Subscribe to Gizbot

ಗೂಗಲ್ ತರುತ್ತಿದೆ ಮೋಶನ್ ಸ್ಟಿಲ್ಸ್ ಆಂಡ್ರಾಯ್ಡ್ ಗೆ.

By: Tejaswini P G

ಗೂಗಲ್ iOS ಗೆ ಮೋಶನ್ ಸ್ಟಿಲ್ಸ್ ಫೀಚರ್ ತಂದ ಒಂದು ವರ್ಷದ ನಂತರ ಆಂಡ್ರಾಯ್ಡ್ ಗೂ ಈ ಫೀಚರ್ ತರುತ್ತಿದೆ. ಆದರೆ ಆಂಡ್ರಾಯ್ಡ್ ನ ಮೋಶನ್ ಸ್ಟಿಲ್ಸ್ ಫೀಚರ್ iOS ಗಿಂತ ವಿಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. iOS ನಲ್ಲಿ ಮೋಶನ್ ಸ್ಟಿಲ್ಸ್ ಸೆರೆಹಿಡಿದ ಲೈವ್ ಫೋಟೋಗಳ ಶೇರ್ ಮಾಡಬಹುದಾದ GIF ಗಳನ್ನು ತಯಾರಿಸಬಹುದಾಗಿದೆ. ಆದರೆ ಆಂಡ್ರಾಯ್ಡ್ ನಲ್ಲಿ ಇದು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.

ಗೂಗಲ್ ತರುತ್ತಿದೆ ಮೋಶನ್ ಸ್ಟಿಲ್ಸ್ ಆಂಡ್ರಾಯ್ಡ್ ಗೆ.

ಆಂಡ್ರಾಯ್ಡ್ ನಲ್ಲಿ iOS ನಂತೆ ಲೈವ್ ಫೋಟೋಗಳು ಇರದ ಕಾರಣ, ಮೋಶನ್ ಸ್ಟಿಲ್ಸ್ ಆಂಡ್ರಾಯ್ಡ್ನಲ್ಲಿ ಫೋಟೋ ಸೆರೆಹಿಡಿದು ಅದನ್ನು ಬಳಸಿ GIF ತಯಾರಿಸುತ್ತದೆ.

ಆಂಡ್ರಾಯ್ಡ್ ನಲ್ಲಿ ಮೋಶನ್ ಸ್ಟಿಲ್ಸ್ ಆಪ್ ಎರಡು ರೀತಿಯ ಶಾಟ್ ಗಳನ್ನು ಸೆರೆಹಿಡಿಯಲು ಅವಕಾಶ ಮಾಡಿಕೊಡುತ್ತದೆ. ಮೊದಲನೆಯ ಶಾಟ್ ಗೆ 'ಮೋಶನ್ ಸ್ಟಿಲ್ಸ್' ಎನ್ನುತ್ತಾರೆ. ಇದರಲ್ಲಿ ಆಪ್ GIF ಮಾದರಿಯ ವೀಡಿಯೋ ಒಂದನ್ನು ತಯಾರಿಸುತ್ತದೆ. ಇದು 3 ಸೆಕೆಂಡ್ಗಳ ಲೂಪ್ ನಲ್ಲಿ ಪ್ಲೇ ಆಗುತ್ತಿರುತ್ತದೆ. ಇಲ್ಲಿ ಮೋಶನ್ ಸ್ಟಿಲ್ಸ್ ವೀಡಿಯೋವನ್ನೇ ಸೆರೆಹಿಡಿಯುತ್ತದೆ ಹೊರತು ಫೋಟೋವನ್ನಲ್ಲ. ಹಾಗಾಗಿ ಇದರ ಹೆಸರು ಗೊಂದಲವನ್ನುಂಟು ಮಾಡುತ್ತದೆ.

'ಫಾಸ್ಟ್ ಫಾರ್ವರ್ಡ್' ಎರಡನೇ ರೀತಿಯ ಶಾಟ್ ಆಗಿದೆ. ಇದು ಇನ್ಸ್ಟಾಗ್ರಾಮ್ ನ ಹೈಪರ್ ಲ್ಯಾಪ್ಸ್ ಅನ್ನು ಹೋಲುತ್ತದೆ ಹಾಗೂ ಅದರಿಂದ ಉತ್ತಮವಾಗಿಯೇ ಇದೆ. ಇದು ವೀಡಿಯೋವನ್ನು ಸೆರೆ ಹಿಡಿದು ಅದರ ಗುಣಮಟ್ಟವನ್ನು ಹೆಚ್ಚಿಸುತ್ತದೆ. ನಂತರ ವೀಡಿಯೋದ ವೇಗವನ್ನು ಅದರ ಮೂಲ ವೇಗಕ್ಕಿಂತ 2ರಿಂದ 8 ಪಟ್ಟಷ್ಟು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

ಒಮ್ಮೆ ವೀಡಿಯೋವನ್ನು ಸೆರೆಹಿಡಿದು ನಿಮ್ಮ ಸ್ಮಾರ್ಟ್ಫೋನಿನಲ್ಲಿ ಸೇವ್ ಮಾಡಿದಿರೆಂದರೆ, ನಂತರ ಯಾವಾಗಬೇಕಾದರೂ ನೀವು ಅದರ ಹೈಪರ್ ಲ್ಯಾಪ್ಸ್ ವೇಗವನ್ನು ನಿಮಿಚ್ಛೆಯಂತೆ ಬದಲಿಸಬಹುದು.

iOS ನ 'ಮೋಶನ್ ಸ್ಟಿಲ್ಸ್' ನಲ್ಲಿ ಆಂಡ್ರಾಯ್ಡ್ ಆಪ್ ಗಿಂತ ಅಧಿಕ ಫೀಚರ್ಗಳಿವೆ. iOS ನ 'ಮೋಶನ್ ಸ್ಟಿಲ್ಸ್'ನಲ್ಲಿರುವ ಸಿನೆಮಾಗ್ರಾಫ್ ಮಾಡುವುದು,ಚಲಿಸುವ ಟೆಕ್ಸ್ಟ್ ಹಾಕುವುದು ಮುಂತಾದ ಫೀಚರ್ಗಳು ಇನ್ನೂ ಇದರ ಆಂಡ್ರಾಯ್ಡ್ ಆವೃತ್ತಿಯಲ್ಲಿ ಲಭ್ಯವಿಲ್ಲ.

Read more about:
English summary
Motion Stills feature has finally been released for Android devices a year after it was introduced to iOS and the app lacks behind in features.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot