Subscribe to Gizbot

ಗೂಗಲ್ ಪಿಕ್ಸೆಲ್ ಬಡ್ಸ್ : ಬೆರಳ ತುದಿಯಲ್ಲಿ ಭಾಷಾಂತರ

Written By: Lekhaka

ಗೂಗಲ್ ಪಿಕ್ಸೆಲ್ ಬಡ್ಸ್ - ಗೂಗಲ್ ನ ಬತ್ತಳಿಕೆಯಿಂದ ಲಾಂಚ್ ಆಗಿರುವ ನೂತನ ವೈರ್ಲೆಸ್ ಇಯರ್ ಫೋನ್ಸ್ . ಈ ವರ್ಷದ ಬಹು ನಿರೀಕ್ಷಿತ ಸ್ಮಾರ್ಟ್ಫೋನ್ಗಳಾದ ಗೂಗಲ್ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 XL ನ ಜೊತೆಗೆ ಲಾಂಚ್ ಆಗಿದೆ ಈ ಸೂಪರ್ ಇಯರ್ಫೋನ್ಸ್, ಪಿಕ್ಸೆಲ್ ಬಡ್ಸ್.

ಗೂಗಲ್ ಪಿಕ್ಸೆಲ್ ಬಡ್ಸ್ : ಬೆರಳ ತುದಿಯಲ್ಲಿ ಭಾಷಾಂತರ

ಪಿಕ್ಸೆಲ್ ಬಡ್ಸ್ ಸಾಧಾರಣ ಇಯರ್ ಫೋನ್ ಅಲ್ಲ,ಇದರಲ್ಲಿದೆ ಅಸಾಧಾರಣ ಫೀಚರ್ಗಳು. ಇದರಲ್ಲಿರುವ ಟಚ್-ಸೆನ್ಸಿಟಿವ್ ಕಂಟ್ರೋಲ್ಗಳು ಇದಕ್ಕೆ ನೀಡುತ್ತದೆ ಸನ್ನೆಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ. ಇಯರ್ಫೋನ್ ನ ಬಲಬದಿಯ ಬಡ್ ಅನ್ನು ಟ್ಯಾಪ್ ಮಾಡುವ ಮೂಲಕ ಮ್ಯೂಸಿಕ್ ಅನ್ನು ಪ್ಲೇ ಅಥವಾ ಪಾಸ್ ಮಾಡಬಹುದು. ಬಲ ಬದಿಯ ಬಡ್ ಅನ್ನು ಹಿಂದೆ ಅಥವ ಮುಂದೆ ಸ್ವೈಪ್ ಮಾಡುವ ಮೂಲಕ ವಾಲ್ಯೂಮ್ ಅನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು. ಹಾಗೆಯೇ ಅದನ್ನು ದೀರ್ಘ ಕಾಲ ಒತ್ತುವ ಮೂಲಕ ಗೂಗಲ್ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸಬಹುದು.

ಅಷ್ಟೇ ಅಲ್ಲದೆ ಪಿಕ್ಸೆಲ್ ಬಡ್ಸ್ ಮೂಲಕ ನೀವು ಕರೆ ಸ್ವೀಕರಿಸಬಹುದು ಮತ್ತು ಕರೆ ಮಾಡಬಹುದು ಕೂಡ. ಆಪಲ್ ಏರ್ಪಾಡ್ಸ್ ಮಾದರಿಯಲ್ಲಿ ಪಿಕ್ಸೆಲ್ ಬಡ್ಸ್ ಕೂಡ ವಿಶೇಷ ಕೇಸ್ ಜೊತೆಗೆ ದೊರೆಯಲಿದೆ. ಪಿಕ್ಸೆಲ್ ಬಡ್ಸ್ ಅನ್ನು ಚಾರ್ಜ್ ಮಾಡುವ ಸಾಮರ್ಥ್ಯ ಈ ಕೇಸ್ ಗೆ ಇದೆ. ಒಮ್ಮೆ ಈ ಪಿಕ್ಸೆಲ್ ಬಡ್ಸ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಸತತವಾಗಿ 5 ಘಂಟೆಗಳ ಕಾಲ ಅದು ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಈ ಸಾಧನವನ್ನು 4 ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡಬಲ್ಲ ಸಾಮರ್ಥ್ಯ ಅದರ ಕೇಸ್ಗಿದೆ.

ಸ್ಮಾರ್ಟ್‌ಫೋನ್ ಕ್ಯಾಮರಾ ಬಳಸಿಕೊಂಡು ಅದ್ಭುತ ಫೋಟೋ ತೆಗೆಯುವುದು ಹೇಗೆ?

ನಾವು ಭವಿಷ್ಯದಲ್ಲಿ ಕಾಣಬಹುದಾದ ಫೀಚರ್ಗಳನ್ನು ಈಗಲೇ ಸಾಧಿಸಲು ಗೂಗಲ್ ತನ್ನ ಪಿಕ್ಸೆಲ್ ಬಡ್ಸ್ ಅನ್ನು ಮಾಧ್ಯಮವಾಗಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ. ರಿಯಲ್ ಟೈಮ್ನಲ್ಲಿ ಬೇರೆ ಬೇರೆ ಭಾಷೆಗಳ ಮಧ್ಯೆ ಭಾಷಾಂತರ ನಡೆಸಬಲ್ಲ ಸಾಮರ್ಥ್ಯ ಗೂಗಲ್ ಪಿಕ್ಸೆಲ್ ಬಡ್ಸ್ ನಲ್ಲಿದೆ. ಯಾವುದೋ ವಿಜ್ಞಾನ ಆಧಾರಿತ ಕಾಲ್ಪನಿಕ ಕಥಾನಕದಿಂದ ಫೀಚರ್ ಒಂದು ಸೀದಾ ಗೂಗಲ್ ನ ನೂತನ ಇಯರ್ಫೋನ್ ಪಿಕ್ಸೆಲ್ ಬಡ್ಸ್ ಗೆ ಬಂದಂತಿದೆ ಎಂದರೆ ತಪ್ಪಾಗಲಾರದು.

ಪಿಕ್ಸೆಲ್ ಬಡ್ಸ್ ನ ಈ ವಿಶೇಷ ಫೀಚರ್ ಹೇಗೆ ಕೆಲಸ ಮಾಡುತ್ತದೆ ತಿಳಯಬೇಕೇ? ಈ ಭಾಷಾಂತರದ ಫೀಚರ್ ಬಳಸಲು ಬಳಕೆದಾರರು ಮೊದಲಿಗೆ ಗೂಗಲ್ ಅಸಿಸ್ಟೆಂಟ್ ನ ಸಹಾಯ ಪಡೆಯಬೇಕು. ಒಂದು ನಿಗದಿತ ಭಾಷೆ ಮಾತನಾಡಲು ಸಹಾಯಬೇಕೆಂದು ಗೂಗಲ್ ಅಸಿಸ್ಟೆಂಟ್ ಗೆ ತಿಳಿಸಬೇಕು.ನಂತರ ಬಳಕೆದಾರರು ಇಂಗ್ಲಿಷ್ನಲ್ಲಿ ಮಾತನಾಡಿದರೆ ಗೂಗಲ್ ಅದನ್ನು ಅವರ ಆಯ್ಕೆಯ ಭಾಷೆಗೆ ಭಾಷಾಂತರಿಸುತ್ತದೆ ಮತ್ತು ಅದರ ಫಲಿತಾಂಶವನ್ನು ಪಿಕ್ಸೆಲ್ ಬಡ್ಸ್ ಕನೆಕ್ಟ್ ಆಗಿರುವ ಸ್ಮಾರ್ಟ್ಫೋನಿನ್ ಸ್ಪೀಕರ್ಗಳಲ್ಲಿ ಗಟ್ಟಿಯಾಗಿ ಕೇಳಬಹುದು.

ಹಾಗೆಯೇ ನಿಮ್ಮ ಆಯ್ಕೆಯ ಭಾಷೆಯಲ್ಲಿ ಮಾತುಗಳು ಕೇಳಿಬಂದಾಗ ಪಿಕ್ಸೆಲ್ ಬಡ್ಸ್ ಅದನ್ನು ಇಂಗ್ಲಿಷ್ಗೆ ಭಾಷಾಂತರಿಸಿ ಫಲಿತಾಂಶವನ್ನು ನಿಮ್ಮ ಪಿಕ್ಸೆಲ್ ಬಡ್ಸ್ ನ ಇಯರ್ಫೋನ್ಗಳ ಮೂಲಕ ತಿಳಿಸುತ್ತದೆ.ಈ ಆಭೂತಪೂರ್ವ ಫೀಚರ್ ಸಂವಹನದ ರೂಪುರೇಶೆಯನ್ನೇ ಬದಲಿಸಲಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ನವಂಬರ್ ನಲ್ಲಿ ಜನರ ಕೈಸೇರಲಿರುವ ಪಿಕ್ಸೆಲ್ ಬಡ್ಸ್ ಇಯರ್ ಫೋನಿನ ಬೆಲೆ $159 (ಅಂದರೆ ಅಂದಾಜು ರೂ 10,300). ಇದು ಸೂಪರ್ ಸ್ಮಾರ್ಟ್ ಇಯರ್ಫೋನ್ ಅಂದರೆ ತಪ್ಪಾಗಲಾರದು ಅಲ್ಲವೇ?

Read more about:
English summary
Google Pixel Buds are the latest wireless earphones from Google that were showcased along with the Google Pixel 2 and Pixel 2 XL smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot