ವಿಶ್ವವನ್ನು ಪಾಸ್ ವರ್ಡ್ ಮುಕ್ತಗೊಳಿಸುವ ಗುರಿ ಹೊಂದಿದೆ ಗೂಗಲ್

By Gizbot Bureau
|

ಹಲವು ಪಾಸ್ ವರ್ಡ್ ಗಳಿಂದ ಗೊಂದಲಕ್ಕೀಡಾಗುತ್ತಿದ್ದಾರೆ? ಯಾವ ಆಪ್ ಗೆ ಯಾವ ಪಾಸ್ ವರ್ಡ್ ಇಟ್ಟುಕೊಂಡಿದ್ದೀರಿ ಎಂಬುದು ನೆನಪೇ ಇಲ್ಲವೇ? ಈ ವೆಬ್ ಸೈಟ್ ಗೊಂದು, ಆ ವೆಬ್ ಸೈಟ್ ಗೊಂದು ಅಂತ ಪಾಸ್ ವರ್ಡ್ ಇಟ್ಟುಕೊಂಡು ಯಾವುದು ಯಾವುದಕ್ಕೆ ಇಟ್ಟುಕೊಂಡಿದ್ದ ಪಾಸ್ ವರ್ಡ್ ಎಂಬುದು ನೆನಪೇ ಇಲ್ಲದೆ ಗೊಂದಲಕ್ಕೀಡಾಗಿದ್ದರೆ ಇನ್ನು ಮುಂದೆ ಈ ಟೆನ್ಶನ್ ಬಿಟ್ಟುಬಿಡಿ. ಜಗತ್ತನ್ನ ಪಾಸ್ ವರ್ಡ್ ಮುಕ್ತ ಗೊಳಿಸುವುದಕ್ಕೆ ಗೂಗಲ್ ಚಿಂತನೆ ನಡೆಸಿದೆ.

ಪಾಸ್ ವರ್ಡ್ ಮುಕ್ತ ಜಗತ್ತು:

ಪಾಸ್ ವರ್ಡ್ ಮುಕ್ತ ಜಗತ್ತು:

ಗೂಗಲ್ ನ ನೂತನ ವರ್ಷನ್ನಿನ ಗೂಗಲ್ ಪ್ಲೇ ಸರ್ವೀಸ್ ಆಂಡ್ರಾಯ್ಡ್ 7.0 ಮತ್ತು ಮೇಲಿನದ್ದರಲ್ಲಿ ಬಳಕೆದಾರರು ಯಾವುದೇ ಆಪ್ಸ್ ಅಥವಾ ವೆಬ್ ಸೈಟ್ ಗಳಿಗೆ ಪಾಸ್ ವರ್ಡ್ ಎಂಟರ್ ಮಾಡುವ ಅಗತ್ಯವಿಲ್ಲ ಎಂದು ಗೂಗಲ್ ಪ್ರಕಟಿಸಿದೆ. ಕಂಪೆನಿಯು ಹೇಳಿರುವಂತೆ ಇದು FIDO2 ನ್ನು ಬಳಸುತ್ತಿದ್ದು FIDO ಅನಿಯನ್ಸ್ ನಿಂದ ಡೆಲವಪ್ ಮಾಡಲಾಗಿದೆ ಹಾಗಾಗಿ ಫಿಂಗರ್ ಪ್ರಿಂಟ್ ಅಥವಾ PIN ಬಳಶಿ ವಿವಿಧ ಸೇವೆಗಳಿಗೆ ಲಾಗಿನ್ ಆಗಬೇಕಾಗುತ್ತದೆ.

ಆಂಡ್ರಾಯ್ಡ್ 7.0 ಮತ್ತು ಮೇಲಿನ ವರ್ಷನ್:

ಆಂಡ್ರಾಯ್ಡ್ 7.0 ಮತ್ತು ಮೇಲಿನ ವರ್ಷನ್:

ಆಂಡ್ರಾಯ್ಡ್ 7.0+ ನಲ್ಲಿ ರನ್ ಆಗುವ ಯಾವುದೇ ಡಿವೈಸ್ ಇದೀಗ FIDO2 ಸರ್ಟಿಫೈಡ್ ಗಿರುತ್ತದೆ ಅಥಾ ಸ್ವಯಂಚಾಲಿತ ಗೂಗಲ್ ಪ್ಲೇ ಸೇವೆಯ ಅಪ್ ಡೇಟ್ ಪಡೆಯುತ್ತದೆ. ಇದು ಬಳಕೆದಾರರಿಗೆ ತಮ್ಮ ಸಾಧನದ ಬಿಲ್ಟ್ ಇನ್ ಫಿಂಗರ್ ಪ್ರಿಂಟ್ ಸಂವೇದಕ ಅಥವಾ FIDO ಭದ್ರತಾ ಕೀಲಿಗಳನ್ನು FIDO2 ಪ್ರೊಟೊಕಾಲ್ ಗಳಿಗೆ ಬೆಂಬಲಿಸುವ ವೆಬ್ಸೈಟ್ ಗಳಿಗೆ ಮತ್ತು ಸ್ಥಳೀಯ ಅಪ್ಲಿಕೇಶನ್ ಗಳಿಗೆ ಸುರಕ್ಷಿತ ಪಾಸ್ ವರ್ಡ್ ರಹಿತ ಪ್ರವೇಶಕ್ಕಾಗಿ ಹತೋಟಿ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ.

ವೆಬ್ ಮತ್ತು ಆಪ್ ಗಳಿಗೆ ಪಾಸ್ ವರ್ಡ್ ಇಲ್ಲ:

ವೆಬ್ ಮತ್ತು ಆಪ್ ಗಳಿಗೆ ಪಾಸ್ ವರ್ಡ್ ಇಲ್ಲ:

ವೆಬ್ ಮತ್ತು ಆಪ್ ಡೆವಲಪರ್ ಗಳು ಕೂಡ ತಮ್ಮ ಆಂಡ್ರಾಯ್ಡ್ ಆಪ್ಸ್ ಮತ್ತು ವೆಬ್ ಸೈಟ್ ಗಳಿಗೆ ಸಿಂಪಲ್ ಎಪಿಐ ಕಾಲ್ ಮೂಲಕ FIDO ನ ಬಲವಾದ ದೃಢೀಕರಣ ನೀಡಲು ಸಾಧ್ಯವಾಗುತ್ತದೆ ಮತ್ತು ಆ ಮೂಲಕ ಪಾಸ್ ವರ್ಡ್ ಲೆಸ್ ಆಗಿರುವುದಕ್ಕೆ ಸಾಧ್ಯವಾಗುತ್ತದೆ. ಫಿಶಿಂಗ್ ರೆಸಿಸ್ಟೆಂಟ್ ಸೆಕ್ಯುರಿಟಿಯು ಮುಂದಿನ ದಿನಗಳಲ್ಲಿ ಬಹಳ ವೇಗವಾಗಿ ಹೊಸ ಡಿವೈಸ್ ಗಳಲ್ಲಿ ಅಪ್ ಗ್ರೇಡ್ ಆಗುತ್ತದೆ.

ಫಿಶಿಂಗ್ ಅಟ್ಯಾಕ್ ಗಳಿಗೆ ಮುಕ್ತಿ:

ಫಿಶಿಂಗ್ ಅಟ್ಯಾಕ್ ಗಳಿಗೆ ಮುಕ್ತಿ:

ಗೂಗಲ್ ನ ಬ್ರ್ಯಾಂಡ್ ಮತ್ತು ಪ್ರೊಡಕ್ಟ್ ಮ್ಯಾನೇಜರ್ ಹೊಸ ಡೆವಲಪ್ ಮೆಂಟ್ ಬಗ್ಗೆ ಮಾತನಾಡಿ " ಗೂಗಲ್ FIDO ಅಲಿಯನ್ಸ್ ಮತ್ತು W3C ಜೊತೆಗೆ ಬಹಳ ಕಾರ್ಯನಿರ್ವಹಿಸಿದ್ದು FIDO2 ಪ್ರೊಟೋಕೋಲ್ ನಿರ್ಮಿಸಿದೆ. ಪಾಸ್ ವರ್ಡ್ ದೃಢೀಕರಣವಿಲ್ಲದಂತೆ ಮಾಡಲು ಇದು ಸಹಾಯವಾಗಿದ್ದು ಇತ್ತೀಚೆಗೆ ನಡೆಯುತ್ತಿರುವ ಫಿಶಿಂಗ್ ಅಟ್ಯಾಕ್ ಗಳನ್ನು ತಪ್ಪಿಸಲು ಇದು ನೆರವು ನೀಡುತ್ತದೆ. ಬಯೋಮೆಟ್ರಿಕ್ ಕಂಟ್ರೋಲ್ ಬಳಕೆದಾರರಿಗೆ ಮುಂಬರುವ ದಿನಗಳಲ್ಲಿ ಎಲ್ಲಾ ಡಿವೈಸ್ ಗಳಲ್ಲೂ ಲಭ್ಯವಾಗಲಿದ್ದು ಮಾರುಕಟ್ಟೆಯಲ್ಲಿ ಇದು ಪ್ರಗತಿಯನ್ನು ಸಾಧಿಸಲು ನೆರವು ನೀಡುತ್ತದೆ.

FIDO2

FIDO2

FIDO2'ಒಂದು ಬಹಳ ಅಧ್ಬುತವಾದ ಬಳಕೆದಾರರಿಗೆ ಅನುಭವವನ್ನು ನೀಡಲಿದ್ದು ಕ್ರಿಪ್ಟೋಗ್ರಾಫಿಕ್ ಸೆಕ್ಯುರಿಟಿಯು ಫಿಶಿಂಗ್ ಅಟ್ಯಾಕ್ ಗಳಿಂದ ಬಳಕೆದಾರರನ್ನು ರಕ್ಷಿಸುತ್ತದೆ. ಹಲವು ಪಾಸ್ ವರ್ಡ್ ಗಳಿಂದಾಗಿ ಗೊಂದಲಕ್ಕೀಡಾಗುವ ಬಳಕೆದಾರರಿಗೆ ಖಂಡಿತ ಇದು ಸಿಹಿಸುದ್ದಿಯಾಗಿದೆ.

Best Mobiles in India

Read more about:
English summary
Google’s next big thing: A world with no passwords for apps and websites

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X