ಗೂಗಲ್ ನಿಂದ ಹೊಸ ಹೆಡ್ ಫೋನ್ ಬಿಡುಗಡೆಗೆ ಸಿದ್ಧತೆ: ವಿಶೇಷತೆ ಏನು ಅಂದ್ರಾ..?

Written By: Lekhaka

ಗೂಗಲ್ ಹೊಸ ಮಾದರಿಯ ಗೂಗಲ್ ಆಪ್ ಅನ್ನು ಪ್ಲೇ ಸ್ಟೋರಿನಲ್ಲಿ ಬಿಡುಗಡೆ ಮಾಡಿದ್ದು, ಇದರಲ್ಲಿ ಅನೇಕ ವಿಶೇಷ ಅಂಶಗಳನ್ನು ಇದು ಅತ್ಯಂತ ಕುತೂಹಲಕಾರಿಯಾಗಿದೆ. ಇದರೊಂದಿಗೆ ಗೂಗಲ್ ಹೊಸ ಮಾದರಿಯ ಹೆಡ್ ಫೋನ್ ವೊಂದನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಿದ್ದು, ಇದು ಗೂಗಲ್ ಅಸಿಸ್ಟೆಂಟ್ ನೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಗೂಗಲ್ ನಿಂದ ಹೊಸ ಹೆಡ್ ಫೋನ್ ಬಿಡುಗಡೆಗೆ ಸಿದ್ಧತೆ: ವಿಶೇಷತೆ ಏನು ಅಂದ್ರಾ..?

ಇದಕ್ಕೇ ಸದ್ಯ ಬಿಸ್ಟೋ ಎಂದು ನಾಮಕರಣವನ್ನು ಸಹ ಮಾಡಲಾಗಿದೆ. ಇದು ಗೂಗಲ್ ಆಪ್ ನೊಂದಿಗೆ ಸಿಂಕ್ ಸಹ ಆಗಲಿದೆ ಎನ್ನಲಾಗಿದೆ. ಇದೊಂದು ಪ್ರೋಟಬಲ್ ಆಡಿಯೋ ಡಿವೈಸ್ ಆಗಿದ್ದು, ಇದು ಗೂಗಲ್ ನೊಂದಿಗೆ ಸೇರಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಉತ್ತಮ ಅನುಭವನನ್ನು ನೀಡಲಿದೆ ಎನ್ನಲಾಗಿದೆ.

ನೀವು ಈ ಹೆಡ್ ಫೋನ್ ಅನ್ನು ಧರಿಸಿಕೊಂಡು ಕೇವಲ ಪ್ರಶ್ನೆಗಳನ್ನು ಕೇಳಿದರೆ ಗೂಗಲ್ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಿದೆ. ಇಲ್ಲದೇ ವಾಯ್ಸ್ ಕಮೆಂಡಿಗ್ ಮೂಲಕ ಮೊಬೈಲ್ ಅನ್ನು ನಿಯಂತ್ರಿಸುವ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ.

ಇದಕ್ಕಾಗಿಯೇ ಹೆಡ್ ಫೋನಿನಲ್ಲಿ ಗೂಗಲ್ ಅಸಿಸ್ಟೆಂಟ್ ಬಟನ್ ವೊಂದನ್ನು ನೀಡಲಾಗಿದೆ ಎನ್ನಲಾಗಿದೆ. ಅದನ್ನು ಪ್ರೆಸ್ ಮಾಡಿ ನೀವು ಮಾತನಾಡಿದರೆ ಸಾಕು ಅನ್ನು ಕೇಳಿಕೊಂಡು ನಿಮಗೆ ಉತ್ತರವನ್ನು ನೀಡಲಿದೆ ಎನ್ನಲಾಗಿದೆ.

ಐಫೋನ್ 8 ಕುರಿತ ಮತ್ತೊಂದು ಫೋಟೋ ಲೀಕ್!

ಈ ಹೆಡ್ ಫೋನ್ ಅನ್ನು ಗೂಗಲ್ ತನ್ನ ನೂತನ ಸ್ಮಾರ್ಟ್ ಫೋನ್ ಗಳಾದ ಗೂಗಲ್ ಪಿಕ್ಸಲ್ 2 ಮತ್ತಯ ಗೂಗಲ್ ಪಿಕ್ಸಲ್ XL 2 ನೊಂದಿಗೆ ಲಾಂಚ್ ಮಾಡಲಿದೆ ಎನ್ನಲಾಗಿದೆ.

English summary
The headphones by Google are codenamed as Bisto.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot