ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಕರ್ಷಕ ಅಪ್‌ಡೇಟ್‌ : ಏನದು ಗೊತ್ತಾ?

|

ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಗೂಗಲ್‌ ಹಲವಾರು ರೀತಿಯಲ್ಲಿ ಸೇವೆ ನೀಡುತ್ತಿದೆ. ಅದರಲ್ಲೂ ಆಂಡ್ರಾಯ್ಡ್ ಡಿವೈಸ್‌ಗಳಿಗಾಗಿ ಗೂಗಲ್‌ ಪ್ಲೇ ಸ್ಟೋರ್‌ ಅಧೀಕೃತ ಆನ್‌ಲೈನ್ ಸ್ಟೋರ್ ಆಗಿದ್ದು, ಸ್ಮಾರ್ಟ್‌ಫೋನ್‌ನಲ್ಲಿ ಅಗತ್ಯವಾದ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಆಗಾಗ್ಗೆ ಗೂಗಲ್‌ ತನ್ನ ಗೂಗಲ್ ಆಪ್‌ ಸ್ಟೋರ್‌ನಲ್ಲಿ ನವೀಕರಣ ಮಾಡುತ್ತಾ ಬರುತ್ತಿದ್ದು, ಇದರ ಭಾಗವಾಗಿ ಪ್ಲೇ ಸ್ಟೋರ್‌ಗೆ ಹೊಸ ನೋಟ ನೀಡಲು ಮುಂದಾಗಿದೆ.

ಗೂಗಲ್‌

ಹೌದು, ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡುವುದಲ್ಲದೇ ಇನ್ನಷ್ಟು ಬಳಕೆದಾರರನ್ನು ಸೆಳೆಯುವ ಉದ್ದೇಶದಿಂದ ಗೂಗಲ್‌ ತನ್ನ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹಲವಾರು ಆಯ್ಕೆಗಳನ್ನು ನೀಡಿದ್ದು, ವಿನ್ಯಾಸದಲ್ಲೂ ಜನಪ್ರಿಯತೆ ಗಳಿಸಿಕೊಂಡಿದೆ. ಆದರೂ ಗ್ರಾಹಕರಿಗೆ ಇನ್ನಷ್ಟು ಹೊಸತನ ನೀಡುವ ಹಿನ್ನೆಲೆ ಇಂದಿಗೂ ಹಲವಾರು ರೀತಿಯಲ್ಲಿ ಪ್ರಯೋಗಶೀಲವಾಗಿದೆ.

ಬಟನ್ ಶೈಲಿ ಬದಲಾವಣೆ

ಬಟನ್ ಶೈಲಿ ಬದಲಾವಣೆ

ಇತ್ತೀಚೆಗೆ ಅಧಿಕೃತ ಆಂಡ್ರಾಯ್ಡ್‌ ಅಪ್ಲಿಕೇಶನ್ ಸ್ಟೋರ್ ಆಗಿರುವ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಕೆಲವು ಹೊಸ ಫೀಚರ್ಸ್‌ಗಳು ಕಂಡುಬಂದಿವೆ. ಇದರ ಹೊರತಾಗಿಯೂ ಈಗ ಮತ್ತೆ ಆಪ್‌ನಲ್ಲಿ ಕಂಡುಬರುವ ಕೆಲವು ಬಟನ್‌ಗಳ ಶೈಲಿಯನ್ನು ಬದಲಾಯಿಸಲು ಗೂಗಲ್‌ ಮುಂದಾಗಿದೆ. ಈ ಬಗ್ಗೆ 9to5ಗೂಗಲ್‌ ವರದಿ ಮಾಡಿದ್ದು, ಗೂಗಲ್‌ ಪ್ಲೇ ಸ್ಟೋರ್‌ಗಾಗಿ ವಿಶಾಲವಾದ ಹಾಗೂ ದೊಡ್ಡದಾದ ಅಪ್‌ಡೇಟ್‌ ಬಟನ್ ಅನ್ನು ಪರಿಚಯಿಸಲು ಮುಂದಾಗಿದೆ ಎಂದು ತಿಳಿಸಿದೆ.

 ನಿರಂತರ ಅಪ್‌ಡೇಟ್‌

ನಿರಂತರ ಅಪ್‌ಡೇಟ್‌

ಈ ವಿಶೇಷ ಬದಲಾವಣೆಗಳು ಗೂಗಲ್‌ನ ಮೆಟೀರಿಯಲ್ ಯು ಥೀಮ್‌ನ ಭಾಗವಾಗಿ ಬರುತ್ತಿದೆ ಎಂದು ತಿಳಿಸಲಾಗಿದೆ. ಇನ್ನು ಗೂಗಲ್‌ ಆರಂಭದಲ್ಲಿ ಪ್ಲೇ ಸ್ಟೋರ್ ಆಪ್‌ನ ನೋಟವನ್ನು ಬದಲಾವಣೆ ಮಾಡಿತ್ತು. ತದನಂತರ ಅದನ್ನು ಆಧುನಿಕ ದುಂಡಾದ ಬಟನ್‌ಗಳೊಂದಿಗೆ ಅಪ್‌ಡೇಟ್‌ ಮಾಡಿತ್ತು. ಇದೀಗ ದೊಡ್ಡ ಅಪ್‌ಡೇಟ್ ಬಟನ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಕಂಡುಬರಲಿದೆ ಎಂದು ತಿಳಿದುಬಂದಿದೆ.

ಸಮಯ ಬೇಕಿದೆ!

ಸಮಯ ಬೇಕಿದೆ!

ಇದೊಂದು ಸರ್ವರ್-ಸೈಡ್ ಅಪ್‌ಡೇಟ್ ಆಗಿದ್ದು, ಎಲ್ಲಾ ಬಳಕೆದಾರರಿಗೂ ಈ ನವೀಕರಣಗೊಂಡ ಬಟನ್‌ ಇರುವ ಅಪ್‌ ಕಾಣಿಸಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಇನ್ನು ಈ ಬಟನ್‌ 'ಮೈ ಆಪ್‌' ಹಾಗೂ 'ಗೇಮ್' ವಿಭಾಗದ ಅಡಿಯಲ್ಲಿ ಸ್ವಾಗತಾರ್ಹ ಬದಲಾವಣೆಯಾಗಿ ಕಾಣಿಸಿಕೊಳ್ಳಲಿದೆ. ನೀವು ಆಪ್‌ಗಳನ್ನು ಹಸ್ತಚಾಲಿತವಾಗಿ ಅಪ್‌ಡೇಟ್‌ ಮಾಡಲು ಇಷ್ಟಪಟ್ಟರೆ ದೊಡ್ಡ ಬಟನ್ ನಿಮಗೆ ವಿಶೇ‍ಷ ಅನುಭವ ನೀಡಲಿದೆ.

ಇತರೆ ಅಪ್‌ಡೇಟ್‌

ಇತರೆ ಅಪ್‌ಡೇಟ್‌

ಇದರ ಜೊತೆಗೆ ಗೂಗಲ್ ಟ್ಯಾಬ್ಲೆಟ್‌ಗಳು ಮತ್ತು ಫೋಲ್ಡಬಲ್‌ ಡಿವೈಸ್‌ಗಳಿಗಾಗಿ ಪ್ಲೇ ಸ್ಟೋರ್‌ ಅನ್ನು ಮರು ವಿನ್ಯಾಸ ಮಾಡುವ ಕಾರ್ಯದಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಸರ್ಚ್‌ ಬಟನ್ ಸಹ ಕೆಲವು ಬದಲಾವಣೆಗಳನ್ನು ಕಂಡುಕೊಳ್ಳಲಿದೆಯಂತೆ. ಮೇ ತಿಂಗಳಲ್ಲಿ ಗೂಗಲ್‌ ನವೀಕರಿಸಿದ ಈ ವಿನ್ಯಾಸವನ್ನು I/O ನಲ್ಲಿ ಪೂರ್ವ ವೀಕ್ಷಣೆ ಮಾಡಿದ್ದು, ಮುಂದಿನ ವರ್ಷದಿಂದ ಎಲ್ಲಾ ಬಳಕೆದಾರರಿಗೂ ಸಿಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಗೂಗಲ್‌ ಬಳಕೆದಾರ

ಗೂಗಲ್‌ ಬಳಕೆದಾರರ ಭದ್ರತೆಯನ್ನು ಪ್ರಮುಖವಾಗಿಸಿಕೊಂಡಿದ್ದು, ತನ್ನ ಎಲ್ಲಾ ಅಪ್‌ಗಳಲ್ಲೂ ವಿಶೇಷ ರೀತಿಯ ಅಪ್‌ಡೇಟ್‌ಗಳನ್ನು ನೀಡುತ್ತಾ ಬರುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಗೂಗಲ್‌ ತನ್ನ ಗೂಗಲ್ ಪ್ಲೇ ಸ್ಟೋರ್‌ ಆಪ್‌ನಿಂದ 16 ಆಪ್‌ಗಳನ್ನು ರಿಮೂವ್‌ ಮಾಡಿತ್ತು. ಈ ಎಲ್ಲಾ ಆಪ್‌ಗಳು ಮಾಲ್‌ವೇರ್‌ ಮೂಲಕ ಬಳಕೆದಾರರ ಸ್ಮಾರ್ಟ್‌ಫೋನ್‌ ಅನ್ನು ಆಟೋಮ್ಯಾಟಿಕ್‌ ಆಗಿ ನಿಯಂತ್ರಣಕ್ಕೆ ಒಳಪಡಿಸುತ್ತಿದ್ದವು. ಈ ಆಪ್‌ಗಳು ಬೇಕಾದ ಸೈಟ್‌ಗಳನ್ನು ಓಪನ್‌ ಮಾಡಿ ರಚನೆಕಾರರಿಗೆ ಹೆಚ್ಚಿನ ಹಣ ಗಳಿಸಿಕೊಡುತ್ತಿದ್ದವು. ಇದರ ಬಗ್ಗೆ ಅರಿತ mcafee ಗೂಗಲ್‌ ಗೆ ಈ ಬಗ್ಗೆ ಮಾಹಿತಿ ನೀಡಿತ್ತು. ಅದರಂತೆ ಗೂಗಲ್‌ 16 ಮಾಲ್‌ವೇರ್ ಇರುವ ಆಪ್‌ಗಳನ್ನು ತನ್ನ ಲಿಸ್ಟ್‌ನಿಂದ ರಿಮೂವ್‌ ಮಾಡಿದೆ.

Best Mobiles in India

English summary
Google is serving in the smartphone segment in several ways. Meanwhile, Google is now offering a big update button on the Play Store.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X