Subscribe to Gizbot

ಗೂಗಲ್ ವಸ್ತುಗಳನ್ನು ಮಾರಾಟ ಮಾಡದೆ ವೈರತ್ವ ಕಟ್ಟಿಕೊಂಡ ಅಮೆಜಾನ್

Written By: Lekhaka

ಅಮೆಜಾನ್ ಬಿಡುಗಡೆ ಮಾಡಿರುವ ಎರಡು ಎಕ್ ಕ್ಲೂಸಿವ್ ಡಿವೈಸ್ ಗಳಿಂದ ವಿಡಿಯೋ ಸ್ಟ್ರಿಮಿಂಗ್ ಅಪ್ಲೀಕೇಷನ್ ಯೂಟ್ಯೂಬ್ ಅನ್ನು ಗೂಗಲ್ ತೆಗೆದು ಹಾಕಲು ಮುಂದಾಗಿದೆ. ಆನ್ ಲೈನ್ ರಿಟೆಲ್ ಅಮೆಜಾನ್ ಗೂಗಲ್ ಹಾರ್ಡ್ ವೇರ್ ಗಳನ್ನು ಮಾರಾಟ ಮಾಡದೆ ಇರುವುದೇ ಈ ಕ್ರಮಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಗೂಗಲ್ ವಸ್ತುಗಳನ್ನು ಮಾರಾಟ ಮಾಡದೆ ವೈರತ್ವ ಕಟ್ಟಿಕೊಂಡ ಅಮೆಜಾನ್

ಈ ಬಗ್ಗೆ ಮಾಹಿತಿಯನ್ನು ನೀಡಿರುವ ಗೂಗಲ್, ಅಮೆಜಾನ್ ಗೂಗಲ್ ಪ್ರಾಡೆಕ್ಟ್ ಗಳನ್ನು ಮಾರಾಟ ಮಾಡುತ್ತಿಲ್ಲ. ಕ್ರೋಮ್ ಕಾಸ್ಟ್ ಮತ್ತು ಗೂಗಲ್ ಹೋಮ್ ಗಳನ್ನು ಮಾರುತ್ತಿಲ್ಲ. ಅಲ್ಲದೇ ಗೂಗಲ್ ಕಾಸ್ಟ್ ಬಳಕೆದಾರರಿಗೆ ಅಮೆಜಾನ್ ಪ್ರೈಮ್ ವಿಡಿಯೋವನ್ನು ನೋಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿದೆ.

ಇದಲ್ಲದೇ ಗೂಗಲ್ ಸಹೋದರ ಕಂಪನಿಯ ವಸ್ತುಗಳನ್ನು ಮಾರಾಟ ಮಾಡುವುದನ್ನು ಅಮೆಜಾನ್ ನಿಲ್ಲಿಸಿದ್ದು ಈ ಹಿನ್ನಲೆಯಲ್ಲಿ ಗೂಗಲ್ ಅಮೆಜಾನ್ ಡಿವೈಸ್ ಗಳಲ್ಲಿ ಯೂಟ್ಯೂಬ್ ಪ್ಲೇ ಆಗುವುದನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಅಮೆಜಾನ್ ಇಕೋ ಶೋ ಮತ್ತು ಫೈರ್ ಟಿವಿಯಲ್ಲಿ ಯೂಟ್ಯೂಬ್ ಕಾರ್ಯನಿರ್ವಹಿಸುತ್ತಿಲ್ಲ ಎನ್ನಲಾಗಿದೆ.

ಈ ಕುರಿತು ಸ್ಪಷ್ಟನೆಯನ್ನು ನೀಡಿರುವ ಅಮೆಜಾನ್, ಗೂಗಲ್ ನೊಂದಿಗೆ ಮಾತುಕತೆಯನ್ನು ನಡೆಸುವ ಮೂಲಕ ಸಮಸ್ಯೆಯನ್ನು ಬಗೆ ಹರಿಸುವುದಾಗಿ ತಿಳಿಸಿದ್ದು, ಶೀಘ್ರವೇ ಗೂಗಲ್ ಯೂಟ್ಯೂಬ್ ಅನ್ನು ತನ್ನ ಡಿವೈಸ್ ಗಳನ್ನು ಪ್ರಸಾರವಾಗುವಂತೆ ಮಾಡುವುದಾಗಿ ತಿಳಿಸಿದೆ.

ಡ್ಯುಯಲ್ ಕ್ಯಾಮೆರಾ ಟ್ರೆಂಡ್ ಮುಗಿತು: ಶೀಘ್ರವೇ ತ್ರಿಪಲ್ ಲೈನ್ಸ್‌ ಕ್ಯಾಮೆರಾ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ...!

ಹಲವು ದಿನಗಳಿಂದಲೂ ಗೂಗಲ್ ಮತ್ತು ಅಮೆಜಾನ್ ನಡುವೆ ತಿಕ್ಕಾಟ ಜೋರಾಗಿ ನಡೆಯುತ್ತಿದೆ. ಈ ಹಿಂದೆಯೇ ಕ್ರೋಮ್ ಕಾಸ್ಟ್ ಮತ್ತು ಆಪಲ್ ಟಿವಿಯನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದೆ. ಇದರಿಂದ ತನ್ನ ಪ್ರೈಮ್ ವಿಡಿಯೋಗೆ ಹೊಡೆತ ಬಿಳುತ್ತಿದೆ ಎಂದು ವಾದಿಸುತ್ತಿದೆ. ಇದರಿಂದಾಗಿ ಗೂಗಲ್ ನೊಂದಿಗೆ ಅಮೆಜಾನ್ ವೈರತ್ವವನ್ನು ಕಟ್ಟಿಕೊಂಡಿದೆ.

English summary
As of today, though, Google is putting its foot down and officially pulling support for YouTube
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot