ಕೊರೊನಾ ವೈರಸ್‌ ಬಗ್ಗೆ ದಾರಿ ತಪ್ಪಿಸುವ ನಕಲಿ ವಿಡಿಯೊಗಳನ್ನು ಕಿತ್ತೊಗೆದ ಗೂಗಲ್!

|

ವಿಶ್ವದೆಲ್ಲೆಡೆ ಭಾರಿ ಆತಂಕ ಸೃಷ್ಠಿಸಿರೊ ಮಾಹಾಮಾರಿ ಕೊರೊನಾ ವೈರಸ್ ಭಾರತದಲ್ಲಿಯೂ ಬಲಿ ಪಡೆದಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸಂಸ್ಥೆಗಳು ಕೊರೊನಾ ವೈರಸ್‌ ಹರಡದಂತೆ ತಡೆಯುವ ಮುಂಜಾಗ್ರತ ಕ್ರಮಗಳ ಬಗ್ಗೆ ಸಾಕಷ್ಟು ಜಾಗೃತಿ ಕೆಲಸಗಳನ್ನು ನಡೆಯುತ್ತಿವೆ. ಇನ್ನೊಂಡದೆ ಕೊರೊನಾ ವೈರಸ್‌ ಕುರಿತಾಗಿ ಜನರಲ್ಲಿ ದಾರಿ ತಪ್ಪಿಸುವ ದಾರಿ ತಪ್ಪಿಸುವ ನಕಲಿ ಮಾಹಿತಿಗೆ ಸಂಬಂಧಿಸಿದ ಸಾವಿರಾರು ವೀಡಿಯೊಗಳನ್ನು ಗೂಗಲ್ ಕಿತ್ತೆಸೆದಿದೆ.

ಕೊರೊನಾ ವೈರಸ್‌

ಹೌದು, ಕೊರೊನಾ ವೈರಸ್‌ ಅನ್ನೇ ಮುಖ್ಯ ಬಂಡವಾಳ ಮಾಡಿಕೊಂಡಿರುವ ಅನೇಕರು ಕೊರೊನಾ ವೈಸರ್ಸ್‌ಗೆ ಚಿಕಿತ್ಸೆ ವಿಧಾನಗಳ ಕುರಿತ ಮಾಹಿತಿಗಳ ವಿಡಿಯೊಗಳ ಮಾಡುತ್ತಿದ್ದಾರೆ. ಆದರೆ ಗೂಗಲ್ ತನ್ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಜನರನ್ನು ದಾರಿ ತಪ್ಪಿಸುವ ವಿಡಿಯೊಗಳನ್ನು ಹಾಗೂ ಕೊರೊನಾ ವೈರಸ್‌ ಹೆಸರಿನಲ್ಲಿನ ಭಿನ್ನ ಜಾಹೀರಾತುಗಳನ್ನು ಯೂಟ್ಯೂಬ್‌ನಿಂದ ತೆಗೆದುಹಾಕಿದೆ.

ಗೂಗಲ್ ಸಂಸ್ಥೆ

ಗೂಗಲ್ ಸಂಸ್ಥೆಯು ಕೊರೊನಾ ವೈಸರ್‌ ಕುರಿತಾಗಿ ಜನರಲ್ಲಿ ಅಪಾಯಕಾರಿ ಅಥವಾ ದಾರಿ ತಪ್ಪಿಸುವ ಮಾಹಿತಿಗೆ ಸಂಬಂಧಿಸಿದ ಸಾವಿರಾರು ವೀಡಿಯೊಗಳನ್ನು ತೆಗೆದಿದೆ. ಈ ಸಾಂಕ್ರಾಮಿಕ ರೋಗದ ವಿಷಯವನ್ನು ಲಾಭದ ಜಾಹೀರಾತುಗಳನ್ನಾಗಿಸಲು ಪ್ರಯತ್ನಿಸುತ್ತಿರುವ ಅನೇಕ ಮೆಡಿಕಲ್ ಮಾಸ್ಕ್ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಜಾಹಿರಾತುಗಳನ್ನು ಗೂಗಲ್ ತಾತ್ಕಾಲಿಕವಾಗಿ ನಿಷೇಧಿಸಿದೆ ಎಂದು ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈಸರ್‌ ಕುರಿತಾಗಿ ಹುಡುಕಾಟ ನಡೆಸುವ ಜನರಿಗೆ ಸರಿಯಾದ ಮಾಹಿತಿ ಸಿಗಲಿ ಎಂದು ಸದ್ಯ ಸ್ಥಳೀಯ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಹಾಗೂ ಅಧಿಕೃತ ಆರೋಗ್ಯ ಸಂಸ್ಥೆಗಳ ವೆಬ್‌ಸೈಟ್‌ಗಳು ಗೂಗಲ್ ಮುಖ್ಯ ಪೇಜ್‌ನಲ್ಲಿ ಕಾಣುವಂತೆ ವ್ಯವಸ್ಥೆ ಮಾಡಿದೆ. ಇದರಿಂದ ಕೊರೊನಾ ವೈರಸ್‌ ಬಗ್ಗೆ ನಕಲಿ ಹಾಗೂ ದಾರಿ ತಪ್ಪಿಸುವ ಮಾಹಿತಿ ಬದಲಿಗೆ ಜನರಿಗೆ ಅಧಿಕೃತ ಆರೋಗ್ಯ ಸಂಸ್ಥೆಗಳು ತಿಳಿಸಿರುವ ಮಾಹಿತಿ ಸಿಗಲಿದೆ ಎಂದು ಪಿಚೈ ತಿಳಿಸಿದ್ದಾರೆ.

ಡು ದಿ ಫೈವ್

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ನಿಯಂತ್ರಿಸುವ ಕುರಿತಾಗಿ ಜನರಿಗೆ ಮಾಹಿತಿ ನೀಡಲು ಮತ್ತು ಜಾಗೃತಿ ಮೂಡಿಸಲು ಗೂಗಲ್ ಮುಖಪುಟದಲ್ಲಿ 'ಡು ದಿ ಫೈವ್' ಅಭಿಯಾನವನ್ನು ಪ್ರಚಾರ ಮಾಡುತ್ತಿದ್ದೇವೆ ಎಂದು WHO ತಿಳಿಸಿದೆ. ಇನ್ನು ಗೂಗಲ್ ಸಂಸ್ಥೆಯು ಸಹ ಕೊರೊನಾ ವೈರಸ್‌ ರೋಗಿಗಳ ಸಂಖ್ಯೆಯ ಮಾಹಿತಿ, ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಹರಡಿದೆ ಎನ್ನುವ ಅಂಕಿಅಂಶಗಳ ಮಾಹಿತಿ ತಿಳಿಸಲು ಟ್ರಾಕರ್ ಅನ್ನು ಪರಿಚಯಿಸಿದೆ.

Most Read Articles
Best Mobiles in India

English summary
Google has blocked hundreds of thousands of ads attempting to capitalise on the coronavirus pandemic.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X