ಗೂಗಲ್ ಪಿಕ್ಸೆಲ್ XL 128GB ಮೇಲೆ ಈಗ ರೂ 36,000 ಕಡಿತ

By Tejaswini P G
|

ಗೂಗಲ್ ಪಿಕ್ಸೆಲ್ XL 128GB ಯ 'ಕ್ವೈಟ್ ಬ್ಲ್ಯಾಕ್' ಆವೃತ್ತಿಯ ಮೇಲೆ ಅಮೇಜಾನ್ ನೀಡುತ್ತಿದೆ ಭಾರೀ ರಿಯಾಯಿತಿ. ಈ ಸ್ಮಾರ್ಟ್ಫೋನ್ ನ ನಿಜವಾದ ಬೆಲೆ ರೂ 76,000 ಆಗಿದ್ದು, ಈ ರಿಯಾಯಿತಿಯ ನಂತರ ಇದು ದೊರೆಯಲಿದೆ ಕೇವಲ ರೂ 39,999 ಕ್ಕೆ.

ಗೂಗಲ್ ಪಿಕ್ಸೆಲ್ XL 128GB ಮೇಲೆ ಈಗ ರೂ 36,000 ಕಡಿತ


ಗೂಗಲ್ ಪಿಕ್ಸೆಲ್ ಮತ್ತು ಗೂಗಲ್ ಪಿಕ್ಸೆಲ್ XL ಎರಡೂ ಮೊಬೈಲ್ಗಳು ಆಗಾಗ ಅಪ್ಡೇಟ್ಗಳನ್ನು ಪಡೆಯುವುದಲ್ಲದೆ,ಉತ್ತಮ ಕ್ಯಾಮೆರಾಗಳನ್ನು ಹೊಂದಿರುವ ಕಾರಣ ಎಲ್ಲರ ಅಚ್ಚುಮೆಚ್ಚಿನ ಸ್ಮಾರ್ಟ್ಫೋನ್ ಎನಿಸಿದೆ.ಈ ಸ್ಮಾರ್ಟ್ಫೋನ್ಗಳನ್ನು ಕಳೆದ ಅಕ್ಟೋಬರ್,2016 ರಲ್ಲಿ ಲಾಂಚ್ ಮಾಡಲಾಗಿತ್ತು.

ಪಿಕ್ಸೆಲ್ XL ಮೊಬೈಲ್ ಕುರಿತು ಹೇಳುವುದಾದರೆ ಇದರಲ್ಲಿದೆ 5.5 ಇಂಚ್ ಡಿಸ್ಪ್ಲೇ, 1440x2560 ಪಿಕ್ಸೆಲ್ಗಳ ರಸೊಲ್ಯೂಶನ್ ಮತ್ತು 16:9 ಆಸ್ಪೆಕ್ಟ್ ಅನುಪಾತದೊಂದಿಗೆ. ಇದರ ಡಿಸ್ಪ್ಲೇ ಮೇಲೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ನ ಹೊರ ಕವಚವೂ ಇದೆ.

ಇನ್ನು ಗೂಗಲ್ ಪಿಕ್ಸೆಲ್ XL ಕ್ವಾಡ್-ಕೋರ್ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 821 ಪ್ರಾಸೆಸರ್ ಹೊಂದಿದ್ದು, ಎಡ್ರಿನೋ 530 GPU ಕೂಡ ಇದೆ. ಅಲ್ಲದೆ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಇದ್ದು, ಅದನ್ನು ಮೈಕ್ರೋSD ಕಾರ್ಡ್ ಬಳಸಿ ಮತ್ತಷ್ಟು ವಿಸ್ತರಿಸಬಹುದಾಗಿದೆ.

ಮೊಬೈಲ್ಸ್ ಬೋನಾನ್ಜ ಸೇಲ್ ಇಂದಿಗೆ ಕೊನೆ!..ಖರೀದಿಸಲು ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು!!ಮೊಬೈಲ್ಸ್ ಬೋನಾನ್ಜ ಸೇಲ್ ಇಂದಿಗೆ ಕೊನೆ!..ಖರೀದಿಸಲು ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು!!

ಆಂಡ್ರಾಯ್ಡ್ 7.1 ನುಗಾಟ್ ಆಪರೇಟಿಂಗ್ ಸಿಸ್ಟಮ್ ನೊಂದಿಗೆ ಬರುವ ಗೂಗಲ್ ಪಿಕ್ಸೆಲ್ XL ಗೆ ಆಂಡ್ರಾಯ್ಡ್ 8.0 ಓರಿಯೋ ಅಪ್ಡೇಟ್ ಕೂಡ ಲಭ್ಯವಿದೆ. 3450mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಪಿಕ್ಸೆಲ್ XL ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಹೊಂದಿದೆ. 15 ನಿಮಿಷಗಳ ಸಮಯ ಚಾರ್ಜ್ ಮಾಡಿದರೆ 7 ಘಂಟೆಗಳ ಕಾಲ ನಿರಂತರ ಕಾರ್ಯನಿರವಹಿಸುವ ಸಾಮರ್ಥ್ಯ ಪಿಕ್ಸೆಲ್ XL ಗೆ ಇದೆ.

ಇದರ ಆಪ್ಟಿಕ್ಸ್ ಕುರಿತು ಹೇಳುವುದಾದರೆ ಗೂಗಲ್ ಪಿಕ್ಸೆಲ್ XL ನಲ್ಲಿದೆ 12.3MP ರೇರ್ ಕ್ಯಾಮೆರಾ EIS ಮತ್ತು ಡ್ಯುಯಲ್ LED ಫ್ಲ್ಯಾಶ್. ಇನ್ನು ಇದರ ಸೆಲ್ಫೀ ಕ್ಯಾಮೆರಾ Exmor-R CMOS ಇಮೇಜ್ ಸೆನ್ಸರ್ ಅನ್ನು ಬಳಸುತ್ತದೆ.

ಗೂಗಲ್ ಪಿಕ್ಸೆಲ್ XL ನಲ್ಲಿ ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್, ಆಕ್ಸೆಲರೋಮೀಟರ್, ಬ್ಯಾರೋಮೀಟರ್, ಕಂಪಾಸ್, ಗೈರೋಸ್ಕೋಪ್ ಮೊದಲಾದ ಸೆನ್ಸರ್ ಗಳು ಇವೆ.ಅಲ್ಲದೆ ಈ ಸ್ಮಾರ್ಟ್ಫೋನ್ ನ ಹಿಂಬದಿಯಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಕೂಡ ಇದೆ.

ಇಷ್ಟೆಲ್ಲಾ ಫೀಚರ್ ಹೊಂದಿರುವ ಗೂಗಲ್ ಪಿಕ್ಸೆಲ್ XL 'ಕ್ವೈಟ್ ಬ್ಲ್ಯಾಕ್','ವೆರಿ ಸಿಲ್ವರ್' ಮತ್ತು 'ರಿಯಲೀ ಬ್ಲೂ' ಎನ್ನುವ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ.

ಕಳೆದ ಡಿಸೆಂಬರ್ನಲ್ಲಿ ಫ್ಲಿಪ್ಕಾರ್ಟ್ ನಲ್ಲಿ ನಡೆದ 'ನ್ಯೂ ಪಿಂಚ್ ಡೇಸ್ ' ಸೇಲ್ನಲ್ಲಿ ಗೂಗಲ್ ಪಿಕ್ಸೆಲ್ 2 ರೂ 39,999ಕ್ಕೆ ಲಭ್ಯವಿತ್ತು. ಕ್ರೆಡಿಟ್/ಡೆಬಿಟ್ ಕಾರ್ಡ್ ಮೇಲೆ ಲಭ್ಯವಿದ್ದ ರಿಯಾಯಿತಿ ಮತ್ತು ಕ್ಯಾಶ್ಬ್ಯಾಕ್ ಆಫರ್ಗಳು ಕೇವಲ ಕೆಲದಿನಗಳಿಗಷ್ಟೇ ಸೀಮಿತವಾಗಿತ್ತು. ಈಗ ಗೂಗಲ್ ಪಿಕ್ಸೆಲ್ 2 ನ ಬೆಲೆ ರೂ 49,999 ಆಗಿದೆ.

Best Mobiles in India

Read more about:
English summary
Launched in October 2016, Google Pixel XL is still considered as one of the most bankable smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X