ಮೊಬೈಲ್‌ ವರ್ಷನ್‌ ಆಧಾರದ ಮೇಲೆ ಸೈಟ್‌ಗಳಿಗೆ 'ಗೂಗಲ್‌' ರಾಂಕ್‌ ನೀಡಲಿದೆ!

By Gizbot Bureau
|

ಜುಲೈ 1 ರಿಂದ ಹೊಸ ವೆಬ್ ಸೈಟ್ “ಮೊಬೈಲ್ ಫಸ್ಟ್ ಇಂಡೆಕ್ಸಿಂಗ್” ನ ಆಧಾರದಲ್ಲಿ ರ್ಯಾಂಕ್ ನೀಡುವುದು ಮತ್ತು ವಿಮರ್ಷಿಸುವ ಕೆಲಸವನ್ನು ನಡೆಸಲಿದೆ ಎಂದು ಗೂಗಲ್ ಪ್ರಕಟ ಪಡಿಸಿದೆ.

ಮೊಬೈಲ್‌ ವರ್ಷನ್‌ ಆಧಾರದ ಮೇಲೆ ಸೈಟ್‌ಗಳಿಗೆ 'ಗೂಗಲ್‌' ರಾಂಕ್‌ ನೀಡಲಿದೆ!

ಮೊಬೈಲ್ ಫಸ್ಟ್ ಇಡೆಕ್ಸಿಂಗ್ ಎಂದರೆ ಗೂಗಲ್ ಯಾವುದೇ ಹೊಸ ವೆಬ್ ಸೈಟ್ ನ್ನು ವಿಶ್ಲೇಷಿಸಲು, ರ್ಯಾಂಕ್ ನೀಡಲು, ವೆಬ್ ಸೈಟ್ ನ್ನು ಸೂಚ್ಯಂತಗೊಳಿಸಲು ಇತ್ಯಾದಿಗಳಿಗಾಗಿ ಈ ಮೊದಲು ಪ್ರಾರಂಭಿಕವಾಗಿ ಬಳಸುತ್ತಿದ್ದ ಡೆಸ್ಕ್ ಟಾಪ್ ವರ್ಷನ್ ನ ಬದಲಾಗಿ ಮೊಬೈಲ್ ನ್ನು ಬಳಕೆ ಮಾಡಲಾಗುತ್ತದೆ.

ಎಲ್ಲಾ ಹೊಸ, ಈ ಹಿಂದೆ ಗೂಗಲ್ ಪರಿಚಿತವಲ್ಲದ ಗೂಗಲ್ ಸರ್ಚ್ ವೆಬ್ ಸೈಟ್ ಗಳೆಲ್ಲದಕ್ಕೂ ಕೂಡ ಮೊಬೈಲ್ ಫಸ್ಟ್ ಇಂಡೆಕ್ಸಿಂಗ್ ಇನ್ನು ಮುಂದೆ ಅಂದರೆ ಜುಲೈ 1, 2019 ರಿಂದ ಅನೇಬಲ್ ಆಗಲಿದೆ ಎಂದು ತಿಳಿಸುವುದಕ್ಕೆ ನಾವು ಸಂತೋಷ ಪಡುತ್ತೇವೆ ಎಂದು ಗೂಗಲ್ ನ ಡೆವಲಪರ್ ಅಡ್ವೋಕೇಟ್ ಜಾನ್ ಮ್ಯೂಲರ್ ತಿಳಿಸಿದ್ದಾರೆ.

ಹಳೆಯ ಮತ್ತು ಸದ್ಯವಿರುವ ವೆಬ್ ಸೈಟ್ ಗಳಲ್ಲಿ ಮೊಬೈಲ್ ಫಸ್ಟ್ ಇಂಡೆಕ್ಸಿಂಗ್ ನ್ನು ಗುರುತಿಸುವುದಕ್ಕಾಗಿ ಟೆಕ್ಸ್ಟ್ ಗಳು, ಇಮೇಜ್ ಗಳು, ವೀಡಿಯೋಗಳು, ಲಿಂಕ್ ಗಳು, ಸ್ಟ್ರಕ್ಚರ್ ಆಗಿರುವ ಡಾಟಾಗಳು ಜೊತೆಗೆ ಮೆಟಾ ಡಾಟಾಗಳು ಅಂದರೆ ಟೈಟಲ್ಸ್ ಗಳು ಮತ್ತು ವಿವರಣೆಗಳ ಆಧಾರದಲ್ಲಿ ಗುರುತಿಸಲಾಗುತ್ತದೆ.

ಸರ್ಚ್ ಕನ್ಸೋಲ್ ಮೂಲಕ ನಾವು ತಯಾರಾಗಿದ್ದೇವೆ ಎಂಬುದನ್ನು ನಾವು ತಿಳಿಸುತ್ತೇವೆ.ಹೊಸ ವೆಬ್ ಸೈಟ್ ಗಳ ಡೀಫಾಲ್ಟ್ ಸ್ಥಿತಿಯು ಮೊಬೈಲ್ ಫಸ್ಟ್ ಇಂಡೆಕ್ಸಿಂಗ್ ಆಗಿರುವುದರಿಂದ ನೋಟಿಫಿಕೇಷನ್ ಕಳಿಸುವ ಅಗತ್ಯವಿಲ್ಲ ಎಂದು ಮುಲ್ಲರ್ ತಿಳಿಸಿದ್ದಾರೆ.

ಮೊಬೈಲ್ ಫಸ್ಟ್ ಇಂಡೆಕ್ಸಿಂಗ್ ಬಹಳ ದೂರ ಸಾಗಿರುವುದನ್ನು ತಿಳಿಸುವುದಕ್ಕೆ ಸಂತೋಷವಾಗುತ್ತದೆ ಎಂದು ಗೂಗಲ್ ತಿಳಿಸಿದೆ.

ಡೆಸ್ಕ್ ಟಾಪ್ ನಿಂದ ಮೊಬೈಲ್ ಸ್ನೇಹಿ ಆಗುವ ನಿಟ್ಟಿನಲ್ಲಿ ವೆಬ್ ನ ವಿಕಸನವಾಗುತ್ತಿದೆ ಮತ್ತು ಮೊಬೈಲ್ ಬಳಕೆದಾರ ಏಜೆಂಟ್ ಸಹಾಯದಿಂದ ನಾವು ಹೆಚ್ಚು ಸೂಚ್ಯಂಕವಾಗಬಹುದು. ಆ ಮೂಲಕ ವೆಬ್ ವಿಕಸನವಾಗುತ್ತದೆ ಎಂಬುದನ್ನು ತಿಳಿಸುವುದಕ್ಕೆ ಸಂತೋಷವಾಗುತ್ತದೆ ಎಂದು ಮುಲ್ಲರ್ ತಿಳಿಸಿದ್ದಾರೆ.

Best Mobiles in India

Read more about:
English summary
Google to Begin Ranking Sites Based on Mobile Versions Starting July 1

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X