ಹೊಸ ವರ್ಷದ ಆಫರ್‌; ಗೂಗಲ್‌ ಪಿಕ್ಸೆಲ್‌ 6a ಫೋನ್‌ ಬೆಲೆಯಲ್ಲಿ ಭರ್ಜರಿ ಕಡಿತ !

|

2022 ಮುಗಿಯುತ್ತಿದ್ದು, 2023 ಕ್ಕೆ ಕಾಲಿಡಲು ಎಲ್ಲರೂ ಸಜ್ಜಾಗುತ್ತಿದ್ದಾರೆ. ಈ ಹೊಸ ವರ್ಷದ ಸಂಭ್ರಮಕ್ಕೆ ಪ್ರಮುಖ ಇ-ಕಾಮರ್ಸ್‌ ತಾಣಗಳು ಸಹ ಜೊತೆಯಾಗಿದ್ದು, ಆಕರ್ಷಕ ಬೆಲೆಯಲ್ಲಿ ಗ್ಯಾಜೆಟ್‌ಗಳನ್ನು ಮಾರಾಟ ಮಾಡುತ್ತಿವೆ. ಅದರಲ್ಲೂ ಹೊಸ ವರ್ಷಕ್ಕೆ ಹೊಸ ಡಿವೈಸ್‌ ಖರೀದಿಸಬೇಕು ಎಂದುಕೊಂಡಿದ್ದರೆ ಅಥವಾ ಸಾಂಪ್ರದಾಯಿಕವಾಗಿ ಹೊಸ ವರ್ಷಕ್ಕೆ ಘೋಷಣೆಯಾಗುವ ಆಫರ್‌ಗಾಗಿಯೇ ನೀವೇನಾದರೂ ಕಾಯುತ್ತಿದ್ದರೇ ಇದು ಶುಭದಿನ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಹಲವಾರು ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಅದರಂತೆ ಗೂಗಲ್‌ನ ಫೋನ್‌ಗಳು ಸಹ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದು, ಈ ಮೂಲಕ ದುಬಾರಿ ಬೆಲೆಯ ಫೋನ್‌ಗಳನ್ನು ಕೈ ಗೆಟಕುವ ಬೆಲೆಯಲ್ಲಿ ಹೊಸ ವರ್ಷದ ಹಿನ್ನೆಲೆ ಖರೀದಿಸಬಹುದು. ಇದರ ಭಾಗವಾಗಿಯೇ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆದ ಫ್ಲಿಪ್‌ಕಾರ್ಟ್‌ನಲ್ಲಿ ಗೂಗಲ್‌ ಪಿಕ್ಸೆಲ್‌ 6a ಅನ್ನು ಕೇವಲ 16,000 ರೂ. ಗಳಲ್ಲಿ ಖರೀದಿ ಮಾಡಬಹುದಾಗಿದೆ. ಇಷ್ಟು ಕಡಿಮೆ ಮೊತ್ತಕ್ಕೆ ಹೇಗೆ ಖರೀದಿ ಮಾಡಬಹುದು ಎಂಬುದನ್ನು ತಿಳಿಯಲು ಈ ಲೇಖನ ಓದಿ.

ಡಿವೈಸ್‌

ಮಧ್ಯಮ ಶ್ರೇಣಿಯ ಡಿವೈಸ್‌ಗಾಗಿ ಈವರೆಗೂ ಕಾಯುತ್ತಿದ್ದರೆ ಇದು ಸದಾವಕಾಶ, ಯಾಕೆಂದರೆ ಗೂಗಲ್‌ ಪಿಕ್ಸೆಲ್‌ 6a ಗಿಂತ ಉತ್ತಮವಾದ ಆಯ್ಕೆ ಇಲ್ಲ ಎನ್ನಬಹುದು. ಈ ಸ್ಮಾರ್ಟ್‌ಫೋನ್‌ 43,900 ರೂ. ಗಳ ಮೂಲ ದರ ಹೊಂದಿದ್ದು, ಹೊಸ ವರ್ಷದ ಹಿನ್ನೆಲೆ ಡಿಸ್ಕೌಂಟ್‌‌ ಪಡೆದುಕೊಂಡು ಫ್ಲಿಪ್‌ಕಾರ್ಟ್‌ನಲ್ಲಿ 29,900 ರೂ. ಗಳ ಬೆಲೆ ಹೊಂದಿದೆ. ಅದಾಗ್ಯೂ ನೀವು 16,000 ರೂ., ಗಳಿಗೆ ಖರೀದಿ ಮಾಡಬಹುದು.

ಬ್ಯಾಂಕ್‌ ಆಫರ್ ಏನು?

ಬ್ಯಾಂಕ್‌ ಆಫರ್ ಏನು?

ಫ್ಲಿಪ್‌ಕಾರ್ಟ್‌ ಈಗಾಗಲೇ ಈ ಫೋನ್‌ಗೆ ದೊಡ್ಡ ರಿಯಾಯಿತಿ ಘೋಷಣೆ ಮಾಡಿದೆಯಾದರೂ ಬ್ಯಾಂಕ್‌ ಆಫ್ ಬರೋಡಾದ ಗ್ರಾಹಕರು ಇನ್ನೂ ಹೆಚ್ಚಿನ ಡಿಸ್ಕೌಂಟ್‌ ಪಡೆದುಕೊಳ್ಳಬಹುದು. ಅಂದರೆ ಈ ಬ್ಯಾಂಕ್‌ನ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದರೆ 2,000ರೂ. ಕಡಿತವಾಗಲಿದೆ. ಹಾಗೆಯೇ ಫೆಡರಲ್ ಬ್ಯಾಂಕ್ ಕಾರ್ಡ್ ಹೊಂದಿದ್ದರೆ 3,000 ರೂಪಾಯಿಗಳ ತ್ವರಿತ ರಿಯಾಯಿತಿ ಲಭ್ಯವಾಗಲಿದೆ. ಹೀಗಾಗಿ 29,900 ರೂ. ಗಳ ಫೋನ್ 26,900 ರೂ. ಗಳ ಬೆಲೆಗೆ ಇಳಿಯುತ್ತದೆ.

ವಿನಿಮಯ ಆಫರ್‌

ವಿನಿಮಯ ಆಫರ್‌

ಅದಾಗ್ಯೂ ಇನ್ನೂ ರಿಯಾಯಿತಿ ಬೇಕು ಎಂದರೆ ನಿಮ್ಮ ಹಳೆಯ ಫೋನ್‌ ಅನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದು. ನಿಮ್ಮ ಫೋನ್‌ ಸುಸ್ಥಿತಿಯಲ್ಲಿದ್ದರೆ ಈ ಆಫರ್‌ನಲ್ಲಿ 17,500 ರೂ. ಗಳವರೆಗ ರಿಯಾಯಿತಿ ಸಿಗಲಿದೆ. ಆದರೆ, ಸಾಮಾನ್ಯ ಫೋನ್‌ಗಳ ವಿನಿಮಯ ಆಫರ್‌ನಲ್ಲಿ ಹೆಚ್ಚಿನ ರಿಯಾಯಿತಿ ಲಭ್ಯವಾಗಲಿದೆ ಎಂದು ನಿರೀಕ್ಷಿಸಬೇಡಿ. ಅದಾಗ್ಯೂ ನೀವು ನಿಮ್ಮ ಹಳೆಯ ಫೋನ್‌ನ ವಿನಿಮಯ ಮಾಡಿಕೊಂಡಾಗ ಕನಿಷ್ಠ ಪಕ್ಷ ಅಂದರೆ 10,000 ರೂ. ಗಳಾದರೂ ರಿಯಾಯಿತಿ ಲಭ್ಯವಾಯಿತು ಎಂದರೆ 16,900 ರೂ. ಗಳಿಗೆ ನೀವು ಗೂಗಲ್ ಫೋನ್‌ ಅನ್ನು ಖರೀದಿ ಮಾಡಬಹುದು.

ಗೂಗಲ್ ಪಿಕ್ಸೆಲ್‌ 6a ಫೀಚರ್ಸ್‌

ಗೂಗಲ್ ಪಿಕ್ಸೆಲ್‌ 6a ಫೀಚರ್ಸ್‌

ಗೂಗಲ್ ಪಿಕ್ಸೆಲ್‌ 6a ಫೋನ್‌ 6.1 ಇಂಚಿನ ಫುಲ್‌ ಹೆಚ್‌ಡಿ ರೆಸಲ್ಯೂಶನ್‌ನೊಂದಿಗೆ OLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ರಕ್ಷಣೆಯನ್ನು ಹೊಂದಿದ್ದು, ಗೀರುಗಳು ಬೀಳುವ ಹಾಗೂ ಬೇಗನೆ ಹಾಳಾಗುವ ಅಪಾಯ ಇರುವುದಿಲ್ಲ.

ಆಕ್ಟಾ-ಕೋರ್ ಗೂಗಲ್ ಟೆನ್ಸರ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿ

ಇದರೊಂದಿಗೆ ಆಕ್ಟಾ-ಕೋರ್ ಗೂಗಲ್ ಟೆನ್ಸರ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್, 6GB RAM ಹಾಗೂ 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 12.2 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 12 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಆಯ್ಕೆ ಇದರಲ್ಲಿದ್ದು, ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಜೊತೆಗೆ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

ಚಾರ್ಜಿಂಗ್

ಇನ್ನು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,410mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಹೊಂದಿದೆ. ಹಾಗೆಯೇ ಕನೆಕ್ಟಿವಿಟಿ ವಿಚಾರದಲ್ಲಿ, 5G, 4G LTE, ವೈ-ಫೈ, ಬ್ಲೂಟೂತ್ ಆವೃತ್ತಿ v5.2 ಬೆಂಬಲ ಇದೆ.

Best Mobiles in India

English summary
Google Pixel 6a can be bought at Rs 16,000 on Flipkart.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X