ಇಂದಿನಿಂದ ಖರೀದಿಗೆ ಲಭ್ಯ ದೈತ್ಯ 'ಗೂಗಲ್‌ ಪಿಕ್ಸಲ್‌ 6a' ಫೋನ್‌!..ಆಫರ್‌ ಸಹ ಇದೆ!

|

ಟೆಕ್ ದೈತ್ಯ ಗೂಗಲ್‌ ಪಿಕ್ಸಲ್‌ ಸರಣಿಯಲ್ಲಿ ಕೆಲವು ಫೋನ್‌ಗಳನ್ನು ಪರಿಚಯಿಸಿ ಸದ್ದು ಮಾಡಿದೆ. ಸಂಸ್ಥೆಯು ತನ್ನ ಪಿಕ್ಸಲ್ ಸರಣಿಯಲ್ಲಿ ಇತ್ತೀಗಚೆ ಬಿಡುಗಡೆ ಮಾಡಿರುವ ಗೂಗಲ್‌ ಪಿಕ್ಸಲ್‌ 6a ಸ್ಮಾರ್ಟ್‌ಫೋನ್‌ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಸ್ಮಾರ್ಟ್‌ಫೋನ್‌ ದೇಶಿಯ ಮಾರುಕಟ್ಟೆಯಲ್ಲಿ ಇಂದಿನಿಂದ ಮಾರಾಟ ಆರಂಭಿಸಲಿದೆ. ಫೋನ್‌ ಖರೀದಿ ಮಾಡುವ ಗ್ರಾಹಕರಿಗೆ ಕೊಡುಗೆ ಲಭ್ಯ ಇದೆ.

ಫ್ಲಿಪ್‌ಕಾರ್ಟ್‌

ಹೌದು, ಜನಪ್ರಿಯ ಗೂಗಲ್‌ ಸಂಸ್ಥೆಯ 'ಗೂಗಲ್‌ ಪಿಕ್ಸಲ್‌ 6a' ಸ್ಮಾರ್ಟ್‌ಫೋನ್‌ ಇಂದು (ಜುಲೈ 28) ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಮೂಲಕ ಸೇಲ್‌ ಶುರು ಮಾಡಲಿದೆ. ಅಂದಹಾಗೆ ಇದೇ ಜುಲೈ 21 ರಿಂದ ಗೂಗಲ್ 'ಗೂಗಲ್‌ ಪಿಕ್ಸಲ್‌ 6a' ಸ್ಮಾರ್ಟ್‌ಫೋನ್‌ಗಾಗಿ ಮುಂಗಡ-ಆರ್ಡರ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿತು. ಇನ್ನು ಈ ಫೋನ್‌ ಜೊತೆಗೆ ನೂತನ ಪಿಕ್ಸಲ್‌ ಬಡ್ಸ್‌ ಪ್ರೊ (Google Pixel Buds Pro) ಡಿವೈಸ್‌ ಸಹ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.

ವೇರಿಯಂಟ್‌

ಇನ್ನು ಗೂಗಲ್‌ ಪಿಕ್ಸಲ್‌ 6a ಟೆನ್ಸರ್ SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6GB RAM ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ. ಹಾಗೆಯೇ 12 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿದೆ. ಈ ಫೋನ್ 60Hz ರಿಫ್ರೇಶ್ ರೇಟ್ ಸಾಮರ್ಥ್ಯದೊಂದಿಗೆ, OLED ಡಿಸ್‌ಪ್ಲೇ ಒಳಗೊಂಡಿದೆ. ಹಾಗೆಯೇ 18W ವೇಗದ ಚಾರ್ಜಿಂಗ್ ಸಪೋರ್ಟ್‌ ಪಡೆದಿದೆ.

ಆಫರ್‌ ಇದೆಯಾ?

ಆಫರ್‌ ಇದೆಯಾ?

ಗೂಗಲ್‌ ಪಿಕ್ಸಲ್‌ 6a ಮತ್ತು ಪಿಕ್ಸಲ್‌ ಬಡ್ಸ್‌ ಪ್ರೊ ಡಿವೈಸ್‌ಗಳು ಈಗ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಲು ಲಭ್ಯವಿದೆ. ಇನ್ನು ಮುಂಗಡ-ಆರ್ಡರ್ ಸಮಯದಲ್ಲಿ, ಸಂಸ್ಥೆಯು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿನ ಮೇಲೆ 4,000 ರೂ. ತ್ವರಿತ ರಿಯಾಯಿತಿಯನ್ನು ತಿಳಿಸಿತ್ತು. ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್ ಕಾರ್ಡ್ ಗ್ರಾಹಕರು ಪಿಕ್ಸಲ್‌ 6a ಮತ್ತು ಪಿಕ್ಸಲ್‌ ಬಡ್ಸ್‌ ಪ್ರೊ ಖರೀದಿಯ ಮೇಲೆ ಹೆಚ್ಚುವರಿ 5% ಕ್ಯಾಶ್‌ಬ್ಯಾಕ್‌ಗೆ ಅರ್ಹರಾಗಿರುತ್ತಾರೆ. ಹಾಗಾದರೇ ಗೂಗಲ್‌ ಪಿಕ್ಸಲ್‌ 6a ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿದೆ?

ಡಿಸ್‌ಪ್ಲೇ ರಚನೆ ಹೇಗಿದೆ?

ಗೂಗಲ್‌ ಪಿಕ್ಸೆಲ್‌ 6a ಸ್ಮಾರ್ಟ್‌ಫೋನ್‌ 90Hz ರಿಫ್ರೆಶ್ ರೇಟ್‌ ಒಳಗೊಂಡ 6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 20:9 ರಚನೆಯ ಅನುಪಾತವನ್ನು ಪಡೆದಿದೆ. ಜೊತೆಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಇದು ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಫೀಚರ್ಸ್‌ ಅನ್ನು ಹೊಂದಿದೆ.

ಪ್ರೊಸೆಸರ್‌ ಸಾಮರ್ಥ್ಯ ಏನು?

ಪ್ರೊಸೆಸರ್‌ ಸಾಮರ್ಥ್ಯ ಏನು?

ಗೂಗಲ್‌ ಪಿಕ್ಸೆಲ್ 6a ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಗೂಗಲ್ ಟೆನ್ಸರ್ SoC ಮತ್ತು ಟೈಟಾನ್ M2 ಸೆಕ್ಯುರಿಟಿ ಕೊಪ್ರೊಸೆಸರ್‌ ಹೊಂದಿದೆ. ಇದು ಮಾಲಿ G78 MP20 ಸಪೋರ್ಟ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಪ್ರೊಸೆಸರ್‌ ಗೂಗಲ್‌ ಪಿಕ್ಸೆಲ್‌ 6 ಮತ್ತು ಗೂಗಲ್‌ ಪಿಕ್ಸೆಲ್‌ 6 ಪ್ರೊ ಸ್ಮಾರ್ಟ್‌ಫೋನ್‌ಗಳಿಗೂ ಕೂಡ ಪವರ್‌ ನೀಡಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಕ್ಯಾಮೆರಾ ಸೆಟ್‌ಅಪ್‌ ಯಾವುದು?

ಕ್ಯಾಮೆರಾ ಸೆಟ್‌ಅಪ್‌ ಯಾವುದು?

ಗೂಗಲ್‌ ಪಿಕ್ಸೆಲ್ 6a ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಮ್ಯಾಜಿಕ್ ಎರೇಸರ್ ಮತ್ತು ನೈಟ್‌ಸೈಟ್‌ನಂತಹ ಹಲವಾರು ಸಾಫ್ಟ್‌ವೇರ್ ಆಧಾರಿತ ಕ್ಯಾಮೆರಾ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ? ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ? ಇತರೆ ಫೀಚರ್ಸ್‌ಗಳೇನು?

ಗೂಗಲ್‌ ಪಿಕ್ಸೆಲ್ 6a ಸ್ಮಾರ್ಟ್‌ಫೋನ್‌ 4,306mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದು ಅಡಾಪ್ಟಿವ್ ಬ್ಯಾಟರಿಯಾಗಿದ್ದು, ಎಕ್ಸ್‌ಟ್ರೀಮ್ ಬ್ಯಾಟರಿ ಸೇವರ್ ಮೋಡ್‌ನಲ್ಲಿರುವಾಗ 24 ಗಂಟೆಗಳು ಮತ್ತು 72 ಗಂಟೆಗಳವರೆಗೆ ಬ್ಯಾಕ್‌ಅಪ್‌ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್‌, ಬಾರೋಮೀಟರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಸಹ ಹೊಂದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತದಲ್ಲಿ ಗೂಗಲ್‌ ಪಿಕ್ಸೆಲ್ 6a ಫೋನ್ ಬೆಲೆ 6GB + 128GB ಸ್ಟೋರೇಜ್ ವೇರಿಯಂಟ್‌ಗೆ 43,999 ರೂ. ಆಗಿದೆ. ಹಾಗೆಯೇ ಗೂಗಲ್ ಪಿಕ್ಸೆಲ್ ಬಡ್ಸ್ ಪ್ರೊ ಬೆಲೆ 19,990 ರೂ. ಆಗಿದೆ. ಕಾರ್ಬನ್ ಬ್ಲ್ಯಾಕ್‌ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

ಗೂಗಲ್ ಪಿಕ್ಸೆಲ್ ಬಡ್ಸ್ ಪ್ರೊ ಫೀಚರ್ಸ್‌

ಗೂಗಲ್ ಪಿಕ್ಸೆಲ್ ಬಡ್ಸ್ ಪ್ರೊ ಫೀಚರ್ಸ್‌

ಗೂಗಲ್ ಪಿಕ್ಸೆಲ್ ಬಡ್ಸ್ ಪ್ರೊ 11mm ಡೈನಾಮಿಕ್ ಸ್ಪೀಕರ್ ಡ್ರೈವರ್ ಅನ್ನು ಹೊಂದಿದೆ. ಇದು ಸಕ್ರಿಯ ಶಬ್ದ ರದ್ದತಿ ಮತ್ತು ಪಾರದರ್ಶಕ ಮೋಡ್ ಅನ್ನು ನೀಡುತ್ತದೆ. ಇದು ಸಂಪರ್ಕಕ್ಕಾಗಿ ಬ್ಲೂಟೂತ್ 5.0 ಅನ್ನು ಅವಲಂಬಿಸಿದೆ ಮತ್ತು ಆಂಡ್ರಾಯ್ಡ್‌ ಮತ್ತು ಐಓಎಸ್‌ ಸಾಧನಗಳೊಂದಿಗೆ ಕನೆಕ್ಟ್ ಮಾಡಬಹುದು. ಗೂಗಲ್ ಪಿಕ್ಸೆಲ್ ಬಡ್ಸ್ ಇಯರ್‌ಬಡ್‌ಗಳು ಒಂದೇ ಚಾರ್ಜ್‌ನಲ್ಲಿ 11 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ. ಚಾರ್ಜಿಂಗ್ ಕೇಸ್‌ನೊಂದಿಗೆ, ಗೂಗಲ್ ಪಿಕ್ಸೆಲ್ ಬಡ್ಸ್ 31 ಗಂಟೆಗಳವರೆಗೆ ಇರುತ್ತದೆ. ಒಂದು ವೇಳೆ ANC ಆನ್ ಆಗಿದ್ದರೆ, ಚಾರ್ಜಿಂಗ್ ಕೇಸ್ ಸೇರಿದಂತೆ ಬ್ಯಾಟರಿ ಬಾಳಿಕೆ ಸುಮಾರು 20 ಗಂಟೆಗಳವರೆಗೆ ಇಳಿಯುತ್ತದೆ. ಇದು ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ ಮತ್ತು Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

Best Mobiles in India

English summary
Google Pixel 6a Now Available for Sale in India Via Flikpart: Price, Launch Offers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X