Subscribe to Gizbot

ಸರ್ಚ್ ದೈತ್ಯ ಗೂಗಲ್‌ ರೂಪಿಸಿರುವ ಹೊಸ ಮಹತ್ವದ ಯೋಜನೆ ಏನಾಗಿರಬಹುದು?

By: Shwetha PS

ಗೂಗಲ್ ಶೀಘ್ರದಲ್ಲೇ ತನ್ನ ವಿನ್ಯಾಸದಲ್ಲಿ ಮಾರ್ಪಾಡುಗಳನ್ನು ಮಾಡಲಿದ್ದು ಬಳಕೆದಾರರ ಎದುರಿಗೆ ಹೋಸ ರೂಪದಲ್ಲಿ ಬರಲಿದೆ. ಅಷ್ಟೇ ಅಲ್ಲದೆ ಬಳಕೆದಾರರ ಸುರಕ್ಷತೆಗೆ ಗೂಗಲ್ ಮಹತ್ವವನ್ನು ನೀಡಿದ್ದು ಇನ್ನಷ್ಟು ಆಧುನಿಕ ನೋಟದ ಮೂಲಕ ಬಳಕೆದಾರರನ್ನು ತಲುಪಲಿದೆ. ಗೂಗಲ್ ತನ್ನ ವಿನ್ಯಾಸದಲ್ಲಿ ತನ್ನ ಉತ್ಪನ್ನಗಳಾದ ಮ್ಯಾಪ್ಸ್, ಯೂಟ್ಯೂಬ್, ಸರ್ಚ್ ಮುಂತಾದವುಗಳನ್ನು ಅಪ್‌ ಟು ಡೇಟ್ ಮಾಹಿತಿಯನ್ನು ನೀಡಲಿದೆ.

ಸರ್ಚ್ ದೈತ್ಯ ಗೂಗಲ್‌ ರೂಪಿಸಿರುವ ಹೊಸ ಮಹತ್ವದ ಯೋಜನೆ ಏನಾಗಿರಬಹುದು?

ಗೂಗಲ್ ಬ್ಲಾಗ್ ಪೋಸ್ಟ್ ಒಂದನ್ನು ಬಿಡುಗಡೆ ಮಾಡಿದ್ದು 2009 ರಲ್ಲಿ ಲಾಂಚ್ ಆದ ಬಳಕೆದಾರ ಡ್ಯಾಶ್‌ಬೋರ್ಡ್ ಸಂಪೂರ್ಣವಾಗಿ ಮರುವಿನ್ಯಾಸವನ್ನು ಪಡೆದುಕೊಳ್ಳಲಿದೆ. ಈ ಡ್ಯಾಶ್‌ಬೋರ್ಡ್‌ನಲ್ಲಿ ಟೂಲ್ಸ್‌ಗಳು ಇರಲಿದ್ದು ಗೂಗಲ್ ಖಾತೆಗಳು ಮತ್ತು ಗೂಗಲ್‌ನ ಬೇರೆ ಬೇರೆ ಉತ್ಪನ್ನಗಳು ಹಾಗೂ ಟೂಲ್‌ಗಳಲ್ಲಿ ಸಂಯೋಜಿತವಾಗಿರುವ ವಿವರಗಳನ್ನು ಎಡಿಟ್ ಮಾಡುವ ಸಾಮರ್ಥ್ಯವನ್ನು ಒದಗಿಸಲಿದೆ.

ಆಕ್ಟಿವಿಟಿ ಟೂಲ್ ಅನ್ನು ಇನ್ನೂ ಕಂಡುಕೊಂಡಿಲ್ಲವೆಂದಾದಲ್ಲಿ, ಡಿವರ್ಸಿಫೈಡ್ ಮ್ಯಾನರ್‌ನಲ್ಲಿ ಗೂಗಲ್ ಟೂಲ್ಸ್ ಮತ್ತು ಉತ್ಪನ್ನಗಳ ಚಟುವಟಿಕೆಗಳನ್ನು ನೋಡಬಹುದಾಗಿದೆ. ಇದು ಸರ್ಚ್ ಹಿಸ್ಟ್ರಿಯನ್ನು ಅಳಿಸಲು ನೆರವು ನೀಡಲಿದ್ದು ನೀವು ಬಳಸಿದ ಗೂಗಲ್ ಉತ್ಪನ್ನಗಳಲ್ಲಿ ಬೇರೆ ಬೇರೆ ಕಾರ್ಯನಿರ್ವಹಣೆಯನ್ನು ಮಾಡಬಹುದಾಗಿದೆ.

ಸರ್ಚ್ ದೈತ್ಯ ಗೂಗಲ್‌ ರೂಪಿಸಿರುವ ಹೊಸ ಮಹತ್ವದ ಯೋಜನೆ ಏನಾಗಿರಬಹುದು?

ಬ್ಲಾಗ್‌ನಲ್ಲಿ ಹೇಳಿಕೊಂಡಿರುವಂತೆ ಮೈ ಅಕೌಂಟ್ ಮತ್ತು ಮೈ ಆಕ್ಟಿವಿಟಿ ಹೊಸದಾಗಿ ರೂಪಿತಗೊಂಡಿದ್ದು, ಗೂಗಲ್‌ನ ಇತರ ಪ್ರೈವಸಿ ಕಂಟ್ರೋಲ್‌ಗಳಿಗೆ ಉತ್ತಮ ಇಂಟಿಗ್ರೇಟ್ ಆಗಿರುವ ಡ್ಯಾಶ್‌ಬೋರ್ಡ್ ಅವಶ್ಯಕತೆ ಇತ್ತು.

ಚೀನಾ ಬಜೆಟ್ ಫೋನ್ ಬಿಡಿ: ರೂ.5000ಕ್ಕೆ 4000mAh ಬ್ಯಾಟರಿಯ ನೋಕಿಯಾ 2 ಬರುತ್ತಿದೆ ನೋಡಿ..!

ಇದರಿಂದ ನಿಮ್ಮ ಡೇಟಾ ಕುರಿತು ಬಳಕೆದಾರರು ಅರ್ಥಪೂರ್ಣ ತೀರ್ಮಾನಗಳನ್ನು ಕೈಗೊಳ್ಳಬಹುದಾಗಿದೆ. ಟಚ್‌ಸ್ಕ್ರೀನ್‌ಗಳಲ್ಲಿ ಬಳಕೆಯನ್ನು ಸುಧಾರಿಸಲಿದ್ದು ಯಾವುದೇ ಸಾಧನದಲ್ಲಿ ಡ್ಯಾಶ್‌ಬೋರ್ಡ್ ಚೆನ್ನಾಗಿ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿದೆ. ಬಳಕೆದಾರರು ಡೇಟಾವನ್ನು ಇನ್ನಷ್ಟು ವೇಗವಾಗಿ ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಬಳಕೆದಾರರು ಸುರಕ್ಷತೆ ಮತ್ತು ಗೌಪ್ಯತೆ ಡ್ಯಾಶ್‌ಬೋರ್ಡ್‌ಗಳನ್ನು ಬಳಸುವುದಿಲ್ಲ. ಅದಾಗ್ಯೂ ಗೂಗಲ್ ಸಂಪೂರ್ಣ ಬದಲಾವಣೆಯನ್ನು ಮಾಡಲಿದ್ದು ಬಳಕೆದಾರರಿಗೆ ಮುಕ್ತವಾಗಿ ತೆರೆದುಕೊಳ್ಳಲಿದೆ.

Read more about:
English summary
Google has announced that it plans to redesign its security and privacy dashboard to make it more accessible to users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot