ಗೂಗಲ್‌ ಮೆಸೆಜ್‌ ಆಪ್‌ನಲ್ಲಿ ಭಾರೀ ಬದಲಾವಣೆ: ಹೊಸ ಸೇರ್ಪಡೆ ಏನು?

|

ಗೂಗಲ್‌ ತನ್ನ ಆಂಡ್ರಾಯ್ಡ್‌ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಾಗಿ ಅಭಿವೃದ್ಧಿಪಡಿಸಿರುವ ಮೆಸೆಜಿಂಗ್ ಆಪ್‌ನಲ್ಲಿ ಹಲವು ಬದಲಾವಣೆ ಮಾಡುವುದರ ಮೂಲಕ ಹಾಗೂ ನೂತನ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ವಾಟ್ಸಾಪ್, ಇನ್‌ಸ್ಟಾಗ್ರಾಮ್‌ ಹಾಗೂ ಇನ್ನಿತರೆ ಮೆಸೆಜಿಂಗ್ ಆಪ್‌ಗಳಿಗೆ ಪೈಪೋಟಿ ನೀಡಲು ಮುಂದಾಗಿದೆ. ಪ್ರಸ್ತುತ ಗೂಗಲ್‌ ಮೆಸೆಜ್‌ (Google Messages) ಆಪ್‌ ವೈಯಕ್ತಿಕ ಸಂದೇಶಗಳಿಗೆ ಪ್ರತಿಕ್ರಿಯಿಸುವ ಆಯ್ಕೆಯನ್ನು ಪಡೆದುಕೊಂಡಿದೆ.

ಎಸ್‌ಎಂಎಸ್‌

ಹೌದು, ಎಸ್‌ಎಂಎಸ್‌, ಆರ್‌ಸಿಎಸ್ (ರಿಚ್ ಕಮ್ಯುನಿಕೇಷನ್ ಸರ್ವಿಸಸ್) ಮತ್ತು ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿರುವ ಗೂಗಲ್‌ ಮೆಸೆಜ್‌ನಲ್ಲಿ ಭಾರೀ ಬದಲಾವಣೆ ಆಗಿದೆ. ಬಳಕೆದಾರರು ತಮ್ಮ ಸಾಧನಗಳಲ್ಲಿ ಆರ್‌ಸಿಎಸ್‌ ಅನ್ನು ಆನ್ ಮಾಡಿದಾಗ ಯುನೈಟೆಡ್ ಫ್ಲೈಟ್‌ಗಳಲ್ಲಿ ಮೆಸೆಜಿಂಗ್ ಕಳುಹಿಸಲು ಯುನೈಟೆಡ್ ಏರ್‌ಲೈನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಗೂಗಲ್‌ ತಿಳಿಸಿದೆ. ಇದರ ಜೊತೆಗೆ ಇನ್ನೂ ಹಲವು ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಐಕಾನ್‌ ಬದಲಾವಣೆ

ಐಕಾನ್‌ ಬದಲಾವಣೆ

ಗೂಗಲ್ ಮೆಸೆಜ್‌ನಲ್ಲಿ ಫೀಚರ್ಸ್‌ಗಳನ್ನಷ್ಟೇ ಬದಲಾವಣೆ ಮಾಡದೆ ಐಕಾನ್‌ ಅನ್ನೂ ಸಹ ಬದಲಾವಣೆ ಮಾಡಲಾಗಿದೆ. ಹಳೆಯ ಗೂಗಲ್‌ ಮೆಸೆಜ್‌ ಆಪ್‌ ಐಕಾನ್ ನೀಲಿ ವೃತ್ತದೊಳಗೆ ಮೆಸೆಜ್‌ ಬಬಲ್ ಇತ್ತು. ಮರು ವಿನ್ಯಾಸಗೊಂಡ ಅಪ್ಲಿಕೇಶನ್ ಐಕಾನ್ ಬಣ್ಣದ ಸ್ಕೀಮ್ ಅನ್ನು ಉಳಿಸಿಕೊಂಡಿದೆಯಾದರೂ ಶೈಲಿ ಬದಲಾಗಿದೆ. ಹೊಸ ಲೋಗೋದಲ್ಲಿ ಅಪ್ಲಿಕೇಶನ್ ಐಕಾನ್ ಓವರ್‌ಲ್ಯಾಪಿಂಗ್ ಮೆಸೆಜಿಂಗ್ ಬಬಲ್‌ಗಳನ್ನು ಒಟ್ಟಿಗೆ ಸೇರಿಸಲಾಗಿದೆ.

ಅಪ್ಲಿಕೇಶನ್‌

'ನಮ್ಮ ಫೋನ್ ಮತ್ತು ಸಂಪರ್ಕಗಳ ಅಪ್ಲಿಕೇಶನ್‌ ಅದೇ ನೋಟ ಮತ್ತು ಭಾವನೆಯೊಂದಿಗೆ ನವೀಕರಿಸಲ್ಪಡುತ್ತವೆ; ನಿಮಗೆ ಸಂವಹನ ಮಾಡಲು ಸಹಾಯ ಮಾಡುತ್ತದೆ' ಎಂದು ಗೂಗಲ್ ತನ್ನ ಬ್ಲಾಗ್ನಲ್ಲಿ ಬರೆದುಕೊಂಡಿದೆ. ಇನ್ನು ಅಪ್‌ಗ್ರೇಡ್‌ ಆದ ಪ್ರಮುಖ ಹೊಸ ಫೀಚರ್ಸ್‌ಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ವಾಟ್ಸಾಪ್‌ ಹಾಗೂ ಇನ್‌ಸ್ಟಾಗ್ರಾಮ್‌
  • * ವಾಟ್ಸಾಪ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ವೈಯಕ್ತಿಕ ಸಂದೇಶಗಳಿಗೆ ಹೇಗೆ ಪ್ರತಿಕ್ರಿಯಿಸುವ ಆಯ್ಕೆಯನ್ನು ನೀಡಲಾಗಿದೆಯೋ ಅದೇ ರೀತಿಯ ಫೀಚರ್ಸ್ ಅನ್ನು ಇಲ್ಲಿ ಪರಿಚಯಿಸಲಾಗಿದೆ. ಈ ಆಯ್ಕೆ ಪಡೆಯಲು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಆರ್‌ಸಿಎಸ್‌ ಅನ್ನು ಸಕ್ರಿಯಗೊಳಿಸುವ ಅಗತ್ಯವಿದೆ.
  • * ಈ ವರ್ಷದ ಆರಂಭದಲ್ಲಿ, ಗೂಗಲ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಆಪಲ್‌ನ ಐ ಮೆಸೆಜ್‌ ಅಪ್ಲಿಕೇಶನ್‌ನಿಂದ ಎಮೋಜಿ ಪ್ರತಿಕ್ರಿಯೆಗಳನ್ನು ಪ್ರದರ್ಶಿಸಲು ಪ್ರಾರಂಭಿಸಿತ್ತು ಈಗ, ಎಮೋಜಿಯೊಂದಿಗೆ ಮೆಸೆಜ್‌ಗಳಿಗೆ ಪ್ರತಿಕ್ರಿಯಿಸಲು ಬಳಕೆದಾರರಿಗೆ ಅವಕಾಶ ಕಲ್ಪಿಸಿದೆ.
  • * ಪಿಕ್ಸೆಲ್ 7 ಸರಣಿಯೊಂದಿಗೆ ಗೂಗಲ್ ಮೆಸೆಜ್‌ ಅಪ್ಲಿಕೇಶನ್‌ನಲ್ಲಿ ಧ್ವನಿ ಸಂದೇಶದ ಪ್ರತಿಲೇಖನವನ್ನು(transcription) ವೀಕ್ಷಿಸಲು ಬಳಕೆದಾರರಿಗೆ ಅನುವು ಮಾಡಿಕೊಡುವ ಫೀಚರ್ಸ್‌ ಅನ್ನು ಈ ಹಿಂದೆ ಗೂಗಲ್‌ ಘೋಷಣೆ ಮಾಡಿತ್ತು. ಇದರ ಜೊತೆಗೆ ಈಗ ಶೀಘ್ರದಲ್ಲೇ ಪಿಕ್ಸೆಲ್ 6, ಪಿಕ್ಸೆಲ್ 6A, ಪಿಕ್ಸೆಲ್ 6 Pro, ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಮತ್ತು ಗ್ಯಾಲಕ್ಸಿ ಫೋಲ್ಡ್4 ಸ್ಮಾರ್ಟ್‌ಫೋನ್‌ಗಳಲ್ಲಿಯೂ ಲಭ್ಯವಾಗಲಿದೆ ಎಂದು ತಿಳಿಸಿದೆ.
  • * ಜ್ಞಾಪನೆಗಳ (Reminders) ಬಗ್ಗೆ ಕೇಂದ್ರೀಕರಿಸಿರುವ ಗೂಗಲ್‌ ಅಪ್ಲಿಕೇಶನ್‌ನಲ್ಲಿ ಬೇಕಾದ ವಿವರಗಳನ್ನು ಉಳಿಸಿದರೆ, ಬಳಕೆದಾರರು ಗೂಗಲ್‌ ಮೆಸೆಜ್‌ ಅಪ್ಲಿಕೇಶನ್ ತೆರೆಯುವಾಗ ಜನ್ಮದಿನ ಮತ್ತು ವಾರ್ಷಿಕೋತ್ಸವ ಕುರಿತು ಜ್ಞಾಪನೆಯನ್ನು ಪಡೆಯಬಹುದಾಗಿದೆ.
  • * ಗೂಗಲ್‌ ಮೆಸೆಜ್‌ ಆಪ್‌ ನಲ್ಲಿಯೇ ಇನ್ಮುಂದೆ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದಾಗಿದೆ.
  • * ಈ ಆಪ್‌ನಲ್ಲಿ ವಿಳಾಸಗಳು, ಡೋರ್ ಕೋಡ್‌ ಮತ್ತು ಫೋನ್ ಸಂಖ್ಯೆಗಳಂತಹ ಪಠ್ಯಗಳನ್ನು ತ್ವರಿತವಾಗಿ ಹುಡುಕಲು ಸಹಾಯ ಮಾಡುತ್ತದೆ. ಹಾಗೆಯೇ ಸ್ಟಾರ್‌ ಮಾರ್ಕ್‌ ಅನ್ನು ನೀಡಲಾಗಿದೆ.
  • * ಈ ಆಪ್‌ನಲ್ಲಿ 'Can you talk now?' ಎಂಬಂತಹ ಪಠ್ಯಗಳನ್ನು ಗುರುತಿಸುತ್ತದೆ ಹಾಗೆಯೇ ಸಂದೇಶದ ಪಕ್ಕದಲ್ಲಿ ಐಕಾನ್ ಅನ್ನು ತೋರಿಸುವ ಮೂಲಕ ಕರೆಯ ಬಗ್ಗೆಯೂ ಸೂಚನೆ ನೀಡುತ್ತದೆ. ಪ್ರಮುಖ ಈವೆಂಟ್‌ಗಳ ಬಗ್ಗೆಯೂ ಇದು ಮಾಹಿತಿ ನೀಡಲಿದ್ದು, ನೀವೇನಾದರೂ 'Let's meet at 6pm on Tuesday' ಎಂದು ಸಂದೇಶ ಕಳುಹಿಸಿದ್ದರೆ ಅದನ್ನು ಗುರುತಿಸಿ ಆ ದಿನ ನಿಮಗೆ ಮನವರಿಕೆ ಮಾಡಿಕೊಡುತ್ತದೆ.
  • * ಬಳಕೆದಾರರು ಗೂಗಲ್‌ ಸರ್ಚ್‌ ಹಾಗೂ ಗೂಗಲ್ ಮ್ಯಾಪ್‌ ಗೆ ಈ ಆಪ್‌ ಮೂಲಕವೇ ಪ್ರವೇಶ ಪಡೆಯಬಹುದಾಗಿದೆ. ಹಾಗೆಯೇ ಬ್ಯುಸಿನೆಸ್‌ ಚಾಟ್‌ಗೆ ಅನುವು ಮಾಡಿಕೊಡಲು ಮುಂದಾಗಿದ್ದು, ಈ ಫೀಚರ್ಸ್‌ಅನ್ನು ಪ್ರಾಯೋಗಿಕವಾಗಿ ಕೆಲವು ದೇಶಗಳಿಗೆ ಮಾತ್ರ ಅನ್ವಯಿಸಲಾಗಿದೆ.
  • * ಬಳಕೆದಾರರು ತಮ್ಮ ಸಾಧನಗಳಲ್ಲಿ ಆರ್‌ಸಿಎಸ್ ಅನ್ನು ಆನ್ ಮಾಡಿದಾಗ ಯುನೈಟೆಡ್ ಫ್ಲೈಟ್‌ಗಳಲ್ಲಿ ಸಂದೇಶ ಕಳುಹಿಸಲು ಯುನೈಟೆಡ್ ಏರ್‌ಲೈನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಗೂಗಲ್ ಹೇಳಿದೆ.
  • * ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಂದ ಕ್ರೋಮ್‌ಬುಕ್‌ಗೆ ಹಾಗೂ ಸ್ಮಾರ್ಟ್‌ವಾಚ್‌ಗೆ ಈ ಗೂಗಲ್‌ ಮೆಸೆಜ್‌ ಅನ್ನು ಹೋಸ್ಟ್ ಮಾಡಲು ಇನ್ಮುಂದೆ ಬೆಂಬಲ ಇರುವುದಿಲ್ಲ.

Best Mobiles in India

English summary
Google has brought several changes in its Google Messages app. Its details are given in this article.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X