ಗೂಗಲ್‌ ಪಿಕ್ಸೆಲ್‌ ವಾಚ್‌ ಅನಾವರಣ! ಜಬರ್ದಸ್ತ್‌ ಎನಿಸುವ ಫೀಚರ್ಸ್‌!

|

ಗೂಗಲ್‌ ಕಂಪೆನಿ ತನ್ನ ಪಿಕ್ಸೆಲ್‌ 7 ಸರಣಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಭಾರತದಲ್ಲಿ ಪಿಕ್ಸೆಲ್ ವಾಚ್ ಕೂಡ ಲಾಂಚ್‌ ಮಾಡಿದೆ. ಇದು ಗೂಗಲ್‌ ಕಂಪನಿಯು ಪರಿಚಯಿಸಿರುವ ಮೊದಲ ಸ್ಮಾರ್ಟ್ ವಾಚ್ ಆಗಿದೆ. ಇನ್ನು ಪಿಕ್ಸೆಲ್ ವಾಚ್ 1.6-ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಬೆಜೆಲ್-ಲೆಸ್ ಸರ್ಕ್ಯುಲರ್ ಡಯಲ್ ಅನ್ನು ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ವಾಚ್‌ ಎಕ್ಸಿನೋಸ್‌ 9110 SoC ಪ್ರೊಸೆಸರ್‌ನಲ್ಲಿ ರನ್‌ ಆಗಲಿದೆ.

ಗೂಗಲ್‌

ಹೌದು, ಗೂಗಲ್‌ ಪಿಕ್ಸೆಲ್‌ ವಾಚ್‌ ಭಾರತದಲ್ಲಿ ಬಿಡುಗಡೆಯಾಗಿದೆ. ಆಕರ್ಷಕ ವಿನ್ಯಾಸ ಹಾಗೂ ವಿಶೇಷ ಫೀಚರ್ಸ್‌ಗಳಿಂದ ಗಮನಸೆಳೆದಿರುವ ಈ ಸ್ಮಾರ್ಟ್‌ವಾಚ್‌ 3D ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಪ್ರೊಟೆಕ್ಷನ್‌ ಒಳಗೊಂಡಿದೆ. ಇದು ಬ್ಲೂಟೂತ್ v5.0, 2.4GHz Wi-Fi ಮತ್ತು 4G LTE ವಾಯರ್‌ಲೆಸ್‌ ಕನೆಕ್ಟಿವಿಟಿ ಆಯ್ಕೆಗಳನ್ನು ಕೂಡ ನೀಡಲಿದೆ. ಜೊತೆಗೆ ಇಸಿಜಿ ಟ್ರ್ಯಾಕರ್‌, ಹಾರ್ಟ್‌ಬೀಟ್‌ ಸೆನ್ಸಾರ್‌ ಸಹ ಹೊಂದಿದೆ. ಹಾಗಾದ್ರೆ ಈ ಹೊಸ ಸ್ಮಾರ್ಟ್‌ವಾಚ್‌ನಲ್ಲಿ ಏನೆಲ್ಲಾ ಫೀಚರ್ಸ್‌ಗಳನ್ನು ನೀಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್

ಗೂಗಲ್ ಪಿಕ್ಸೆಲ್ ವಾಚ್ 1.6-ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,000ನಿಟ್ಸ್‌ ಬ್ರೈಟ್‌ನೆಸ್‌ ಹೊಂದಿದೆ. ಈ ವಾಚ್‌ನ ಡಿಸ್‌ಪ್ಲೇ 320ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದ್ದು, ಆಲ್‌ವೇಸ್‌ ಆನ್ ಮೋಡ್ ಅನ್ನು ಪಡೆದಿದೆ. ಇದು ಸರ್ಕ್ಯುಲರ್‌ ಡಯಲ್‌ ವಿನ್ಯಾಸವನ್ನು ಹೊಂದಿದೆ. ಈ ಡಿಸ್‌ಪ್ಲೇ 3D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಪಡೆದುಕೊಂಡಿದೆ.

ಗೂಗಲ್

ಗೂಗಲ್ ಪಿಕ್ಸೆಲ್ ವಾಚ್ ಎಕ್ಸಿನೋಸ್ 9110 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಕಾರ್ಟೆಕ್ಸ್ M33 ಕೊಪ್ರೊಸೆಸರ್ ಮತ್ತು 2GB RAM ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಹಾರ್ಟ್‌ಬೀಟ್‌ ಸೆನ್ಸಾರ್‌ ಮತ್ತು ಇಸಿಜಿ ಟ್ರ್ಯಾಕರ್‌ ಅನ್ನು ಕೂಡ ಹೊಂದಿದೆ. ಈ ಸ್ಮಾರ್ಟ್ ವಾಚ್ 5ATM ವಾಟರ್‌ ಪ್ರೂಫ್‌ ಅನ್ನು ಹೊಂದಿದ್ದು, 50 ಮೀಟರ್ ವರೆಗೆ ನೀರಿನ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಫೈಂಡ್ ಮೈ ಡಿವೈಸ್ ಅಪ್ಲಿಕೇಶನ್‌ ಅನ್ನು ಕೂಡ ಬೆಂಬಲಿಸಲಿದೆ.

ಗೂಗಲ್

ಇದು ಗೂಗಲ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದ್ದು, ಫಿಟ್‌ಬಿಟ್‌ನ ಹೆಲ್ತ್‌ ಮತ್ತು ಫಿಟ್‌ನೆಸ್ ಫೀಚರ್ಸ್‌ಗಳನ್ನು ಒಳಗೊಂಡಿರುವ Wear OS 3.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್ ವಾಚ್ 24 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v5.0, 2.4GHz Wi-Fi, 4G LTE, ಮತ್ತು NFC ಆಯ್ಕೆಗಳನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಗೂಗಲ್ ಪಿಕ್ಸೆಲ್ ವಾಚ್ ಬ್ಲೂಟೂತ್ ಮತ್ತು ವೈ-ಫೈ-ಓನ್ಲಿ ಮಾದರಿಯ ಆಯ್ಕೆಗೆ ಗೂಗಲ್ ಪಿಕ್ಸೆಲ್ ವಾಚ್ ಬೆಲೆ $349.99 (ಸುಮಾರು 28,700ರೂ)ಬೆಲೆ ಹೊಂದಿದೆ. ಆದರೆ ಬ್ಲೂಟೂತ್ ಮತ್ತು ವೈ-ಫೈ ಜೊತೆಗೆ LTE ಮಾದರಿಯ ಆಯ್ಕೆಗೆ $399.99 (ಸುಮಾರು 32,800ರೂ)ಬೆಲೆಯನ್ನು ಪಡೆದುಕೊಂಡಿದೆ. ಇದರಲ್ಲಿ Wi-Fi-ಓನ್ಲಿ ಮಾದರಿಯು ಅಬ್ಸಿಡಿಯನ್, ಹ್ಯಾಝೆಲ್ ಮತ್ತು ಚಾಕ್ ಬಣ್ಣಗಳ ಆಯ್ಕೆಯಲ್ಲಿ ಬರಲಿದೆ. ಆದರೆ ಸೆಲ್ಯುಲಾರ್ ರೂಪಾಂತರವನ್ನು ಅಬ್ಸಿಡಿಯನ್, ಹ್ಯಾಝೆಲ್ ಮತ್ತು ಚಾರ್ಕೋಲ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ಗೂಗಲ್‌

ಇನ್ನು ಇದೇ ಸಮಯದಲ್ಲಿ ಗೂಗಲ್‌ ಪಿಕ್ಸೆಲ್‌ 7 ಸರಣಿ ಭಾರತದಲ್ಲಿ ಲಾಂಚ್‌ ಆಗಿದೆ. ಈ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳು 10.8-ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಪಡೆದುಕೊಂಡಿವೆ. ಇದರಲ್ಲಿ ಪಿಕ್ಸೆಲ್‌ 7 ಸ್ಮಾರ್ಟ್‌ಫೋನ್‌ ಸಿನಿಮ್ಯಾಟಿಕ್‌ ಬ್ಲರ್‌ ಫೀಚರ್ಸ್‌ ಅನ್ನು ಬೆಂಬಲಿಸಲಿದೆ. ಹಾಗೆಯೇ ಪಿಕ್ಸೆಲ್‌ 7 ಪ್ರೊ ಮ್ಯಾಕ್ರೋ ಫೋಕಸ್‌ ಫೀಚರ್ಸ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ಗಳು ಟೆನ್ಸಾರ್‌ G2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ.

Best Mobiles in India

English summary
Google Pixel Watch With 24-Hour Battery Life Launched: Price

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X