ಗೂಗಲ್‌ ಅಸಿಸ್ಟಂಟ್‌ನಿಂದ ದಂಪತಿಗಳ ಬೆಡ್‌ರೂಮ್‌ ಸಂಭಾಷಣೆ ಸೋರಿಕೆ!

|

ಸ್ಮಾರ್ಟ್‌ಫೋನ್‌ನಲ್ಲಿ ನೀವು ಗೂಗಲ್‌ ಅಸಿಸ್ಟಂಟ್‌ ಬಳಸುತ್ತಿದ್ದಿರಾ?..ನಿಮ್ಮ ಮನೆಯಲ್ಲಿ ಗೂಗಲ್‌ ಅಸಿಸ್ಟಂಟ್‌ ಹೋಮ್‌ ಸ್ಪೀಕರ್ಸ್‌ ಮತ್ತು ಸೆಕ್ಯುರಿಟಿ ಕ್ಯಾಮೆರಾ ಅಳವಡಿಸಿದ್ದಿರಾ?..ಒಂದು ವೇಳೆ ಹೌದಾಗಿದ್ದರೇ. ಇನ್ಮುಂದೆ ನೀವು ಎಚ್ಚರವಹಿಸುವುದು ತುಂಬಾ ಅಗತ್ಯ. ಏಕೆಂದರೇ ಇದೀಗ ದಂಪತಿಗಳ ಬೆಡ್‌ರೂಮ್‌ ಸಂಭಾಷಣೆಗಳು ಗೂಗಲ್‌ ಅಸಿಸ್ಟಂಟ್‌ನಿಂದ ಸೋರಿಕೆಯಾಗಿರುವ ಕುರಿತು ವರದಿಯಾಗಿವೆ.

ಗೂಗಲ್‌ ಅಸಿಸ್ಟಂಟ್‌ನಿಂದ ದಂಪತಿಗಳ ಬೆಡ್‌ರೂಮ್‌ ಸಂಭಾಷಣೆ ಸೋರಿಕೆ!

ಹೌದು, ಗೂಗಲ್‌ ಅಸಿಸ್ಟಂಟ್‌ ಆಧಾರಿತ ಸ್ಮಾರ್ಟ್‌ಫೋನ್‌, ಹೋಮ್‌ ಸ್ಪೀಕರ್‌ ಮತ್ತು ಗೂಘಲ್ ಸೆಕ್ಯುರಿಟಿ ಕ್ಯಾಮೆರಾಗಳ ಮೂಲಕ ಬೆಡ್‌ರೋಮ್‌ ಸಂಭಾಷಣೆಗಳು ಗೂಗಲ್‌ ಥರ್ಡ್‌ಪಾರ್ಟಿ ಕಂಟ್ರಾಕ್ಟರ್‌ಗಳಿಗೆ ಸೋರಿಕೆಯಾಗಿವೆ ಎನ್ನುವ ಸುದ್ದಿಗಳು ಇತ್ತೀಚಿಗೆ ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್‌ ರಾಷ್ಟ್ರಗಳಲ್ಲಿ ವರದಿಯಾಗಿವೆ. ಈ ಸಂಗತಿಯು ಬಳಕೆದಾರರ ಖಾಸಗಿತನದ ಸುರಕ್ಷೆ ಕುರಿತು ಗಂಭೀರ ಪ್ರಶ್ನೇಗಳು ಮೂಡಿಸಿದೆ.

ಗೂಗಲ್‌ ಅಸಿಸ್ಟಂಟ್‌ನಿಂದ ದಂಪತಿಗಳ ಬೆಡ್‌ರೂಮ್‌ ಸಂಭಾಷಣೆ ಸೋರಿಕೆ!

ಬೆಲ್ಜಿಯಂನ ಬ್ರಾಡ್‌ಕಾಸ್ಟ್‌ರ VRT NWS, ಪ್ರಕಾರ ಗೂಗಲ್ ಅಸಿಸ್ಟಂಟ್‌ ಆಧಾರಿತ ಹೋಮ್‌ ಸ್ಪೀಕರ್ಸ್‌ಗಳು ಬಳಕೆದಾರರ ಸಂಭಾಷಣೆಗಳನ್ನು ರೆಕಾರ್ಡ್‌ ಮಾಡಿಕೊಂಡು ಆ ಕ್ಲಿಪ್‌ಗಳನ್ನು ಗೂಗಲ್‌ ಥರ್ಡ್‌ಪಾರ್ಟಿ ಕಾಂಟ್ರಾಕ್ಟರ್‌ಗಳಿಗೆ ಕಳುಹಿಸುತ್ತವೆ. ಈ ಕಾಂಟ್ರಾಕ್ಟರ್‌ಗಳು ಆಡಿಯೊ ಕ್ಲಿಪ್‌ಗಳ ಗುಣಮಟ್ಟವನ್ನು ಹೆಚ್ಚಿಸುತ್ತಾರೆ ಮತ್ತು ಸಂಭಾಷಣೆಗಳನ್ನು ಸಹ ಕೇಳಿಸಿಕೊಳ್ಳುವರು ಎನ್ನಲಾಗಿದೆ.

ಗೂಗಲ್‌ ಅಸಿಸ್ಟಂಟ್‌ನಿಂದ ದಂಪತಿಗಳ ಬೆಡ್‌ರೂಮ್‌ ಸಂಭಾಷಣೆ ಸೋರಿಕೆ!

ಬಳಕೆದಾರರು ಕೆಲವೊಮ್ಮೆ ಓಕೆ ಗೂಗಲ್ ಎನ್ನುವ ಪದ ಬಳಸದೆ ಇದ್ದಾಗಲೂ ಸಹ ಅವರ ವೈಯಕ್ತಿಕ ಮಾತುಕತೆಗಳು, ದಂಪತಿಗಳ ಬೆಡ್‌ರೂಮ್‌ ಸಂಭಾಷಣೆ, ಸೇರಿದಂತೆ ಹಲವು ಖಾಸಗಿ ಸಂಭಾಷಣೆಗಳು ಸೋರಿಕೆಯಾಗಿರುವುದು ಗಂಭೀರ ಸಂಗತಿ ಎನಿಸಿದೆ. ಥರ್ಡ್‌ಪಾರ್ಟಿ ಕಾಂಟ್ರಾಕ್ಟರ್‌ನಿಂದ ಆಗಿರುವ ಈ ಸಂಗತಿಯ ಲೋಪವನ್ನು ಸರಿಪಡಿಸುವುದಾಗಿ ಗೂಗಲ್ ಸಂಸ್ಥೆಯು ತಿಳಿಸಿದೆ ಎನ್ನಲಾಗಿದೆ.

ಓದಿರಿ : ಗೂಗಲ್ ಮ್ಯಾಪ್‌ನ ಈ ಹೊಸ ಆಯ್ಕೆಯಿಂದ ಪ್ರಯಾಣ ಇನ್ನು ನಿರಾತಂಕ!ಓದಿರಿ : ಗೂಗಲ್ ಮ್ಯಾಪ್‌ನ ಈ ಹೊಸ ಆಯ್ಕೆಯಿಂದ ಪ್ರಯಾಣ ಇನ್ನು ನಿರಾತಂಕ!

ಗೂಗಲ್‌ ಅಸಿಸ್ಟಂಟ್‌ ಡಿವೈಸ್‌ಗಳಷ್ಟೇ ಅಲ್ಲದೇ, ಜನಪ್ರಿಯ ಅಮೆಜಾನ್ 'ಅಲೆಕ್ಸಾ' ವಾಯಿಸ್‌ ಅಸಿಸ್ಟಂಟ್ ಆಧಾರಿತ ಡಿವೈಸ್‌ಗಳಲ್ಲಿಯೂ ಸಹ ಖಾಸಗಿ ಸಂಭಾಷಣೆಗಳು ಸೋರಿಕೆಯಾಗಿರುವ ಘಟನೆಗಳು ನಡೆದಿರುವುದನ್ನು ಕೇಳಿದ್ದೆವೆ. ಹೀಗಾಗಿ ವಾಯಿಸ್‌ ಅಸಿಸ್ಟಂಟ್‌ ಆಧಾರಿತ ಡಿವೈಸ್‌ಗಳ ಬಳಕೆ ವೇಳೆ ಎಚ್ಚೆರಿಕೆ ವಹಿಸುವುದು ಅಗತ್ಯ ಅಲ್ಲವೇ. ಇಲ್ಲದಿದ್ದರೇ ಪ್ರೈವಸಿ ಎನ್ನುವುದು ಇಲ್ಲದಂತಾಗುತ್ತದೆ.

ಓದಿರಿ : 'ಒಪ್ಪೊ K3' ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ಕೊಡುವುದು ಪಕ್ಕಾ! ಓದಿರಿ : 'ಒಪ್ಪೊ K3' ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ಕೊಡುವುದು ಪಕ್ಕಾ!

Best Mobiles in India

English summary
Google Assistant is listening in on your bedroom chats, beware. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X