ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ 'ಥ್ಯಾಂಕ್ಸ್' ಹೇಳಿದ ಗೂಗಲ್!

|

ಕೊರೊನಾ ವೈರಸ್ ಸಾಂಕ್ರಾಮಿಕ ಇಡೀ ಜಗತ್ತನ್ನು ಸ್ಥಬ್ಧಗೊಳಿಸಿದ್ದು, ಭಾರತದಲ್ಲಿಯೂ ಕೋವಿಡ್‌-19 ಅಟ್ಟಹಾಸ ಮೆರೆಯುತ್ತಿದೆ. ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡದಂತೆ ತಡೆಯಲು ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ್ದು, ಕೊರೊನಾ ವಿರಿದ್ಧದ ಹೋರಾಟಕ್ಕೆ ಇಡೀ ದೇಶವ ಒಟ್ಟಾಗಿ ನಿಂತಿದೆ. ಆದರೆ ಈ ಸಾಂಕ್ರಾಮಿಕ ರೋಗದ ಹೋರಾಟದಲ್ಲಿ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸ್‌ರು ಮುಂಚೂಣಿಯ ಸೈನಿಕರಾಗಿ ಹೋರಾಟ ಮಾಡುತ್ತಿದ್ದಾರೆ.

ಧನ್ಯವಾದ ತಿಳಿಸಿದೆ

ಕೊರೊನಾ ವೈರಸ್‌ ನಿಯಂತ್ರಿಸುವಲ್ಲಿ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹಗಲು ರಾತ್ರಿ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವೈರಸ್‌ ಸೋಂಕಿತರ ಜೀವ ಉಳಿಸುವಲ್ಲಿ ಇವರ ಶ್ರಮ ಶ್ಲಾಘನಿಯವಾಗಿದೆ. ಸದ್ಯ ಇವರಿಗೆ ಇಡೀ ದೇಶವೇ ತುಂಬು ಹೃದಯದ ಧನ್ಯವಾದ ಹೇಳುತ್ತಿದೆ. ವಿಶ್ವ ಟೆಕ್ ದೊಡ್ಡಣ್ಣ ಗೂಗಲ್ ಸಹ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಥ್ಯಾಂಕ್ಸ್‌ ಅರ್ಪಿಸಿದೆ.

ಕೋವಿಡ್‌-19 ವಿರುದ್ಧ

ಹೌದು, ಗೂಗಲ್ ಸಂಸ್ಥೆಯು ತನ್ನ ಇಂದಿನ (13/4/2020) ಡ್ಯೂಡಲ್‌ನ ಪುಟದಲ್ಲಿ Google ಅಕ್ಷರಗಳ ಜೊತೆಗೆ ಹೃದಯದ ಎಮೋಜಿಯ ಇರುವ ಅನಿಮೇಟೆಡ್ ಡೂಡಲ್ ಮೂಲಕ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದೆ. ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವಿಶ್ವದ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಡ್ಯೂಡಲ್ ಸರಣಿ ಮೂಲಕ ಗೌರವ ಅರ್ಪಿಸುವುದಾಗಿ ಹೇಳಿದೆ.

ಗೌರವ ಸೂಚಿಸಲು

ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಆರೋಗ್ಯ ಕಾರ್ಯಕರ್ತರ ಜೊತೆಗೆ ಇವರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಸಹಾಯ ಮಾಡುತ್ತಿರುವವರಿಗೂ ಗೌರವ ಸಲ್ಲಿಸಿದೆ. ಹಾಗೆಯೇ ಈ ಸಂದರ್ಭದಲ್ಲಿ ಅಗತ್ಯ ಸರಕು ಮತ್ತು ಸೇವೆಗಳ ವಿತರಣೆ ಮಾಡುವವರಿಗೂ ಹಾಗೂ ಶಿಕ್ಷಕರು, ವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು ಗೌರವ ಸೂಚಿಸಲು ಮತ್ತು ಅವರ ಕೆಲಸವನ್ನು ಪ್ರೋತ್ಸಾಹಿಸಲು ಡ್ಯೂಡಲ್ ಸರಣಿ ಮಾಡಲಿದೆ.

ಡ್ಯೂಡಲ್‌ ಮುಖಪುಟ

ಗೂಗಲ್ ಸಂಸ್ಥೆಯು ಐತಿಹಾಸಿಕ ಘಟನೆಗಳು, ಹಬ್ಬದ ಆಚರಣೆಗಳು, ಪ್ರಸಿದ್ಧ ವ್ಯಕ್ತಿಗಳ ಜನನ ಮತ್ತು ಮರಣ ಸೇರಿದಂತೆ ವಿಶೇಷ ವಾರ್ಷಿಕೋತ್ಸವಗಳ ದಿನದಂದು ತನ್ನ ಡ್ಯೂಡಲ್‌ ಮುಖಪುಟದಲ್ಲಿ ಗೌರವಾರ್ಥ ತಿಳಿಸುತ್ತಾ ಹೆಸರುವಾಸಿಯಾಗಿದೆ. ಅದೇ ರೀತಿ ಪ್ರಸ್ತುತ ಕೊರೊನಾ ವೈರಸ್‌ ಹೋರಾಟದಲ್ಲಿ ಈ ಸಂದರ್ಭದಲ್ಲಿ ಗೂಗಲ್ ಡ್ಯೂಡಲ್‌ ಮೂಲಕ ಅಭಿನಂದನೆ ಸಲ್ಲಿಸಿರುವುದು ಉತ್ತಮ ನಡೆ ಆಗಿದೆ.

Best Mobiles in India

English summary
Google came up with a doodle to honour the medical community for their selfless service.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X