ಶೀಘ್ರದಲ್ಲೇ ಗೂಗಲ್‌ ಮೆಸೆಜ್‌ ನಲ್ಲಿ ಗ್ರೂಪ್ ಚಾಟ್‌ಗಳಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್!

|

ಈಗಂತೂ ಹಲವಾರು ರೀತಿಯ ಮೆಸೆಜಿಂಗ್‌ ಆಪ್‌ಗಳು ಟೆಕ್‌ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಕೆಲವು ಸೆಕ್ಯೂರ್‌ ಆಗಿದ್ದರೆ ಇನ್ನೂ ಕೆಲವು ಮಾಲ್‌ವೇರ್‌ ಮೂಲಕ ನಮ್ಮ ಖಾಸಗಿತನಕ್ಕೆ ಧಕ್ಕೆ ತರುತ್ತವೆ. ಈ ಕಾರಣಕ್ಕಾಗಿಯೇ ಪ್ರಮುಖ ಮೆಸೆಜಿಂಗ್‌ ಆಪ್‌ಗಳಾದ ವಾಟ್ಸಾಪ್‌, ಟೆಲಿಗ್ರಾಮ್‌ ಹಾಗೂ ಇನ್ನಿತರೆ ಆಪ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ಸ್ ಪಡೆದುಕೊಂಡಿವೆ. ಈ ಫೀಚರ್ಸ್‌ ಬಳಕೆದಾರರ ಖಾಸಗಿತನಕ್ಕೆ ಭದ್ರತೆ ಒದಗಿಸುವುದರ ಜೊತೆಗೆ ಹೆಚ್ಚಿನ ಅನುಕೂಲ ಬಳಕೆದಾರರಿಗೆ ಆಗಲಿದೆ. ಇದೀಗ ಗೂಗಲ್‌ ಮೆಸೆಜ್‌ ನ ಗ್ರೂಪ್‌ ಚಾಟ್‌ಗೆ ಈ ಫೀಚರ್ಸ್‌ ಸೇರ್ಪಡೆಯಾಗುತ್ತಿದೆ.

ಟೆಕ್ ದೈತ್ಯ

ಹೌದು, ಟೆಕ್ ದೈತ್ಯ ಗೂಗಲ್ ತನ್ನ ಗ್ರೂಪ್‌ ಚಾಟ್‌ಗಳಿಗೆ ಆರಂಭಿಕವಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಪರೀಕ್ಷಿಸಲು ಮುಂದಾಗಿದೆ. ಈ ವರ್ಷದ ಆರಂಭದಲ್ಲಿ ಮೆಸೆಜ್‌ ಆಪ್‌ನಲ್ಲಿ ಆರ್‌ಸಿಎಸ್ (ರಿಚ್ ಕಮ್ಯುನಿಕೇಶನ್ ಸೇವೆಗಳು) ಮೂಲಕ ಗ್ರೂಪ್ ಚಾಟ್‌ಗಳಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ಸ್‌ ಸೇರ್ಪಡೆ ಮಾಡಲಾಗುತ್ತದೆ ಎಂಬ ಬಗ್ಗೆ ಘೋಷಣೆ ಮಾಡಿತ್ತು. ಅದರಂತೆ ಪರೀಕ್ಷಾರ್ಥವಾಗಿ ಈ ಫೀಚರ್ಸ್‌ ಅನ್ನು ಗ್ರೂಪ್‌ ಚಾಟ್‌ಗಳಿಗೆ ಒದಗಿಸಲಾಗಿದೆ. ಈಗಾಗಲೇ ನಿಮ್ಮ ಸಂದೇಶಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಎಂಬ ಅಧಿಸೂಚನೆಯನ್ನು ಗ್ರೂಪ್‌ ಅಡ್ಮಿನ್‌ಗಳು ಪಡೆಯುತ್ತಿದ್ದಾರಂತೆ.

ರೆಡ್ಡಿಟರ್ಸ್‌

ಇನ್ನು ರೆಡ್ಡಿಟರ್ಸ್‌ನ (Redditors) ಈ ಸಂಬಂಧ ಮಾಹಿತಿ ಬಹಿರಂಗಪಡಿಸಿದ್ದು, ಗೂಗಲ್‌ ಮೆಸೆಜ್‌ ಗ್ರೂಪ್ ಚಾಟ್‌ಗಳಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಸಕ್ರಿಯಗೊಳಿಸಿದೆ ಹಾಗೆಯೇ ಆರ್‌ಸಿಎಸ್ ಗ್ರೂಪ್ ಚಾಟ್‌ಗಳನ್ನು ಸುರಕ್ಷಿತಗೊಳಿಸುತ್ತದೆ ಎಂದು ತಿಳಿಸಿದೆ. ಇದರೊಂದಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಕೆ ಮಾಡಲು ಗ್ರೂಪ್‌ ಚಾಟ್‌ನಲ್ಲಿ ಪ್ರತಿ ಬಳಕೆದಾರರು ಸೆಟ್ಟಿಂಗ್ ಅನ್ನು ಆನ್ ಮಾಡಬೇಕಿದೆ ಎಂದು ಹೇಳಿದೆ.

2020 ರಿಂದ ಈ ಸೇವೆ ಆರಂಭ

2020 ರಿಂದ ಈ ಸೇವೆ ಆರಂಭ

ಈ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ಸ್‌ 2020 ರ ಕೊನೆಯಲ್ಲಿ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೂ ಲಭ್ಯವಿತ್ತು. ಗೂಗಲ್‌ ಮೆಸೆಜ್‌ ರಿಚ್ ಕಮ್ಯುನಿಕೇಶನ್ ಸೇವೆಗಳ ಮೂಲಕ ಮೊದಲ ಬಾರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಪಡೆದಿತ್ತು. ಆದರೆ, ಆ ವೇಳೆ ಈ ಸೌಲಭ್ಯವನ್ನು ಗ್ರೂಪ್‌ ಚಾಟ್‌ಗಳಿಗೆ ನೀಡಿರಲಿಲ್ಲ. ಇದಕ್ಕೆ ಕಾರಣವನ್ನೂ ನೀಡಿದ್ದ ಗೂಗಲ್‌, ಆ ಸಮಯದಲ್ಲಿ ಸುರಕ್ಷತೆ ಅವಶ್ಯಕತೆ ಇರುವ ಮೆಸೆಜ್‌ಗಳು ಗ್ರೂಪ್‌ ಚಾಟ್‌ನಲ್ಲಿ ನಡೆಯುತ್ತಿರಲಿಲ್ಲ, ಒಬ್ಬರಿಗೊಬ್ಬರು ಪರಸ್ಪರ ಮೆಸೆಜ್‌ ಮಾಡಿಕೊಳ್ಳುತ್ತಿದ್ದರು, ಅದಕ್ಕಾಗಿ ಗ್ರೂಪ್‌ ಮೆಸೆಜ್‌ಗಳಿಗೆ ಈ ಫೀಚರ್ಸ್‌ ನೀಡಿರಲಿಲ್ಲ ಎಂದು ಹೇಳಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಗೂಗಲ್‌ ಮೆಸೆಜ್‌ ಈ ಹಿಂದೆ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳ ನಡುವೆ ಭಾರೀ ಭಿನ್ನತೆಯನ್ನು ಪಡೆದುಕೊಂಡಿತ್ತು. ಆದರೆ, ಇತ್ತೀಚೆಗೆ ಆದ ಅಪ್‌ಗ್ರೇಡ್‌ನಿಂದಾಗಿ ಈ ಸಮಸ್ಯೆ ದೂರವಾಗಿದೆ. ಐಒಎಸ್ ಎಮೋಜಿ ಪ್ರತಿಕ್ರಿಯೆಗಳನ್ನು ಒಳಗೊಂಡಂತೆ ಈ ಅಪ್‌ಗ್ರೇಡ್ ಪ್ರಕ್ರಿಯೆಯನ್ನು ಪರಿಚಯಿಸಲಾಗಿತ್ತು. ಈ ಮೂಲಕ ಟೆಕ್ ದೈತ್ಯ ಗೂಗಲ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರ ನಡುವಿನ ದೊಡ್ಡ ಅಂತರವನ್ನು ಮುಚ್ಚಿದೆ. ಈ ಫೀಚರ್ಸ್‌ನಲ್ಲಿ ಗೂಗಲ್‌ ಮೆಸೆಜ್‌ ಆಪ್‌ ಐಮೆಸೆಜ್‌ ಪ್ರತಿಕ್ರಿಯೆಗಳನ್ನು ವೀಕ್ಷಿಸುವ ಹಾಗೂ ಐಫೋನ್‌ನಿಂದ ಕಳುಹಿಸಲಾದ ಮೆಸೆಜ್‌ಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಪಡೆದುಕೊಂಡಿವೆ.

ಯೂಟ್ಯೂಬ್‌

ಈ ಹಿಂದೆ ಯೂಟ್ಯೂಬ್‌ ಅಥವಾ ಇನ್ನಿತರೆ ಲಿಂಕ್‌ಗಳನ್ನು ಗೂಗಲ್‌ ಮೆಸೆಜ್‌ನಲ್ಲಿ ಶೇರ್‌ ಮಾಡಿದರೆ ಆ ಲಿಂಕ್‌ ಕ್ಲಿಕ್‌ ಮಾಡಿ ಅದೇ ಸೈಟ್‌ಗೆ ಭೇಟಿ ನೀಡಿ ವಿಡಿಯೋ ವೀಕ್ಷಣೆ ಮಾಡಬೇಕಿತ್ತು. ಆದರೆ. ಇತ್ತೀಚಿನ ನವೀಕರಣವು ಯೂಟ್ಯೂಬ್‌ ವಿಡಿಯೋಗಳು ಗೂಗಲ್‌ ಮೆಸೆಜ್‌ ಅಪ್‌ನಲ್ಲೇ ಪ್ಲೇ ಆಗುವಂತೆ ಮಾಡಿ ತುಂಬಾ ಆಕರ್ಷಕ ಫೀಚರ್ಸ್‌ಗಳಲ್ಲಿ ಒಂದಾಗಿದೆ.

ಲೋಗೋ ಬದಲಾವಣೆ

ಲೋಗೋ ಬದಲಾವಣೆ

ವಾಟ್ಸಾಪ್‌, ಮೆಸೆಂಜರ್‌, ಟೆಲಿಗ್ರಾಮ್ ನಂತರ ಇನ್ನಿತರೆ ಪ್ರಮುಖ ಮೆಸೆಜಿಂಗ್‌ ಆಪ್‌ಗಳಿಗೆ ಪೈಪೋಟಿ ನೀಡಲು ಮುಂದಾಗಿರುವ ಗೂಗಲ್‌ ತನ್ನ ಗೂಗಲ್ ಮೆಸೆಜ್‌ಗೆ ಹೆಚ್ಚಿನ ಸಾಮರ್ಥ್ಯ ನೀಡುವುದರ ಜೊತೆಗೆ ಲೋಗೋವನ್ನು ಸಹ ಬದಲಾಯಿಸಿದೆ. ಈ ಲೋಗೋದ ಬಣ್ಣದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲವಾದರೂ ಶೈಲಿಯಲ್ಲಿ ಹೊಸ ರೂಪ ಪಡೆದುಕೊಂಡಿದೆ.

Best Mobiles in India

English summary
Major messaging apps like WhatsApp, Telegram and others have got end-to-end encryption features. These features will also will be applicable to the group chat of Google Message from soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X