ಗೂಗಲ್ ಪಿಕ್ಸಲ್ 7 ಫೀಚರ್ಸ್‌ ಲೀಕ್‌!..ಭಾರೀ ಕುತೂಹಲ ಮೂಡಿಸಿದ ಕ್ಯಾಮೆರಾ ಸೆನ್ಸಾರ್!

|

ಗೂಗಲ್ ಸಂಸ್ಥೆಯ ಬಹುನಿರೀಕ್ಷಿತ ಗೂಗಲ್ ಪಿಕ್ಸಲ್ 7 ಸ್ಮಾರ್ಟ್‌ಫೋನ್ ಸರಣಿಯು ಬಿಡುಗಡೆಗೆ ಸಜ್ಜಾಗಿದ್ದು, ಈ ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಗೂಗಲ್‌ ಪಿಕ್ಸಲ್ 7 ಫೋನ್‌ ಸರಣಿಯು ಎರಡು ಮಾಡೆಲ್‌ಗಳನ್ನು ಒಳಗೊಂಡಿರಲಿದ್ದು, ಅವುಗಳಯ ಕ್ರಮವಾಗಿ ಗೂಗಲ್‌ ಪಿಕ್ಸಲ್ 7 ಮತ್ತು ಗೂಗಲ್ ಪಿಕ್ಸಲ್ 7 ಪ್ರೊ ಆಗಿರಲಿವೆ. ಈ ಸ್ಮಾರ್ಟ್‌ಫೋನ್‌ ಸರಣಿಯ ಲೀಕ್ ಫೀಚರ್ಸ್‌ಗಳು ಗ್ರಾಹಕರನ್ನು ಅಚ್ಚರಿಗೊಳಿಸಿದ್ದು, ಬೆಲೆ ಎಷ್ಟಿರಬಹುದು ಎಂದು ಯೋಚಿಸುವಂತಾಗಿದೆ.

ಗೂಗಲ್‌

ಹೌದು, ಜನಪ್ರಿಯ ಗೂಗಲ್ ಸಂಸ್ಥೆಯ ನೂತನ ಗೂಗಲ್ ಪಿಕ್ಸಲ್ 7 ಸ್ಮಾರ್ಟ್‌ಫೋನ್ ಸರಣಿ ಇದೇ ಅಕ್ಟೋಬರ್‌ 6 ರಂದು ಬಿಡುಗಡೆ ಆಗುವ ಸಾಧ್ಯತೆಗಳು ಇವೆ. ಈ ಸರಣಿಯ ಗೂಗಲ್‌ ಪಿಕ್ಸಲ್ 7 ಮತ್ತು ಗೂಗಲ್ ಪಿಕ್ಸಲ್ 7 ಪ್ರೊ ಸ್ಮಾರ್ಟ್‌ಫೋನ್‌ಗಳು ಹೈ ಎಂಡ್‌ ಮಾದರಿಯ ಕ್ಯಾಮೆರಾ ಸೆನ್ಸಾರ್‌ ಹೊಂದಿರಲಿವೆ. ಜೊತೆಗೆ ಅಧಿಕ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇಯನ್ನು ಒಳಗೊಂಡಿರಲಿವೆ. ಹಾಗೆಯೇ ಈ ಫೋನ್‌ಗಳು ಎರಡನೇ ತಲೆಮಾರಿನ Tensor G2 ಚಿಪ್‌ಸೆಟ್‌ ಅನ್ನು ಪಡೆದಿರಲಿವೆ.

ಸ್ಮಾರ್ಟ್‌ಫೋನ್

ಅವುಗಳಲ್ಲಿ ಪಿಕ್ಸಲ್ 7 ಪ್ರೊ ಹಿಂಬದಿಯಲ್ಲಿ ಟ್ರಿಪಲ್‌ ಕ್ಯಾಮೆರಾ ಸೆನ್ಸಾರ್‌ ರಚನೆ ಹೊಂದಿರಲಿದ್ದು, ಇನ್ನು ಪಿಕ್ಸಲ್ 7 ಸ್ಮಾರ್ಟ್‌ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಹಾಗಾದರೇ ಲೀಕ್ ಮಾಹಿತಿಯಂತೆ ಗೂಗಲ್ ಪಿಕ್ಸಲ್ 7 ಮತ್ತು ಗೂಗಲ್ ಪಿಕ್ಸಲ್ 7 ಪ್ರೊ ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ ಹೊಂದಿರಲಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿರಲಿದೆ

ಡಿಸ್‌ಪ್ಲೇ ರಚನೆ ಹೇಗಿರಲಿದೆ

ಗೂಗಲ್ ಪಿಕ್ಸಲ್ 7 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ OLED ಸ್ಕ್ರೀನ್‌ ಜೊತೆಗೆ QHD+ ಡಿಸ್‌ಪ್ಲೇ ಹೊಂದಿರಲಿದ್ದು, ಡಿಸ್‌ಪ್ಲೇಯ 120Hz ರೀಫ್ರೇಶ್ ರೇಟ್‌ ಅನ್ನು ಹೊಂದಿರಲಿದ್ದು, ಸ್ಕ್ರಾಲಿಂಗ್ ಹೆಚ್ಚು ಸಯವಾಗಿರಲಿದೆ ಹಾಗೂ ವೇಗವಾಗಿರಲಿದೆ. ಹಾಗೆಯೇ LTPO ತಂತ್ರಜ್ಞಾನ ಇರಲಿದ್ದು, ಇದು ಸ್ಕ್ರೀನ್‌ ನಲ್ಲಿ ಡಿಸ್‌ಪ್ಲೇ ಮಾಡಲಾದ ವಸ್ತು (material) ಅವಲಂಬಿಸಿ ರಿಫ್ರೆಶ್ ದರವನ್ನು 1Hz ನಿಂದ 120Hz ಗೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ.

ಪ್ರೊಸೆಸರ್‌ ಪವರ್ ಏನು

ಪ್ರೊಸೆಸರ್‌ ಪವರ್ ಏನು

ಗೂಗಲ್ ಪಿಕ್ಸಲ್ 7 ಪ್ರೊ ಮತ್ತು ಗೂಗಲ್ ಪಿಕ್ಸಲ್ 7 ಸ್ಮಾರ್ಟ್‌ಫೋನ್‌ಗಳು ಎರಡನೇ ತಲೆಮಾರಿನ Tensor G2 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಪಡೆದಿರುವದು ಬಹುತೇಕ ಖಚಿತ ಎನ್ನಲಾಗಿದೆ. ಹಾಗೆಯೇ ಗೂಗಲ್ ಪಿಕ್ಸಲ್ 7 ಪ್ರೊ ವೇರಿಯಂಟ್‌ 12GB RAM + 256GB ಸ್ಟೋರೇಜ್‌ ಆಯ್ಕೆಯನ್ನು ಪಡೆದಿರಲಿದೆ.

ಕ್ಯಾಮೆರಾ ಸೆನ್ಸಾರ್ ವಿಶೇಷತೆ

ಕ್ಯಾಮೆರಾ ಸೆನ್ಸಾರ್ ವಿಶೇಷತೆ

ಗೂಗಲ್ ಪಿಕ್ಸಲ್ 7 ಪ್ರೊ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಅದರಲ್ಲಿ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿರಲಿದೆ. 12 ಮೆಗಾ ಪಿಕ್ಸಲ್‌ ಅಲ್ಟ್ರಾ ವೈಲ್ಡ್‌ ಲೆನ್ಸ್‌ ಒಳಗೊಂಡಿರಲಿದೆ ಹಾಗೂ 48 ಮೆಗಾ ಪಿಕ್ಸಲ್‌ ಟೆಲಿಫೋಟೋ ಲೆನ್ಸ್‌ ಹೊಂದಿರಲಿದೆ. ಅದೇ ರೀತಿ ಸೆಲ್ಫಿ ಕ್ಯಾಮೆರಾ ಸಹ ಹೈ ಸೆನ್ಸಾರ್ ಪಡೆದಿರುವ ನಿರೀಕ್ಷೆಗಳು ಇವೆ.

ಬ್ಯಾಟರಿ ಬ್ಯಾಕ್‌ಅಪ್‌

ಬ್ಯಾಟರಿ ಬ್ಯಾಕ್‌ಅಪ್‌

ಗೂಗಲ್ ಪಿಕ್ಸಲ್ 7 ಸ್ಮಾರ್ಟ್‌ಫೋನ್‌ ಸರಣಿಯಲ್ಲಿ ಕಂಪನಿಯು ಹಿಂದಿನ ಫೋನ್‌ಗಳಿಗಿಂತ ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುವ ಸಾಧ್ಯತೆಗಳು ಇವೆ. ಗೂಗಲ್ ಪಿಕ್ಸಲ್ 7 ಪ್ರೊ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ನೊಂದಿಗೆ ಲಗ್ಗೆ ಇಡುವ ಸಾಧ್ಯತೆಗಳಿವೆ. ಜೊತೆಗೆ 30W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ. ಆದರೆ ಬಾಕ್ಸ್‌ನೊಂದಿಗೆ ಚಾರ್ಜರ್ ನೀಡುವುದಿಲ್ಲ ಎನ್ನಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಗೂಗಲ್ ಪಿಕ್ಸಲ್ 7 ಸ್ಮಾರ್ಟ್‌ಫೋನ್‌ ಸರಣಿಯ ಬೆಲೆ 60,000ರೂ. ಗಿಂತ ಕಡಿಮೆಯಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಪಿಕ್ಸಲ್ 7 ಪ್ರೊ ಆವೃತ್ತಿಯ ಬೆಲೆ ಬಹುಶಃ ಅಧಿಕವಾಗಿರಬಹುದು.

Best Mobiles in India

English summary
Google Pixel 7 Pro Full Specifications Leak Online: 50MP Triple Rear Camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X