2022ರಲ್ಲಿ ಜನ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿರೋದು ಇದನ್ನೇ!

|

ಇಂದಿನ ಜಮಾನದಲ್ಲಿ ಯಾವುದೇ ಒಂದು ವಿಚಾರದ ಬಗ್ಗೆ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗೋದೆ ಗೂಗಲ್‌. ಗೂಗಲ್‌ ಅಷ್ಟರ ಮಟ್ಟಿಗೆ ಜನಮಾನಸದಲ್ಲಿ ಬೇರೂರಿದೆ. ಗೂಗಲ್‌ನಲ್ಲಿ ಎಲ್ಲಾ ವಿಧದ ವಿಚಾರಗಳ ಬಗ್ಗೆ ಕೂಡ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿ ಗೂಗಲ್‌ ಕೂಡ ಪ್ರತಿ ವರ್ಷ ಹೆಚ್ಚಿನ ಜನರು ಯಾವ ವಿಚಾರವನ್ನು ಹೆಚ್ಚು ಸರ್ಚ್‌ ಮಾಡಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸುತ್ತಾ ಬಂದಿದೆ. ಅದರಂತೆ 2022ರಲ್ಲಿ ಯಾವ ವಿಚಾರ ಹೆಚ್ಚು ಸರ್ಚ್‌ ಮಾಡಲಾಗಿದೆ ಅನ್ನೊದನ್ನ ಕೂಡ ಬಹಿರಂಗಪಡಿಸಿದೆ.

ಗೂಗಲ್‌

ಹೌದು, 2022ರಲ್ಲಿ ಹೆಚ್ಚು ಜನರ ಗೂಗಲ್‌ ಮೂಲಕ ಯಾವುದನ್ನು ಹೆಚ್ಚು ಭಾರಿ ಸರ್ಚ್‌ ಮಾಡಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ಗೂಗಲ್‌ ತನ್ನ ಟಾಪ್‌ ಟ್ರೆಂಡಿಂಗ್‌ ಸರ್ಚ್‌ನ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೌಟು, ಸರ್ಚ್‌, 'ನಿಯರ್‌ ಮಿ' ಸೇರಿದಂತೆ ಹಲವು ವರ್ಗಗಳನ್ನು ಮಾಡಿದೆ. ಅದರಂತೆ ಪ್ರತಿವರ್ಗದಲ್ಲೂ ಈ ವರ್ಷ ಹೆಚ್ಚು ಯಾವುದನ್ನು ಸರ್ಚ್‌ ಮಾಡಿದ್ದಾರೆ ಅನ್ನೊದರ ವರದಿ ನೀಡಿದೆ. ಹಾಗಾದ್ರೆ ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಜನರು ಯಾವುದನ್ನು ಸರ್ಚ್‌ ಮಾಡಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಹಾಮಾರಿಯಿಂದ

ಕೊರನಾದಂತಹ ಮಹಾಮಾರಿಯಿಂದ ನಿಧಾನವಾಗಿ ಹೊರಬಂದ ಜನರು 2022ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಆಕ್ಟಿವ್‌ ಆಗಿದ್ದಾರೆ. ಈ ವರ್ಷ ಭಾರತದಲ್ಲಿ ಹೆಚ್ಚಿನ ಜನರು ಐಪಿಎಲ್ ಬಗ್ಗೆ ಸರ್ಚ್‌ ಮಾಡಿದ್ದಾರೆ. ಅಲ್ಲದೆ ಏಷ್ಯಾ ಕಪ್ ಮತ್ತು ಟಿ 20 ವಿಶ್ವಕಪ್ ಕೂಡ ಅಗ್ರ 10 ರಲ್ಲಿ ಸ್ಥಾನ ಪಡೆದಿವೆ. ಇದಲ್ಲದೆ ವ್ಯಕ್ತಿಗತವಾಗಿ ನೂಪುರ್‌ ಶರ್ಮಾ ಅವರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಹೆಚ್ಚು ಮಂದಿ ಗೂಗಲ್‌ ಮೊರಿ ಹೋಗಿದ್ದಾರೆ. ಅಷ್ಟೆ ಅಲ್ಲ ಕೆಲವು ಆಶ್ಚರ್ಯಕರ ವಿಚಾರಗಳ ಬಗ್ಗೆ ಕೂ ಸರ್ಚ್‌ ಮಾಡಿದ್ದಾರೆ.

How to ವಿಭಾಗದಲ್ಲಿ ಹೆಚ್ಚು ಜನರು ಏನ್‌ ಸರ್ಚ್‌ ಮಾಡಿದ್ದಾರೆ?

How to ವಿಭಾಗದಲ್ಲಿ ಹೆಚ್ಚು ಜನರು ಏನ್‌ ಸರ್ಚ್‌ ಮಾಡಿದ್ದಾರೆ?

ಗೂಗಲ್‌ ಈ ವರ್ಷದಲ್ಲಿ ಜನ ಯಾವ ವಿಭಾಗದಲ್ಲಿ ಯಾವುದನ್ನು ಹೆಚ್ಚು ಸರ್ಚ್‌ ಮಾಡಿದ್ದಾರೆ ಅನ್ನೊದನ್ನ ಬಹಿರಂಗಪಡಿಸಿದೆ. ಅದರಂತೆ How to(ಮಾಡುವುದು ಹೇಗೆ) ವಿಭಾಗದಲ್ಲಿ ಹೆಚ್ಚಿನ ಜನರು ತಮ್ಮ ಪ್ರಶ್ನೆಗಳನ್ನು ಈ ರೀತಿ ಸರ್ಚ್‌ ಮಾಡಿದ್ದಾರೆ. ಇದರಲ್ಲಿ ಕೋವಿನ್‌ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ? ಎಂಬ ವಿಚಾರ ಇಡೀ ವರ್ಷ ಹೌಟು ವಿಭಾಗದಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ವಿಷಯವಾಗಿದೆ. ಇನ್ನು ಜನರು PTRC ಚಲನ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ? ಪೋರ್ನ್‌ಸ್ಟಾರ್ ಮಾರ್ಟಿನಿ ಕುಡಿಯುವುದು ಹೇಗೆ? ಇ-ಶ್ರಾಮ್ ಕಾರ್ಡ್ ಮಾಡುವುದು ಹೇಗೆ? ಎಂಬ ವಿಚಾರಗಳನ್ನು ಜಾಸ್ತಿ ಸರ್ಚ್‌ ಮಾಡಿದ್ದಾರೆ.

ಹೇಗೆ

ಇದಿಷ್ಟೇ ಅಲ್ಲ ಗರ್ಭಾವಸ್ಥೆಯಲ್ಲಿ ಮೋಷನ್‌ ಆಗುವುದನ್ನು ನಿಲ್ಲಿಸುವುದು ಹೇಗೆ? ವೋಟರ್ ಐಡಿಯನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಹೇಗೆ? ಬಾಳೆಹಣ್ಣಿನ ಮೂಲಕ ಬ್ರೆಡ್ ಮಾಡುವುದು ಹೇಗೆ? ಆನ್‌ಲೈನ್‌ನಲ್ಲಿ ITR ಅನ್ನು ಸಲ್ಲಿಸುವುದು ಹೇಗೆ? ಫೋಟೋ ಮೇಲೆ ಹಿಂದಿ ಟೆಕ್ಸ್ಟ್‌ ಅನ್ನು ಬರೆಯೋದು ಹೇಗೆ? Wordle ಅನ್ನು ಆಡುವುದು ಹೇಗೆ ಎಂಬೆಲ್ಲಾ ಕುತೂಹಲಕಾರಿ ವಿಚಾರಗಳನ್ನು ಕೂಡ ಹೆಚ್ಚು ಭಾರಿ ಸರ್ಚ್‌ ಮಾಡಿದ್ದಾರೆ.

ಸರ್ಚ್‌ ವಿಭಾಗದಲ್ಲಿ ಹೆಚ್ಚು ಸರ್ಚ್‌ ಆಗಿರುವ ವಿಚಾರಗಳು?

ಸರ್ಚ್‌ ವಿಭಾಗದಲ್ಲಿ ಹೆಚ್ಚು ಸರ್ಚ್‌ ಆಗಿರುವ ವಿಚಾರಗಳು?

ಮೊದಲೇ ಹೇಳಿದಂತೆ ಗೂಗಲ್‌ನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್‌ ಆಗಿರುವ ವಿಷಯವೆಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌). ಐಪಿಎಲ್‌ ಬಗ್ಗೆ ಹೆಚ್ಚು ಕುತೂಹಲದಿಂದ ಸಾಕಷ್ಟು ಮಾಹಿತಿಯನ್ನು ಜನ ಸರ್ಚ್‌ ಮಾಡಿದ್ದಾರೆ. ಈ ಮೂಲಕ ಕ್ರಿಕೆಟ್‌ ಮೇಲಿನ ಪ್ರೀತಿಯನ್ನು ಭಾರತದ ಜನತೆ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ಕೋವಿನ್‌ಗೆ ಸಂಬಂದ ಪಟ್ಟ ವಿಚಾರ ಟಾಪ್‌ ಟು ಸ್ಥಾನವನ್ನು ಪಡೆದುಕೊಂಡಿದೆ. ನಂತರದ ಸ್ಥಾನ ಫಿಫಾ ಫುಟ್ಬಾಲ್‌ ವಿಶ್ವಕಪ್, ಏಷ್ಯಾ ಕಪ್ (ಕ್ರಿಕೆಟ್‌), ಐಸಿಸಿ ಟಿ20 ವಿಶ್ವಕಪ್(ಕ್ರಿಕೆಟ್‌), ಬ್ರಹ್ಮಾಸ್ತ್ರ: ಭಾಗ ಒಂದು - ಶಿವ(ಸಿನಿಮಾ), ಇ-ಶ್ರಾಮ್ ಕಾರ್ಡ್ (ಸರ್ಕಾರದ ಯೋಜನೆ) ಕಾಮನ್ವೆಲ್ತ್ ಗೇಮ್ಸ್ (ಕ್ರೀಡೆ) K.G.F: ಪಾರ್ಟ್‌-2(ಸಿನಿಮಾ), ಇಂಡಿಯನ್ ಸೂಪರ್ ಲೀಗ್ ವಿಚಾರಗಳನ್ನು ಹೆಚ್ಚು ಭಾರಿ ಸರ್ಚ್‌ ಮಾಡಲಾಗಿದೆ.

Best Mobiles in India

English summary
Google's annual search: Full list of what was trending in 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X