Just In
- 9 hrs ago
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- 10 hrs ago
ಇದೇ ತಿಂಗಳು 5G ಸೇವೆ ಬರಲಿದೆ ಅಂತಾ ನಿರೀಕ್ಷಿಸುತ್ತಿದ್ದೀರಾ?..ಈ ಸುದ್ದಿಯನ್ನೊಮ್ಮೆ ಗಮನಿಸಿ!
- 11 hrs ago
ಅತೀ ಕಡಿಮೆ ಬೆಲೆಗೆ ಲಗ್ಗೆ ಇಟ್ಟ 'ಇನ್ಫಿನಿಕ್ಸ್ ಸ್ಮಾರ್ಟ್ 6 HD' ಫೋನ್!
- 12 hrs ago
ಸ್ಮಾರ್ಟ್ವಾಚ್ ಇಲ್ಲವೇ ಸ್ಮಾರ್ಟ್ಬ್ಯಾಂಡ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
Don't Miss
- News
ಸಿದ್ದರಾಮೋತ್ಸವದಿಂದ ಬಿಜೆಪಿಯಲ್ಲ ಕಾಂಗ್ರೆಸ್ನಲ್ಲೇ ನಡುಕ!
- Movies
Exclusive: ದರ್ಶನ್ ಬೆದರಿಕೆ ಹಾಕಿದ್ದು ಹೇಗೆ? ಏಕೆ? ವಿವರಿಸಿದ ನಿರ್ಮಾಪಕ ಭರತ್
- Sports
Asia Cup 2022: ಏಷ್ಯಾಕಪ್ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ
- Automobiles
ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್ಫೈಟರ್ ಬೈಕ್ ಬಿಡುಗಡೆ
- Lifestyle
Raksha Bandhan Horoscope 2022: ರಕ್ಷಾ ಬಂಧನದ ದಿನ ಯಾವ ರಾಶಿಗೆ ಅದೃಷ್ಟವಿದೆ, ಯಾರೆಲ್ಲಾ ಎಚ್ಚರಿಕೆಯಿಂದಿರಬೇಕು?
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಾಲ್‌ವೇರ್ ಹರಡುತ್ತಿದ್ದ ಆಪ್‌ಗಳಿಗೆ ಗೇಟ್‌ಪಾಸ್ ನೀಡಿದ ಗೂಗಲ್ ಪ್ಲೇ ಸ್ಟೋರ್!
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನೀವು ಬಯಸುವ ಎಲ್ಲಾ ಮಾದರಿಯ ಅಪ್ಲಿಕೇಶನ್‌ಗಳು ಲಭ್ಯವಿದೆ. ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ನೆಚ್ಚಿನ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಇನ್ನು ಬಳಕೆದಾರರ ಸುರಕ್ಷತೆಗಾಗಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಅನುಮಾನಸ್ಪಾದವಾಗಿ ಕಾಣುವ ಅಪ್ಲಿಕೇಶನ್‌ಗಳನ್ನು ರಿಮೂವ್ ಮಾಡುತ್ತಾ ಬಂದಿದೆ. ಸದ್ಯ ಇದೀಗ ಶಾರ್ಕ್‌ಬಾಟ್ ಬ್ಯಾಂಕ್ ಸ್ಟೀಲರ್ ಮಾಲ್‌ವೇರ್ ಸೋಂಕಿತ ಆರು ಅಪ್ಲಿಕೇಶನ್‌ಗಳನ್ನು ಗೂಗಲ್ ತೆಗೆದುಹಾಕಿದೆ ಎಂದು ವರದಿಯಾಗಿದೆ.

ಹೌದು, ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಆರು ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಈ ಅಪ್ಲಿಕೇಶನ್‌ಗಳನ್ನು ಈಗಾಗಲೇ ಪ್ಲೇ ಸ್ಟೋರ್‌ನಲ್ಲಿ 15,000 ಬಾರಿ ಡೌನ್‌ಲೋಡ್ ಮಾಡಲಾಗಿದೆ. ಆದರೆ ಈ ಅಪ್ಲಿಕೇಶನ್‌ಗಳು ಇದೀಗ ಶಾರ್ಕ್‌ಬಾಟ್ ಬ್ಯಾಂಕ್ ಸ್ಟೀಲರ್ ಮಾಲ್‌ವೇರ್ ಅನ್ನು ಹೊಂದಿವೆ ಎನ್ನಲಾಗಿದೆ. ಇನ್ನು ಈ ಆರು ಅಪ್ಲಿಕೇಶನ್‌ಗಳು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಆಂಟಿವೈರಸ್ ಪರಿಹಾರಗಳಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಈ ಅಪ್ಲಿಕೇಶನ್‌ಗಳಲ್ಲಿಯೇ ಮಾಲ್‌ವೇರ್ ಕಂಡುಬಂದಿದೆ ಎನ್ನಲಾಗಿದೆ. ಹಾಗಾದ್ರೆ ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿರುವ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ತನ್ನ ಪ್ಲೇಸ್ಟೋರ್‌ನಲ್ಲಿ ಮಾಲ್‌ವೇರ್ ಸೊಂಕಿತ ಆರು ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಮೆಲ್ನೋಟಕ್ಕೆ ಈ ಅಪ್ಲಿಕೇಶನ್‌ಗಳು ಆಂಟಿವೈರಸ್ ಅಪ್ಲಿಕೇಶನ್‌ಗಳ ಮಾದರಿಯಲ್ಲಿ ಕಾಣಿಸಿಕೊಂಡಿವೆ. ಈ ಅಪ್ಲಿಕೇಶನ್‌ಗಳು ವಿವಿಧ ವೆಬ್‌ಸೈಟ್‌ಗಳು ಮತ್ತು ಸೇವೆಗಳಿಗೆ ಬಳಕೆದಾರರ ಲಾಗಿನ್ ಮಾಹಿತಿಯನ್ನು ಕದಿಯುತ್ತದೆ ಎನ್ನಲಾಗಿದೆ. ಅಲ್ಲದೆ ಈ ಸೋಂಕಿತ ಅಪ್ಲಿಕೇಶನ್‌ಗಳನ್ನು ಇಟಲಿ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ಬಳಕೆದಾರರನ್ನು ಗುರಿಯಾಗಿಸಲು ಬಳಸಲಾಗಿದೆ ಎಂದು ವರದಿಯಾಗಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಟಿವೈರಸ್ ಅಪ್ಲಿಕೇಶನ್‌ಗಳಂತೆ ಕಾಣುವ ಈ ಆರು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಶಾರ್ಕ್‌ಬಾಟ್ ಮಾಲ್‌ವೇರ್ ಹರಡುತ್ತಿವೆ ಎಂದು ಹೇಳಲಾಗಿದೆ. ಶಾರ್ಕ್‌ಬಾಟ್ ಎಂಬುದು ಆಂಡ್ರಾಯ್ಡ್ ಸ್ಟೀಲರ್ ಆಗಿದ್ದು, ಇದನ್ನು ಡಿವೈಸ್‌ಗಳಿಗೆ ಸೋಂಕು ತಗುಲಿಸಲು ಮತ್ತು ಬಳಕೆದಾರರ ಲಾಗಿನ್ ರುಜುವಾತು ಕದಿಯಲು ಬಳಸಲಾಗುತ್ತಿದೆ. ಈ ಡ್ರಾಪ್ಪರ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿದ ನಂತರ, ನಿಮ್ಮ ಡಿವೈಸ್‌ನಲ್ಲಿ ಮಾಲ್‌ವೇರ್ ಕಂಡುಬರಲಿದೆ.

ಸದ್ಯ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿರುವ ಈ ಆರು ಆಂಟಿವೈರಸ್ ಅಪ್ಲಿಕೇಶನ್‌ಗಳು ಶಾರ್ಕ್‌ಬಾಟ್ ಮಾಲ್‌ವೇರ್ ಮೂಲಕ ಚೀನಾ, ಭಾರತ, ರೊಮೇನಿಯಾ, ರಷ್ಯಾ, ಉಕ್ರೇನ್ ಅಥವಾ ಬೆಲಾರಸ್‌ನ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಅಲ್ಲದೆ ಮಾಲ್‌ವೇರ್ ಸ್ಯಾಂಡ್‌ಬಾಕ್ಸ್‌ನಲ್ಲಿ ರನ್ ಆಗುತ್ತಿರುವಾಗ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಚೆಕ್ ಪಾಯಿಂಟ್ ರಿಸರ್ಚ್ ಪ್ರಕಾರ ಮೂರು ಡೆವಲಪರ್ ಖಾತೆಗಳಿಂದ ಈ ಆರು ಅಪ್ಲಿಕೇಶನ್‌ಗಳನ್ನು ಗುರುತಿಸಲಾಗಿದೆ. ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದ್ದರೂ ಕೂಡ ಕೆಲವು ಅಪ್ಲಿಕೇಶನ್‌ಗಳು ಇನ್ನೂ ಥರ್ಡ್ ಪಾರ್ಟಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ ಎನ್ನಲಾಗಿದೆ.

ಈ ಅಪ್ಲಿಕೇಶನ್‌ಗಳು ಎಸ್‌ಎಂಎಸ್‌ಗೆ ಅನುಮತಿಗಳನ್ನು ವಿನಂತಿಸುವುದು, ಜಾವಾ ಕೋಡ್ ಮತ್ತು ಇನ್‌ಸ್ಟಾಲೇಶನ್ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು, ಸ್ಥಳೀಯ ಡೇಟಾಬೇಸ್‌ಗಳು ಮತ್ತು ಕಾನ್ಫಿಗರೇಶನ್‌ಗಳನ್ನು ಅಪ್ಡೇಟ್ ಮಾಡುವುದು. ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು, ಬ್ಯಾಟರಿ ಆಪ್ಟಿಮೈಸೇಶನ್ ನಿಷ್ಕ್ರಿಯಗೊಳಿಸುವುದು ಸೇರಿದಂತೆ ಶಾರ್ಕ್‌ಬಾಟ್ ಮಾಲ್‌ವೇರ್ ಬಳಸುವ ಒಟ್ಟು 22 ಆಲರ್ಟ್‌ಗಳನ್ನು ಸಂಶೋಧಕರು ವಿವರಿಸಿದ್ದಾರೆ. ಇವುಗಳ ಮೂಲಕ ನಿಮ್ಮ ಡಿವೈಸ್ ಹಾಳಾಗಲಿದೆ ಎಂದು ವಿವರಿಸಿದ್ದಾರೆ.

ಚೆಕ್ ಪಾಯಿಂಟ್ ರಿಸರ್ಚ್ ಪ್ರಕಾರ, ಬಳಕೆದಾರರು ವಿಶ್ವಾಸಾರ್ಹ ಮತ್ತು ಪರಿಶೀಲಿಸಿದ ಪ್ರಕಾಶಕರ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಬೇಕು. ಕಾನೂನುಬದ್ಧ ಸಾಫ್ಟ್‌ವೇರ್ ಗಳನ್ನು ಬಳಸುವ ಮೂಲಕ ಮಾಲ್‌ವೇರ್‌ಗಳಿಂದ ಸುರಕ್ಷಿತವಾಗಿರಬೇಕು. ಬಳಕೆದಾರರು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಬದಲು ಅವುಗಳ ಪೂರ್ವಪರ ತಿಳಿದುಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086