಂಚ್!

|

ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 6 ಮತ್ತು ಗೂಗಲ್ ಪಿಕ್ಸೆಲ್ 6 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಇಂದು (ಅ.19) ಅಧಿಕೃತವಾಗಿ ಲಾಂಚ್ ಮಾಡಲಿದೆ. ಬಿಡುಗಡೆ ಕಾರ್ಯಕ್ರಮವು (ಭಾರತೀಯ ಕಾಲಮಾನ) ರಾತ್ರಿ 10:30ಕ್ಕೆ ಆರಂಭವಾಗಲಿದೆ. ಗೂಗಲ್‌ ಪಿಕ್ಸಲ್ 6 ಸರಣಿಯ ಬಿಡುಗಡೆ ಕಾರ್ಯಕ್ರಮವನ್ನು ಆನ್‌ಲೈನ್‌ ಮೂಲಕ ವೀಕ್ಷಣೆ ಮಾಡಬಹುದು. ಗೂಗಲ್‌ನ ಅಧಿಕೃತ ಯೂಟ್ಯೂಬ್‌ ಚಾನಲ್‌ ಹಾಗೂ ಡೆಡಿಕೇಟೆಡ್ ಪೇಜ್‌ನ ಮೂಲಕ ಲೈವ್ ವೀಕ್ಷಣೆ ಮಾಡಬಹುದು.

ಇಂದು 'ಗೂಗಲ್ ಪಿಕ್ಸೆಲ್ 6' ಮತ್ತು 'ಗೂಗಲ್ ಪಿಕ್ಸೆಲ್ 6 ಪ್ರೊ' ಲಾಂಚ್!

ಗೂಗಲ್ ಪಿಕ್ಸೆಲ್ 6 ಮತ್ತು ಗೂಗಲ್ ಪಿಕ್ಸೆಲ್ 6 ಪ್ರೊ ಫೋನ್‌ಗಳು ಹೈ ಎಂಡ್‌ ಮಾಡೆಲ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿವೆ. ಈಗಾಗಲೇ ಫೋನ್‌ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ. ಗೂಗಲ್ ಪಿಕ್ಸೆಲ್ 6 ಪ್ರೊ ಫೋನ್‌ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರಲಿದ್ದು, ಗೂಗಲ್ ಪಿಕ್ಸೆಲ್ 6 ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿರಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಹಾಗಾದರೇ ಗೂಗಲ್ ಪಿಕ್ಸೆಲ್ 6 ಮತ್ತು ಗೂಗಲ್ ಪಿಕ್ಸೆಲ್ 6 ಪ್ರೊ ಫೋನ್‌ಗಳ ನಿರೀಕ್ಷಿತ ಫೀಚರ್ಸ್‌ಗಳು ಯಾವುವು? ಹಾಗೆಯೇ ನಿರೀಕ್ಷಿತ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಇಂದು 'ಗೂಗಲ್ ಪಿಕ್ಸೆಲ್ 6' ಮತ್ತು 'ಗೂಗಲ್ ಪಿಕ್ಸೆಲ್ 6 ಪ್ರೊ' ಲಾಂಚ್!

ಗೂಗಲ್ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಡಿಸ್‌ಪ್ಲೇ ರಚನೆ
ಗೂಗಲ್ ಪಿಕ್ಸೆಲ್ 6 ಪ್ರೊ 6.7-ಇಂಚಿನ LTPO OLED ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ. ಇನ್ನು ಈ ಡಿಸ್‌ಪ್ಲೇಯ ರೀಫ್ರೇಶ್ ರೇಟ್ 10Hz ನಿಂದ 120Hz ವರೆಗಿನ ಇರಲಿದೆ ಎಂದು ವರದಿಯಾಗಿದೆ. ಇನ್ನು ಪಿಕ್ಸೆಲ್ 6 ಫೋನ್ 6.4 ಇಂಚಿನ OLED ಡಿಸ್‌ಪ್ಲೇಯನ್ನು ಪಡೆದಿರಲಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಿಸಲಾಗಿದೆ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಹೊಂದಿದೆ.

ಗೂಗಲ್ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಕ್ಯಾಮೆರಾ
ಗೂಗಲ್ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಈ ಎರಡೂ ಫೋನ್‌ಗಳು ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿರಲಿವೆ ಎಂದು ಹೇಳಲಾಗಿದೆ. ಇತರೆ ಸ್ಮಾರ್ಟ್‌ಫೋನ್‌ಗಳಿಗಿಂತ 150 ಪ್ರತಿಶತ ಹೆಚ್ಚು ಬೆಳಕನ್ನು ಸೆರೆ ಹಿಡಿಯುತ್ತದೆ. ಸೆಕೆಂಡಿರಿ ಕ್ಯಾಮೆರಾವು 12 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ ಎನ್ನಲಾಗಿದೆ. ಅತ್ಯುತ್ತಮ ಜೂಮ್ ಸೌಲಭ್ಯ ಹೊಂದಿರಲಿವೆ. ಹಾಗೆಯೇ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಗಳಲ್ಲಿ ಮ್ಯಾಜಿಕ್ ಎರೇಸರ್ ಫೀಚರ್ ಒಳಗೊಂಡಿರಲಿವೆ.

ಇಂದು 'ಗೂಗಲ್ ಪಿಕ್ಸೆಲ್ 6' ಮತ್ತು 'ಗೂಗಲ್ ಪಿಕ್ಸೆಲ್ 6 ಪ್ರೊ' ಲಾಂಚ್!

ಬ್ಯಾಟರಿ ಪವರ್
ಗೂಗಲ್ ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಈ ಎರಡು ಸ್ಮಾರ್ಟ್‌ಫೋನ್‌ಗಳು 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ವರದಿಯಾಗಿದೆ. ಇನ್ನು ವಾಯರ್‌ಲೆಸ್‌ ಚಾರ್ಜಿಂಗ್‌ಗೆ ಸಂಬಂಧಿಸಿದಂತೆ, ಪಿಕ್ಸೆಲ್ 6 ಪ್ರೊ 23W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ. ಹಾಗೆಯೇ ಗೂಗಲ್ ಪಿಕ್ಸೆಲ್ 6 ಫೋನ್ 21W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಒಳಗೊಂಡಿರಲಿದೆ ಎನ್ನಲಾಗಿದೆ.

ನಿರೀಕ್ಷಿತ ಬೆಲೆ ಎಷ್ಟು?
ಲೀಕ್ ಮಾಹಿತಿ ಪ್ರಕಾರ, ಗೂಗಲ್ ಪಿಕ್ಸೆಲ್ 6 ಬೆಲೆ ಯುರೋ 649 (ಭಾರತದಲ್ಲಿ ಸರಿಸುಮಾರು 56,200ರೂ.) ಆದರೆ ಪಿಕ್ಸೆಲ್ 6 ಪ್ರೊ ಯುರೋ 899 (ಭಾರತದಲ್ಲಿ ಸರಿಸುಮಾರು 77,900 ರೂ.) ಎಂದು ಊಹಿಸಲಾಗಿದೆ. ಈ ಎರಡು ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗುತ್ತವೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟತೆ ಮಾಹಿತಿ ಲಭ್ಯ ಇಲ್ಲ.

ಗೂಗಲ್ ಪಿಕ್ಸೆಲ್‌ 5 ಫೋನಿನ ಫೀಚರ್ಸ್‌
ಗೂಗಲ್ ಪಿಕ್ಸೆಲ್‌ 5 ಸ್ಮಾರ್ಟ್‌ಫೋನ್‌ 1,080x2,340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇದು 6 ಇಂಚಿನ ಫುಲ್‌ ಹೆಚ್‌ಡಿ+ OLED ಡಿಸ್‌ಪ್ಲೇಯನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 765G SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಡ್ಯುಯಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 12.2 ಮೆಗಾ ಪಿಕ್ಸೆಲ್ ಸೆನ್ಸಾರ್ ಮತ್ತು ಎರಡನೇ ಕ್ಯಾಮೆರಾ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

Most Read Articles
Best Mobiles in India

English summary
Google Pixel 6, Pixel 6 Pro Phones to Launch Today: How to Watch Live.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X