ಸುಲಭವಾಗಿ ಡಾಟಾ ಸೆಟ್‌ ಸಿಗುವಂತೆ ಗೂಗಲ್‌ನಿಂದ ಪ್ರತ್ಯೇಕ ಸರ್ಚ್ ಎಂಜಿನ್‌!

|

ಗೂಗಲ್‌ನಲ್ಲಿ ಎಲ್ಲಾ ಮಾಹಿತಿ ಏನೋ ಸಿಗುತ್ತದೆ. ಆದರೆ, ಆ ಮಾಹಿತಿಯ ಸ್ಪಷ್ಟ ಅಂಕಿ ಅಂಶಗಳ ಗುಚ್ಚ ಸಿಗುವುದು ಸ್ವಲ್ಪವೇ ಕಷ್ಟವೇ ಸರಿ. ಹಾಗಾಗಿ, ಮಾಧ್ಯಮ, ಸಂಶೋಧನೆ, ವಿಜ್ಞಾನ ಮುಂತಾದ ಕ್ಷೇತ್ರಗಳ ಪರಿಣತರಿಗೆ ಸುಲಭವಾಗಿ ಅಂಕಿ ಅಂಶಗಳ ಗುಚ್ಚ(ಡಾಟಾ ಸೆಟ್‌) ಸಿಗುವಂತೆ ಮಾಡಲು ಗೂಗಲ್‌ ಪ್ರತ್ಯೇಕ ಸರ್ಚ್ ಎಂಜಿನ್‌ ಅನ್ನು ಇತ್ತೀಚಿಗೆ ಬಿಡುಗಡೆಗೊಳಿಸಿದೆ.

ಸರ್ಕಾರಿ ಜಾಲತಾಣಗಳಲ್ಲದೆ, ಸಾವಿರಾರು ಖಾಸಗಿ ಸಂಸ್ಥೆಗಳ ಮಾಹಿತಿ ಭಂಡಾರದಲ್ಲಿ ಅಧಿಕೃತ ಅಂಕಿ ಅಂಶಗಳ ಗುಚ್ಚ ಇವೆಯಾದರೂ ಲಕ್ಷಾಂತರ ಜಾಲತಾಣಗಳ ಮಧ್ಯ ಅವು ಬಳಕೆದಾರನಿಗೆ ಗೋಚರವಾಗುತ್ತಲೇ ಇರಲಿಲ್ಲ. ಈ ಸಮಸ್ಯೆಯನ್ನು ನಿವಾರಿಸುವುದು ಗೂಗಲ್‌ನ ಪ್ರತ್ಯೇಕ ಸರ್ಚ್ ಎಂಜಿನ್‌ ಉದ್ದೇಶ ಎಂದು ಗೂಗಲ್‌ ವಿಜ್ಞಾನಿ ನತಾಶಾ ನಯ್ ಹೇಳಿದ್ದಾರೆ.

ಸುಲಭವಾಗಿ ಡಾಟಾ ಸೆಟ್‌ ಸಿಗುವಂತೆ ಗೂಗಲ್‌ನಿಂದ ಪ್ರತ್ಯೇಕ ಸರ್ಚ್ ಎಂಜಿನ್‌!

ಯಾವುದೇ ವಿಷಯವಾಗಿ ಸಂಶೋಧನೆ ನಡೆಸುವಾಗ, ಪ್ರಬಂಧ ಸಿದ್ಧಪಡಿಸುವಾಗ ಅಂಕಿ ಅಂಶಗಳ ಅಗತ್ಯ ಇರುತ್ತದೆ. ಇಲ್ಲಿಯವರೆಗೆ ಅಂಕಿ ಅಂಶಗಳ ಗುಚ್ಚವನ್ನು ಇಂಟರ್‌ನೆಟ್‌ನಲ್ಲಿ ಪಡೆದುಕೊಳ್ಳುವುದು ಕಷ್ಟವಿತ್ತು. ಒಂದೊಮ್ಮೆ ಅಂಕಿ ಅಂಶಗಳನ್ನು ಪಡೆದುಕೊಂಡರೂ ಸಹ ಅವುಗಳ ಅಧಿಕೃತತೆ, ವಿಶ್ವಾಸಾರ್ಹತೆ ಮೂಲಗಳು ಅವುಗಳ ಮುಖ್ಯ ತಡೆಗೋಡೆಗಳಾಗಿದ್ದವು.

ಅಂದಹಾಗೆ, ಗೂಗಲ್‌ನ ಪ್ರತ್ಯೇಕ ಸರ್ಚ್ ಎಂಜಿನ್‌ ಸಹಾಯದಿಂದ ಗೂಗಲ್‌ ಬಳಕೆದಾರ ತಾನು ಬಯಸಿದ ಮಾಹಿತಿಯನ್ನು ಮೊದಲ ಪ್ರಯತ್ನದಲ್ಲಿಯೇ ಪಡೆಯುವುದು ಸುಲಭವಾಗಿದೆ. ಹಲವು ಜಾಲತಾಣಗಳು ಇದನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದೆಯಾದರೂ ಇಂಟರ್‌ನೆಟ್‌ನಾದ್ಯಂತ ಇದನ್ನು ಪ್ರಚುರ ಪಡಿಸಲು ಗೂಗಲ್‌ ಇದೀಗ ಮುಂದಾಗಿದೆ.

ಸುಲಭವಾಗಿ ಡಾಟಾ ಸೆಟ್‌ ಸಿಗುವಂತೆ ಗೂಗಲ್‌ನಿಂದ ಪ್ರತ್ಯೇಕ ಸರ್ಚ್ ಎಂಜಿನ್‌!

ಯಾರು ಬೇಕಾದರೂ ಗೂಗಲ್‌ನ ಈ ನೂತನ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದ್ದು, ಗೂಗಲ್‌ನ ಹೊಸ ಸರ್ಚ್(toolbox.google.com/datasetsearch) ಎಂಜಿನ್‌ನ ಕಣ್ಣಿಗೆ ಬೀಳಬೇಕೆಂದರೆ ಕೆಲವೊಂದಷ್ಟು ವಿವರಗಳನ್ನು ನಮೂದಿಸಿರಬೇಕಾಗುತ್ತದೆ. ಉದಾಹರಣೆಗೆ, ಅಂಕಿ ಸಂಖ್ಯಾ ಗುಚ್ಚವನ್ನು ಸಿದ್ಧಪಡಿಸಿದವರ ಹೆಸರು, ಪಬ್ಲಿಶ್ ಆದ ದಿನಾಂಕ, ಮಾಹಿತಿಯ ಮೂಲ, ಇತ್ಯಾದಿ.

Best Mobiles in India

English summary
Google’s new search engine reveals public datasets for research and journalism projects. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X