ಡಿಜಿಟಲ್‌ ಪೇಮೆಂಟ್‌ಗೆ ಅಮೆರಿಕಾಗಿಂತ ಭಾರತವೇ ಬೆಸ್ಟ್..!

By Gizbot Bureau
|

ಭಾರತದ ಏಕೀಕೃತ ಪಾವತಿ ಇಂಟರ್‌ಫೇಸ್‌ (ಯುಪಿಐ) ಗೆ ದೊಡ್ಡ ಅಭಿನಂದನೆಯೊಂದು ಸಿಕ್ಕಿದೆ. ಹೌದು, ಟೆಕ್‌ ದೈತ್ಯ ಗೂಗಲ್‌ ಯುಪಿಐ ಮಾದರಿಯಲ್ಲಿಯೇ ರಿಯಲ್‌ ಟೈಂ ಪಾವತಿ ವೇದಿಕೆಯನ್ನು ತರಬೇಕೆಂದು ಯುಎಸ್ ಫೆಡರಲ್ ರಿಸರ್ವ್‌ಗೆ ಹೇಳಿದೆ. ಫೆಡರಲ್ ರಿಸರ್ವ್ ಹಣಕಾಸು ಸೇವೆಗಳ ಪಾಲಿಸಿ ಸಮಿತಿಗೆ ಯುಎಸ್, ಕೆನಡಾದ ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ ಗೂಗಲ್ ಉಪಾಧ್ಯಕ್ಷ ಮಾರ್ಕ್ ಇಸಕೋವಿಟ್ಜ್ ನವೆಂಬರ್ 7 ರಂದು ಪತ್ರ ಬರೆದಿದ್ದಾರೆ. ಭಾರತದ ಯುಪಿಐ ವ್ಯವಸ್ಥೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ನಿರ್ಮಿಸಿದೆ.

ಯುಪಿಐನಿಂದ ಗೂಗಲ್

ಯುಪಿಐನಿಂದ ಗೂಗಲ್ ತನ್ನ ಕಲಿಕೆಯ ವಿವರಗಳನ್ನು ಯುಎಸ್ ಸರ್ಕಾರದೊಂದಿಗೆ ಹಂಚಿಕೊಂಡಿದೆ. ಕಂಪನಿಯು ಭಾರತದಲ್ಲಿ ತನ್ನ ಪೇಮೆಂಟ್‌ ಆಪ್‌ ಗೂಗಲ್ ಪೇ ಯಶಸ್ಸನ್ನು ಹಂಚಿಕೊಂಡಿದೆ. ಯುಪಿಐನ ಭಾರತ ಬಳಕೆಯಲ್ಲಿ ಗೂಗಲ್ ಯಶಸ್ವಿ ಮಾರುಕಟ್ಟೆಯಾಗಿದೆ. ಯುಪಿಐ ಬಳಸುವ ಮೂರು ಪ್ರಮುಖ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಒಂದನ್ನು ಗೂಗಲ್ ಪೇ ಒದಗಿಸುತ್ತದೆ ಎಂದು ಪತ್ರ ವಿವರಿಸಿದ್ದು, ಭಾರತದ ಡಿಜಿಟಲ್ ಪೇಮೆಂಟ್‌ ವ್ಯವಸ್ಥೆಯನ್ನು ಭಾರತವು ಅನುಕರಿಸುವ ಅಗತ್ಯವಿದೆ ಎಂದು ಗೂಗಲ್ ಭಾವಿಸಲು ಕಾರಣಗಳಿವೆ ಇಲ್ಲಿವೆ..

ಚಿಂತನಶೀಲ ಯೋಜನೆ

ಚಿಂತನಶೀಲ ಯೋಜನೆ

ಭಾರತದ ಯುಪಿಐ ಚಿಂತನಶೀಲ ಯೋಜನೆಯಾಗಿದ್ದು, ಭಾರತೀಯರಿಗೆ ಹೆಚ್ಚು ಉಪಯುಕ್ತವಾದ ಬ್ಯಾಂಕಿಂಗ್‌ ಸೇವೆಯನ್ನು ನೀಡುತ್ತಿದೆ.

ವಿನ್ಯಾಸದಿಂದ ಯಶಸ್ಸು

ಯುಪಿಐ ಚಿಂತನಶೀಲ ಯೋಜನೆಯಾಗಿದ್ದು, ಅದರ ವಿನ್ಯಾಸದ ನಿರ್ಣಾಯಕ ಅಂಶಗಳು ಯಶಸ್ಸಿಗೆ ಕಾರಣವಾಗಿದೆ. ಮೊದಲನೆಯದಾಗಿ, ಯುಪಿಐ ಅಂತರಬ್ಯಾಂಕ್ ವರ್ಗಾವಣೆ ವ್ಯವಸ್ಥೆಯಾಗಿದೆ. ಆರಂಭದಲ್ಲಿ 9 ಬ್ಯಾಂಕ್‌ಗಳಿದ್ದವು, ಸದ್ಯ 140 ಸದಸ್ಯ ಬ್ಯಾಂಕ್‌ಗಳಿವೆ, ಎರಡನೆಯದಾಗಿ, ಇದು ರಿಯಲ್‌ ಟೈಮ್‌ ವ್ಯವಸ್ಥೆಯಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಮುಕ್ತ ವ್ಯವಸ್ಥೆ

ಮುಕ್ತ ವ್ಯವಸ್ಥೆ

ಭಾರತದ ಯುಪಿಐ ವ್ಯವಸ್ಥೆಯು ಮುಕ್ತ ವ್ಯವಸ್ಥೆಯಾಗಿದ್ದು, ತಂತ್ರಜ್ಞಾನ ಕಂಪನಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಮತ್ತು ಹೊರಗೆ ವರ್ಗಾವಣೆಯನ್ನು ನೇರವಾಗಿ ನಿರ್ವಹಿಸಲು ಸಹಾಯ ಮಾಡುವ ಆಪ್‌ಗಳನ್ನು ನಿರ್ವಹಿಸಬಹುದು.

ಭಾರತದ ಜಿಡಿಪಿಯ ಶೇ.10ರಷ್ಟು ಯುಪಿಐ

ಯುಪಿಐ ಜಾರಿಯಾಗಿ ಮೂರು ವರ್ಷಗಳ ನಂತರ, ಯುಪಿಐ ಮೂಲಕ ಹರಿಯುವ ವಹಿವಾಟಿನ ವಾರ್ಷಿಕ ದರ ಭಾರತದ ಜಿಡಿಪಿಯ ಸುಮಾರು ಶೇ.10ರಷ್ಟು ಆಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಯುಪಿಐ 19 ಬಿಲಿಯನ್ ಡಾಲರ್‌ ಆದಾಯದ ಮೌಲ್ಯದೊಂದಿಗೆ 800 ಮಿಲಿಯನ್ ಮಾಸಿಕ ವಹಿವಾಟುಗಳನ್ನು ಒಳಗೊಂಡಿದೆ. ಭಾರತದ ಮಾಸಿಕ ಯುಪಿಐ ವಹಿವಾಟುಗಳು ಕೇವಲ ಎರಡು ವರ್ಷಗಳಲ್ಲಿ 56 ಪಟ್ಟು ಹೆಚ್ಚಾಗಿದೆ, ಆಗಸ್ಟ್ 2017 ರಲ್ಲಿ 17 ಮಿಲಿಯನ್‌ನಿಂದ ಸೆಪ್ಟೆಂಬರ್ 2019ಕ್ಕೆ 955 ಮಿಲಿಯನ್‌ಗೆ ಏರಿಕೆಯಾಗಿದೆ.

ಎಲ್ಲರ ಪರ ಯುಪಿಐ ಕಾರ್ಯ

ಎಲ್ಲರ ಪರ ಯುಪಿಐ ಕಾರ್ಯ

ಭಾರತದಲ್ಲಿನ ಯುಪಿಐ ವಿಧಾನವು ಬ್ಯಾಂಕ್‌ಗಳು, ಗ್ರಾಹಕರು, ಪಾವತಿ ಪರಿಸರ ವ್ಯವಸ್ಥೆಯೊಳಗಿನ ಇತರ ಸಂಸ್ಥೆಗಳು ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಅದ್ಭುತ ಫಲಿತಾಂಶವನ್ನು ನೀಡಿದೆ. 1,00,000 ಮಾಸಿಕ ವಹಿವಾಟಿನಿಂದ ನಾಲ್ಕು ವರ್ಷಗಳಲ್ಲಿ 1.15 ಶತಕೋಟಿ ಮಾಸಿಕ ವಹಿವಾಟುಗಳಿಗೆ ಬೆಳೆಯಿತು ಎಂದು ಗೂಗಲ್ ತನ್ನ ಪತ್ರದಲ್ಲಿ ತಿಳಿಸಿದೆ.

ರಿಯಲ್‌ ಟೈಮ್‌ ಪಾವತಿ

ಯುಪಿಐ ಪಾವತಿಯು ನೈಜ ಸಮಯದ ಪೇಮೆಂಟ್‌ ವ್ಯವಸ್ಥೆಯಾಗಿದ್ದು, ಕಡಿಮೆ-ಮೌಲ್ಯ ಮತ್ತು ಹೆಚ್ಚಿನ ಮೌಲ್ಯದ ಪಾವತಿಗಳಿಗೆ ಬೆಂಬಲಿಸುತ್ತದೆ.

ಪ್ರಮಾಣೀಕೃತ ಮೆಸೇಜಿಂಗ್

ಪ್ರಮಾಣೀಕೃತ ಮೆಸೇಜಿಂಗ್

ಯುಪಿಐ ಪಾವತಿ ವ್ಯವಸ್ಥೆ ವಿಸ್ತೃತ ಮೆಟಾಡೇಟಾದೊಂದಿಗೆ ಪ್ರಮಾಣೀಕೃತ ಮೆಸೇಜಿಂಗ್ ಪ್ರೋಟೋಕಾಲ್‌ಗಳನ್ನು ಬಳಸುತ್ತದೆ.

Most Read Articles
Best Mobiles in India

Read more about:
English summary
Google Thinks India Is Bigger Than US In Terms Of Digital Money

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X