ಗೂಗಲ್‌ ಪಿಕ್ಸೆಲ್‌ 7 ಸ್ಮಾರ್ಟ್‌ವಾಚ್ ಫೀಚರ್ಸ್‌ ಬಹಿರಂಗ!.. ಕೀ ಫೀಚರ್ಸ್‌ ಏನು?

|

ಸ್ಮಾರ್ಟ್‌ವಾಚ್‌ ವಿಭಾಗದಲ್ಲಿ ಈಗಾಗಲೇ ಹಲವಾರು ಕಂಪೆನಿಗಳು ಹಲವು ಫೀಚರ್ಸ್‌ ಇರುವ ವಾಚ್‌ಗಳನ್ನು ಪರಿಚಯಿಸಿವೆ. ಅದರಂತೆ ಜನಪ್ರಿಯ ಗೂಗಲ್‌ ಸಂಸ್ಥೆ ಸಹ ಇತರೆ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ತಯಾರು ಮಾಡುವುದರ ಜೊತೆಗೆ ಹೆಚ್ಚಿನ ಫೀಚರ್ಸ್‌ ಇರುವ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅದರಲ್ಲೂ ಪಿಕ್ಸೆಲ್‌ 7 ಸರಣಿಯ ಸ್ಮಾರ್ಟ್‌ವಾಚ್‌ಗಳನ್ನು ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ. ಆದರೆ, ಈ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಅನಾವರಣ ಆಗುವ ಮುನ್ನವೇ ಪಿಕ್ಸೆಲ್‌ 7 ಸ್ಮಾರ್ಟ್‌ವಾಚ್‌ನ ಕೆಲವು ಫೀಚರ್ಸ್‌ ಹಾಗೂ ವಾಚ್‌ಗಳ ಕಲರ್‌ ವಿಷಯ ಬಹಿರಂಗ ಆಗಿದೆ.

ಗೂಗಲ್‌

ಹೌದು, ಗೂಗಲ್‌ ಕಂಪೆನಿ ಅಕ್ಟೋಬರ್‌ 6 ರಂದು ತನ್ನ ವಾರ್ಷಿಕ ಈವೆಂಟ್‌ನಲ್ಲಿ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಸರಣಿ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಬಿಡುಗಡೆಗೆ ಮೂರು ದಿನ ಬಾಕಿ ಇರುವಾಗಲೇ ಸ್ಮಾರ್ಟ್‌ವಾಚ್‌ಗಳು ಯಾವ ಬಣ್ಣದಲ್ಲಿ ಲಭ್ಯ ಇವೆ, ಏನೆಲ್ಲಾ ಫೀಚರ್ಸ್‌ ಒಳಗೊಂಡಿವೆ ಎಂಬ ಮಾಹಿತಿ ಲೀಕ್ ಆಗಿದೆ. ಇನ್ನು ಈ ಲೀಕ್‌ ಆದ ಮಾಹಿತಿ ಪ್ರಕಾರ ಪಿಕ್ಸೆಲ್‌ ಸ್ಮಾರ್ಟ್‌ವಾಚ್‌ 7 ತ್ವರಿತ ಕನೆಕ್ಟಿವಿಟಿ ಆಯ್ಕೆಯ ಜೊತೆಗೆ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಟ್ರ್ಯಾಕಿಂಗ್‌ ಆಯ್ಕೆ ಪಡೆದಿದೆ ಎನ್ನಲಾಗಿದೆ. ಹಾಗಿದ್ರೆ ಲೀಕ್‌ ಆದ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ವಾಚ್‌ಗಳ ಫೀಚರ್ಸ್‌, ಬೆಲೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ, ಓದಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ವಾಚ್‌ ರೌಂಡ್‌ ಶೇಪ್‌ ಇದ್ದು, OLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ವಾಚ್‌ ಹಳೆಯ Exynos 9110 ಚಿಪ್‌ಸೆಟ್‌ ಆಯ್ಕೆ ಪಡೆದಿದೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಜೊತೆಗೆ ಇದು ಗೂಗಲ್‌ ವೇರ್ ಓಎಸ್‌ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದೂ ಸಹ ಹೇಳಲಾಗುತ್ತಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.5GB/2GB RAM ಮತ್ತು 32GB ಯ ಇಂಟರ್ನಲ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ ಎಂಬ ವಿಷಯ ಬಲವಾಗಿದ್ದು, ಈ ವಾಚ್‌ ವಾಟರ್‌ ರೆಸಿಸ್ಟೆಂಟ್‌ ಆಯ್ಕೆಯನ್ನೂ ಪಡೆದಿದೆಯಂತೆ. ಈ ಮೂಲಕ ಕೆಲವು ವೇರಿಯಂಟ್‌ಗಳಲ್ಲಿ ಸ್ಮಾರ್ಟ್‌ವಾಚ್‌ ಲಭ್ಯವಾಗಲಿವೆ.

ಕನೆಕ್ಟಿವಿಟಿ ಹಾಗೂ ಇತರೆ

ಕನೆಕ್ಟಿವಿಟಿ ಹಾಗೂ ಇತರೆ

ಈ ಸ್ಮಾರ್ಟ್‌ವಾಚ್‌ ಆಂಡ್ರಾಯ್ಡ್‌ ಸಾಧನಗಳಿಗೆ ಮಾತ್ರ ಸಪೋರ್ಟ್‌ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಈ ಗೂಗಲ್‌ ಫಿಕ್ಸೆಲ್‌ ಸ್ಮಾರ್ಟ್‌ವಾಚ್‌ ಗೂಗಲ್‌ ಅಸಿಸ್ಟೆಂಟ್‌ ಹಾಗೂ ಗೂಗಲ್‌ ಮ್ಯಾಪ್‌, ಫೈಂಡ್‌ ಮೈ ಡಿವೈಸ್‌ಗಳಂತಹ ಆಪ್‌ಗಳನ್ನೂ ಬೆಂಬಲಿಸಲಿದೆ ಎಂದು ತಿಳಿದುಬಂದಿದೆ. ಇತರೆ ಸ್ಮಾರ್ಟ್‌ವಾಚ್‌ಗಳಂತೆ ನಿದ್ರೆಯ ಟ್ರ್ಯಾಕಿಂಗ್‌, ಹೃದಯ ಬಡಿತದ ಮೇಲ್ವಿಚಾರಣೆ ಒಳಗೊಂಡಂತೆ ಇನ್ನಿತರೆ ಆರೋಗ್ಯ ಸಂಬಂಧಿತ ವಿಷಯಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಎನ್ನಲಾಗಿದೆ.

ಬ್ಯಾಟರಿ

ಇನ್ನು ಬ್ಯಾಟರಿ ವಿಷಯದಲ್ಲಿ ಇದು ಒಂದು ಪೂರ್ಣ ಚಾರ್ಜ್‌ನಲ್ಲಿ ಒಂದು ದಿನದ ಬ್ಯಾಕ್‌ಅಪ್‌ ನೀಡಲಿದೆಯಂತೆ. ಇದರಲ್ಲಿ ಸ್ಲೀಪಿಂಗ್‌ ಮೂಡ್‌ ಆಯ್ಕೆ ಇದ್ದು ಬ್ಯಾಟರಿ ಬ್ಯಾಕ್‌ಅಪ್‌ನ್ನು ಹೆಚ್ಚಿಗೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಬ್ಲೂಟೂತ್/ವೈ-ಫೈ ವೇರಿಯಂಟ್‌ ಇರುವ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ವಾಚ್‌ USD 349.99 (ಸುಮಾರು 28,000ರೂ. ಗಳು) ರಿಂದ ಪ್ರಾರಂಭವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಹಾಗೆಯೇ ಸೆಲ್ಯುಲಾರ್ ವೇರಿಯಂಟ್‌ಗೆ USD 399 (ಸುಮಾರು 31,900ರೂ. ಗಳು) ನಿಗದಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಗೂಗಲ್‌ ಕಂಪೆನಿಯು ಈ ಸ್ಮಾರ್ಟ್‌ವಾಚ್‌ ಜೊತೆಗೆ ಆರು ತಿಂಗಳ ಫೀಟ್‌ಬಿಟ್‌ ಪ್ರೀಮಿಯಂ ಅನ್ನು ಸಹ ನೀಡುತ್ತದೆಯಂತೆ. ಈ ವಾಚ್‌ಗಳು ಕಪ್ಪು, ಅಬ್ಸಿಡಿಯನ್‌, ಸಿಲ್ವರ್‌ ಹಾಗೂ ಗೋಲ್ಡ್ ಕಲರ್‌ನಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

Best Mobiles in India

English summary
Google will introduce the Google Pixel 7 series of smartwatches in the market in a few days. Information has been leaked features of smartwatches before this.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X